1200 ಟ್ರ್ಯಾಕ್ಟರ್‌ಗಳೊಂದಿಗೆ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಪುನರಾರಂಭಿಸಲು 14000 ರೈತರು ಸಜ್ಜು : ದೆಹಲಿಯಲ್ಲಿ ಹೈ ಅಲರ್ಟ್

ನವದೆಹಲಿ : ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಸಂಬಂಧಿಸಿದಂತೆ ಕೇಂದ್ರದೊಂದಿಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಇಂದು, ಬುಧವಾರ ಪಂಜಾಬ್-ಹರಿಯಾಣ ಗಡಿಯಿಂದ ತಮ್ಮ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಪುನರಾರಂಭಿಸುತ್ತಿದ್ದಾರೆ.
ಪೊಲೀಸ್ ಬ್ಯಾರಿಕೇಡ್‌ಗಳನ್ನು ಕೆಡವಲು ಪ್ರತಿಭಟನಾಕಾರರು ತಂದ ಉಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಸುಮಾರು 14,000 ರೈತರು 1,200 ಟ್ರ್ಯಾಕ್ಟರ್ ಟ್ರಾಲಿಗಳು, 300 ಕಾರುಗಳು ಮತ್ತು 10 ಮಿನಿ ಬಸ್‌ಗಳೊಂದಿಗೆ ದೆಹಲಿ ಗಡಿಯುದ್ದಕ್ಕೂ ಜಮಾಯಿಸಿದ್ದಾರೆ.
ದೆಹಲಿ ಪೊಲೀಸರು ಅಲರ್ಟ್ ಆಗಿದ್ದು, ದೆಹಲಿಯತ್ತ ಅವರ ಮುನ್ನಡೆ ತಡೆಯಲು ಸಜ್ಜಾಗಿದ್ದಾರೆ. ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸುವ ಮೊದಲು, ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್ ಅವರು ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಪುನರುಚ್ಚರಿಸಿದ್ದಾರೆ. ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಮತ್ತು ದೆಹಲಿಗೆ ಯಾವುದೇ ಅಡೆತಡೆಯಿಲ್ಲದೆ ಹೋಗಲು ಅನುವು ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ನಾವು ನಮ್ಮ ಕಡೆಯಿಂದ ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನಾವು ಸಭೆಗಳಲ್ಲಿ ಭಾಗವಹಿಸಿದ್ದೇವೆ, ಪ್ರತಿ ಅಂಶವನ್ನು ಚರ್ಚಿಸಲಾಗಿದೆ, ಮತ್ತು ಈಗ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ನಾವು ಈ ಅಡೆತಡೆಗಳನ್ನು ತೆಗೆದುಹಾಕಲು ಮತ್ತು ದೆಹಲಿ ಕಡೆಗೆ ಸಾಗಲು ನಮಗೆ ಅವಕಾಶ ನೀಡಬೇಕು ಎಂದು ಪಂಧೇರ್ ಹೇಳಿದರು.
ಸರ್ಕಾರಿ ಅಂದಾಜಿನ ಪ್ರಕಾರ, ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಎಂಬಲ್ಲಿ ಸುಮಾರು 14,000 ರೈತರು ಒಟ್ಟುಗೂಡಿದ್ದಾರೆ. ರೈತರು ದೆಹಲಿಗೆ ತೆರಳಲು 1,200 ಟ್ರ್ಯಾಕ್ಟರ್ ಟ್ರಾಲಿಗಳು, 300 ಕಾರುಗಳು ಮತ್ತು 10 ಮಿನಿ ಬಸ್‌ಗಳನ್ನು ಬಳಸುತ್ತಿದ್ದಾರೆ.
ಹೆಚ್ಚುವರಿಯಾಗಿ, 500 ಟ್ರಾಕ್ಟರ್‌ಗಳೊಂದಿಗೆ 4,500 ಪ್ರತಿಭಟನಾಕಾರರು ಧಾಬಿ-ಗುಜ್ರಾನ್ ಗಡಿಯಲ್ಲಿ ಇದ್ದಾರೆ ಎಂದು ಗೃಹ ಸಚಿವಾಲಯ ಅಂದಾಜಿಸಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿರುವ ಗೃಹ ಸಚಿವಾಲಯವು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ರೈತರಂತೆ ಬಿಂಬಿಸುತ್ತಿರುವ ಕಿಡಿಗೇಡಿಗಳು ಕಾರಣ ಎಂದು ಹೇಳಿದೆ. ಈ “ದುಷ್ಕರ್ಮಿಗಳು” ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ ಮತ್ತು ಬುಲ್ಡೋಜರ್‌ಗಳು ಮತ್ತು ಅರ್ಥ್‌ ಮೂವರ್‌ಗಳಂತಹ ಭಾರೀ ಯಂತ್ರಗಳನ್ನು ಹರಿಯಾಣದ ಶಂಭು ಗಡಿಗೆ ತಂದಿದ್ದಾರೆ ಎಂದು ಅದು ಹೇಳಿದೆ.

ದೆಹಲಿಯ ಮೂರು ಗಡಿ ಪಾಯಿಂಟ್‌ಗಳ ಸುತ್ತಲಿನ ಪ್ರದೇಶಗಳು ರಸ್ತೆ ಮುಚ್ಚಿರುವುದರಿಂದ ಬುಧವಾರ ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಕ್ರಿ ಮತ್ತು ಸಿಂಘು ದೆಹಲಿ ಹಾಗೂ ಹರಿಯಾಣ ಗಡಿಯಲ್ಲಿರುವ ಎರಡು ಪಾಯಿಂಟ್‌ಗಳು. ಅಲ್ಲಿ ಪೊಲೀಸ್ ಸಿಬ್ಬಂದಿಯ ಭಾರೀ ನಿಯೋಜನೆ ಮತ್ತು ಕಾಂಕ್ರೀಟ್ ಬ್ಯಾರಿಕೇಡ್‌ಗಳು ಮತ್ತು ಕಬ್ಬಿಣದ ಮೊಳೆಗಳ ಬಹು ಪದರಗಳೊಂದಿಗೆ ಗಡಿಯನ್ನು ಮುಚ್ಚಲಾಗಿದೆ. ಅಗತ್ಯವಿದ್ದರೆ, ಗಾಜಿಪುರ ಗಡಿಯನ್ನು ಬುಧವಾರವೂ ಮುಚ್ಚಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆಯನ್ನು ಪುನರಾರಂಭಿಸುವ ಮುನ್ನಾದಿನದಂದು, ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ಬೆಳೆಗಳಿಗೆ ಎಂಎಸ್‌ಪಿ ಕುರಿತು ಶಾಸನವನ್ನು ತರಲು ಕೇಂದ್ರವು ಒಂದು ದಿನದ ಸಂಸತ್ ಅಧಿವೇಶನ ಕರೆಯಬೇಕು. “ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನನ್ನು ತರಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಧಾನಿಗೆ ಇಚ್ಛಾಶಕ್ತಿ ಇದ್ದರೆ, ಸಂಸತ್ತಿನ ಒಂದು ದಿನದ ಅಧಿವೇಶನವನ್ನು ಕರೆಯಬಹುದು. ಯಾವುದೇ ವಿರೋಧ ಪಕ್ಷವು ಅದನ್ನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು. ತಮ್ಮ ಮೆರವಣಿಗೆಯನ್ನು ತಡೆಯಲು ಹರಿಯಾಣದ ಹಳ್ಳಿಗಳಲ್ಲಿ ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪಂಧೇರ್ ಹೇಳಿದ್ದಾರೆ.
ಇಂತಹ ಸರ್ಕಾರವನ್ನು ದೇಶ ಕ್ಷಮಿಸುವುದಿಲ್ಲ…ಹರಿಯಾಣದ ಹಳ್ಳಿಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ…ನಾವೇನು ​​ಅಪರಾಧ ಮಾಡಿದ್ದೇವೆ?…ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದ್ದೇವೆ. ನಮಗೆ ಈ ರೀತಿಯಲ್ಲಿಪಡೆಗಳು ದಬ್ಬಾಳಿಕೆ ಮಾಡುತ್ತವೆ ಎಂದು ನಾವು ಅಂದುಕೊಂಡಿರಲಿಲ್ಲ. ಶಾಂತಿಯುತವಾಗಿ ದೆಹಲಿಯ ಕಡೆಗೆ ಹೋಗೋಣ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಮಂಗಳವಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಪಂಜಾಬ್ ಸರ್ಕಾರಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಅವಕಾಶ ನೀಡದಂತೆ ಸೂಚಿಸಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳನ್ನು ಓಡಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಗಮನಿಸಿತು ಮತ್ತು ರೈತರು ಬಸ್ ಮೂಲಕ ಅಥವಾ ಸಾರ್ವಜನಿಕ ಸಾರಿಗೆಯ ಮೂಲಕ ದೆಹಲಿಗೆ ಹೋಗಬಹುದು ಎಂದು ಹೇಳಿದೆ.
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ಖರೀದಿಸಲು ಸರ್ಕಾರಿ ಸಂಸ್ಥೆಗಳಿಗೆ ಅವಕಾಶ ನೀಡುವ ಕೇಂದ್ರದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ ನಂತರ ‘ದೆಹಲಿ ಚಲೋ’ ಮೆರವಣಿಗೆ ಬುಧವಾರದಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement