ವೀಡಿಯೊ…| ಮಿಲಿಟರಿ ಸಮವಸ್ತ್ರ ಧರಿಸಿ ಕೊನೆ ಬಾರಿಗೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದ ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ 6 ವರ್ಷದ ಮಗ

ಚಂಡೀಗಢ : ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೂವರ ಪೈಕಿ ಒಬ್ಬರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಆರು ವರ್ಷದ ಮಗ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದ ಮನೆಗೆ ತಂದೆಯ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಮಿಲಿಟರಿ ಬಟ್ಟೆ ಧರಿಸಿ ಸೆಲ್ಯೂಟ್‌ ಮಾಡುವ ಮೂಲಕ ತಂದೆಗೆ ಗೌರವ ನಮನ ಸಲ್ಲಿಸಿದ್ದಾನೆ.
ಶುಕ್ರವಾರ ಕೊನೆಯ ಬಾರಿಗೆ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಆರು ವರ್ಷದ ಮಗ-ಸೇನಾ ಬಟ್ಟೆಗಳನ್ನು ಧರಿಸಿ-ತನ್ನ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಸಲ್ಲಿಸುವುದನ್ನು ನೋಡುವುದು ಹೃದಯ ವಿದ್ರಾವಕವಾಗಿತ್ತು. ಆತನ ಎರಡು ವರ್ಷದ ಸಹೋದರಿ ಪಕ್ಕದಲ್ಲಿ ನಿಂತು ತಾನೂ ಸೆಲ್ಯೂಟ್ ಮಾಡಿದ್ದಾಳೆ. ಇಬ್ಬರು ಪುಟ್ಟ ಮಕ್ಕಳಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಮಕ್ಕಳನ್ನು ಎತ್ತಿ ಹಿಡಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ಅಸ್ವಸ್ಥರಾಗಿದ್ದರು.

ಮೂರನೇ ತಲೆಮಾರಿನ ಸೈನಿಕ ಕರ್ನಲ್ ಮನ್‌ಪ್ರೀತ್ ಅವರ ತಾಯಿ, ಹೆಂಡತಿ, ಎರಡು ವರ್ಷದ ಮಗಳು ಮತ್ತು ಆರು ವರ್ಷದ ಮಗನನ್ನು ಅಗಲಿದ್ದಾರೆ.
19 ರಾಷ್ಟ್ರೀಯ ರೈಫಲ್ಸ್‌ನ (19 ಆರ್‌ಆರ್) ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್ (41) ಬುಧವಾರ ರಾತ್ರಿ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು.
ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದ ಎತ್ತರದ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಮನ್‌ಪ್ರೀತ್, ಮೇಜರ್ ಧೋಂಚಕ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ.

ಪಾಣಿಪತ್ ಪಟ್ಟಣದಲ್ಲಿರುವ ಅವರ ಮನೆಗೆ ಶುಕ್ರವಾರ ಬೆಳಗ್ಗೆ ಕರ್ನಲ್ ಮನ್‌ಪ್ರೀತ್ ಅವರ ಪಾರ್ಥಿವ ಶರೀರ ತಲುಪಿತು. ನಂತರ ಸೇನಾ ವಾಹನದಲ್ಲಿ ಅವರ ಜನಿಸಿದ ಊರಾದ ಬಿಂಜೋಲ್ ಗ್ರಾಮಕ್ಕೆ ಕೊಂಡೊಯ್ಯಲಾಯಿತು, ಅಲ್ಲಿ ಪುಷ್ಪಾರ್ಚನೆ ಸಮಾರಂಭ ಮತ್ತು ಗನ್ ಸೆಲ್ಯೂಟ್ ನಂತರ ಅಂತಿಮ ವಿಧಿಗಳನ್ನು ನಡೆಸಲಾಯಿತು. ಕರ್ನಲ್ ಮನ್‌ಪ್ರೀತ್ ಅವರ ಪತ್ನಿ ಜಗ್ಮೀತ್ ಕೌರ್ ಅವರು ತಮ್ಮ ಪತಿಗೆ ಅಂತಿಮ ವಿದಾಯ ಹೇಳುತ್ತಿರುವಾಗ ಅವರು ಕೈ ಜೋಡಿಸಿ ದುಃಖದಲ್ಲಿ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ.

ಪಟ್ಟಣದಲ್ಲಿರುವ ಮೇಜರ್ ಅವರ ಮನೆಯಿಂದ ಅವರ ಬಿಂಜೋಲ್ ಗ್ರಾಮದ ವರೆಗೆ ಅಂತ್ಯಕ್ರಿಯೆಯ ಮೆರವಣಿಗೆಯು ಸುಮಾರು ಎಂಟು ಕಿ.ಮೀ ದೂರ ಕ್ರಮಿಸಲು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಂಡಿತು, ಸಾವಿರಾರು ಜನರು ಅವರಿಗೆ ಕಣ್ಣೀರಿನ ವಿದಾಯ ಹೇಳಲು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು.
ಬುಧವಾರ ಬುದ್ಗಾಮ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ 33 ವರ್ಷದ ಹಿಮಯುನ್ ಮುಜಾಮಿಲ್ ಭಟ್ ಅವರ ಅಂತ್ಯಕ್ರಿಯೆಯಲ್ಲಿಯೂ ನೂರಾರು ಜನ ಸೇರಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement