ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಿಂದ ಇಂದಿರಾ ಗಾಂಧಿ, ನರ್ಗೀಸ್‌ ದತ್‌ ಹೆಸರನ್ನು ಕೈಬಿಟ್ಟ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಭಾಗದಲ್ಲಿ ನೀಡುತ್ತಿದ್ದ “ಇಂದಿರಾ ಗಾಂಧಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಪ್ರಶಸ್ತಿ ಮತ್ತು “ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್‌ ದತ್‌’ ಪ್ರಶಸ್ತಿಗಳ ಹೆಸರುಗಳನ್ನು ಕೈಬಿಡಲಾಗಿದೆ.
ಕೇಂದ್ರ ಸರ್ಕಾರದ ಸಮಿತಿಯ ಶಿಫಾರಸ್ಸುಗಳ ಆಧಾರದಲ್ಲಿ ಈ ಬದಲಾವಣೆ ಮಾಡಲಾಗಿದ್ದು, “70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ನಿಯಮಗಳು 2022′ ಅನ್ನು ರೂಪಿಸಲಾಗಿದೆ. ಇನ್ಮುಂದೆ “ಇಂದಿರಾ ಗಾಂಧಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಪ್ರಶಸ್ತಿಯ ಹೆಸರು “ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ’ ಎಂದು ಬದಲಾಗಲಿದೆ. ಅಲ್ಲದೇ ಈ ಪ್ರಶಸ್ತಿಗೆ ಈ ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಪ್ರಶಸ್ತಿ ಮೊತ್ತವನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಇನ್ನೂ ಮುಂದೆ ಈ ಮೊತ್ತವು ನಿರ್ದೇಶಕರಿಗೆ ಮಾತ್ರ ನೀಡಲಾಗುತ್ತದೆ. “ರಾಷ್ಟ್ರೀಯ ಭಾವೈಕ್ಯತೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್‌ ದತ್‌’ ಪ್ರಶಸ್ತಿ ಹೆಸರನ್ನು “ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ’ ಎಂದು ಬದಲಾಯಿಸಲಾಗಿದೆ.

ಸಮಿತಿಯು ಸೂಚಿಸಿದ ಬದಲಾವಣೆಗಳಿಗೆ ಅನುಸಾರವಾಗಿ ಮತ್ತು ‘ನಿಯಮಾವಳಿಗಳಲ್ಲಿ’ ಸೇರಿಸಿದ ‘ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ’ ಹೆಸರನ್ನು ಬದಲಾಯಿಸಲಾಗಿದ್ದು, ‘ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿಂದೆ ನಿರ್ಮಾಪಕ ಮತ್ತು ನಿರ್ದೇಶಕರ ನಡುವೆ ಹಂಚಿಕೆಯಾಗಿದ್ದ ಬಹುಮಾನದ ಮೊತ್ತವನ್ನು ಈಗ ನಿರ್ದೇಶಕರಿಗೆ ಮಾತ್ರ ನೀಡಲಾಗುತ್ತದೆ.
ಅಂತೆಯೇ, ರಾಷ್ಟ್ರೀಯ ಏಕೀಕರಣದ ಕುರಿತಾದ ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿಯನ್ನು ಈಗ ‘ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ’ ಎಂದು ಕರೆಯಲಾಗುತ್ತದೆ. ಈ ವರ್ಗವು ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ಸಂರಕ್ಷಣೆಗಾಗಿ ಇದ್ದ ಪ್ರಶಸ್ತಿ ವಿಭಾಗಗಳನ್ನು ವಿಲೀನಗೊಳಿಸುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲ್ಮೆಟ್ ಹಾಕಿಕೊಂಡು ಕೋಟಿ ಬೆಲೆ ಬಾಳುವ ʼಆಡಿʼ ಕಾರ್‌ ಓಡಿಸ್ತಾರೆ ಈ ವ್ಯಕ್ತಿ : ಕಾರಣ ಕೇಳಿದ್ರೆ....ಹೀಗೂ ಉಂಟೆ

ಸಮಿತಿಯ ನೇತೃತ್ವವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರಜಾ ಶೇಖರ ವಹಿಸಿದ್ದರು. ಇದರಲ್ಲಿ ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್, ವಿಪುಲ್ ಶಾ, ಹಾಬಾಮ್ ಪಬನಕುಮಾರ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮುಖ್ಯಸ್ಥ ಪ್ರಸೂನ್ ಜೋಶಿ, ಛಾಯಾಗ್ರಾಹಕ ಎಸ್ ನಲ್ಲಮುತ್ತು ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಪೃಥುಲ್ ಕುಮಾರ ಮತ್ತು ಸಚಿವಾಲಯದ ನಿರ್ದೇಶಕ (ಹಣಕಾಸು) ಕಮಲೇಶಕುಮಾರ ಸಿನ್ಹಾ ಸೇರಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿ ವರ್ಷ ಭಾರತೀಯ ಚಿತ್ರರಂಗದ ವ್ಯಕ್ತಿಗಳಿಗೆ ನೀಡಲಾಗುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಬಹುಮಾನದ ಮೊತ್ತವನ್ನು 10 ಲಕ್ಷದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಅಲ್ಲದೆ, ಸ್ವರ್ಣ ಕಮಲ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು 3 ಲಕ್ಷ ರೂ.ಗಳಿಗೆ ಮತ್ತು ರಜತ ಕಮಲ ವಿಜೇತರ ಬಹುಮಾನದ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement