ಆರೆಸ್ಸೆಸ್ ಜತೆ ಇಂದಿರಾ ಗಾಂಧಿ ಉತ್ತಮ ಬಾಂಧವ್ಯ ಹೊಂದಿದ್ದರು, ಆದರೆ…: ಪತ್ರಕರ್ತೆಯ ಪುಸ್ತಕ ಹೇಳುತ್ತದೆ…

ನವದೆಹಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹಲವಾರು ಆರ್‌ಎಸ್‌ಎಸ್ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಮತ್ತು ಸಂಘದ ಪ್ರಮುಖರು ಸಹಾಯಕ್ಕಾಗಿ ಅವರ ಬಳಿ ಬರುತ್ತಿದ್ದರು, ಅವರು ಅದನ್ನು ತಮ್ಮ ಉದ್ದೇಶಗಳಿಗಾಗಿ ಬಳಸಿಕೊಂಡರು. ಆದರೆ ಸಂಘ ಮತ್ತು ತಮ್ಮ ನಡುವೆ ಜಾಗರೂಕತೆಯಿಂದ ಅಂತರವನ್ನು ಕಾಯ್ದುಕೊಂಡಿದ್ದರು ಎಂದು ಹೊಸ ಪುಸ್ತಕದಲ್ಲಿ ಹೇಳಲಾಗಿದೆ.
“ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್” ಎಂಬ ಪುಸ್ತಕದಲ್ಲಿ ಪತ್ರಕರ್ತೆ ನೀರಜಾ ಚೌಧರಿ ಅವರು-1980 ರ ತುರ್ತು ಪರಿಸ್ಥಿತಿಯ ನಂತರದ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಮರಳಲು ರೂಪಿಸಿದ ತಂತ್ರ, ಷಾ ಬಾನೋ ಪ್ರಕರಣ, ಮಂಡಲ್ ಆಯೋಗ, ಬಾಬರಿ ಮಸೀದಿ ಘಟನೆ, ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪರಮಾಣು ಪರೀಕ್ಷೆಗಳಿಗೆ ಒಪ್ಪಿಗೆ ಮತ್ತು ಮನಮೋಹನ್ ಸಿಂಗ್ ಅಡಿಯಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದ ಈ ಐತಿಹಾಸಿಕ ಮಹತ್ವದ ಆರು ನಿರ್ಧಾರಗಳ ಪ್ರಿಸ್ಮ್ ಮೂಲಕ ದೇಶದ ಪ್ರಧಾನ ಮಂತ್ರಿಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಿದ್ದಾರೆ.
ತುರ್ತುಪರಿಸ್ಥಿತಿ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಇಂದಿರಾಗಾಂಧಿಯವರನ್ನು ಸಂಪರ್ಕಿಸುತ್ತ ಇತ್ತು ಎಂದು ಪುಸ್ತಕ ಹೇಳುತ್ತದೆ. ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಇಂದಿರಾ ಗಾಂಧಿಗೆ ಕೆಲವು ಸಲ ಪತ್ರಗಳನ್ನು ಬರೆದಿದ್ದರು. ಕೆಲವು ಆರ್‌ಎಸ್‌ಎಸ್ ನಾಯಕರು ಕಪಿಲ್ ಮೋಹನ್ ಮೂಲಕ ಸಂಜಯ್ ಗಾಂಧಿ ಅವರನ್ನು ಸಂಪರ್ಕಿಸಿದ್ದರು ಎಂದು ನೀರಜಾ ಚೌಧರಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

“ಆರ್‌ಎಸ್‌ಎಸ್ ನಾಯಕರು ಸಹಾಯಕ್ಕಾಗಿ ತಮ್ಮ ಬಳಿಗೆ ಬಂದಂತೆ, ಇಂದಿರಾ ಗಾಂಧಿ ಕೂಡ ತಮ್ಮ ಉದ್ದೇಶಗಳಿಗಾಗಿ ಆರ್‌ಎಸ್‌ಎಸ್ ಅನ್ನು ಬಳಸಿಕೊಂಡರು. ಆದರೆ ಸಂಘ ಮತ್ತು ತಮ್ಮ ನಡುವೆ ಬಹಳ ಜಾಗರೂಕತೆಯಿಂದ ಅಂತರವನ್ನು ಕಾಯ್ದುಕೊಂಡರು. ಆರ್‌ಎಸ್‌ಎಸ್‌ ಬಗ್ಗೆ ಎಷ್ಟೇ ವಿರೋಧವಿದ್ದರೂ ತುರ್ತು ಪರಿಸ್ಥಿತಿ ವೇಳೆ ಆರ್‌ಎಸ್‌ಎಸ್‌ ಬೆಂಬಲ ಪಡೆಯಲು ಅವರು ಯಶಸ್ವಿಯಾದರು ಎಂದು ಪುಸ್ತಕದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಬಗ್ಗೆ ಮುಸ್ಲಿಮರಲ್ಲಿನ ಅಸಮಾಧಾನವನ್ನು ಗ್ರಹಿಸಿದ್ದ ಇಂದಿರಾ ಗಾಂಧಿ, ತಮ್ಮ ರಾಜಕೀಯವನ್ನು ಹಿಂದೂಕರಣಗೊಳಿಸಲು ಬಯಸಿದ್ದರು. ಆರ್‌ಎಸ್‌ಎಸ್‌ನ ಸಣ್ಣ ಪ್ರಮಾಣದ ಬೆಂಬಲ ಅಥವಾ ಆರ್‌ಎಸ್‌ಎಸ್‌ ತಟಸ್ಥ ನಿಲುವು ಕೂಡ ತಮಗೆ ಸಹಾಯ ಮಾಡುತ್ತದೆಯೆಂಬ ಅರಿವು ಅವರಿಗೆ ಇತ್ತು ಎಂದು ನೀರಜಾ ಚೌಧರಿ ಪುಸ್ತಕದಲ್ಲಿ ಹೇಳಿದ್ದಾರೆ.

ಬಹುಮತದ ಆಳ್ವಿಕೆಯಲ್ಲಿ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಗಳ ಶಕ್ತಿಯು ಹೇಗೆ ಕೆಲಸ ಮಾಡಿತು ಎಂಬುದನ್ನುಪುಸ್ತಕದ ಅಧ್ಯಾಯಗಳು ವಿವರಿಸುತ್ತದೆ. 1980 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಇಮೇಜ್ ಅನ್ನು ಜಾತ್ಯತೀತಗೊಳಿಸಲು ಪ್ರಯತ್ನಿಸಿದರೆ, ಇಂದಿರಾ ಗಾಂಧಿಯವರು ಕಾಂಗ್ರೆಸ್‌ನ ಮುಖವನ್ನು ಹಿಂದೂಕರಣಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ಪುಸ್ತಕವು ಹೇಳುತ್ತದೆ.
1980ರಲ್ಲಿ ಇಂದಿರಾಗಾಂಧಿ ಅಧಿಕಾರಕ್ಕೆ ಬರಲು ಆರೆಸ್ಸೆಸ್ ಸಹಾಯ ಮಾಡಿತ್ತು ಎಂದು ಇಂದಿರಾ ಗಾಂಧಿ ಅವರ ಆಪ್ತ ಸಹಾಯಕ ಅನಿಲ ಬಾಲಿ ಹೇಳಿಕೆಯನ್ನು ಪುಸ್ತಕ ಉಲ್ಲೇಖಿಸಿದೆ. “ಆರೆಸ್ಸೆಸ್ ತನ್ನನ್ನು ಬೆಂಬಲಿಸಿದೆ ಎಂದು ಅವರಿಗೆ ತಿಳಿದಿತ್ತು. ಆದರೆ ಅವರು ಅದನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಳ್ಳಲಿಲ್ಲ. ಆರ್‌ಎಸ್‌ಎಸ್ ಬೆಂಬಲವಿಲ್ಲದಿದ್ದರೆ ಅವರು ತಾವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 1971ರಲ್ಲಿ ಗೆದ್ದಿದ್ದಕ್ಕಿಂತ ಒಂದು ಸ್ಥಾನ ಹೆಚ್ಚು 353 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿರಲಿಲ್ಲ ಎಂದು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಿದ್ದರು ಎಂದು ಬಾಲಿ ಹೇಳಿಕೊಳ್ಳುತ್ತಾರೆ.
ಅಲೆಫ್ ಬುಕ್ ಕಂಪನಿ ಪ್ರಕಟಿಸಿದ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಪುಸ್ತಕವು, 1971 ರಲ್ಲಿ ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ದೂರ ಮಾಡಿ ಪಾಕಿಸ್ತಾನವನ್ನು ದುರ್ಬಲಗೊಳಿಸಿದ್ದಕ್ಕಾಗಿ ಆರ್‌ಎಸ್‌ಎಸ್ ಇಂದಿರಾ ಗಾಂಧಿಯನ್ನು ಹೊಗಳಿತ್ತು ಎಂದು ಹೇಳುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲ್ಮೆಟ್ ಹಾಕಿಕೊಂಡು ಕೋಟಿ ಬೆಲೆ ಬಾಳುವ ʼಆಡಿʼ ಕಾರ್‌ ಓಡಿಸ್ತಾರೆ ಈ ವ್ಯಕ್ತಿ : ಕಾರಣ ಕೇಳಿದ್ರೆ....ಹೀಗೂ ಉಂಟೆ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement