ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ನವದೆಹಲಿ: ಶಂಕಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಮತ್ತು ಇತರ ಇಬ್ಬರು ಭಯೋತ್ಪಾದಕ ಶಂಕಿತರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ. ಐಸಿಸ್ ಭಯೋತ್ಪಾದಕ ಮೊಹಮ್ಮದ್ ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಆತನ ತಲೆಗೆ 3 ಲಕ್ಷ ರೂ.ಘೋಷಿಸಲಾಗಿತ್ತು. ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್‌ನ ಸುಳಿವು … Continued

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಂಪು ಅಂಗಿ ತೊಟ್ಟು ʼಹಮಾಲಿʼಯಾದ ರಾಹುಲ್ ಗಾಂಧಿ | ವೀಕ್ಷಿಸಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರನ್ನು ಭೇಟಿ ಮಾಡಿದರು ಮತ್ತು ಕೆಂಪು “ಕೂಲಿ” ಶರ್ಟ್ ಮತ್ತು ಕೈಗೆ ಬ್ಯಾಡ್ಜ್ ಕಟ್ಟಿಕೊಂಡು ತಲೆಯ ಮೇಲೆ ಲಗೇಜ್ ಹೊತ್ತುಕೊಂಡು ಸಾಗಿದರು. ವೈರಲ್ ಕ್ಲಿಪ್‌ನಲ್ಲಿ, ವಯನಾಡ್ ಸಂಸದ ತಲೆಯ ಮೇಲೆ ಟ್ರಾಲಿ ಬ್ಯಾಗ್ ಇರಿಸುತ್ತಿರುವುದು ಹಾಗೂ ಪೋರ್ಟರ್‌ಗಳು ಅವರನ್ನು ಸುತ್ತುವರೆದಿರುವುದನ್ನು … Continued

ಕಾವೇರಿ ವಿವಾದ: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಕೇಂದ್ರ ಜಲಶಕ್ತಿ ಸಚಿವರ ಭೇಟಿ

ನವದೆಹಲಿ : ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಗಜೇಂದ್ರ ಸಿಂಗ್ ಶೇಖಾವತ್ ನಿವಾಸದಲ್ಲಿ ಭೇಟಿಯಾಗಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ … Continued

ಕಾವೇರಿ ವಿವಾದ : ನದಿಯಲ್ಲಿ ನೀರಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಇಂದು ಅರ್ಜಿ ; ಸಿಎಂ ಸಿದ್ದರಾಮಯ್ಯ

ನವದೆಹಲಿ : ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ‘ನದಿಯಲ್ಲಿ ನೀರು ಇಲ್ಲ’ ಎಂದು ಗುರುವಾರ (ಸೆಪ್ಟೆಂಬರ್‌ 21) ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಭೆಯ ಬಳಿಕ ಮಾತನಾಡಿದ ಅವರು, “ ಸಭೆಯಲ್ಲಿ ಎಲ್ಲ ಪಕ್ಷದ ಸಂಸದರು, ಕೇಂದ್ರ ಸಚಿವರು ಭಾಗಿಯಾಗಿದ್ದರು. ಬೇರೆ ಕೆಲಸವಿದ್ದ ಹಿನ್ನೆಲೆಯಲ್ಲಿ … Continued

ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಯಾಗಲಿರುವ ಕುಮಾರಸ್ವಾಮಿ : ಮೈತ್ರಿ ಮಾತುಕತೆಯೇ ಪ್ರಮುಖ ಅಜೆಂಡಾ

ರಾಮನಗರ: 2024ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಉಭಯ ಪಕ್ಷಗಳ ನಡುವೆ ಸಂಭವನೀಯ ಮೈತ್ರಿ ಕುರಿತು ಚರ್ಚಿಸಲು ಬಿಜೆಪಿ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಲು ಸೆಪ್ಟೆಂಬರ್ 21 ರಂದು ನವದೆಹಲಿಗೆ ತೆರಳುವುದಾಗಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸೀಟು ಹಂಚಿಕೆ ಕುರಿತು ಮಾಧ್ಯಮ ವರದಿಗಳು ಕೇವಲ ಊಹಾಪೋಹ … Continued

ಕೆನಡಾದ ಪ್ರಧಾನಿ ತೆರಳುವ ವಿಮಾನದಲ್ಲಿ ತಾಂತ್ರಿಕ ದೋಷ : ಭಾರತದಲ್ಲೇ ಉಳಿದ ಜಸ್ಟಿನ್ ಟ್ರುಡೊ

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ವಿಮಾನವು ಭಾನುವಾರ ದೆಹಲಿಯಿಂದ ಹೊರಡುವಾಗ ತಾಂತ್ರಿಕ ದೋಷವ ಕಾಣಿಸಿಕೊಂಡಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ಕೆನಡಾದ ನಿಯೋಗವು ವಿಮಾನದ ತಾಂತ್ರಿಕ ದೋಷವನ್ನು ಎಂಜಿನಿಯರಿಂಗ್ ತಂಡವು ಸರಿಪಡಿಸುವವರೆಗೆ ಭಾರತದಲ್ಲಿಯೇ ಇರಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ” ಕೆನಡಾದ ಪ್ರಧಾನಿ ಟ್ರುಡೊ ಮತ್ತು ಅವರ ಸಂಪೂರ್ಣ … Continued

ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ

ನವದೆಹಲಿ; ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಲಿಗೆ ಆಗಮಿಸಿರುವ ರಿಷಿ ಸುನಕ್ ಅವರು ಶುಕ್ರವಾರ ಮಾಧ್ಯಮ ಸಂವಾದದ ಸಂದರ್ಭದಲ್ಲಿ ತಮ್ಮನ್ನು “ಹೆಮ್ಮೆಯ ಹಿಂದೂ” ಎಂದು ಕರೆದುಕೊಂಡಿದ್ದಾರೆ, ದೆಹಲಿಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ … Continued

ಸ್ಪೇನ್ ಅಧ್ಯಕ್ಷ ಪೆಡ್ರೋಗೆ ಕೊರೊನಾ ಸೋಂಕು, ಜಿ20 ಶೃಂಗಸಭೆಗೆ ಗೈರು

ನವದೆಹಲಿ: ಸ್ಪೇನ್‌ನ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರು ಗುರುವಾರ ಕೋವಿಡ್‌-19 ಗೆ ಸೋಂಕಿಗೆ ಒಳಗಾಗಿದ್ದು, ನವದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಅಧ್ಯಕ್ಷ ಸ್ಯಾಂಚೆಝ್ ಅವರು “ಉತ್ತಮ” ಆರೋಗ್ಯದಲ್ಲಿರುವುದಾಗಿ ಹೇಳಿದ್ದಾರೆ. ಮೊದಲ ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೋ ಸಾಂತಾಮಾರಿಯಾ ಮತ್ತು ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಅವರು G20 ಶೃಂಗಸಭೆಯಲ್ಲಿ ಸ್ಪೇನ್ … Continued

ಬಿಜೆಪಿ ಹೈಕಮಾಂಡ್‌ ಬುಲಾವ್‌: ಮಾಜಿ ಸಿಎಂ ಬೊಮ್ಮಾಯಿ ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರಿಂದ ಈಗ ಬುಲಾವ್‌ ಬಂದಿದೆ. ಬೊಮ್ಮಾಯಿಯವರು ಭಾನುವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. … Continued

ಮದುವೆಯಾಗಲುನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಬ್ಬಿಣದ ರಾಡ್‌ ನಿಂದ ಹೊಡೆದು ಕೊಂದ ಸೋದರ ಸಂಬಂಧಿ

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ನರ್ಗೀಸ್ ಎಂದು ಗುರುತಿಸಲಾದ ಯುವತಿ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ, ಆಕೆಯನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಅವಳ ಸ್ವಂತ ಸೋದರಸಂಬಂಧಿಯೇ ಅವಳನ್ನು ಕೊಂದಿದ್ದಾನೆ. ದೆಹಲಿಯ ಅರಬಿಂದೋ ಕಾಲೇಜ್ ಬಳಿಯ ಮಾಳವೀಯ ನಗರದ … Continued