ಕಾರವಾರ: ನೈಲಾನ್ ಬಲೆ ನುಂಗಿ ಬೃಹತ್‌ ಡಾಲ್ಫಿನ್ ಸಾವು | ವೀಕ್ಷಿಸಿ

posted in: ರಾಜ್ಯ | 0

ಕಾರವಾರ: ಇಲ್ಲಿನ ದೇವಭಾಗ ಕಡಲತೀರದಲ್ಲಿ ಡಾಲ್ಫಿನ್ ಮೃತ ದೇಹ ಸೋಮವಾರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಡಾಲ್ಫಿನ್ ಹೊಟ್ಟೆಯಲ್ಲಿ ನೈಲಾನ್ ಬಲೆ ಇರುವುದು ಪತ್ತೆಯಾಗಿದೆ ಮೀನಿನ ಬಲೆ ನುಂಗಿದ ಪರಿಣಾಮ ಡಾಲ್ಪಿನ್ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ದೇವಭಾಗ್ ಕಡಲ ತೀರದಲ್ಲಿ ಪತ್ತೆಯಾದ ಡಾಲ್ಫಿನ್ ಮೃತ ದೇಹ ಗಂಡಾಗಿದ್ದು ಸುಮಾರು 7.5 ಫೀಟ್ ಉದ್ದವಿದೆ. ಇಂಡೋ ಪೆಸಿಫಿಕ್ ಹಮ್ … Continued

ಮದುವೆ ಸಂಭ್ರಮಾಚರಣೆಗೆಂದು ವರ ಹಾರಿಸಿದ ಗುಂಡಿನಿಂದ ಸ್ನೇಹಿತನ ಸಾವು

ಲಕ್ನೋ: ಮದುವೆ ಮೆರವಣಿಗೆ ವೇಳೆ ವರನೊಬ್ಬ ಸಂಭ್ರಮದ ನಿಮಿತ್ತ ಹಾರಿಸಿದ ಗುಂಡು ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಆತ ಸಾವಿಗೀಡಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೀಶ್ ಮಧೇಶಿಯಾ ಎಂಬ ವರ ಮದುವೆ ಮೆರವಣಿಗೆ ಸಮಯದಲ್ಲಿ ಸಂಭ್ರಮದಲ್ಲಿ ಗುಂಡು ಹಾರಿಸಿದ್ದಾನೆ. ಅದು ಯಡವಟ್ಟಾಗಿ ಸ್ನೇಹಿತ ಬಾಬು ಲಾಲ್ ಯಾದವ್ ಎಂಬವರಿಗೆ ತಗುಲಿ ಆತ ಮೃತಪಟ್ಟಿದ್ದಾರೆ. ಸೋನಭದ್ರ … Continued

ನವಜಾತ ಮರಿಯಾನೆ ಕರೆದೊಯ್ಯಲು ಆನೆಗಳ ಹಿಂಡಿನ ಅಭೇದ್ಯ ಕೋಟೆ: ಆನೆಗಳ ರಕ್ಷಣಾ ಕ್ರಮಕ್ಕೆ ಎಂಥವರೂ ತಲೆದೂಗಬೇಕು | ವೀಕ್ಷಿಸಿ

ಕೊಯಂಬತ್ತೂರು : ಪುಟ್ಟ ನವಜಾತ ಶಿಶುಗಳ ರಕ್ಷಣೆ ವಿಷಯದಲ್ಲಿ ತಾಯಿ ಹಾಗೂ ಕುಟುಂಬ ಮಾಡುವ ಕಾಳಜಿ ತುಂಬ ಸೂಕ್ಷ್ಮ ಹಾಗೂ ಜಾಗರೂಕವಾಗಿರುತ್ತದೆ. ಮಗುವಿನ ಸುರಕ್ಷತೆಗೆ ಕುಟುಂಬ ಮೊದಲ ಆದ್ಯತೆ ನೀಡುತ್ತದೆ. ಆದರೆ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಇದನ್ನು ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಪ್ರಾಣಿಗಳು ಕೂಡ ಇದೇ ರೀತಿ ತಮ್ಮ ನವಜಾತ ಮರಿಗಳಿಗೆ ರಕ್ಷಣೆ … Continued

ಕಾರಿನ ಬಾನೆಟ್‌ನಲ್ಲಿ ಸಿಲುಕಿಕೊಂಡ ಚಿರತೆ: ಒದ್ದಾಡುತ್ತಲೇ ಕಷ್ಟಪಟ್ಟು ತಪ್ಪಿಸಿಕೊಂಡು ಓಡಿಹೋದ ಚಿರತೆ… ದೃಶ್ಯ ಸೆರೆ

ಕಾಡು ಮೃಗಕ್ಕೆ ಸಂಬಂಧಿಸಿದಂತೆ ಮನ ಕರಗಿಸುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಿನ ಬಾನೆಟ್‌ನಲ್ಲಿ ಚಿರತೆಯೊಂದು ಸಿಲುಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಾನೆಟ್‌ನಲ್ಲಿ ಸಿಲುಕಿಕೊಂಡಿರುವ ಚಿರತೆ ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ದೃಶ್ಯದ ಮೂಲಕ 7 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ. … Continued

ಜಲಾವೃತವಾಗಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಸ್ಕೂಟರ್‌ನಲ್ಲಿದ್ದ ಪೊಲೀಸ್ ಅಧಿಕಾರಿ-ಪತ್ನಿ, ಗಾಯ | ವೀಕ್ಷಿಸಿ

ಅಲಿಗಢ: ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿದ್ದು, ಅಲಿಗಢ ನಗರದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಮಳೆ ನೀರಿನಿಂದ ತುಂಬಿದ್ದ ರಸ್ತೆ ಪಕ್ಷದ ತೆರೆದ ಮ್ಯಾನ್‌ ಹೋಲ್‌ಗೆ ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಸಮೀಪದಲ್ಲಿದ್ದ ಜನರು ಅವರನ್ನು ರಕ್ಷಿಸಿದ್ದಾರೆ. ದಂಪತಿ ಜಲಾವೃತವಾದ ರಸ್ತೆಯ ಮೇಲೆ ಬೈಕ್ ಚಲಾಯಿಸುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ … Continued

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೈಕಲ್‌ನಿಂದ ಬಿದ್ದಾಗ… | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಬೆಳಗ್ಗೆ ಡೆಲವೇರ್ ರಾಜ್ಯದ ಬೀಚ್ ಹೋಮ್ ಬಳಿ ಬೈಸಿಕಲ್ ನಲ್ಲಿ ಹೋಗುತ್ತಿದ್ದಾಗ ಎಡವಿ ಬಿದ್ದು, ಗಾಯಗೊಂಡರು. ಶ್ವೇತಭವನದ ಪೂಲ್ ವರದಿಯ ವೀಡಿಯೊವು 79 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷರು ಸೈಕಲ್‌ನಿಂದ ಬಿದ್ದು ನಂತರ ತಕ್ಷಣವೇ ಎದ್ದಿರುವುದನ್ನು ತೋರಿಸಿದೆ. ನಂತರ ಅವರು ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. … Continued

ಗಾಳಿಮಳೆ ಸಮಯದಲ್ಲಿ ಮರದ ಕೆಳಗೆ ನಿಲ್ಲಬಾರದು ಯಾಕೆ.?: ಈ ಮರಕ್ಕೆ ಮಿಂಚು ಹೊಡೆದದ್ದು ನೋಡಿದರೆ ತಿಳಿಯುತ್ತದೆ.. ವೀಕ್ಷಿಸಿ

ಮಿಂಚುಗಳ ಅಪಾಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ಗುಡುಗು ಸಹಿತ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹೇಳುತ್ತಾರೆ. ಮರದ ಕೆಳಗೆ ನಿಲ್ಲಬಾರದು ಯಾಕೆ ಎಂಬುದು ಸಂಪೂರ್ಣ ಅರ್ಥವಾಗಬೇಕಾದರೆ ಈ ವೈರಲ್ ವೀಡಿಯೊವನ್ನು ನೋಡಬೇಕು. ಟ್ವಿಟರ್‌ನಲ್ಲಿ ವಂಡರ್ ಆಫ್ ಸೈನ್ಸ್‌ನಿಂದ ಹಂಚಿಕೊಂಡ ವೀಡಿಯೊ ಕ್ಲಿಪ್‌ ಕಾಂಡದ ಮಧ್ಯದಲ್ಲಿರುವ ಮರಕ್ಕೆ ಮಿಂಚು ಹೊಡೆಯುವುದನ್ನು ತೋರಿಸುತ್ತದೆ. … Continued

ಚಿಕಿತ್ಸೆ ನಂತರ ಕಾಡಿಗೆ ಬಿಟ್ಟ ಮಂಗನ ಮರಿಗೆ ಗುಂಪಿನಿಂದ ಅಪ್ಪುಗೆಯ ಸ್ವಾಗತ..ವೀಕ್ಷಿಸಿ

ಕೋತಿಗಳು ಸಾಮಾನ್ಯವಾಗಿ ತಮ್ಮ ಗುಂಪಿನಿಂದಿಗೆ ಒಟ್ಟಿಗೆ ವಾಸಿಸುವ ಸಾಮಾಜಿಕ ಜೀವಿಗಳಾಗಿವೆ. ಮರಿ ಕೋತಿ ತನ್ನ ತಾಯಿಯಿಂದ ಬೇರ್ಪಟ್ಟ ಮೇಲೆ ಖಿನ್ನತೆಗೆ ಒಳಗಾಗಬಹುದು. ತಾಯಿ ಕೋತಿ ತಮ್ಮ ಶಿಶುಗಳಿಗೆ ರಕ್ಷಣೆ ನೀಡುತ್ತವೆಮರಿ ಕೋತಿಗಳು ತಮ್ಮ ತಾಯಂದಿರ ತೋಳುಗಳನ್ನು ಬಿಡುವುದಿಲ್ಲ ಅಥವಾ ಇತರರೊಂದಿಗೆ ಸಂವಹನ ನಡೆಸುತ್ತಾರೆ. ಚಿಕಿತ್ಸೆಗಾಗಿ ಕುಟುಂಬದಿಂದ ಬೇರ್ಪಟ್ಟಿದ್ದ ಮರಿ ಕೋತಿಯನ್ನು ಇತ್ತೀಚೆಗೆ ವಾಪಸ್ ಕಳುಹಿಸಲಾಗಿದ್ದು, ತನ್ನ … Continued

ಕಪ್ಪು ರಣಹದ್ದಿನ ಜೊತೆ ಪ್ಯಾರಾಗ್ಲೈಡಿಂಗ್ ಮಾಡುವ ವ್ಯಕ್ತಿ…ವೀಕ್ಷಿಸಿ

ವ್ಯಕ್ತಿಯೊಬ್ಬ ಕಪ್ಪು ರಣಹದ್ದು ಜೊತೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾವಿರಾರು ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡರ್‌ನೊಂದಿಗೆ ಕಪ್ಪು ರಣಹದ್ದು ಶಾಂತವಾಗಿ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಸಿರು ಕಾಡುಗಳು ಮತ್ತು ಕಟ್ಟಡಗಳು ಕೆಳಗೆ ಗೋಚರಿಸುತ್ತವೆ. ಕ್ಲಿಪ್‌ನಲ್ಲಿ ಹಾರಾಟ ನಡೆಸಿದ ಬೃಹತ್ ಕಪ್ಪು ರಣಹದ್ದು ಪ್ಯಾರಾಗ್ಲೈಡರ್‌ನ ಪಾದಗಳ ಮೇಲೆ ಇಳಿಯುವುದನ್ನು ಕಾಣಬಹುದು, ಆದರೆ ವ್ಯಕ್ತಿಯು ಅದನ್ನು … Continued

ಮರದ ಮೇಲೆಯೇ ಕೋತಿಯನ್ನು ಬೇಟೆಯಾಡಿದ ಕೊಂದ ಚಿರತೆ | ವೀಕ್ಷಿಸಿ

ಪ್ರಾಣಿ ಸಾಮ್ರಾಜ್ಯವು ಬಹಳ ಆಸಕ್ತಿದಾಯಕವಾಗಿದೆ ಮತ್ತು ಕಾಡಿನಲ್ಲಿರುವ ಪ್ರಾಣಿಗಳ ವೀಡಿಯೊಗಳು ವೀಕ್ಷಿಸಲು ಸಾಕಷ್ಟು ಕುತೂಹಲವಾಗಿರುತ್ತವೆ. ಚಿರತೆಯೊಂದು ಕೋತಿಯನ್ನು ಮರದ ಮೇಲೆಯೇ ಬೇಟೆಯಾಡಿದ ಕ್ಷಣವನ್ನು ತೋರಿಸುವ ಅಪರೂಪದ ಮತ್ತು ಭಯಾನಕ ವೀಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. ಈ ಅಪರೂಪದ ಕ್ಲಿಪ್ ಅನ್ನು ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್‌ನಲ್ಲಿ ಚಿತ್ರೀಕರಿಸಲಾಗಿದೆ, ಇದು ಹುಲಿ, ಕರಡಿ, ಭಾರತೀಯ ತೋಳ, ಪ್ಯಾಂಗೊಲಿನ್, ಚಿರತೆ, … Continued