ರೋಗಿಯ ಹೊಟ್ಟೆಯೊಳಗೆ ಇತ್ತು 39 ನಾಣ್ಯಗಳು, 37 ಆಯಸ್ಕಾಂತಗಳು…!

ನವದೆಹಲಿ : ದೆಹಲಿಯ ಸರ್ ಗಂಗಾರಾಮ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯೊಬ್ಬರ ಕರುಳಿನಿಂದ 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ಹೊರತೆಗೆದಿದ್ದಾರೆ….! ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೋಗಿಯೊಬ್ಬರು, ಸತು(zinc)ವು ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬ ಊಹೆಯ ಅಡಿಯಲ್ಲಿ ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ನುಂಗಿದ್ದಾನೆ ಎಂದು ವರದಿಯಾಗಿದೆ. ಸರ್ ಗಂಗಾ ರಾಮ್ ಆಸ್ಪತ್ರೆಯ ತುರ್ತು … Continued

‘ತಪ್ಪು ಮಾಡಿದ್ದೇನೆ….’: ವೀಡಿಯೊ ರಿಟ್ವೀಟ್ ಮಾಡಿದ್ದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಅರವಿಂದ ಕೇಜ್ರಿವಾಲ್ ತಪ್ಪೊಪ್ಪಿಗೆ

ನವದೆಹಲಿ: ಯೂ ಟ್ಯೂಬರ್ ಧ್ರುವ ರಾಥಿ ಅವರು ಪೋಸ್ಟ್ ಮಾಡಿದ ಮಾನಹಾನಿಕರ ವೀಡಿಯೊವನ್ನು ಮರುಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. “ನಾನು ರಿಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದ್ದೇನೆ ಎಂದು ನಾನು ಹೇಳಬಲ್ಲೆ” ಎಂದು ಅವರು ಹೇಳಿದರು. ಕೇಜ್ರಿವಾಲ್ ಪರ ಹಿರಿಯ ವಕೀಲ … Continued

ರೈತರ ‘ದೆಹಲಿ ಚಲೋ’ ಮೆರವಣಿಗೆ ವೇಳೆ ಘರ್ಷಣೆಯ ನಂತರ 60 ಕ್ಕೂ ಹೆಚ್ಚು ಜನರಿಗೆ ಗಾಯ : ಪ್ರತಿಭಟನಾ ಮೆರವಣಿಗೆಗೆ ರಾತ್ರಿ ವಿರಾಮ

ನವದೆಹಲಿ: ರೈತ ಸಂಘಗಳು ದೆಹಲಿಯ ತಮ್ಮ ಪಾದಯಾತ್ರೆಯನ್ನು ರಾತ್ರಿ ವಿರಾಮಗೊಳಿಸಲು ನಿರ್ಧರಿಸಿದ್ದು, ಬುಧವಾರ ಬೆಳಿಗ್ಗೆ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ. ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದ್ದರಿಂದ ದಿನವಿಡೀ ರೈತರು ಮತ್ತು ಮಾಧ್ಯಮದವರು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಸುಮಾರು 100 ರೈತರು ಗಾಯಗೊಂಡಿದ್ದಾರೆ … Continued

ವೀಡಿಯೊ..| ಟ್ರಾಲಿಗಳಲ್ಲಿ 6 ತಿಂಗಳಿಗೆ ಬೇಕಾಗುವಷ್ಟು ಆಹಾರ, ಡೀಸೆಲ್ ಸಮೇತ ಪ್ರತಿಭಟನೆಗೆ ದೆಹಲಿಗೆ ಬರುತ್ತಿರುವ ಪಂಜಾಬ್ ರೈತರು…!

ನವದೆಹಲಿ: ದೆಹಲಿಯತ್ತ ಸಾಗುತ್ತಿರುವ ಸಾವಿರಾರು ರೈತರು, ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ಮುಚ್ಚಿರುವುದರಿಂದ, ತಿಂಗಳುಗಳವರೆಗೆ ಸಾಕಾಗುವಷ್ಟು ಪಡಿತರ ಮತ್ತು ಡೀಸೆಲ್ ಅನ್ನು ಹೊತ್ತುಕೊಂಡು ದೀರ್ಘಾವಧಿ ಹೋರಾಟಕ್ಕೆ ಸಿದ್ಧರಾಗಿ ಬಂದಿರುವುದಾಗಿ ಹೇಳಿದ್ದಾರೆ. ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. 2020 ರ ತಮ್ಮ ಪ್ರತಿಭಟನೆಯ … Continued

ರೈತ ಮುಖಂಡರು-ಕೇಂದ್ರ ಸಚಿವರ ಮಾತುಕತೆ ವಿಫಲ : ದೆಹಲಿ ಚಲೋ ಮೆರವಣಿಗೆ ಆರಂಭ ; 30 ನಿಮಿಷದಲ್ಲಿ ಬ್ಯಾರಿಕೇಡ್‌ ತುಂಡು ಮಾಡ್ತೇವೆ ಎಂದ ರೈತರು

ನವದೆಹಲಿ: ಸೋಮವಾರ ತಡರಾತ್ರಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ಮಹತ್ವದ ಸಭೆ ಯಾವುದೇ ನಿರ್ಣಯವಿಲ್ಲದೆ ಅಂತ್ಯಗೊಂಡಿದ್ದು, ರೈತರು ಇಂದು, ಮಂಗಳವಾರ ತಮ್ಮ ‘ದೆಹಲಿ ಚಲೋ’ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ‘ದೆಹಲಿ ಚಲೋ’ ಮೆರವಣಿಗೆ ಆರಂಭಗೊಂಡಿದ್ದು, ಪಂಜಾಬ್‌ನ ಸಂಗ್ರೂರ್‌ನಿಂದ ರೈತರು 2,500 ಟ್ರಾಕ್ಟರ್ ಟ್ರಾಲಿಗಳಲ್ಲಿ ಹರಿಯಾಣ ಮೂಲಕ ದೆಹಲಿಗೆ … Continued

ವೀಡಿಯೊ..| ಶಸ್ತ್ರಸಜ್ಜಿತರಾಗಿ ಸಲೂನ್‌ಗೆ ನುಗ್ಗಿ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಇಬ್ಬರನ್ನು ಕೊಂದು ಪರಾರಿಯಾದ ದುಷ್ಕರ್ಮಿಗಳು

ನವದೆಹಲಿ : ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಸೆಲೂನ್‌ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವಿಗೀಡಾಗಿರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇಬ್ಬರು ಬಂದೂಕುಧಾರಿಗಳು ಸಲೂನ್‌ಗೆ ಪ್ರವೇಶಿಸುವುದನ್ನು ವೀಡಿಯೊ ತೋರಿಸುತ್ತದೆ ಮತ್ತು ಅವರಲ್ಲಿ ಒಬ್ಬ ವ್ಯಕ್ತಿಯೊಬ್ಬ ತನ್ನ ಜೀವ ಉಳಿಸುವಂತೆ ಮನವಿ ಮಾಡುತ್ತಿದ್ದಾಗ. ಪಾಯಿಂಟ್-ಬ್ಲಾಂಕ್ … Continued

ಕರ್ನಾಟಕಕ್ಕೆ ಎಲ್ಲಿ ಹಣ ನೀಡಿಲ್ಲ ? ಎಲ್ಲಿ ಕಡಿಮೆ ಹಣ ಸಿಗ್ತಿದೆ..? : ಕರ್ನಾಟಕಕ್ಕೆ ಕೊಟ್ಟ ಹಣದ ಲೆಕ್ಕ ನೀಡಿ ಮರುಪ್ರಶ್ನಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ: ತೆರಿಗೆ ಹಂಚಿಕೆ ಮತ್ತು ಕೇಂದ್ರದ ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ದಿನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸುಗಳನ್ನು “ಕೊನೆಯ ಪದದವರೆಗೆ” ಅನುಸರಿಸಿದ್ದೇವೆ ಎಂದು ಹೇಳಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ವಿತ್ತ ಸಚಿವರು ಅಂಕಿಅಂಶಗಳನ್ನು … Continued

ವೀಡಿಯೊ..| 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಈಗ ಸನ್ಯಾಸಿಯಾಗಿ ತಾಯಿ ಬಳಿಗೆ ಬಂದ: ಬಂದವ ಹೊರಟು ಹೋದ : ಯಾಕೆ ? ಅದೇ ಸ್ವಾರಸ್ಯ…

ನವದೆಹಲಿ : ನಾಪತ್ತೆಯಾಗಿದ್ದ ಮಗ, ಎರಡು ದಶಕಗಳ ನಂತರ ವಾಪಸ್ಸಾಗಿದ್ದು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಗ್ರಾಮವೊಂದರಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ ಗ್ರಾಮಕ್ಕೆ ಮರಳಿದ್ದು, ಎಲ್ಲರಿಗೂ ದಿಗ್ಭ್ರಮೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊವು ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ತೋರಿಸುತ್ತದೆ. … Continued

ಬುರ್ಖಾ ಧರಿಸಿ ಬಂದು ಮನೆಯಲ್ಲಿ ತಂಗಿಯ ಮದುವೆಗೆಂದು ಇಟ್ಟಿದ್ದ ಆಭರಣ ದೋಚಿದ ಅಕ್ಕ..!

ನವದೆಹಲಿ: ತನ್ನ ತಂಗಿ ಬಗ್ಗೆಯೇ ಅಸೂಯೆ ಪಟ್ಟ ಸಹೋದರಿಯೊಬ್ಬಳು ಆಕೆಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆಯೊಂದು ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ. ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ನಲ್ಲಿರುವ ತನ್ನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಜನವರಿ 30 ರಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಎಫ್ಐಆರ್ … Continued

ಮುಂಬೈ ಅಲ್ಲ, ದೆಹಲಿಯೂ ಅಲ್ಲ…. ಈ ಎರಡು ನಗರಗಳು ಭಾರತದಲ್ಲೇ ಅತ್ಯಂತ ಕೆಟ್ಟ ಸಂಚಾರ ದಟ್ಟಣೆ ನಗರಗಳು..!

ನವದೆಹಲಿ : ಬ್ರಿಟನ್ ರಾಜಧಾನಿ ಲಂಡನ್ 2023ರಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರವಾಗಿದ್ದು, ರಶ್ ಅವರ್‌ನಲ್ಲಿ ವಾಹನಗಳು ಗಂಟೆಗೆ ಸರಾಸರಿ ವೇಗ 14 ಕಿ.ಮೀ ಎಂದು ವರದಿಯೊಂದು ತಿಳಿಸಿದೆ. ಇದೇವೇಳೆ ಎರಡು ಭಾರತೀಯ ನಗರಗಳಾದ ಬೆಂಗಳೂರು ಮತ್ತು ಪುಣೆ ಕೂಡ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಎಂದು ಆಮ್ಸ್ಟರ್‌ಡ್ಯಾಮ್ ಮೂಲದ ಸ್ಥಳ ತಂತ್ರಜ್ಞಾನ ತಜ್ಞ … Continued