ನೂಹ್ ಹಿಂಸಾಚಾರ: ಕಟ್ಟಡ ತೆರವು ಕಾರ್ಯಾಚರಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ

ಚಂಡೀಗಢ : ಹರಿಯಾಣದ ನೂಹ್‌ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆರೋಪಿಗಳ ಕಟ್ಟಡ ನೆಲಸಮ ಕಾರ್ಯಾಚರಣೆಗೆ ತಡೆ ನೀಡಿದೆ. ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ನೇತೃತ್ವದ ಪೀಠ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿದೆ. ಜುಲೈ 31ರ ವಿಎಚ್‌ಪಿ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ನಂತರ ಹಿಂಸಾಚಾರ … Continued

ಹಿಂಸಾಚಾರ ಪೀಡಿತ ನುಹ್ ನಲ್ಲಿ 3ನೇ ದಿನವೂ ಬುಲ್ಡೋಜರ್ ಕಾರ್ಯಾಚರಣೆ : 2 ಡಜನ್ ಔಷಧ ಅಂಗಡಿಗಳು ನೆಲಸಮ

ನವದೆಹಲಿ: “ಅಕ್ರಮ” ನಿರ್ಮಾಣದ ವಿರುದ್ಧ ಹರಿಯಾಣದ ನುಹ್ ಜಿಲ್ಲಾಡಳಿತದ ಕ್ರಮ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ ಸುಮಾರು ಎರಡು ಡಜನ್ ಮೆಡಿಕಲ್ ಸ್ಟೋರ್‌ಗಳು ಮತ್ತು ಇತರ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಹಿಂಸಾಚಾರ ಪೀಡಿತ ನುಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಟೌರುನಲ್ಲಿ ವಾಸಿಸುತ್ತಿದ್ದ ವಲಸಿಗರ ಗುಡಿಸಲುಗಳನ್ನು ಅವರು ಗುರುವಾರ ಸಂಜೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಕ್ಕಾಗಿ ನೆಲಸಮಗೊಳಿಸಲಾಗಿತ್ತು. … Continued

ವೀಡಿಯೊ…| ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಚಂಡೀಗಢ: ಹರಿಯಾಣದ ಗುಲಾದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವಾಗ ಪ್ರವಾಹ ವಿಕೋಪಕ್ಕೆ ಹೋದ ಬಗ್ಗೆ ಕೋಪಗೊಂಡ ಮಹಿಳೆಯೊಬ್ಬರು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಶಾಸಕ ಈಶ್ವರ್ ಸಿಂಗ್ ಅವರಿಗೆ ಬುಧವಾರ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಹರಿಯಾಣದ ಘಗ್ಗರ್ ನದಿಯ ಉಕ್ಕಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿನ ಪ್ರವಾಹದಿಂದ ಉಂಟಾದ ಪರಿಸ್ಥಿತಿಯ ಬಗ್ಗೆ ಮಹಿಳೆ ಕೋಪಗೊಂಡಿದ್ದರು.‘ಈಗೇಕೆ ಬಂದಿದ್ದೀರಿ’ ಎಂದು … Continued

ರೈತರೊಂದಿಗೆ ರಾಹುಲ್‌ ಗಾಂಧಿ ಸಂವಾದ, ಟ್ರಾಕ್ಟರ್ ಓಡಿಸಿದ ಕಾಂಗ್ರೆಸ್‌ ನಾಯಕ, ಹೊಲಗಳಲ್ಲಿ ಭತ್ತದ ಸಸಿ ನಾಟಿ | ವೀಕ್ಷಿಸಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಒಳನಾಡಿನ ಜಮೀನಿನಲ್ಲಿ ಕಾಣಿಸಿಕೊಂಡರು.ಅವರು ಟ್ರಾಕ್ಟರ್ ಓಡಿಸಿದರು, ಭತ್ತದ ಬೀಜಗಳನ್ನು ಬಿತ್ತಿದರು ಮತ್ತು ಬರೋಡಾ ಮತ್ತು ಮದೀನದ ಹೊಲಗಳಲ್ಲಿ ರೈತರೊಂದಿಗೆ ಸಂಭಾಷಣೆ ನಡೆಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ದೆಹಲಿಯಿಂದ ಶಿಮ್ಲಾಕ್ಕೆ ಹೋಗುವ ಮಾರ್ಗದಲ್ಲಿ ಸೋನೆಪತ್‌ನ ಮದೀನಾ ಗ್ರಾಮದಲ್ಲಿ ರೈತರನ್ನು ಭೇಟಿ ಮಾಡಿದ ನಂತರ … Continued

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೇಲೆ ದಾಳಿ ಪ್ರಕರಣ: ಹರ್ಯಾಣದಲ್ಲಿ 4 ಮಂದಿ ಬಂಧನ

ನವದೆಹಲಿ: ಕಳೆದ ವಾರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಹರಿಯಾಣದ ಶಹಜಾದಪುರದಲ್ಲಿ ಬಂಧಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳ ಪೈಕಿ ಮೂವರು ಉತ್ತರ ಪ್ರದೇಶದವರು. ಅವರನ್ನು ಪ್ರಶಾಂತ, ವಿಕಾಸ ಮತ್ತು ಲವಿಶ್ ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿಯನ್ನು ವಿಕಾಸ ಗೊಂಡರ್ ನಿಸ್ಸಿಂಗ್ … Continued

ವೀಡಿಯೊ…: ಸ್ಥಳೀಯರ ಅಸಾಧಾರಣ ಸಾಹಸ, ಭೋರ್ಗರೆವ ಪ್ರವಾಹದಲ್ಲಿ ಸಿಲುಕಿದ ಕಾರಿನಿಂದ ಮಹಿಳೆಯ ರಕ್ಷಣೆ | ವೀಕ್ಷಿಸಿ

ಹರಿಯಾಣದ ಪಂಚಕುಲದ ಘಗ್ಗರ್ ನದಿಯಲ್ಲಿ ದಿಢೀರ್‌ ಪ್ರವಾಹದಿಂದ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ ನಂತರ ಸ್ಥಳೀಯರು ಅಸಾಧಾರಣ ಸಾಹಸ ಮಾಡಿ ಅಬ್ಬರದಿಂದ ಬೊಬ್ಬಿರಿವ ನೀರಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಾಹಸದ ವೀಡಿಯೊ ಈಗ ವೈರಲ್‌ ಆಗಿದೆ. ವರದಿಗಳ ಪ್ರಕಾರ, ಮುಂಗಾರು ಉತ್ತರದ ರಾಜ್ಯಗಳಲ್ಲಿ ಆರಂಭವಾಗಿದ್ದು ಇದು ಹರಿಯಾಣದಲ್ಲಿಯೂ ತೊಂದರೆಯನ್ನುಂಟುಮಾಡಿದೆ, ಇದೇ ವೇಳೆ ಘಗ್ಗರ್‌ ನದಿಯಲ್ಲಿಯೂ … Continued

‘ಜಿಲೇಬಿ ಬಾಬಾ’ನ ಸಾಲುಸಾಲು ದುಷ್ಕೃತ್ಯ : ಮಾದಕ ದ್ರವ್ಯ, 100 ಮಹಿಳೆಯರ ಮೇಲೆ ಅತ್ಯಾಚಾರ, 14 ವರ್ಷಗಳ ಜೈಲು ಶಿಕ್ಷೆ

ಫತೇಹಾಬಾದ್ : ಹರ್ಯಾಣದ ಫತೇಹಾಬಾದ್‌ನ ತ್ವರಿತ ನ್ಯಾಯಾಲಯವು ಅಮರಪುರಿ ಅಥವಾ ಜಿಲೇಬಿ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವನಿಗೆ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದುಷ್ಕೃತ್ಯದ ವೀಡಿಯೊ ಕ್ಲಿಪ್‌ಗಳನ್ನು ಮಾಡಿದ್ದಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಜಿಲೇಬಿ ಬಾಬಾ ಸಹಾಯ ಕೇಳಲು ಬರುವ ಮಹಿಳೆಯರಿಗೆ ಮಾದಕ ವಸ್ತು ನೀಡಿ … Continued

ಬಟ್ಟೆ ಶೋ ರೂಂಗೆ ನುಗ್ಗಿ ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ ಮಾಡಿದ ಐವರು ದುಷ್ಕರ್ಮಿಗಳು

ಗುರ್‌ಗಾಂವ್ : ಹರ್ಯಾಣದ ಬಿಜೆಪಿ ನಾಯಕ ಸುಖ್ಬೀರ್ ಖಟನಾ ಾವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುರ್‌‌ಗಾಂವ್ ಬಟ್ಟೆ ಶೋ ರೂಂ ಒಳಗೆಡೆ ಇದ್ದ ಸುಖ್ಬೀರ್ ಖಟನಾ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ನೇರವಾಗಿ ಶೋ ರೂಂ ಒಳಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಸುಖ್ಬೀರ್ ಗನ್‌ಮ್ಯಾನ್ ಕೂಗಳತೆ ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ. … Continued

ಓಮಿಕ್ರಾನ್ ಭೀತಿ: ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ

ನವದೆಹಲಿ​​: ದೇಶಾದ್ಯಂತ ಓಮಿಕ್ರಾನ್​ ಭೀತಿ ಹೆಚ್ಚಾಗಿದ್ದು, ಈಗಾಗಲೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ಚಿನ ವೈರಾಣು ಪ್ರಕರಣ ಕಾಣಿಸಿಕೊಳ್ಳಲು ಶುರುವಾಗಿರುವ ಕಾರಣ ಹೊಸ ಹೊಸ ಮಾರ್ಗಸೂಚಿ ಜಾರಿಗೊಳ್ಳುತ್ತಿವೆ. ಹರಿಯಾಣದಲ್ಲಿ ಓಮಿಕ್ರಾನ್​​​ ಸೋಂಕು ಹೆಚ್ಚಾಗಿರುವ ಕಾರಣ ಶುಕ್ರವಾರದಿಂದ ನೈಟ್ ಕರ್ಫ್ಯೂ ಜಾರಿಗೊಳ್ಳುತ್ತಿದ್ದು, ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಈ … Continued

ನಾಳೆ ಭಾರತ್‌ ಬಂದ್‌: ಹರ್ಯಾಣಾ, ಪಂಜಾಬ್‌, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚು ಪರಿಣಾಮ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿರೈತ ಸಂಘಗಳ ಒಕ್ಕೂಟವಾದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26, ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್‌ ನಡೆಯಲಿದೆ ಎಂದು ತಿಳಿಸಿದೆ. ಭಾರತ್ ಬಂಧವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬುಧವಾರ ದೇಶದ … Continued