ಉದ್ಯಮಿಯನ್ನು ಹೆಲ್ಮೆಟ್‌ನಿಂದ ಹೊಡೆದು ಬರ್ಬರವಾಗಿ ಕೊಂದ ಮೂವರು ಫುಡ್ ಡೆಲಿವರಿ ರೈಡರ್‌ಗಳು

ನವದೆಹಲಿ: ದೆಹಲಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್‌ನಲ್ಲಿ ಪಾರ್ಟಿಗೆ ತೆರಳಿದ್ದ 36 ವರ್ಷದ ಉದ್ಯಮಿಯೊಬ್ಬರನ್ನು ಮೂವರು ಫುಡ್ ಡೆಲಿವರಿ ರೈಡರ್‌ಗಳು ಬರ್ಬರವಾಗಿ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 3ರ ರಾತ್ರಿ ಈ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು ಶಿವಂ ಗುಪ್ತಾ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, … Continued

ಸೈಬರ್ ವಂಚಕರ ಜಾಲಕ್ಕೆ ಬಿದ್ದ ಎನ್‌ಆರ್‌ಐ ದಂಪತಿ; ಬರೋಬ್ಬರಿ 14.85 ಕೋಟಿ ರೂ. ಲೂಟಿ…!

ನವದೆಹಲಿ: ದೆಹಲಿಯಲ್ಲಿ ವಾಸವಾಗಿರುವ ವೃದ್ಧ ಎನ್‌ಆರ್‌ಐ ವೈದ್ಯ ದಂಪತಿಯನ್ನು ಸರಿಸುಮಾರು ಎರಡು ವಾರಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಿನಲ್ಲಿ ಬಂಧನದಲ್ಲಿರಿಸಿ, ಬರೋಬ್ಬರಿ 14.85 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಡಾ. ಓಂ ತನೇಜಾ ಮತ್ತು ಅವರ ಪತ್ನಿ ಡಾ. ಇಂದಿರಾ ತನೇಜಾ ಅವರು ಸುಮಾರು 48 ವರ್ಷಗಳ ಕಾಲ ಅಮೆರಿಕಾದಲ್ಲಿ … Continued

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi) ಅವರನ್ನು ಮಂಗಳವಾರ ದೆಹಲಿಯ ಸರ್ ಗಂಗಾ ರಾಮ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  ಪ್ರಸ್ತುತ ಅವರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ ಎಂದು ವರದಿ ತಿಳಿಸಿದೆ. ದೀರ್ಘಕಾಲದ ಕೆಮ್ಮಿನ ಸಮಸ್ಯೆಗಳನ್ನು ಎದುರಿಸುತ್ತಿರುವ 79 ವರ್ಷದ … Continued

ದೆಹಲಿಯಲ್ಲಿ ದಟ್ಟ ಮಂಜು: 128 ವಿಮಾನಗಳ ಸಂಚಾರ ರದ್ದು, ರಾಷ್ಟ್ರ ರಾಜಧಾನಿಗೆ ‘ರೆಡ್ ಅಲರ್ಟ್’ ಘೋಷಣೆ

ನವದೆಹಲಿ: ದೆಹಲಿಯಲ್ಲಿ ಆವರಿಸಿರುವ ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇದುವರೆಗೆ ಸುಮಾರು 128 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಗೆ ನೀಡಿದ್ದ ‘ಆರೆಂಜ್ ಅಲರ್ಟ್’ ಅನ್ನು ಮಂಗಳವಾರದವರೆಗೆ ‘ರೆಡ್ ಅಲರ್ಟ್’ ಆಗಿ ಬದಲಾಯಿಸಿದೆ. ದೆಹಲಿ ಮಾತ್ರವಲ್ಲದೆ, ಉತ್ತರ ಮತ್ತು ಈಶಾನ್ಯ ಭಾರತದ ಇತರ ಭಾಗಗಳಾದ ಪಂಜಾಬ್ … Continued

ʼವೋಟ್ ಚೋರಿʼ ; ನಾಳೆ (ಡಿ.14) ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್‌ ರ‍್ಯಾಲಿ

ನವದೆಹಲಿ : ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ `ವೋಟ್ ಚೋರಿ’ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಭಾನುವಾರ (ಡಿ.14) ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ `ವೋಟ್ ಚೋರ್ ಗದ್ದಿ ಛೋಡ್ ಮಹಾ ರ‍್ಯಾಲಿ’ ಆಯೋಜಿಸಿದೆ. ಈ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ … Continued

ವೀಡಿಯೊ | ಪ್ರೋಟೋಕಾಲ್ ಮೀರಿ ವಿಮಾನ ನಿಲ್ದಾಣಕ್ಕೆ ತೆರಳಿ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ..! ರಷ್ಯಾಕ್ಕೆ ಅಚ್ಚರಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಗುರುವಾರ (ಡಿಸೆಂಬರ್‌ 4)ಸಂಜೆ ದೆಹಲಿ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ನಾಯಕರು ಒಂದೇ ಕಾರಿನಲ್ಲಿ ಹೊರಡುವ ಮುನ್ನ, ಪರಸ್ಪರ ಹಸ್ತಲಾಘವ ಮಾಡಿ, ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಈ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಪ್ರೋಟೋಕಾಲ್ (ಶಿಷ್ಟಾಚಾರ) … Continued

ಬ್ಯಾಂಕಾಕ್‌ ನಿಂದ ಗಡಿಪಾರಾದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹರ್‌ಸಿಮ್ರನ್ ಬಂಧನ

ನವದೆಹಲಿ: ಕೇಂದ್ರ ತನಿಖಾ ಏಜೆನ್ಸಿಗಳ ಸಹಕಾರದೊಂದಿಗೆ ದೆಹಲಿ ಪೊಲೀಸ್‌ನ ಸ್ಪೆಷಲ್ ಸೆಲ್, ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹರ್‌ಸಿಮ್ರನ್ ಅನ್ನು ಬಂಧಿಸಿದೆ. ಈತನನ್ನು ಈ ವಾರ ಆರಂಭದಲ್ಲಿ ಬ್ಯಾಂಕಾಕ್‌ನಿಂದ ಗಡಿಪಾರು ಮಾಡಲಾಗಿತ್ತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈತನನ್ನು ಅಲಿಯಾಸ್ ‘ಬಾದಲ್’ ಮತ್ತು ‘ಸಿಮ್ರನ್’ ಎಂದೂ ಕರೆಯುತ್ತಾರೆ. ನವೆಂಬರ್ 26 ರಂದು ದೆಹಲಿಗೆ ಆಗಮಿಸಿದ ತಕ್ಷಣವೇ ಆತನನ್ನು … Continued

ಇಂಡಿಯಾ ಗೇಟ್ ಪ್ರತಿಭಟನೆ: ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ ಬಳಸಿದ ಆರೋಪ ; ಬಂಧಿತ 17 ಮಂದಿಗೆ 3 ದಿನ ನ್ಯಾಯಾಂಗ ಬಂಧನ

ನವದೆಹಲಿ: ಇಂಡಿಯಾ ಗೇಟ್‌ನಲ್ಲಿ ವಾಯು ಮಾಲಿನ್ಯದ ಕುರಿತ ಪ್ರತಿಭಟನೆಗಳ ವೇಳೆ ‘ಪೆಪ್ಪರ್ ಸ್ಪ್ರೇ’ (Pepper Spray) ಬಳಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿದ್ದ 11 ಮಹಿಳೆಯರು ಸೇರಿದಂತೆ 17 ಆರೋಪಿಗಳಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸೋಮವಾರ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯವು ಇತರ ಐದು ಆರೋಪಿಗಳನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. … Continued

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ; ಹೆಡ್‌ಮಾಸ್ಟರ್, ಮೂವರು ಶಿಕ್ಷಕರು ಅಮಾನತು

ನವದೆಹಲಿ: ದೆಹಲಿಯ ಸೇಂಟ್ ಕೊಲಂಬಸ್ ಶಾಲೆಯ 16 ವರ್ಷದ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದ ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ, ಬಾಲಕನ ತಂದೆ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಹೆಸರಿಸಲಾದ ಶಾಲೆಯ ಹೆಡ್‌ಮಾಸ್ಟರ್ ಮತ್ತು ಮೂವರು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ. ಶೌರ್ಯ ಪಾಟೀಲ ಎಂಬ ವಿದ್ಯಾರ್ಥಿಯು ಮಂಗಳವಾರ … Continued

‘ಸಿಎಂ ಬದಲಾವಣೆ’ ಚರ್ಚೆ ಮತ್ತೆ ಮುನ್ನೆಲೆಗೆ : ಡಿಕೆ ಶಿವಕುಮಾರ ಬಣದ ಶಾಸಕರು ದಿಢೀರ್ ದೆಹಲಿಗೆ…!

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಣಕ್ಕೆ ಸೇರಿದ ಕೆಲವು ಕಾಂಗ್ರೆಸ್ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಬಹುಕಾಲದಿಂದ ಕೇಳಿಬರುತ್ತಿರುವ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಸೂತ್ರವನ್ನು ಜಾರಿಗೆ ತರಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರವು ಗುರುವಾರ (ನವೆಂಬರ್‌  20)ದಂದು 2.5 ವರ್ಷಗಳನ್ನು … Continued