ದೇಹದೊಳಗೆ ಹೊಕ್ಕಿದ್ದ ದೆವ್ವ ಬಿಡಿಸಲು ಥಳಿಸಿದ ಪಾದ್ರಿ, ಸಹಚರರ ಏಟಿಗೆ ವ್ಯಕ್ತಿಯ ಪ್ರಾಣವೇ ಹೋಯ್ತು..!

ಗುರುದಾಸಪುರ : ಪಾದ್ರಿ ಮತ್ತು ಆತನ ಎಂಟು ಮಂದಿ ಸಹಚರರು “ಶರೀರದೊಳಗೆ ಹೊಕ್ಕಿರುವ ದೆವ್ವ ಬಿಡಿಸಲು 30 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿದ್ದರಿಂದ ಆತ ಸಾವಿಗೀಡಾದ ಘಟನೆ ಪಂಜಾಬ್‌ನ ಗುರುದಾಸಪುರ ಜಿಲ್ಲೆಯಲ್ಲಿ ನಡೆದಿದೆ ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಸ್ಯಾಮ್ಯುಯೆಲ್ ಮಸಿಹ್ ಎಂದು ಗುರುತಿಸಲಾಗಿದ್ದು, ದಿನಗೂಲಿ ಮಾಡುತ್ತಿದ್ದರು. ಅವರು ರೋಗಗ್ರಸ್ತರಾಗಿದ್ದರು ಎಂದು ವರದಿಯಾಗಿದೆ. ಸ್ಯಾಮ್ಯುಯೆಲ್ ಮಸಿಹ್ ಸ್ಥಿತಿಯಿಂದ ಕಳವಳಗೊಂಡ … Continued

ಓಡಿಹೋದ ಪ್ರೇಮಿಗಳು : ಸೇಡು ತೀರಿಸಿಕೊಳ್ಳಲು ಪ್ರಿಯಕರನ ಸಹೋದರಿ ಮೇಲೆ ಯುವತಿ ಸಂಬಂಧಿಕರಿಂದ ಸಾಮೂಹಿಕ ಅತ್ಯಾಚಾರ…!

ಲೂಧಿಯಾನ: ತನ್ನ ಮಗಳೊಂದಿಗೆ ಪ್ರಿಯಕರನೊಂದಿಗೆ ಓಡಿಹೋದ ನಂತರ ಈ ಅವಮಾನದ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಮೂವರು ಕುಟುಂಬ ಸದಸ್ಯರೊಂದಿಗೆ ಸೇರಿ ಮಗಳ ಪ್ರಿಯಕರನ ವಿವಾಹಿತ ಸಹೋದರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಗೋರಖಪುರದ ಆರೋಪಿಗಳು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಈ ಕೃತ್ಯವನ್ನು ರೆಕಾರ್ಡ್ … Continued

ಶಿವಸೇನಾ ಮುಖಂಡ ಸಂದೀಪ ಥಾಪರ್ ಮೇಲೆ ಮಾರಕಾಸ್ತ್ರದಿಂದ ‘ನಿಹಾಂಗ್ ಸಿಖ್ಖʼರ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿವಸೇನೆಯ ಪಂಜಾಬ್ ನಾಯಕ ಸಂದೀಪ ಥಾಪರ್ ಗೋರಾ (58) ಅವರ ಮೇಲೆ ಲೂಧಿಯಾನದಲ್ಲಿ ನಿಹಾಂಗ್ ಸಿಖ್ ವೇಷಧಾರಿ ವ್ಯಕ್ತಿಗಳು ಕತ್ತಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸಂದೀಪ ಥಾಪರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ ಶಿವಸೇನೆ ಮುಖಂಡ ಸಂದೀಪ ಥಾಪರ್ ಮೇಲೆ ಶುಕ್ರವಾರ ಮುಂಜಾನೆ ಸಾರ್ವಜನಿಕರ ಮುಂದೆಯೇ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಖಡ್ಗಗಳಿಂದ ದಾಳಿ … Continued

ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

ಚಂಡೀಗಢ: ಪಂಜಾಬ್‌ನ ಫಿರೋಜಪುರದ ಗುರುದ್ವಾರವೊಂದರಲ್ಲಿ ಶನಿವಾರ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಕೆಲವು ಪುಟಗಳನ್ನು ಹರಿದು ಹಾಕಿದ್ದಾನೆಂದು ಆರೋಪಿಸಿ 19 ವರ್ಷದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಬಂಡಲಾ ಗ್ರಾಮದ ಗುರುದ್ವಾರ ಬಾಬಾ ಬೀರ್ ಸಿಂಗ್‌ನಲ್ಲಿ ಬಕ್ಷೀಶ್ ಸಿಂಗ್ ಎಂಬಾತ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಗುಂಪು ಆತನನ್ನು ಹಿಡಿದು ಥಳಿಸಿದೆ ಎಂದು … Continued

ಲೋಕಸಭೆ ಚುನಾವಣೆ: ಇಂದಿರಾ ಗಾಂಧಿ ಹಂತಕನ ಪುತ್ರ ಫರೀದ್‌ಕೋಟದಿಂದ ಸ್ಪರ್ಧೆ

ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಫರೀದ್‌ಕೋಟ್‌ ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್‌ ಸಿಂಗ್‌ ಪುತ್ರನಾದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪಿಯುಸಿ ಡ್ರಾಪ್‌ ಔಟ್‌ 45 ವರ್ಷದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು 2009 ರಲ್ಲಿ ಭಟಿಂಡಾ, 2014 ರಲ್ಲಿ ಫತೇಗಢ … Continued

ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಆಮ್‌ ಆದಮಿ ಪಕ್ಷಕ್ಕೆ ಆಘಾತದಲ್ಲಿ ಪಂಜಾಬಿನ ಆಮ್ ಆದ್ಮಿ ಪಕ್ಷದ ಏಕೈಕ ಲೋಕಸಭಾ ಸದಸ್ಯ ಸುಶೀಲಕುಮಾರ ರಿಂಕು ಅವರು ಪಕ್ಷದ ಶಾಸಕ ಶೀತಲ ಅಂಗುರಲ್ ಅವರೊಂದಿಗೆ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಂಗುರಲ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜಲಂಧರ ಸಂಸದ ಸುಶೀಲಕುಮಾರ ರಿಂಕು ಅವರೊಂದಿಗೆ ಶಾಸಕರು ಕೇಂದ್ರ … Continued

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಆಘಾತ: ಲೂಧಿಯಾನದ ಕಾಂಗ್ರೆಸ್ ಸಂಸದ ಬಿಜೆಪಿ ಸೇರ್ಪಡೆ

ನವದೆಹಲಿ : ಲೋಕಸಭೆ ಚುನಾವಣೆಗೂ ಮುನ್ನ ಪಂಜಾಬಿನ ಲೂಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. “ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ…ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಜಾಬ್‌ನ ಬಗ್ಗೆ ಬಹಳಷ್ಟು ಪ್ರೀತಿಯನ್ನು … Continued

ವೀಡಿಯೊ : ಯಡವಟ್ಟಿನಿಂದ ಚಾಲಕನೇ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ 70 ಕಿಮೀ ದೂರ ಓಡಿದ ರೈಲು..: ಆಗಿದ್ದೇನೆಂದರೆ..| ವೀಕ್ಷಿಸಿ

ಜಮ್ಮು/ಚಂಡೀಗಢ : ಇಂದು, ಭಾನುವಾರ ಪಂಜಾಬ್‌ನಲ್ಲಿ ಗೂಡ್ಸ್ ರೈಲು ಚಾಲಕನಿಲ್ಲದೆ ಹಳಿಗಳ ಸುಮಾರು 70 ಕಿಲೋಮೀಟರ್‌ ಮೇಲೆ ಓಡಿದ ನಂತರ ಭಾರೀ ಅಪಘಾತ ತಪ್ಪಿಸಲಾಗಿದೆ, ಇದು ಕೆಲಕಾಲ ಆತಂಕವನ್ನು ಸೃಷ್ಟಿಗೆ ಕಾರಣವಾಗಿತ್ತು. ಚಾಲಕ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಎಳೆಯಲು ಮರೆತಿದ್ದಾನೆ. ಅದು ಪಠಾಣಕೋಟ್ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಇದರಿಂದಾಗಿ ಅದು ಸ್ಲೋಪಿ ಹಳಿಗಳ … Continued

ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆ: ಪಂಜಾಬಿನ ಎಲ್ಲ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಆಮ್‌ ಆದ್ಮಿ ಪಕ್ಷ..!

ನವದೆಹಲಿ: ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಆಮ್ ಆದ್ಮಿ ಪಕ್ಷ ಹೇಳಿದೆ ಹಾಗೂ ಪಂಜಾಬಿನಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸೂಚಿಸಿದೆ. ಎಎಪಿ ಪಂಜಾಬ್‌ ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳು ಮತ್ತು ಚಂಡೀಗಢದಲ್ಲಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಘೋಷಣೆಯನ್ನು ಪಕ್ಷದ … Continued

ಪಂಜಾಬ್ ರಾಜ್ಯಪಾಲರ ಹುದ್ದೆಗೆ ಬನ್ವಾರಿಲಾಲ ಪುರೋಹಿತ್ ರಾಜೀನಾಮೆ

ನವದೆಹಲಿ: ಪಂಜಾಬ್ ಗವರ್ನರ್ ಬನ್ವಾರಿಲಾಲ ಪುರೋಹಿತ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆಗೆ “ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳನ್ನು” ಉಲ್ಲೇಖಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಪಂಜಾಬ್ ಹಾಗೂ ಚಂಡೀಗಢದ ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.”ದಯವಿಟ್ಟು ಅದನ್ನೇ ಸ್ವೀಕರಿಸಿ ಎಂದು ರಾಷ್ಡ್ರಪತಿ ಮುರ್ಮು … Continued