ತನ್ನ ದೇಶದ ಪ್ರಾಂತ್ಯದ ಮೇಲೆಯೇ ಬಾಂಬ್ ಹಾಕಿದ ಪಾಕಿಸ್ತಾನದ ವಾಯುಪಡೆ ; 30 ಮಂದಿ ಸಾವು

ಸೋಮವಾರ ಪಾಕಿಸ್ತಾನ ವಾಯುಪಡೆ ವಿಮಾನಗಳು ತಮ್ಮದೇ ದೇಶದ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದ ಹಳ್ಳಿಯ ಮೇಲೆ ಎಂಟು ಬಾಂಬ್‌ಗಳನ್ನು ಹಾಕಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಶ್ತೂನ್ ಬಹುಸಂಖ್ಯಾತರು ಇರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜೆಎಫ್ -17 … Continued

ಆಘಾತಕಾರಿ…| ಬೈದಿದ್ದಕ್ಕೆ ಯೂ ಟ್ಯೂಬ್‌ ನೋಡಿ ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಕೆಳಗಿಟ್ಟು ಸ್ಫೋಟಿಸಿದ ವಿದ್ಯಾರ್ಥಿಗಳು…!

ಯೂ ಟ್ಯೂಬ್‌ (You tube) ನೋಡಿ ಬಾಂಬ್ ತಯಾರಿಸುವುದನ್ನು ಕಲಿತ 12ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿಯೊಬ್ಬರ ಕುರ್ಚಿಯ ಕೆಳಗೆ ಅದನ್ನು ಇಟ್ಟು ಸ್ಪೋಟಿಸಿದ (Bomb Blast), ಆಘಾತಕಾರಿ ಘಟನೆ ವರದಿಯಾಗಿದೆ. ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಿಕ್ಷಕಿ ಅಪಾಯದಿಂದ ಪಾರಾಗಿದ್ದಾರೆ. ವರದಿಯ ಪ್ರಕಾರ, 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪೊಂದುಶಿಕ್ಷಕಿಯನ್ನು ಹೆದರಿಸಲು … Continued

ಬಾಂಬ್ ತಯಾರಿಸಲು ಕೇವಲ ₹ 3,000 ರೂ. ಖರ್ಚು ಮಾಡಿದ್ದ ಕೇರಳ ಸರಣಿ ಸ್ಫೋಟದ ಆರೋಪಿ : ವರದಿ

ಕೊಚ್ಚಿ : ಭಾನುವಾರ ನಡೆದ ಕೇರಳದ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಎಲೆಕ್ಟ್ರಿಕ್ ಸರ್ಕ್ಯೂಟ್‌ನಲ್ಲಿ ಪರಿಣಿತ ಎಂದು ಹೇಳಲಾದ 48 ವರ್ಷದ ಡೊಮಿನಿಕ್ ಮಾರ್ಟಿನ್ ಬಾಂಬ್ ತಯಾರಿಸಲು ಸುಮಾರು ₹ 3,000 ಖರ್ಚು ಮಾಡಿದ್ದಾಗಿ ಹೇಳಿದ್ದಾನೆ.ಮಾರ್ಟಿನ್ ಕುಟುಂಬವು ಕೊಚ್ಚಿ … Continued

ಬಾಂಬ್‌ ಸ್ಫೋಟ ಬೆದರಿಕೆ ಟ್ವೀಟ್:‌ ಹರ್ಯಾಣ ಯುವಕ ಬಂಧನ

ಮುಂಬೈ: ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯುವ ಕುರಿತು ಟ್ವೀಟ್‌ ಮಾಡಿದ ಹರಿಯಾಣ ಮೂಲಕ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ೧೯ ವರ್ಷ್‌ ಬನ್ವಾರಿ ಸಿಂಗ್‌ ಬಂಧಿತ ಯುವಕ. ಆತ ಟ್ವೀಟ್‌ನಲ್ಲಿ ಹಿಂದಿ ಚಲನಚಿತ್ರ “ಮೇಡಮ್‌ ಮುಖ್ಯಮಂತ್ರಿʼ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಮಲಾಡ್‌, ಅಂಧೇರಿ, ಪಾಲ್ಘರ್‌ನ ವಸೈನ ೭ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಯಲಿದೆ ಎಂದು ಟ್ವೀಟ್‌ … Continued