ಬೆಳಗಾವಿ | ರಸ್ತೆ ತಡೆದು ಪ್ರತಿಭಟನೆ ನಡೆಸುವ ವೇಳೆ ನುಸುಳಿ ದಾಟಿ ಬಂದ ಬಸ್‌ : ಚಾಲಕರ ಕೈ ಕಟ್ಟಿಹಾಕಿದ ರೈತರು..!

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಸೋಮವಾರ, ಇಲ್ಲಿನ ಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದು, ಕಳಸಾ- ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ … Continued

ಸಂಸದೆ ‘ಕಂಗನಾ ರಣಾವತ್’ ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ ಎಫ್ ಕಾನ್ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ..!

ಚಂಡೀಗಢ : ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ಸಂಸದೆ ಕಂಗನಾ ರಣಾವತಗೆ ಕಪಾಳಮೋಕ್ಷ ಮಾಡಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಸಂಸದೆ ಕಂಗನಾ ರಣಾವತಗೆ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು, ಅವರನ್ನು ಇದೀಗ … Continued

1200 ಟ್ರ್ಯಾಕ್ಟರ್‌ಗಳೊಂದಿಗೆ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಪುನರಾರಂಭಿಸಲು 14000 ರೈತರು ಸಜ್ಜು : ದೆಹಲಿಯಲ್ಲಿ ಹೈ ಅಲರ್ಟ್

ನವದೆಹಲಿ : ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಸಂಬಂಧಿಸಿದಂತೆ ಕೇಂದ್ರದೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಇಂದು, ಬುಧವಾರ ಪಂಜಾಬ್-ಹರಿಯಾಣ ಗಡಿಯಿಂದ ತಮ್ಮ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಪುನರಾರಂಭಿಸುತ್ತಿದ್ದಾರೆ. ಪೊಲೀಸ್ ಬ್ಯಾರಿಕೇಡ್‌ಗಳನ್ನು ಕೆಡವಲು ಪ್ರತಿಭಟನಾಕಾರರು ತಂದ ಉಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಸುಮಾರು 14,000 ರೈತರು 1,200 ಟ್ರ್ಯಾಕ್ಟರ್ … Continued

ರೈತರು-ಕೇಂದ್ರದ ಮಧ್ಯೆ ಸಭೆ ; ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ ಪ್ರಸ್ತಾಪ, ಪ್ರತಿಭಟನೆಗೆ ತಾತ್ಕಾಲಿಕ ತಡೆ, ಪ್ರಸ್ತಾವ ಕುರಿತು 2 ದಿನ ಚರ್ಚೆ

ನವದೆಹಲಿ: ರೈತಪರ ಸಂಘಟನೆಗಳೊಂದಿಗಿನ ತಡರಾತ್ರಿ ಸಂಧಾನ ಬಹುತೇಕ ಸಫಲವಾಗಿದೆ ಎಂದು ಹೇಳಲಾಗಿದ್ದು, ‘ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು 5 ವರ್ಷಗಳ ವರೆಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲಿ ಖರೀದಿಸುವ ಕುರಿತು ಪ್ರಸ್ತಾಪ ಮುಂದಿಡಲಾಗಿದೆ ಎಂದು ಸಂಧಾನ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದ್ವಿದಳ ಧಾನ್ಯಗಳು, … Continued

ವೀಡಿಯೊ..| ದೆಹಲಿ ಚಲೋ : ಅಶ್ರುವಾಯು ಶೆಲ್‌ ಹೊತ್ತ ಪೊಲೀಸರ ಡ್ರೋನ್‌ಗಳಿಗೆ ಠಕ್ಕರ್‌ ಕೊಡಲು ಗಾಳಿಪಟದ ತಂತ್ರ ಬಳಿಸಿದ ರೈತರು…!

ನವದೆಹಲಿ : ರೈತರಿಂದ ನಡೆಯುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಅಶ್ರುವಾಯು ಸಿಡಿಸಲು ಸರ್ಕಾರ ನಿಯೋಜನೆ ಮಾಡಿರುವ ಡ್ರೋನ್‌ಗಳಿಗೆ ಠಕ್ಕರ್‌ ಕೊಡಲು ಗಾಳಿಪಟಗಳನ್ನು ಹಾರಿಸಿದ್ದಾರೆ… ವಿಶೇಷವಾಗಿ ಪಂಜಾಬ್‌ನ ರೈತರು, ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಇತರ ಕೃಷಿ ಸುಧಾರಣೆಗಳಿಗೆ ಕಾನೂನು ಖಾತರಿ ನೀಡಬೇಕಂದು ಒತ್ತಾಯಿಸಿ ದೆಹಲಿಯತ್ತ ಮೆರವಣಿಗೆ ಹೊರಟಿದ್ದಾರೆ. ಅಂಬಾಲಾ … Continued

ರೈತರ ‘ದೆಹಲಿ ಚಲೋ’ ಮೆರವಣಿಗೆ ವೇಳೆ ಘರ್ಷಣೆಯ ನಂತರ 60 ಕ್ಕೂ ಹೆಚ್ಚು ಜನರಿಗೆ ಗಾಯ : ಪ್ರತಿಭಟನಾ ಮೆರವಣಿಗೆಗೆ ರಾತ್ರಿ ವಿರಾಮ

ನವದೆಹಲಿ: ರೈತ ಸಂಘಗಳು ದೆಹಲಿಯ ತಮ್ಮ ಪಾದಯಾತ್ರೆಯನ್ನು ರಾತ್ರಿ ವಿರಾಮಗೊಳಿಸಲು ನಿರ್ಧರಿಸಿದ್ದು, ಬುಧವಾರ ಬೆಳಿಗ್ಗೆ ಪ್ರತಿಭಟನೆಯನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ. ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದ್ದರಿಂದ ದಿನವಿಡೀ ರೈತರು ಮತ್ತು ಮಾಧ್ಯಮದವರು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದಾಗ್ಯೂ, ಸುಮಾರು 100 ರೈತರು ಗಾಯಗೊಂಡಿದ್ದಾರೆ … Continued

ವೀಡಿಯೊ..| ಟ್ರಾಲಿಗಳಲ್ಲಿ 6 ತಿಂಗಳಿಗೆ ಬೇಕಾಗುವಷ್ಟು ಆಹಾರ, ಡೀಸೆಲ್ ಸಮೇತ ಪ್ರತಿಭಟನೆಗೆ ದೆಹಲಿಗೆ ಬರುತ್ತಿರುವ ಪಂಜಾಬ್ ರೈತರು…!

ನವದೆಹಲಿ: ದೆಹಲಿಯತ್ತ ಸಾಗುತ್ತಿರುವ ಸಾವಿರಾರು ರೈತರು, ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ಮುಚ್ಚಿರುವುದರಿಂದ, ತಿಂಗಳುಗಳವರೆಗೆ ಸಾಕಾಗುವಷ್ಟು ಪಡಿತರ ಮತ್ತು ಡೀಸೆಲ್ ಅನ್ನು ಹೊತ್ತುಕೊಂಡು ದೀರ್ಘಾವಧಿ ಹೋರಾಟಕ್ಕೆ ಸಿದ್ಧರಾಗಿ ಬಂದಿರುವುದಾಗಿ ಹೇಳಿದ್ದಾರೆ. ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. 2020 ರ ತಮ್ಮ ಪ್ರತಿಭಟನೆಯ … Continued

ರೈತ ಮುಖಂಡರು-ಕೇಂದ್ರ ಸಚಿವರ ಮಾತುಕತೆ ವಿಫಲ : ದೆಹಲಿ ಚಲೋ ಮೆರವಣಿಗೆ ಆರಂಭ ; 30 ನಿಮಿಷದಲ್ಲಿ ಬ್ಯಾರಿಕೇಡ್‌ ತುಂಡು ಮಾಡ್ತೇವೆ ಎಂದ ರೈತರು

ನವದೆಹಲಿ: ಸೋಮವಾರ ತಡರಾತ್ರಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ಮಹತ್ವದ ಸಭೆ ಯಾವುದೇ ನಿರ್ಣಯವಿಲ್ಲದೆ ಅಂತ್ಯಗೊಂಡಿದ್ದು, ರೈತರು ಇಂದು, ಮಂಗಳವಾರ ತಮ್ಮ ‘ದೆಹಲಿ ಚಲೋ’ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ‘ದೆಹಲಿ ಚಲೋ’ ಮೆರವಣಿಗೆ ಆರಂಭಗೊಂಡಿದ್ದು, ಪಂಜಾಬ್‌ನ ಸಂಗ್ರೂರ್‌ನಿಂದ ರೈತರು 2,500 ಟ್ರಾಕ್ಟರ್ ಟ್ರಾಲಿಗಳಲ್ಲಿ ಹರಿಯಾಣ ಮೂಲಕ ದೆಹಲಿಗೆ … Continued

ರೈತ ಹೋರಾಟಗಾರರ ಜೊತೆ ಮಾತುಕತೆ ಆರಂಭಿಸಿ: ಪ್ರಧಾನಿಗೆ ಬಿಜೆಪಿ ಸರ್ಕಾರದ ಡಿಸಿಎಂ ಒತ್ತಾಯ

ಚಂಡೀಗಢ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮಾತುಕತೆ ಆರಂಭಿಸಬೇಕು ಎಂದು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಹೇಳಿದ್ದಾರೆ. ಈ ಕುರಿತು ಅವರು ಪ್ರಧಾನಿಗೆ ಪತ್ರ ಬರೆದಿದ್ದು, ನಾಲ್ಕು ತಿಂಗಳುಗಳಿಂದ ರೈತರು ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡುತ್ತಿದ್ದಾರೆ. ಅನ್ನದಾತರು ದೆಹಲಿ ಗಡಿಯ ರಸ್ತೆಯ ಮೇಲಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ … Continued

ಮತ್ತೊಬ್ಬ ಪ್ರತಿಭಟನಾ ನಿರತ ರೈತ ಆತ್ಮಹತ್ಯೆಗೆ ಶರಣು

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ನೂರು ದಿನ ದಾಟಿದ ಬೆನ್ನಲ್ಲೇ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಕ್ರಿ-ಬಹದ್ದೂರ್‌ಗ ಗಡಿಯಲ್ಲಿ ಭಾನುವಾರ ಹರಿಯಾಣದ ಹಿಸಾರ್ ಜಿಲ್ಲೆಯ ರೈತ ರಾಜ್ಬೀರ್ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೃಷಿ ಕಾಯ್ದೆ ಹೋರಾಟದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನೊಂದ ಮತ್ತೊಬ್ಬ ರೈತ … Continued