ಶಿವಕಾಶಿಯ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 8 ಮಂದಿ ಸಾವು

ತಮಿಳುನಾಡಿನ ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಮಹಿಳಾ ಕಾರ್ಮಿಕರು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಕೆಲವು ಮಂದಿಗೆ ಸುಟ್ಟಗಾಯಗಳಾಗಿವೆ ಎಂದು ವರದಿಯಾಗಿದೆ. ತಮಿಳುನಾಡಿನ ವಿರುದುನಗರ ಜಿಲ್ಲೆಯ ಶ್ರೀ ಸುದರ್ಶನ್ ಪಟಾಕಿ ಕಾರ್ಖಾನೆಯಲ್ಲಿ ರಾಸಾಯನಿಕಗಳನ್ನು ನಿರ್ವಹಿಸುವಾಗ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ … Continued

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : 9 ಮಂದಿಗೆ ಗಾಯ

ಬೆಂಗಳೂರು: ಐಟಿಪಿಎಲ್ ರಸ್ತೆಯ ವೈಟ್‌ಫೀಲ್ಡ್ ಬಳಿಯಿರುವ ಬೆಂಗಳೂರಿನ ರಾಜಾಜಿನಗರದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಗಿದೆ. ಗಾಯಗೊಂಡವರಲ್ಲಿ ಮೂವರು ಕೆಫೆಯ ಉದ್ಯೋಗಿಗಳು ಎಂದು ವರದಿಯಾಗಿದೆ. ಈವರೆಗಿನ ವರದಿಗಳ ಪ್ರಕಾರ, ಸಮೀಪದ ಯಾವುದೇ ಕಟ್ಟಡ ಅಥವಾ ಸಂಸ್ಥೆಗೆ … Continued

ಶಿರಾಳಕೊಪ್ಪ : ಚೀಲದಲ್ಲಿದ್ದ ವಸ್ತು ಸ್ಪೋಟ ; ಇಬ್ಬರಿಗೆ ಗಾಯ

ಶಿವಮೊಗ್ಗ: ಬ್ಯಾಗಿನಲ್ಲಿದ್ದ ವಸ್ತು ಸ್ಪೋಟಗೊಂಡು ಇಬ್ಬರಿಗೆ ಗಾಯಗಳಾದ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಭಾನುವಾರ (ಫೆ.18) ಸಂಭವಿಸಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಶಿರಾಳಕೊಪ್ಪದಲ್ಲಿನ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದ್ದು, ಕುಟುಂಬವೊಂದು ಸಂತೆಗಾಗಿ ಬಂದಿದ್ದ ಸಂದರ್ಭ ಅವರಿಟ್ಟಿದ್ದ ಚೀಲ ಸ್ಫೋಟಗೊಂಡಿದೆ ಎನ್ನಲಾಗಿದೆ. ಸಂತೆಯ ವೇಳೆ ಸಿಡಿಮದ್ದನ್ನು ತಂದಿದ್ದ ಚೀಲವನ್ನು ಅಂಗಡಿ ಬಳಿ … Continued

ಬೆಳ್ತಂಗಡಿ : ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ; ಮೂವರು ಸಾವು

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಬಳಿ ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಮೂವರು ಕಾರ್ಮಿಕರು ಮೃತಪಟ್ಟು, ಅನೇಕ ಮಂದಿ ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕೇರಳದ ಸ್ವಾಮಿ(55), ವರ್ಗೀಸ್‌ (68), ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಎಂದು ಗುರುತಿಸಲಾಗಿದೆ, ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ … Continued

ನಾಗ್ಪುರ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ಸಾವು, ಹಲವರಿಗೆ ಗಾಯ

ನಾಗ್ಪುರ : ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸ್ಫೋಟಕ ತಯಾರಿಕಾ ಕಂಪನಿಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಗ್ಪುರದ ಬಜಾರ್‌ಗಾಂವ್ ಪ್ರದೇಶದಲ್ಲಿ ಸೋಲಾರ್ ಇಂಡಸ್ಟ್ರೀಸ್‌ನ ಕಾಸ್ಟ್ ಬೂಸ್ಟರ್ ಘಟಕದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಫೋಟ ಸಂಭವಿಸಿದೆ. ಸೋಲಾರ್ ಇಂಡಸ್ಟ್ರೀಸ್ ಕಾರ್ಖಾನೆಯ ಪ್ರವೇಶ ದ್ವಾರದಲ್ಲಿ ಹಲವಾರು ಆಂಬ್ಯುಲೆನ್ಸ್‌ಗಳನ್ನು … Continued

ಫ್ರಿಡ್ಜ್ ಕಂಪ್ರೆಸರ್ ಸ್ಫೋಟ : ಮೂವರು ಮಕ್ಕಳು ಸೇರಿದಂತೆ 5 ಮಂದಿ ಸಾವು

ಜಲಂಧರ : ಪಂಜಾಬ್‌ನ ಜಲಂಧರದ ಮನೆಯೊಂದರಲ್ಲಿ ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಗರದ ಅವತಾರ್ ನಗರ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಸ್ಫೋಟದ ನಂತರ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರನ್ನು ಜಲಂಧರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ … Continued

ಸ್ಫೋಟಕ ತುಂಬಿದ್ದ ಟ್ರಕ್ ಬೈಕಿಗೆ ಡಿಕ್ಕಿ: ಸ್ಫೋಟದಿಂದ 17 ಮಂದಿ ಸಾವು

ಆಕ್ರಾ: ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್‍ಗೆ ಡಿಕ್ಕಿಯಾದ್ದು, ಭೀಕರ ಸ್ಫೋಟವಾಗಿದ್ದು, ಈ ಅವಘಡದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 59 ಮಂದಿ ಗಾಯಗೊಂಡ ಘಟನೆ  ಘಾನಾದ ರಾಜಧಾನಿ ಅಕ್ರಾದಿಂದ 300 ಕಿಲೋ ಮೀಟರ್ ದೂರದಲ್ಲಿ ಬೊಗೊಸೊ ಎಂಬ ನಗರದ ಹತ್ತಿರ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ಕೆಲವು ನೆಲಕ್ಕುರುಳಿದೆ. … Continued