ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ : ಉಸ್ತುವಾರಿಗಳ ನೇಮಕ ಮಾಡಿದ ಬಿಜೆಪಿ

ನವದೆಹಲಿ : ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ಪಕ್ಷದ ಚುನಾವಣಾ ಉಸ್ತುವಾರಿಗಳು ಮತ್ತು ಸಹ-ಪ್ರಭಾರಿಗಳನ್ನು ನೇಮಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಭೂಪೇಂದರ ಯಾದವ್ ಅವರನ್ನು ಮಹಾರಾಷ್ಟ್ರದ ಉಸ್ತುವಾರಿಯಾಗಿ ನೇಮಿಸಲಾಗಿದೆ ಮತ್ತು ಕೇಂದ್ರ ಸಚಿವ ಅಶ್ವಿನಿ … Continued

ಮಂಗನಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಯಶಸ್ವಿ : ಪುನಃ ದೃಷ್ಟಿ ಪಡೆದ ಕೋತಿ…!

ಹಿಸಾರ್‌ : ಅಪರೂಪದ ಪ್ರಕರಣವೊಂದರಲ್ಲಿ ಹರಿಯಾಣದಲ್ಲಿ ಸರ್ಕಾರಿ ಆರೋಗ್ಯ ವಿಶ್ವವಿದ್ಯಾಲಯವು ಮಂಗಕ್ಕೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹಿಸಾರ್ ಜಿಲ್ಲೆಯ ಲಾಲಾ ಲಜಪತ್ ರಾಯ್ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯವು (LUVAS) ಹರ್ಯಾಣ ರಾಜ್ಯದಲ್ಲೇ ಮೊದಲ ಬಾರಿಗೆ ಮಂಗನಿಗೆ ಕ್ಯಾಟರಾಕ್ಟ್ ಸರ್ಜರಿ ನಡೆಸಿದೆ. ವಿದ್ಯುತ್ ಆಘಾತದಿಂದ … Continued

ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

ಚಂಡೀಗಢ: ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದ್ದು, ಹರಿಯಾಣದ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿರುವುದಾಗಿ ಇಂದು ಮಂಗಳವಾರ ಪ್ರಕಟಿಸಿದ್ದಾರೆ. ಮೂವರು ಶಾಸಕರಾದ ಸೋಂಬೀರ್ ಸಾಂಗ್ವಾನ್, ರಣಧೀರ ಗೊಲ್ಲೆನ್ ಮತ್ತು ಧರಂಪಾಲ ಗೊಂಡರ್ ಅವರು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. … Continued

ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು ಸಾವು

ಹರಿಯಾಣದ ನರ್ನಾಲ್ ನಲ್ಲಿ ಗುರುವಾರ ಬೆಳಗ್ಗೆ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಆರು ಮಕ್ಕಳು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಎಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಪಲ್ಟಿಯಾಗಿದೆ. ಈದ್-ಉಲ್-ಫಿತರ್ ರಜೆಯ ಹೊರತಾಗಿಯೂ ಶಾಲೆಯು ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತದ ಪ್ರಕಾರ, ಗಾಯಗೊಂಡ … Continued

ರಾಜಕೀಯ ಪ್ರವೇಶಿಸುವ ವದಂತಿ : ನಟ ಸಂಜಯ ದತ್ತ ಹೇಳಿದ್ದೇನು..?

ಮುಂಬೈ : ಬಾಲಿವುಡ್ ನಟ ಸಂಜಯ ದತ್ತ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 2024 ರಲ್ಲಿ ಹರಿಯಾಣದಿಂದ ಸ್ಪರ್ಧಿಸಬಹುದು ಎಂಬ ವದಂತಿಗಳ ಬಗ್ಗೆ ನಟ ಸಂಜಯ ದತ್ತ ಪ್ರತಿಕ್ರಿಯಿಸಿದ್ದಾರೆ. ಅಂತಹ ಎಲ್ಲಾ ವದಂತಿಗಳನ್ನು ತಳ್ಳಿಹಾಕಿರುವ ಅವರು ಈ ಬಗ್ಗೆ ತನ್ನ X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಂಜಯ ದತ್ತ ಅವರು ತಮ್ಮ … Continued

ಮನೋಹರಲಾಲ ಖಟ್ಟರ್ ರಾಜೀನಾಮೆ ನಂತರ ಹರಿಯಾಣದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಆಯ್ಕೆ

ನವದೆಹಲಿ : ನಯಾಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದೆ. ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ , ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಜೆಜೆಪಿಯ ಮೂವರು ಸದಸ್ಯರು ಸೇರಿದಂತೆ ಮನೋಹರ ಖಟ್ಟರ್‌ ಅವರ ಇಡೀ ಸಚಿವ ಸಂಪುಟ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ನೂತನ ಮುಖ್ಯಮಂತ್ರಿ … Continued

ಮಿತ್ರ ಪಕ್ಷಗಳಲ್ಲಿ ಬಿರುಕು : ಹರಿಯಾಣ ಸಿಎಂ ಮನೋಹರಲಾಲ ಖಟ್ಟರ್‌-ಸಚಿವರ ದಿಢೀರ್‌ ರಾಜೀನಾಮೆ…!

ನವದೆಹಲಿ: ಹರ್ಯಾಣದ ಬಿಜೆಪಿ ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳ ನಡುವೆ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಹರ್ಯಾಣದಲ್ಲಿ ಈ ಬೆಳವಣಿಗೆ ನಡೆದಿದೆ. ಖಟ್ಟರ್ ಹಾಗೂ ಅವರ ಸಂಪುಟದ ಸಚಿವರು ರಾಜಭವನಕ್ಕೆ ತೆರಳಿ ರಾಜ್ಯಪಾಲ … Continued

ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ : ಹಿಸ್ಸಾರ್ ಸಂಸದ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಹರ್ಯಾಣದ ಬಿಜೆಪಿಯ ಸಂಸದ ಬ್ರಿಜೇಂದ್ರ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಲವಾದ ರಾಜಕೀಯ ಕಾರಣಗಳಿಗಾಗಿಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. “ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು … Continued

ವೀಡಿಯೊ…| ಕೆಫೆಯಲ್ಲಿ ‘ಮೌತ್ ಫ್ರೆಶ್ನರ್’ ಉಪಯೋಗಿಸಿದ ಬಳಿಕ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಐವರು…!

ನವದೆಹಲಿ: ಮಾರ್ಚ್ 2 ರಂದು ಗುರುಗ್ರಾಮದ ಕೆಫೆಯಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಉಪಯೋಗಿಸಿದ ನಂತರ ಐದು ಜನರಿಗೆ ಬಾಯಲ್ಲಿ ರಕ್ತ ಬರಲು ಶುರುವಾಯಿತು ಮತ್ತು ಬಾಯಿಯಲ್ಲಿ ಉರಿಯ ತೊಡಗಿತು ಎಂದು ವರದಿಯಾಗಿದೆ. ಅಂಕಿತಕುಮಾರ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ನಲ್ಲಿರುವ ಲಾಫೊರೆಸ್ಟಾ ಕೆಫೆಗೆ ಹೋಗಿದ್ದರು. ರೆಸ್ಟಾರೆಂಟ್‌ನೊಳಗೆ ಅಂಕಿತಕುಮಾರ ಅವರು … Continued

ಹರ್ಯಾಣ ಐಎನ್‌ಎಲ್‌ಡಿ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ : ನಫೆ ಸಿಂಗ್ ಕಾರಿನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಚಂಡೀಗಢ : ಭಾರತೀಯ ರಾಷ್ಟ್ರೀಯ ಲೋಕದಳ(INLD)ದ ಹರ್ಯಾಣ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಪಕ್ಷದ ಮತ್ತೊಬ್ಬ ನಾಯಕ ಕೂಡ ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ … Continued