ಅರವಿಂದ ಕೇಜ್ರಿವಾಲ್, ಇತರ ಎಎಪಿ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭ

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ (AAP) ನಾಯಕರುಗಳಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಗುರುವಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು … Continued

ಎಎಪಿ ಬಂಡಾಯದ ಒಳನೋಟ : ಸಂಸದರ ಸಾಮೂಹಿಕ ಪಕ್ಷಾಂತರಕ್ಕೆ ರಾಘವ ಚಡ್ಡಾ ಸ್ಕೆಚ್ ಹಾಕಿದ್ದು ಹೇಗೆ ?

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಾರ್ಟಿಯ (AAP) ಪ್ರಭಾವಿ ನಾಯಕ ರಾಘವ ಚಡ್ಡಾ ನೇತೃತ್ವದಲ್ಲಿ ಏಳು ಮಂದಿ ರಾಜ್ಯಸಭಾ ಸಂಸದರು ಪಕ್ಷಕ್ಕೆ ವಿದಾಯ ಹೇಳಿ ಭಾರತೀಯ ಜನತಾ ಪಾರ್ಟಿ (BJP) ಜೊತೆ ವಿಲೀನವಾಗಿದ್ದಾರೆ. ಈ ಬೆಳವಣಿಗೆಯು ಪಾರ್ಲಿಮೆಂಟ್‌ನಲ್ಲಿ ಎಎಪಿಯ ಬಲವನ್ನು ಕುಗ್ಗಿಸಿರುವುದು ಮಾತ್ರವಲ್ಲದೆ, 2027ರ ಪಂಜಾಬ್ ವಿಧಾನಸಭೆ ಚುನಾವಣೆಯ … Continued

ಎಎಪಿಗೆ ದೊಡ್ಡ ಆಘಾತ : ಬಿಜೆಪಿ ಸೇರುವುದಾಗಿ ರಾಘವ ಚಡ್ಡಾ ಸೇರಿ 7 ಸಂಸದರ ಘೋಷಣೆ…!

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ವಿರುದ್ಧ ಬಂಡೆದ್ದಿರುವ ಸಂಸದ ರಾಘವ್ ಚಡ್ಡಾ, ಶುಕ್ರವಾರ ಎಎಪಿಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರುವುದಾಗಿ ಘೋಷಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಡ್ಡಾ, ಎಎಪಿಯ … Continued

ನ್ಯಾಯವು ಒತ್ತಡಕ್ಕೆ ಮಣಿಯದು : ದೆಹಲಿ ಮದ್ಯ ನೀತಿ ಹಗರಣದ ವಿಚಾರಣೆಯಿಂದ ಹಿಂದೆ ಸರಿಯಲ್ಲ ಎಂದ ಹೈಕೋರ್ಟ್ ನ್ಯಾಯಮೂರ್ತಿ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಸೋಮವಾರ ತಿರಸ್ಕರಿಸಿದರು. ಕೇಜ್ರಿವಾಲ್ ಅವರ ಆರೋಪವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು, ಈ ಪ್ರಕರಣದ ವಿಚಾರಣೆಯಿಂದ … Continued

ಎಎಪಿ ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಪ್ರಮುಖ ನಾಯಕ ರಾಘವ ಚಡ್ಡಾ ವಜಾ…! ದಿಢೀರ್‌ ಬದಲಾವಣೆಗೆ ಕಾರಣ ?

 ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (AAP) ತನ್ನ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿದ್ದು, ಅವರ ಜಾಗಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿದೆ. ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಚಾನ್ಸಲರ್ ಆಗಿರುವ ಅಶೋಕ ಮಿತ್ತಲ್ ಈಗ ಮೇಲ್ಮನೆಯಲ್ಲಿ … Continued

ದೆಹಲಿ ಅಬಕಾರಿ ನೀತಿ ಪ್ರಕರಣ: ಮಾಜಿ ಸಿಎಂ ಕೇಜ್ರಿವಾಲ್, ಮಾಜಿ ಡಿಸಿಎಂ ಸಿಸೋಡಿಯಾ ಖುಲಾಸೆ

ನವದೆಹಲಿ : ದೆಹಲಿಯ ವಿವಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದಿಂದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಸೇರಿ ಸೇರಿ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. “ಅಬಕಾರಿ ನೀತಿಯಲ್ಲಿ ಯಾವುದೇ ರೀತಿಯ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಕಂಡುಬಂದಿಲ್ಲ” ಎಂದು ನ್ಯಾಯಾಲಯವು ತನ್ನ … Continued

ʼಇಂಡಿಯಾʼ ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬಂದ ಆಮ್‌ ಆದ್ಮಿ ಪಾರ್ಟಿ

ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಹೇಳಿದ್ದು, ವಿಪಕ್ಷಗಳ ಮೈತ್ರಿಕೂಟದ ಭಾಗವಾಗಿ ಉಳಿದಿಲ್ಲ ಎಂದು ಹೇಳಿದೆ. ಅಲ್ಲದೆ ಇಂಡಿಯಾ ಬ್ಲಾಕ್‌ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಅದು ಪ್ರಶ್ನಿಸಿದೆ. ದೇಶದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಶನಿವಾರ (ಜುಲೈ ೧೯) ಸಂಜೆ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರ … Continued

ಶೀಶ್ ಮಹಲ್ ವಿವಾದ : ಅರವಿಂದ ಕೇಜ್ರಿವಾಲ್ ಹಿಂದಿನ ಬಂಗಲೆ ನವೀಕರಣ ಪ್ರಕರಣದ ತನಿಖೆಗೆ ಸಿವಿಸಿ ಆದೇಶ

ನವದೆಹಲಿ: ಸಿಪಿಡಬ್ಲ್ಯುಡಿ ಸಲ್ಲಿಸಿದ ವಾಸ್ತವ ವರದಿಯ ಆಧಾರದ ಮೇಲೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸ, 6 ಫ್ಲಾಗ್‌ಸ್ಟಾಫ್ ಬಂಗಲೆಯ ನವೀಕರಣದ ಕುರಿತು ಕೇಂದ್ರ ಜಾಗೃತ ಆಯೋಗ(Central Vigilance Commission)ವು ತನಿಖೆಗೆ ಆದೇಶಿಸಿದೆ. 6 ಫ್ಲಾಗ್‌ಸ್ಟಾಫ್ ಬಂಗಲೆಯ ಬಂಗಲೆ ನವೀಕರಣದ ತನಿಖೆಗೆ ಫೆಬ್ರವರಿ 13 ರಂದು ಆದೇಶ ನೀಡಲಾಯಿತು. ಕೇಂದ್ರ ಲೋಕೋಪಯೋಗಿ ಇಲಾಖೆ … Continued

ದೆಹಲಿ ವಿಧಾನಸಭೆ ಚುನಾವಣೆ : ಎಎಪಿ ಸೋಲಲು 10 ಪ್ರಮುಖ ಕಾರಣಗಳು….

ನವದೆಹಲಿ : 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯವನ್ನು ದಾಖಲಿಸಿದೆ. ಒಂದು ದಶಕಗಳ ಕಾಲ ದೆಹಲಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಕನಸು ನುಚ್ಚು ನೂರಾಗಿದೆ. ಅಂಕಿಅಂಶಗಳ ಪ್ರಕಾರ, 70 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ೪೮ ಸ್ಥಾನಗಳನ್ನು ಗೆದ್ದಿದೆ, ಆದರೆ … Continued

ದೆಹಲಿ ವಿಧಾನಸಭೆ ಚುನಾವಣೆ | ಎಎಪಿ ಗುಡಿಸಿ ಹಾಕಿದ ಬಿಜೆಪಿ ; 48ರಲ್ಲಿ ಬಿಜೆಪಿಗೆ ಜಯ, ಎಎಪಿಗೆ ಕೇವಲ 22 ಸ್ಥಾನ, ಕಾಂಗ್ರೆಸ್‌ ಶೂನ್ಯ

ನವದೆಹಲಿ: 27 ವರ್ಷಗಳ ವನವಾಸದ ನಂತರ, ಬಿಜೆಪಿ ಭರ್ಜರಿ ಜಯ ಗಳಿಸುವ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದು ದಶಕದ ಆಳ್ವಿಕೆಯ ನಂತರ ಆಮ್ ಆದ್ಮಿ ಪಕ್ಷ (ಎಎಪಿ)ಹೀನಾಯವಾಗಿ ಸೋತಿದ್ದು, ಅದರ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಘಟನಾಘಟಿ ನಾಯಕರು ಮಣ್ಣು ಮುಕ್ಕಿದ್ದಾರೆ. ಒಟ್ಟು 70 ಸ್ಥಾನಗಳ ದೆಹಲಿ … Continued