ವೀಡಿಯೊ..| ಟ್ರಾಲಿಗಳಲ್ಲಿ 6 ತಿಂಗಳಿಗೆ ಬೇಕಾಗುವಷ್ಟು ಆಹಾರ, ಡೀಸೆಲ್ ಸಮೇತ ಪ್ರತಿಭಟನೆಗೆ ದೆಹಲಿಗೆ ಬರುತ್ತಿರುವ ಪಂಜಾಬ್ ರೈತರು…!

ನವದೆಹಲಿ: ದೆಹಲಿಯತ್ತ ಸಾಗುತ್ತಿರುವ ಸಾವಿರಾರು ರೈತರು, ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯಲು ಗಡಿಗಳನ್ನು ಮುಚ್ಚಿರುವುದರಿಂದ, ತಿಂಗಳುಗಳವರೆಗೆ ಸಾಕಾಗುವಷ್ಟು ಪಡಿತರ ಮತ್ತು ಡೀಸೆಲ್ ಅನ್ನು ಹೊತ್ತುಕೊಂಡು ದೀರ್ಘಾವಧಿ ಹೋರಾಟಕ್ಕೆ ಸಿದ್ಧರಾಗಿ ಬಂದಿರುವುದಾಗಿ ಹೇಳಿದ್ದಾರೆ.
ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. 2020 ರ ತಮ್ಮ ಪ್ರತಿಭಟನೆಯ ವೇಳೆ ಅವರು 13 ತಿಂಗಳ ಕಾಲ ದೆಹಲಿಯ ಗಡಿಗಳಲ್ಲಿ ಮೊಕ್ಕಾಂ ಹೂಡಿದ್ದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೈತರು ಹೇಳುತ್ತಾರೆ.
“ಸೂಜಿಯಿಂದ ಹಿಡಿದು ಸುತ್ತಿಗೆ, ಕಲ್ಲು ಒಡೆಯುವ ಉಪಕರಣಗಳು ಸೇರಿದಂತೆ ನಮ್ಮ ಟ್ರಾಲಿಗಳಲ್ಲಿ ನಮಗೆ ಬೇಕಾದ ಎಲ್ಲವನ್ನೂ ನಾವು ತೆಗೆದುಕೊಂಡು ಹೊರಟಿದ್ದೇವೆ. ನಮ್ಮೊಂದಿಗೆ ಆರು ತಿಂಗಳ ಪಡಿತರ ಸಹ ತೆಗೆದುಕೊಂಡು ನಾವು ನಮ್ಮ ಹಳ್ಳಿಯನ್ನು ಬಿಟ್ಟಿದ್ದೇವೆ. ನಮ್ಮ ಬಳಿ ಹರಿಯಾಣದ ನಮ್ಮ ಸಹೋದರರಿಗೆ ಬೇಕಾದಷ್ಟು ಡೀಸೆಲ್ ಇದೆ ಎಂದು ಪಂಜಾಬಿನ ರೈತರೊಬ್ಬರು ತಿಳಿಸಿದ್ದಾರೆ. ಅವರು ತನ್ನ ಟ್ರ್ಯಾಕ್ಟರ್‌ನಲ್ಲಿ ದೆಹಲಿಗೆ ಹೊರಟಿದ್ದು, ಎರಡು ಟ್ರಾಲಿಗಳಷ್ಟು ಸಾಮಗ್ರಿಗಳ ಸಮೇತ ದೆಹಲಿಗೆ ಹೊರಟಿದ್ದಾರೆ. ಟ್ರ್ಯಾಕ್ಟರ್, ಟ್ರಾಲಿ ಬಳಸಿ ರ್ಯಾಲಿ ಮಾಡುವುದನ್ನು ವಿಫಲಗೊಳಿಸಲು ಡೀಸೆಲ್ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

2020 ರ ರೈತರ ಪ್ರತಿಭಟನೆಯ ಭಾಗವಾಗಿದ್ದೇನೆ ಎಂದು ಹೇಳಿದ ರೈತರೊಬ್ಬರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಈ ಬಾರಿ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಕಳೆದ ಬಾರಿ 13 ತಿಂಗಳುಗಳ ಕಾಲ ನಾವು ಬಗ್ಗಲಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರೂ ಸರ್ಕಾರ ಭರವಸೆ ಈಡೇರಿಸಿಲ್ಲ. ಈ ಬಾರಿ ನಮ್ಮ ಎಲ್ಲ ಬೇಡಿಕೆಗಳು ಈಡೇರಿದ ನಂತರವೇ ಅಲ್ಲಿಂದ ಹೊರಡುತ್ತೇವೆ’’ ಎಂದು ಹೇಳಿದ್ದಾರೆ.
ಚಂಡೀಗಢದಲ್ಲಿ ಸರ್ಕಾರಿ ನಿಯೋಗದೊಂದಿಗೆ ತಡರಾತ್ರಿ ನಡೆಸಿದ ಮಾತುಕತೆ ವಿಫಲವಾದ ನಂತರ ರೈತರು ಫತೇಘರ್ ಸಾಹಿಬ್‌ನಿಂದ ಮಂಗಳವಾರ ಬೆಳಿಗ್ಗೆ ತಮ್ಮ ಮೆರವಣಿಗೆ ಪ್ರಾರಂಭಿಸಿದರು.
‘ದೆಹಲಿ ಚಲೋ’ ಮೆರವಣಿಗೆಯನ್ನು ತಡೆಯುವ ಕೊನೆಯ ಪ್ರಯತ್ನದಲ್ಲಿ ಇಬ್ಬರು ಕೇಂದ್ರ ಸಚಿವರು ರೈತ ಮುಖಂಡರನ್ನು ಭೇಟಿಯಾಗಿದ್ದರು, ಇದು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ರೈತ ಚಳವಳಿಯ ಸಂದರ್ಭದಲ್ಲಿ ಒಪ್ಪಂದವಾಗಿತ್ತು.

ಮಾತುಕತೆಗಳ ನಡೆದರೂ, ಪ್ರಮುಖ ಬೇಡಿಕೆಯಾದ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಈ ಬೇಡಿಕೆಗಳಲ್ಲಿ ಪ್ರಮುಖವಾಗಿದೆ.
ವಿವಾದದ ಇತರ ಪ್ರಮುಖ ಅಂಶಗಳು ವಿದ್ಯುತ್ ಕಾಯ್ದೆ 2020 ರ ರದ್ದತಿ ಸಹ ಸೇರಿದೆ. ಮಧ್ಯರಾತ್ರಿಯ ಮಾತುಕತೆಯ ನಂತರ ಕೆಲವು ಬೇಡಿಕೆಗಳ ಬಗ್ಗೆ ಒಪ್ಪಂದಕ್ಕೆ ಬಂದರೂ, ರೈತರು ತಮ್ಮ ಸಂಕಲ್ಪದಲ್ಲಿ ಅಚಲವಾಗಿ ಉಳಿದಿದ್ದಾರೆ, ಎರಡು ವರ್ಷಗಳ ಹಿಂದೆ ಸರ್ಕಾರವು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement