ಹುಲಿ ದಾಳಿಗೆ ನಾಲ್ವರು ಮಹಿಳೆಯರು ಸಾವು

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶುಕ್ರವಾರ (ಮೇ 22)  ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಅರಣ್ಯ ಪ್ರದೇಶಕ್ಕೆ ತೇಂದು ಎಲೆಗಳನ್ನು ಸಂಗ್ರಹಿಸಲು ಹೋಗಿದ್ದ 13 ಮಹಿಳೆಯರ ಗುಂಪಿನ ಮೇಲೆ ಹುಲಿ ದಾಳಿ ನಡೆಸಿದ್ದು, ನಾಲ್ವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸಿಂದೇವಾಹಿ ತಹಸಿಲ್‌ನ ಗುಂಜೆವಾಹಿ ಗ್ರಾಮದ ನಿವಾಸಿಗಳಾದ … Continued

ವಿಡಿಯೋ…| ಸರ್ಕಸ್ ಪ್ರದರ್ಶನ ವೇಳೆ ಸೇಫ್ಟಿ ನೆಟ್ ದಾಟಿ ಪ್ರೇಕ್ಷಕರತ್ತ ನುಗ್ಗಿದ ಹುಲಿ

ದಕ್ಷಿಣ ರಷ್ಯಾದ ರೋಸ್ಟೋವ್-ಆನ್-ಡಾನ್ ನಗರದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಸೇಫ್ಟಿ ನೆಟ್ ಕುಸಿದುಬಿದ್ದ ನಂತರ ಹುಲಿಯೊಂದು ಪ್ರೇಕ್ಷಕರತ್ತ ನುಗ್ಗಿದ ಆಘಾತಕಾರಿ ಘಟನೆ ಕಳೆದ ಭಾನುವಾರ ನಡೆದಿದೆ. ‘ದ ಮಾಸ್ಕೋ ಟೈಮ್ಸ್’ ವರದಿಯ ಪ್ರಕಾರ, ಮೂರು ಹುಲಿಗಳು ಮತ್ತು ಇಬ್ಬರು ತರಬೇತುದಾರರಿದ್ದ ಪ್ರದರ್ಶನದ ವೇಳೆ ಈ ಅವಘಡ ಸಂಭವಿಸಿದೆ. ಪ್ರಾಣಿಗಳು ಮತ್ತು ಪ್ರೇಕ್ಷಕರ ನಡುವೆ ಇದ್ದ … Continued

ವೀಡಿಯೊ..| ಹಳ್ಳಿಗೆ ನುಗ್ಗಿ ವ್ಯಕ್ತಿ ಮೇಲೆ ದಾಳಿ ಮಾಡಿದ ನಂತ್ರ ಮನೆ ಒಳಗಿನ ಮಂಚದ ಮೇಲೆ ವಿಶ್ರಾಂತಿ ಪಡೆದ ಹುಲಿ…!

ಉಮಾರಿಯಾ: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಹಳ್ಳಿಯೊಂದಕ್ಕೆ ಸೋಮವಾರ ಹುಲಿಯೊಂದು ನುಗ್ಗಿ ಆತಂಕ ಸೃಷ್ಟಿಸಿದೆ. ಯುವಕನ ಮೇಲೆ ದಾಳಿ ಮಾಡಿದ ಹುಲಿ, ನಂತರ ಮನೆಯೊಂದರೊಳಗೆ ನುಗ್ಗಿ ಮಂಚದ ಮೇಲೆ ಆರಾಮವಾಗಿ ಕುಳಿತುಕೊಂಡ ಘಟನೆ ವರದಿಯಾಗಿದೆ. ಇದರಿಂದ ಹೆದರಿದ ಗ್ರಾಮಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಛಾವಣಿಗಳನ್ನು ಏರಿ ಕುಳಿತಿದ್ದರು. ಸೋಮವಾರ (ಡಿಸೆಂಬರ್‌ 29) ಬೆಳಿಗ್ಗೆ … Continued

ವೀಡಿಯೊ…| ರಣಥಂಬೋರಿನ ಹುಲಿಗಳ ಕಾಳಗ : ಪ್ರದೇಶದ ಮೇಲೆ ಹತೋಟಿಗಾಗಿ ತಾಯಿ ಹುಲಿ ಜೊತೆ ಮಗಳ ಸೆಣಸಾಟ…!

ಮಂಗಳವಾರ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಅಪರೂಪದ ಮತ್ತು ತೀವ್ರವಾದ ಹುಲಿಗಳ ಕಾಳಗವನ್ನು ವೀಕ್ಷಿಸಿದರು, ಪ್ರಸಿದ್ಧ ಹುಲಿ ರಿದ್ಧಿ (T-124) ತನ್ನ ಮಗಳು ಮೀರಾ ಜೊತೆ ಅಭಯಾರಣ್ಯದ ವಲಯ 3 ರಲ್ಲಿ ಭೂಪ್ರದೇಶದಲ್ಲಿ ತನ್ನ ಹಿಡಿತ ಸಾಧಿಸಲು ಘರ್ಷಣೆ ನಡೆಸಿತು. ಕಾಡಿನ ಸಫಾರಿಯ ಸಮಯದಲ್ಲಿ ಹುಲಿಗಳ ಕಾಳಗವನ್ನು ಸೆರೆ ಹಿಡಿಯಲಾಗಿದೆ. ಬೆಳಗಿನ ಸಫಾರಿಯ ಸಮಯದಲ್ಲಿ, ತಾಯಿ … Continued

ಕಾರವಾರ : ಕೈಗಾ-ಬಾರೆ ರಸ್ತೆಯಲ್ಲಿ ಆರಾಮವಾಗಿ ನಡೆದುಕೊಂಡು ಹೋದ ಹುಲಿ; ವೀಡಿಯೊ ವೈರಲ್‌

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ-ಬಾರೆ ರಸ್ತೆಯಲ್ಲಿ ಹುಲಿಯೊಂದು ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರವಾರ ತಾಲೂಕಿನ ಕೈಗಾ-ಬಾರೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 11ರ ಸುಮಾರು ಹುಲಿ ಶಾಂತವಾಗಿ ನಡೆದುಕೊಂಡು ಹೋಗಿರುವ ವೀಡಿಯೊ ವೈರಲ್‌ ಆಗಿದೆ. ಇದೇ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಮೂಲಕ … Continued

ಭಾರತದ ರಾಷ್ಟ್ರೀಯ ಪ್ರಾಣಿ-ರಾಷ್ಟ್ರೀಯ ಪಕ್ಷಿಯನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದ ಅದ್ಭುತ ವೀಡಿಯೊ ವೈರಲ್

ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ವಿಶೇಷ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ. ವೈರಲ್ ಆಗಿರುವ ಈ ವೀಡಿಯೊವೊಂದರಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ (National Animal) ಹುಲಿ ಮತ್ತು ರಾಷ್ಟ್ರೀಯ ಪಕ್ಷಿ ನವಿಲು (National Bird) ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಒಂದೇ ಫ್ರೇಮ್‍ನಲ್ಲಿ ಸೆರೆಹಿಡಿಯಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಐಎಫ್‌ಎಸ್ … Continued

ಗುಂಡ್ಲುಪೇಟೆ | ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಮಂಗಗಳ ಶವಗಳು ಪತ್ತೆ, ವಿಷಪ್ರಾಶನದ ಶಂಕೆ

ಚಾಮರಾಜನಗರ: ಐದು ಹುಲಿಗಳಿಗೆ ವಿಷಪ್ರಾಶನ ಮಾಡಿದ ಆಘಾತಕಾರಿ ಘಟನೆಯ ಬೆನ್ನಲ್ಲೇ, ಚಾಮರಾಜನಗರ ಜಿಲ್ಲೆಯಲ್ಲಿ 20 ಮಂಗಗಳ ಶವಗಳು ಬುಧವಾರ ಪತ್ತೆಯಾಗಿವೆ…! ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯ ಉದ್ದಕ್ಕೂ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಮಂಗಗಳಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕೋತಿಗಳನ್ನು ಬೇರೆಡೆ … Continued

ಚಾಮರಾಜನಗರ | ಹುಲಿ ದಾಳಿಗೆ ಮಹಿಳೆ ಸಾವು, ಯುವಕನಿಗೆ ಗಾಯ

ಚಾಮರಾಜನಗರ: ಕೆಲವೇ ತಾಸುಗಳ ಅಂತರದಲ್ಲಿ ಇಬ್ಬರ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ದಾಳಿಯಲ್ಲಿ ಮಹಿಳೆ ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ನಡೆದಿದೆ. ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಹುಲಿ ದಾಳಿಗೆ ಅಸುನೀಗಿದ್ದಾರೆ. ರಂಗಮ್ಮ ಎಂಬವರ ಮೇಲೆ ಮಂಗಳವಾರ ಬೆಳಗ್ಗೆ ಹುಲಿ ದಾಳಿ ಮಾಡಿದ್ದು ತಲೆ ಮತ್ತು … Continued

ಹುಲಿಯ ಜೊತೆ ಕಾದಾಟ ನಡೆಸಿ ತನ್ನ ಒಡೆಯನನ್ನು ರಕ್ಷಿಸಿದ ನಾಯಿ ! ಓಡಿ ಹೋದ ಹುಲಿ…!! ಆದರೆ…

ಉಮಾರಿಯಾ: ಮನುಷ್ಯರ ಮೇಲಿನ ನಾಯಿಯ ಅಚಲ ನಿಷ್ಠೆ ಹಾಗೂ ನಂಬಿಕೆಯನ್ನು ಎತ್ತಿ ತೋರಿಸುವ ಘಟನೆಯೊಂದರಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ಹುಲಿಯಿಂದ ತನ್ನ ಮಾಲೀಕನನ್ನು ರಕ್ಷಿಸಿದೆ. ಮಾಲೀಕನನ್ನು ಕಾಪಾಡಲು ಹುಲಿಯ ವಿರುದ್ಧವೇ ಹೋರಾಡಿದ ನಾಯಿ ಹುಲಿಯನ್ನು ಹೆದರಿಸಿ ಕಾಡಿಗೆ ಓಡಿಸಲು ಸಫಲವಾದರೂ ಹುಲಿಯೊಟ್ಟಿಗಿನ ಕಾಳಗದಲ್ಲಿ ಉಂಟಾದ ಗಾಯಗಳಿಂದಾಗಿ ಕೆಲ ಸಮಯದ ನಂತರ ವೀರ ಮರಣ ಹೊಂದಿದೆ. ಈ … Continued

ವೀಡಿಯೊ..| ಅರಣ್ಯ ಇಲಾಖೆ ನೌಕರನ ಮೇಲೆ ದಾಳಿ ಮಾಡಿದ ಹುಲಿ ; ಅದರ ಬಾಯಿಂದ ಸಹೋದ್ಯೋಗಿಯನ್ನು ರಕ್ಷಿಸಿದ ಸಿಬ್ಬಂದಿ

ಕೋಲ್ಕತ್ತಾ : ಸೋಮವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಸುಂದರಬನ್ಸ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ತಂಡವೊಂದು ರಾಯಲ್ ಬೆಂಗಾಲ್ ಹುಲಿಯನ್ನು ಹಿಂಬಾಲಿಸಿಕೊಂಡು ಅಜ್ಮಲ್ಮರಿ ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅದು ಕ್ಯಾಮೆರಾದಲ್ಲಿ ಸೆರೆಯಾಗಿದೆ. … Continued