ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ : ಹಿಸ್ಸಾರ್ ಸಂಸದ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಹರ್ಯಾಣದ ಬಿಜೆಪಿಯ ಸಂಸದ ಬ್ರಿಜೇಂದ್ರ ಸಿಂಗ್ ಭಾನುವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಲವಾದ ರಾಜಕೀಯ ಕಾರಣಗಳಿಗಾಗಿಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. “ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು … Continued

ವೀಡಿಯೊ…| ಕೆಫೆಯಲ್ಲಿ ‘ಮೌತ್ ಫ್ರೆಶ್ನರ್’ ಉಪಯೋಗಿಸಿದ ಬಳಿಕ ರಕ್ತ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾದ ಐವರು…!

ನವದೆಹಲಿ: ಮಾರ್ಚ್ 2 ರಂದು ಗುರುಗ್ರಾಮದ ಕೆಫೆಯಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಉಪಯೋಗಿಸಿದ ನಂತರ ಐದು ಜನರಿಗೆ ಬಾಯಲ್ಲಿ ರಕ್ತ ಬರಲು ಶುರುವಾಯಿತು ಮತ್ತು ಬಾಯಿಯಲ್ಲಿ ಉರಿಯ ತೊಡಗಿತು ಎಂದು ವರದಿಯಾಗಿದೆ. ಅಂಕಿತಕುಮಾರ ಅವರು ತಮ್ಮ ಪತ್ನಿ ಮತ್ತು ಸ್ನೇಹಿತರೊಂದಿಗೆ ಗುರುಗ್ರಾಮದ ಸೆಕ್ಟರ್ 90 ನಲ್ಲಿರುವ ಲಾಫೊರೆಸ್ಟಾ ಕೆಫೆಗೆ ಹೋಗಿದ್ದರು. ರೆಸ್ಟಾರೆಂಟ್‌ನೊಳಗೆ ಅಂಕಿತಕುಮಾರ ಅವರು … Continued

ಹರ್ಯಾಣ ಐಎನ್‌ಎಲ್‌ಡಿ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ : ನಫೆ ಸಿಂಗ್ ಕಾರಿನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಚಂಡೀಗಢ : ಭಾರತೀಯ ರಾಷ್ಟ್ರೀಯ ಲೋಕದಳ(INLD)ದ ಹರ್ಯಾಣ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಜಜ್ಜರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಪಕ್ಷದ ಮತ್ತೊಬ್ಬ ನಾಯಕ ಕೂಡ ಮೃತಪಟ್ಟಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಬಂದ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದಾಗ … Continued

‘ದೆಹಲಿ ಚಲೋ’ : ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ಓರ್ವ ಸಾವು, ಎರಡು ದಿನ ಪ್ರತಿಭಟನಾ ಮೆರವಣಿಗೆ ಸ್ಥಗಿತ

ನವದೆಹಲಿ: ಬ್ಯಾರಿಕೇಡ್‌ಗಳನ್ನು ತೆರವು ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಬುಧವಾರ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು, ರಬ್ಬರ್ ಗುಂಡು ಹಾರಿಸಿದ್ದು, ಘರ್ಷಣೆಯಲ್ಲಿ 21 ವರ್ಷದ ರೈತ ಮೃತಪಟ್ಟಿದ್ದಾರೆ ಮತ್ತು ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ರೈತರು ಹೇಳಿದ್ದಾರೆ. ಫೆಬ್ರವರಿ 13 ರಂದು ‘ದೆಹಲಿ ಚಲೋ’ ಮೆರವಣಿಗೆ ಪ್ರಾರಂಭವಾದ ನಂತರ ನಡೆದ ಘರ್ಷಣೆಯಲ್ಲಿ … Continued

ವೀಡಿಯೊ….| ರಾಮಲೀಲಾ ನಾಟಕದಲ್ಲಿ ʼಹನುಮಂತʼನ ಪಾತ್ರಧಾರಿ ವೇದಿಕೆಯಲ್ಲೇ ಕುಸಿದುಬಿದ್ದು ಸಾವು

ಹರಿಯಾಣದ ಭಿವಾನಿಯಲ್ಲಿ ಸೋಮವಾರ ‘ರಾಮಲೀಲಾ’ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುದಿಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರೀಶ ಮೆಹ್ತಾ ಎಂದು ಗುರುತಿಸಲಾದ ಹುನುಮಂತನ ಪಾತ್ರಧಾರಿ ತನ್ನ ಪ್ರದರ್ಶನದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಿವಾನಿಯ ಜವಾಹರ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ “ರಾಜ ತಿಲಕ” ಎಂಬ ಕಾರ್ಯಕ್ರಮದಲ್ಲಿ ಈ ಘಟನೆ … Continued

ಆಂಬುಲೆನ್ಸ್ ಗುಂಡಿಗೆ ಬಿದ್ದ ನಂತರ ‘ಸತ್ತ ಮನುಷ್ಯ’ನಿಗೆ ಜೀವ ಬಂತು…!

ಚಂಡೀಗಢ: ಭಾರತದ ಹೆಚ್ಚು ಗುಂಡಿಗಳು ಜನರಿಗೆ ಕಿರಿಕಿರಿ, ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ಆದರೆ ಗುರುವಾರ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಅಕ್ಷರಶಃ ಜೀವರಕ್ಷಕವಾಗಿ ಪರಿಣಮಿಸಿದೆ ಎಂದು ಅವರ ಕುಟುಂಬವು ಹೇಳಿಕೊಂಡಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ದರ್ಶನ್ ಸಿಂಗ್ ಬ್ರಾರ್ ಎಂಬವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ದುಃಖಿತ … Continued

ʼಕೌನ್ ಬನೇಗಾ ಕರೋಡ್‌ ಪತಿʼಯಲ್ಲಿ ₹ 1 ಕೋಟಿ ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾದ 12 ವರ್ಷದ ಬಾಲಕ…!

ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ 12 ವರ್ಷದ ಬಾಲಕ ₹ 1 ಕೋಟಿ ಗೆದ್ದ ನಂತರ ಈ ಮೊತ್ತ ಗೆದ್ದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಮಿತಾಭ್ ಬಚ್ಚನ್ ಆಯೋಜಿಸಿದ್ದ ಐಕಾನಿಕ್ ಶೋನ 15 ನೇ ಆವೃತ್ತಿಯಲ್ಲಿ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ₹ 1 … Continued

ವೀಡಿಯೊ….| ಮನೆ ಹೊರಗೆ ನಿಂತಿದ್ದವನ ಮೇಲೆ ಗುಂಡಿನ ದಾಳಿ : ಪೊರಕೆ ಕೋಲು ಹಿಡಿದು ಶೂಟರ್‌ ಗಳನ್ನು ಓಡಿಸಿದ ಧೈರ್ಯಶಾಲಿ ಮಹಿಳೆ

ಭಿವಾನಿ (ಹರಿಯಾಣ) : ಹರಿಯಾಣದ ಭಿವಾನಿಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯ ಸಮಯದಲ್ಲಿ, ಪೊರಕೆ ಹಿಡಿದ ಮಹಿಳೆಯೊಬ್ಬರು ದಾಳಿಕೋರರನ್ನು ಧೈರ್ಯದಿಂದ ಎದುರಿಸಿ ದಾಳಿಕೋರರು ಸ್ಥಳದಿಂದ ಓಡಿಹೋಗುವಂತೆ ಮಾಡಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಸಿಸಿಟಿವಿ ಕ್ಯಾಮೆರಾದಲ್ಲಿ … Continued

ಹರಿಯಾಣದ ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ 75% ಮೀಸಲಾತಿ : ಅಸಂವಿಧಾನಿಕ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಚಂಡೀಗಢ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ನೀಡಿರುವ 75% ಮೀಸಲನ್ನು ಅಸಾಂವಿಧಾನಿಕ ಎಂದು ಹೇಳಿದೆ. ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಹರ್‌ಪ್ರೀತ್ ಕೌರ್ ಜೀವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ-2020, ಸಂವಿಧಾನದ ಭಾಗ 3 ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ. … Continued

ನೂಹ್ ಹಿಂಸಾಚಾರ: ಫರಿದಾಬಾದಿನಲ್ಲಿ ಗೋರಕ್ಷಕ ಬಿಟ್ಟು ಬಜರಂಗಿ ಬಂಧನ

ನವದೆಹಲಿ: ಕಳೆದ ತಿಂಗಳು ನುಹ್, ಗುರುಗ್ರಾಮ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹರಿಯಾಣದ ಗೋರಕ್ಷಕ ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿದೆ. ಬಿಟ್ಟು ಬಜರಂಗಿ ಮತ್ತು ಬಜರಂಗದಳದ ಸಹ ಕಾರ್ಯಕರ್ತ ಮೋನು ಮಾನೇಸರ್ ಅವರ ಪ್ರಚೋದನಕಾರಿ ಹೇಳಿಕೆಗಳು ಹಿಂಸಾಚಾರಕ್ಕೆ ಕಾರಣವಾಗಿವೆ ಎಂಬ ಆರೋಪಗಳಿವೆ. ಇತರ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಟ್ಟು ಬಜರಂಗಿಯನ್ನು ಹಿಂಸಾಚಾರ … Continued