ವೀಡಿಯೊ…: ಸ್ಥಳೀಯರ ಅಸಾಧಾರಣ ಸಾಹಸ, ಭೋರ್ಗರೆವ ಪ್ರವಾಹದಲ್ಲಿ ಸಿಲುಕಿದ ಕಾರಿನಿಂದ ಮಹಿಳೆಯ ರಕ್ಷಣೆ | ವೀಕ್ಷಿಸಿ

ಹರಿಯಾಣದ ಪಂಚಕುಲದ ಘಗ್ಗರ್ ನದಿಯಲ್ಲಿ ದಿಢೀರ್‌ ಪ್ರವಾಹದಿಂದ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ ನಂತರ ಸ್ಥಳೀಯರು ಅಸಾಧಾರಣ ಸಾಹಸ ಮಾಡಿ ಅಬ್ಬರದಿಂದ ಬೊಬ್ಬಿರಿವ ನೀರಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಾಹಸದ ವೀಡಿಯೊ ಈಗ ವೈರಲ್‌ ಆಗಿದೆ. ವರದಿಗಳ ಪ್ರಕಾರ, ಮುಂಗಾರು ಉತ್ತರದ ರಾಜ್ಯಗಳಲ್ಲಿ ಆರಂಭವಾಗಿದ್ದು ಇದು ಹರಿಯಾಣದಲ್ಲಿಯೂ ತೊಂದರೆಯನ್ನುಂಟುಮಾಡಿದೆ, ಇದೇ ವೇಳೆ ಘಗ್ಗರ್‌ ನದಿಯಲ್ಲಿಯೂ … Continued

‘ಜಿಲೇಬಿ ಬಾಬಾ’ನ ಸಾಲುಸಾಲು ದುಷ್ಕೃತ್ಯ : ಮಾದಕ ದ್ರವ್ಯ, 100 ಮಹಿಳೆಯರ ಮೇಲೆ ಅತ್ಯಾಚಾರ, 14 ವರ್ಷಗಳ ಜೈಲು ಶಿಕ್ಷೆ

ಫತೇಹಾಬಾದ್ : ಹರ್ಯಾಣದ ಫತೇಹಾಬಾದ್‌ನ ತ್ವರಿತ ನ್ಯಾಯಾಲಯವು ಅಮರಪುರಿ ಅಥವಾ ಜಿಲೇಬಿ ಬಾಬಾ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವನಿಗೆ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದುಷ್ಕೃತ್ಯದ ವೀಡಿಯೊ ಕ್ಲಿಪ್‌ಗಳನ್ನು ಮಾಡಿದ್ದಕ್ಕಾಗಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಜಿಲೇಬಿ ಬಾಬಾ ಸಹಾಯ ಕೇಳಲು ಬರುವ ಮಹಿಳೆಯರಿಗೆ ಮಾದಕ ವಸ್ತು ನೀಡಿ … Continued

ಬಟ್ಟೆ ಶೋ ರೂಂಗೆ ನುಗ್ಗಿ ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ ಮಾಡಿದ ಐವರು ದುಷ್ಕರ್ಮಿಗಳು

ಗುರ್‌ಗಾಂವ್ : ಹರ್ಯಾಣದ ಬಿಜೆಪಿ ನಾಯಕ ಸುಖ್ಬೀರ್ ಖಟನಾ ಾವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುರ್‌‌ಗಾಂವ್ ಬಟ್ಟೆ ಶೋ ರೂಂ ಒಳಗೆಡೆ ಇದ್ದ ಸುಖ್ಬೀರ್ ಖಟನಾ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ನೇರವಾಗಿ ಶೋ ರೂಂ ಒಳಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಸುಖ್ಬೀರ್ ಗನ್‌ಮ್ಯಾನ್ ಕೂಗಳತೆ ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ. … Continued

ಓಮಿಕ್ರಾನ್ ಭೀತಿ: ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ

ನವದೆಹಲಿ​​: ದೇಶಾದ್ಯಂತ ಓಮಿಕ್ರಾನ್​ ಭೀತಿ ಹೆಚ್ಚಾಗಿದ್ದು, ಈಗಾಗಲೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ಚಿನ ವೈರಾಣು ಪ್ರಕರಣ ಕಾಣಿಸಿಕೊಳ್ಳಲು ಶುರುವಾಗಿರುವ ಕಾರಣ ಹೊಸ ಹೊಸ ಮಾರ್ಗಸೂಚಿ ಜಾರಿಗೊಳ್ಳುತ್ತಿವೆ. ಹರಿಯಾಣದಲ್ಲಿ ಓಮಿಕ್ರಾನ್​​​ ಸೋಂಕು ಹೆಚ್ಚಾಗಿರುವ ಕಾರಣ ಶುಕ್ರವಾರದಿಂದ ನೈಟ್ ಕರ್ಫ್ಯೂ ಜಾರಿಗೊಳ್ಳುತ್ತಿದ್ದು, ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯ ವರೆಗೆ ಈ … Continued

ನಾಳೆ ಭಾರತ್‌ ಬಂದ್‌: ಹರ್ಯಾಣಾ, ಪಂಜಾಬ್‌, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚು ಪರಿಣಾಮ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿರೈತ ಸಂಘಗಳ ಒಕ್ಕೂಟವಾದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 26, ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್‌ ನಡೆಯಲಿದೆ ಎಂದು ತಿಳಿಸಿದೆ. ಭಾರತ್ ಬಂಧವನ್ನು ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬುಧವಾರ ದೇಶದ … Continued

ಹರಿಯಾಣ: ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಸೋಲಿಸಿದ ಬಿಜೆಪಿ-ಜೆಜೆಪಿ ಮೈತ್ರಿಕೂಟ

ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯವನ್ನು ಬಿಜೆಪಿ-ಜೆಜೆಪಿ ಸರಕಾರ ಸೋಲಿಸಿದೆ. ಎಲ್ಲ ಕಾಂಗ್ರೆಸ್‌ ಶಾಸಕರು ಅವಿಶ್ವಾಸ ನಿರ್ಣಯ ಬೆಂಬಲಿಸಿದರೆ, ಬಿಜೆಪಿ-ಜೆಜೆಪಿ ಶಾಸಕರು ಇದರ ವಿರುದ್ಧ ಮತ ಚಲಾಯಿಸಿದರು. ಅವಿಶ್ವಾಸ ನಿರ್ಣಯವನ್ನು ೩೨ ಸದಸ್ಯರು ಬೆಂಬಲಿಸಿದರೆ, ೫೫ ಸದಸ್ಯರು ವಿರೋಧಿಸಿದರು. ಜೆಜೆಪಿ ಶಾಸಕರಾದ ರಾಮ್ ಕುಮಾರ್ ಗೌತಮ್ ಮತ್ತು ದೇವೇಂದರ್ ಬಬ್ಲಿ ಅವರು ಬಿಜೆಪಿಯಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ … Continued

ರೈತರ ಪ್ರತಿಭಟನೆ ಮಧ್ಯೆ ಸಾರ್ವಜನಿಕ ಆಸ್ತಿಹಾನಿ ಮರುಪಡೆಯುವ ಹಕ್ಕು ಮಸೂದೆ ಶೀಘ್ರ ಜಾರಿಗೆ ತಯಾರಿ

ನವ ದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಹರಿಯಾಣ ವ್ಯಾಪಕ ರೈತರ ಆಂದೋಲನಕ್ಕೆ ಸಾಕ್ಷಿಯಾಗುತ್ತಿದ್ದರೂ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಮರುಪಡೆಯುವ ಹಕ್ಕು ಪಡೆಯುವ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು ಎಂದು ಶನಿವಾರ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೈತರ … Continued

ಬಾಂಬ್‌ ಸ್ಫೋಟ ಬೆದರಿಕೆ ಟ್ವೀಟ್:‌ ಹರ್ಯಾಣ ಯುವಕ ಬಂಧನ

ಮುಂಬೈ: ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯುವ ಕುರಿತು ಟ್ವೀಟ್‌ ಮಾಡಿದ ಹರಿಯಾಣ ಮೂಲಕ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ೧೯ ವರ್ಷ್‌ ಬನ್ವಾರಿ ಸಿಂಗ್‌ ಬಂಧಿತ ಯುವಕ. ಆತ ಟ್ವೀಟ್‌ನಲ್ಲಿ ಹಿಂದಿ ಚಲನಚಿತ್ರ “ಮೇಡಮ್‌ ಮುಖ್ಯಮಂತ್ರಿʼ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಲಾಡ್‌, ಅಂಧೇರಿ, ಪಾಲ್ಘರ್‌ನ ವಸೈನ ೭ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯಲಿದೆ ಎಂದು ಟ್ವೀಟ್‌ … Continued

ಲಗ್ನ ಪತ್ರಿಕೆಯಲ್ಲಿ ರೈತ ಪರ ಘೋಷಣೆ, ರೈತ ಮುಖಂಡರ ಫೋಟೊ ಮುದ್ರಣ !!

ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸಲು ಹರಿಯಾಣ ರೈತರು ನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದು, ಮದುವೆಯ ಆಮಂತ್ರಣಗಳಲ್ಲಿ ರೈತ ಹೋರಾಟ ಪರ ಘೋಷಣೆಗಳು ಹಾಗೂ ಹೋರಾಟಗಾರರ ಫೋಟೊಗಳನ್ನು ಮುದ್ರಿಸುತ್ತಿದ್ದಾರೆ. “ರೈತರಿಲ್ಲದೇ ಅನ್ನವಿಲ್ಲʼ, “ರೈತರ ಹೋರಾಟಕ್ಕೆ ಜಯವಾಗಲಿʼ, “ರೈತರ ಬೇಡಿಕೆಗಳು ಈಡೇರಲಿ” ಸೇರಿದಂತೆ ವಿವಿಧ ಘೋಷಣೆಗಳನ್ನು ಮುದ್ರಿಸುತ್ತಿದ್ದಾರೆ. ಅಲ್ಲದೇ ರೈತ ಮುಖಂಡ ಸರ್‌ ಛೋಟುರಾಮ್‌ ಅವರ ಫೋಟೊಗಳನ್ನು … Continued

ಹರ್ಯಾಣ:ಟೋಲ್‌ ಪ್ಲಾಜಾಗಳಲ್ಲಿ ರೈತರ ಧರಣಿ

ಚಂಡಿಗಡ: ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಬೆಂಬಲವಾಗಿ   ಮಂಗಳವಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಧರಣಿ ನಡೆಸಿದರು. ಹಿಸಾರ್ ಬಳಿಯ ಹಿಸಾರ್-ಸಿರ್ಸಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲ್ಯಾಂಡ್ರಿ ಟೋಲ್ ಪ್ಲಾಜಾದಲ್ಲಿ, ಸಾವಿರಾರು ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಸುದೀರ್ಘ ಯುದ್ಧಕ್ಕೆ ಪ್ರತಿಜ್ಞೆ ಮಾಡಿದರು. ಈ ಸಭೆಯಲ್ಲಿ ರೈತ ಮುಖಂಡರಾದ ಅಶೋಕ್ ಧವಾಲೆ, … Continued