ಅಹಮದ್‌ ನಗರ ಜಿಲ್ಲೆಗೆ ಅಹಲ್ಯಾನಗರ ಎಂದು ಮರುನಾಮಕರಣ : ಕೇಂದ್ರ ಸರ್ಕಾರ ಒಪ್ಪಿಗೆ

ಮುಂಬೈ: ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ. ಈ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮಾಹಿತಿ ನೀಡಿದ್ದು, ಅಹಮದ್‌ ನಗರ ಹೆಸರನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ಕಳೆದ ಮಾರ್ಚ್‌ನಲ್ಲಿ ರಾಜ್ಯ ಸಚಿವ ಸಂಪುಟ ಕೈಗೊಂಡಿತ್ತು. ನಂತರ ಕೇಂದ್ರದದ ಸಮ್ಮತಿಗಾಗಿ ಕಳುಹಿಸಲಾಗಿತ್ತು … Continued

ವೀಡಿಯೊ…| ಪುಣೆ ಸಮೀಪ ಹೆಲಿಕಾಪ್ಟರ್ ಪತನ : ಇಬ್ಬರು ಪೈಲಟ್‌ ಸೇರಿ ಮೂವರು ಸಾವು

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪುಣೆಯ ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆದ ಕೂಡಲೇ ನಗರದ ವಸತಿ ಉಪನಗರವಾದ ಬವ್‌ಧಾನ್‌ ಗುಡ್ಡಗಾಡು ಪ್ರದೇಶದ ಬಳಿ ಇಂದು, ಬುಧವಾರ ಬೆಳಿಗ್ಗೆ 6:45 ರ ಸುಮಾರಿಗೆ ಪತನಗೊಂಡಿದೆ ಎಂದು ವರದಿಯಾಗಿದೆ. ಹೆಲಿಕಾಪ್ಟರ್‌ … Continued

ಗೋವುಗಳನ್ನು ʼರಾಜ್ಯ ಮಾತೆʼ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಪ್ರಮುಖ ನಿರ್ಧಾರದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ರಾಜ್ಯ ಸರ್ಕಾರವು ದೇಸಿ ಹಸುಗಳನ್ನು ‘ರಾಜ್ಯ ಮಾತಾ-ಗೋಮಾತೆ’ ಎಂದು ಘೋಷಣೆ ಮಾಡಿದೆ. ವೇದಗಳ ಕಾಲದಿಂದಲೂ ಹಸುಗಳು ಹೊಂದಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಅವುಗಳನ್ನು ‘ರಾಜ್ಯ ಮಾತಾ-ಗೋಮಾತೆ’ ಎಂದು ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಮಾನವನ ಪೋಷಣೆಯಲ್ಲಿ ದೇಸಿ ಹಸುಗಳ … Continued

ವೀಡಿಯೊ…| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ…!

ಇದಕ್ಕಿದ್ದಂತೆ ಬಾಯ್ತೆರೆದ ರಸ್ತೆಯು ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಸೆಪ್ಟಿಕ್ ಟ್ಯಾಂಕ್ ವಾಹನವನ್ನು ಇಡಿಯಾಗಿ ಆಪೋಶನ ತೆಗೆದುಕೊಂಡ ಘಟನೆ ಶುಕ್ರವಾರ ಪುಣೆಯ ಲಕ್ಷ್ಮೀ ರಸ್ತೆಯ ಸಮಾಧಾನ ಚೌಕದ ಬಳಿ ನಡೆದಿದೆ. ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ತಕ್ಷಣವೇ ವಾಹನದಿಂದ ಜಿಗಿದು ಪಾರಾಗಿದ್ದಾನೆ. ಘಟನೆ ವರದಿಯಾದ ನಂತರ ಅಗ್ನಿಶಾಮಕ ದಳದ 20 ಜವಾನರು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ … Continued

ವೀಡಿಯೊ..| ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದ್ರೆ 11 ಲಕ್ಷ ರೂ. ಬಹುಮಾನ ; ವಿವಾದದ ಕಿಡಿ ಹೊತ್ತಿಸಿದ ಶಿವಸೇನೆ (ಏಕನಾಥ ಶಿಂಧೆ) ಶಾಸಕ

ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಶಿವಸೇನಾ (ಏಕನಾಥ ಶಿಂಧೆ ಬಣ) ಶಾಸಕ ಸಂಜಯ ಗಾಯಕ್ವಾಡ್ ಅವರು ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಕುರಿತು ನೀಡಿದ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ. ಗಾಯಕ್ವಾಡ ಅವರು ತಮ್ಮ ವಿಲಕ್ಷಣ ಹೇಳಿಕೆಯಲ್ಲಿ, “ ವಿದೇಶದಲ್ಲಿದ್ದಾಗ, ರಾಹುಲ್ ಗಾಂಧಿ ಅವರು ಭಾರತದಲ್ಲಿ … Continued

ನೀವು ಪ್ರಧಾನಿಯಾಗಲು ಬಯಸಿದ್ರೆ ನಿಮ್ಮನ್ನು ಬೆಂಬಲಿಸ್ತೇವೆ ಎಂದಿದ್ದರು : ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಗ್ಪುರ: ‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ರಾಜಕೀಯ ನಾಯಕರೊಬ್ಬರು ಲೋಕಸಭಾ ಚುನಾವಣೆ ವೇಳೆ ನನಗೆ ಭರವಸೆ ನೀಡಿದ್ದರು. ಆದರೆ, ಅವರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ” ನನಗೆ ಒಂದು ಘಟನೆ ನೆನಪಿದೆ. ನಾನು ಯಾರನ್ನೂ ಹೆಸರಿಸುವುದಿಲ್ಲ. ಆ ವ್ಯಕ್ತಿ ನೀವು ಪ್ರಧಾನಿಯಾಗಲು ಬಯಸಿದರೆ … Continued

ವೀಡಿಯೊ | ತಿಂದ ಆಹಾರದ ಬಿಲ್‌ ಹಣ ಕೇಳಿದ ಹೊಟೇಲ್‌ ಮಾಣಿ ; ಆತನನ್ನು ಕಾರಿನಲ್ಲಿ 1 ಕಿಮೀ ಎಳೆದೊಯ್ದ ದುಷ್ಕರ್ಮಿಗಳು…!

ಮಂಗಳವಾರ ಮಹಾರಾಷ್ಟ್ರದ ಬೀಡ್‌ನಲ್ಲಿ ತಿಂದ ಆಹಾರದ ಬಿಲ್ ಪಾವತಿಸಲು ಹೇಳಿದ ಹೊಟೇಲ್‌ ಮಾಣಿ(waiter)ಯನ್ನು ಕಾರಿನಲ್ಲಿ ಒಂದು ಕಿಮೀ ಎಳೆದೊಯ್ದ ಘಟನೆ ನಡೆದಿರುವುದು ವರದಿಯಾಗಿದೆ. ನಂತರ ಮಾಣಿಯನ್ನು ಒತ್ತೆಯಾಳಾಗಿಟ್ಟುಕೊಂಡು ಇಡೀ ರಾತ್ರಿ ಆತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಮೂವರು ಊಟ ಮಾಡಿದ್ದಾರೆ. ನಂತರ ಬಿಲ್‌ ತರುವಂತೆ ಮಾಣಿಗೆ ಸೂಚಿಸಿ ಈ ಯುವಕರು ಕಾರು … Continued

ರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್ ಮುಳುಗಿ ಬೆಳಗಾವಿ ಇಬ್ಬರು ಕಮಾಂಡೊಗಳ ಸಾವು

ಬೆಳಗಾವಿ: ಮಹಾರಾಷ್ಟ್ರದ ತಿಲಾರಿ‌ ಡ್ಯಾಂ ನಲ್ಲಿ ಬೋಟ್ ಮುಳುಗಿ ರಿವರ್ ಕ್ರಾಸಿಂಗ್ ತರಬೇತಿಗೆಂದು ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬೆಳಗಾವಿಯ ಜೆ.ಎಲ್. ವಿಂಗ್ ಕಮಾಂಡೋ ತರಬೇತಿ ಕೇಂದ್ರದ ರಾಜಸ್ಥಾನದ ವಿಜಯಕುಮಾ‌ರ ದಿನವಾಲ್ (28) ಹಾಗೂ ಪಶ್ಚಿಮ ಬಂಗಾಳದ ದಿವಾಕ‌ರ ರಾಯ್ (26) ಮೃತಪಟ್ಟವರಾಗಿದ್ದಾರೆ. ಬೋಟ್ … Continued

ವೀಡಿಯೊ…| ಆಂಬ್ಯುಲೆನ್ಸ್ ಇಲ್ಲ, 10 ವರ್ಷದ ಇಬ್ಬರು ಪುತ್ರರ ಶವಗಳನ್ನು ಭುಜದ ಮೇಲೆ ಹೊತ್ತು 15 ಕಿ.ಮೀ ನಡೆದ ದಂಪತಿ…!

ಮಹಾರಾಷ್ಟ್ರದ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣಕ್ಕೆ ದಂಪತಿ ಮೃತಪಟ್ಟ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಮ್ಮ ಇಬ್ಬರು ಪುತ್ರರ ಶವಗಳನ್ನು 15 ಕಿಲೋಮೀಟರ್‌ಗಳವರೆಗೆ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ವರದಿಯಾಗಿದೆ. ದಂಪತಿ ತಮ್ಮ ಪುತ್ರರ ಶವಗಳೊಂದಿಗೆ ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, … Continued

ಥಾಣೆಯಲ್ಲಿ 4 ವರ್ಷದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ; ಪೊಲೀಸರಿಂದ ಲಾಠಿ ಚಾರ್ಜ್‌

ಮುಂಬೈ: ಶಾಲೆಯೊಂದರಲ್ಲಿ ನಾಲ್ಕು ವರ್ಷದ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಪೊಲೀಸರು ಲಾಠಿ ಮತ್ತು ಅಶ್ರುವಾಯು ಮೂಲಕ ಜನರ ಗುಂಪನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರ ಲಾಠಿ ಚಾರ್ಜ್‌ ನಂತರ ಆರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಜನರಿಂದ ತುಂಬಿ ತುಳುಕುತ್ತಿದ್ದ … Continued