ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯ ಗ್ರಹಣ ಹೇಗೆ ಕಾಣುತ್ತದೆ..? : ವೀಡಿಯೊ ಹಂಚಿಕೊಂಡ ನಾಸಾ | ವೀಕ್ಷಿಸಿ

ನ್ಯೂಯಾರ್ಕ್: ಮೆಕ್ಸಿಕೊ, ಕೆನಡಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಸೋಮವಾರ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. … Continued

ಫೋರ್ಬ್ಸ್ ಶ್ರೀಮಂತರ ಪಟ್ಟಿ 2024 : ಭಾರತದಿಂದ 25 ಹೊಸ ಬಿಲಿಯನೇರ್‌ ಗಳು ಪಟ್ಟಿಗೆ ಸೇರ್ಪಡೆ ; ಮುಖೇಶ ಅಂಬಾನಿಗೆ ಅಗ್ರಸ್ಥಾನ

ನವದೆಹಲಿ: ಇತ್ತೀಚಿನ ‘ಫೋರ್ಬ್ಸ್ ವರ್ಲ್ಡ್ಸ್ ಬಿಲಿಯನೇರ್‌ (ಶತಕೋಟ್ಯಧಿಪತಿಗಳ)ಗಳ ಪಟ್ಟಿ 2024’ ಪ್ರಕಾರ, ಈ ವರ್ಷ ಭಾರತದ 25 ಶತಕೋಟ್ಯಧಿಪತಿಗಳು ಹೊಸದಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ದೇಶದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 200 ಕ್ಕೆ ಹೆಚ್ಚಾಗಿದೆ. ಈ ಭಾರತೀಯರ ಒಟ್ಟು ಸಂಪತ್ತು $ 954 ಶತಕೋಟಿಯಷ್ಟಿದೆ, ಇದು ಕಳೆದ ವರ್ಷ … Continued

ವೀಡಿಯೊ…: ಹಡಗು ಡಿಕ್ಕಿ ಹೊಡೆದ ನಂತರ ಕುಸಿದುಬಿದ್ದ ಪ್ರತಿದಿನ 30 ಸಾವಿರಕ್ಕೂ ಹೆಚ್ಚು ವಾಹನ ಓಡಾಡುವ 2.6 ಕಿಮೀ ಉದ್ದದ ಬೃಹತ್‌ ಸೇತುವೆ..!

ವಾಷಿಂಗ್ಟನ್: ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ ನಗರದಲ್ಲಿದ್ದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ದೊಡ್ಡ ಬೃಹತ್‌ ಹಡಗು ಡಿಕ್ಕಿ ಹೊಡೆದ ನಂತರ ಅದು ಕುಸಿದು ಬಿದ್ದಿದೆ. 1.6-ಮೈಲಿ (2.6-ಕಿಲೋಮೀಟರ್), ಚತುಷ್ಪಥಧ ಸೇತುವೆಯು ಮುನ್ಸಿಪಲ್ ಬಾಲ್ಟಿಮೋರ್‌ನ ನೈಋತ್ಯಕ್ಕೆ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಡಿಕ್ಕಿಯ ರಭಸಕ್ಕೆ ಸೇತುವೆ ಮೇಲಿದ್ದ ಹಲವು ವಾಹನಗಳು ಸಹ ನೀರಿಗೆ ಬಿದ್ದಿವೆ. ಕನಿಷ್ಠ … Continued

ಕೌಟುಂಬಿಕ ಕಲಹ: ನಾಲ್ವರು ಸಹೋದರರಿಗೆ 20,000 ಕೋಟಿ ರೂ. ನೀಡುವಂತೆ ಭಾರತೀಯ ಉದ್ಯಮಿಗೆ ನ್ಯಾಯಾಲಯ ಆದೇಶ : ಏನಿದು ಪ್ರಕರಣ..?

ಅಮೆರಿಕದಲ್ಲಿ ಐವರು ಭಾರತೀಯ ಮೂಲದ ಸಹೋದರರನ್ನು ಒಳಗೊಂಡ ಕೌಟಿಂಬಿಕ ಉದ್ಯಮ ಪಾಲುದಾರಿಕೆಯ ವ್ಯವಹಾರದ ಸುದೀರ್ಘ ಕಾನೂನು ಹೋರಾಟದಲ್ಲಿ ನ್ಯಾಯಾಧೀಶರು ನಾಲ್ವರು ಸಹೋದರರಿಗೆ ಮತ್ತೋರ್ವ ಸಹೋದರ ಭಾರಿ ಬಹು-ಶತಕೋಟಿ ಡಾಲರ್ ಹಾನಿಯ ಮೊತ್ತವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ. 21 ವರ್ಷಗಳಷ್ಟು ಹಳೆಯದಾದ ಆಸ್ತಿ ವಿವಾದದಲ್ಲಿ ಈ ತೀರ್ಪು ಬಂದಿದ್ದು, ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉದ್ಯಮಿ ಹರೇಶ ಜೋಗನಿ … Continued

ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿ : ಮೊದಲ ಸ್ಥಾನ ಹಂಚಿಕೊಂಡ 6 ರಾಷ್ಟ್ರಗಳು ; ಭಾರತದ ಶ್ರೇಯಾಂಕ..?

ನವದೆಹಲಿ: ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ ರಾಷ್ಟ್ರಗಳಾಗಿವೆ. 194 ಜಾಗತಿಕ ತಾಣಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಅನುಮತಿಸುವ ಮೂಲಕ, ಈ ರಾಷ್ಟ್ರಗಳು ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿವೆ. ಈ ರಾಷ್ಟ್ರಗಳನ್ನು ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ದೇಶಗಳು ಅನುಸರಿಸುತ್ತವೆ, … Continued

ಕ್ಯಾಲಿಫೋರ್ನಿಯಾದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಭಾರತೀಯ ಕುಟುಂಬದ ನಾಲ್ವರು ಶವವಾಗಿ ಪತ್ತೆ : ದಂಪತಿಗೆ ಗುಂಡಿನ ಗಾಯ

ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದ ಸ್ಯಾನ್ ಮಾಟಿಯೊ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ, ಪೊಲೀಸರು ಇದನ್ನು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಫಾಕ್ಸ್ ಕೆಟಿವಿಯು ವರದಿಯ ಪ್ರಕಾರ, ಮೆಟಾ ಕಂಪನಿಯ ಮಾಜಿ ಇಂಜಿನಿಯರ್ ಆನಂದ ಸುಜಿತ ಹೆನ್ರಿ (42) ತನ್ನ 4 ವರ್ಷದ ಅವಳಿ ಗಂಡು ಮಕ್ಕಳನ್ನು … Continued

ವೀಡಿಯೊ..| ಫ್ಲೋರಿಡಾದ ಹೆದ್ದಾರಿಯಲ್ಲಿ ಜೆಟ್‌ ವಿಮಾನ ಅಪಘಾತಕ್ಕೀಡಾದ ಕ್ಷಣವನ್ನು ನಿಖರವಾಗಿ ಸೆರೆ ಹಿಡಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ | ವೀಕ್ಷಿಸಿ

ಫೆಬ್ರವರಿ 10 ರಂದು ಫ್ಲೋರಿಡಾದ ನೇಪಲ್ಸ್ ಬಳಿ ಜನನಿಬಿಡ ಹೆದ್ದಾರಿಯಲ್ಲಿ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾದ ನಿಖರವಾದ ಕ್ಷಣವನ್ನು ತೋರಿಸುವ ಭಯಾನಕ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ಶುಕ್ರವಾರ ನೈಋತ್ಯ ಫ್ಲೋರಿಡಾದಲ್ಲಿ ಇಂಟರ್‌ಸ್ಟೇಟ್ 75 ರಲ್ಲಿ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾದ ನಾಟಕೀಯ ಕ್ಷಣಗಳನ್ನು ಡ್ಯಾಶ್‌ಬೋರ್ಡ್ ಕ್ಯಾಮೆರಾ ಸೆರೆ ಹಿಡಿದಿದೆ. … Continued

ಇದೇ ಮೊದಲ ಬಾರಿಗೆ ಮಾನವ ರೋಗಿಗೆ ʼಮೆದುಳಿನ ಚಿಪ್ʼ ಅಳವಡಿಸಿದ ಎಲೋನ್ ಮಸ್ಕ್ ಕಂಪನಿ: ಇದರ ಕಾರ್ಯನಿರ್ವಹಣೆ ಹೇಗೆ..?

ಎಲೋನ್ ಮಸ್ಕ್ ತಮ್ಮ ನ್ಯೂರಾಲಿಂಕ್ ಕಂಪನಿಯು ಮಾನವ ರೋಗಿಗೆ ʼಮೊದಲ ಮೆದುಳಿನ ಚಿಪ್ʼ ಅನ್ನು ಅಳವಡಿಸಿದೆ ಎಂದು ಪ್ರಕಟಿಸಿದ್ದಾರೆ. ಆರಂಭಿಕ ಫಲಿತಾಂಶಗಳು “ಭರವಸೆದಾಯಕ” ಎಂದು ಅವರು ಹೇಳಿದ್ದಾರೆ. “ಆರಂಭಿಕ ಫಲಿತಾಂಶಗಳು ನ್ಯೂರಾನ್ ಸ್ಪೈಕ್ ಪತ್ತೆಯನ್ನು ತೋರಿಸಿದ್ದು, ಭರವಸೆ ಮೂಡಿಸಿವೆ” ಎಂದು X ನಲ್ಲಿನ ಪೋಸ್ಟ್‌ನಲ್ಲಿ ಮಸ್ಕ್ ಹೇಳಿದ್ದಾರೆ. ದೇಹಕ್ಕೆ ಸಂಕೇತಗಳನ್ನು ಕಳುಹಿಸುವ ಮೆದುಳಿನ ಸಾಮರ್ಥ್ಯವನ್ನು ಅವರು … Continued

ವೀಡಿಯೊ…| ಶಬ್ದದ ವೇಗಕ್ಕಿಂತ ವೇಗವಾಗಿ ಹಾರಾಟ ಮಾಡುವ ʼ ಶಬ್ದ ರಹಿತ ಸೂಪರ್‌ಸಾನಿಕ್‌ ವಿಮಾನʼ ಅನಾವರಣಗೊಳಿಸಿದ ನಾಸಾ

ನಾಸಾ (NASA) ಮತ್ತು ಅಮೆರಿಕ ರಕ್ಷಣಾ ಕಂಪನಿ ಲಾಕ್ಹೀಡ್ ಮಾರ್ಟಿನ್ ಆರು ವರ್ಷಗಳ ಸಂಶೋಧನೆಯ ನಂತರ X-59 ಸೂಪರ್‌ಸಾನಿಕ್‌ ವಿಮಾನವನ್ನು ಅನಾವರಣಗೊಳಿಸಿದೆ. ಹಗೂ ಇದನ್ನು ಪ್ರಯಾಣಿಕರ ವಿಮಾನವಾಗಿಸುವ ನಿಟ್ಟಿನಲ್ಲಿ ತನ್ನ ಕೆಲಸ ಮುಂದುವರಿಸಿದೆ. ‘ಶಬ್ದ ರಹಿತ’ ಸೂಪರ್‌ಸಾನಿಕ್ ವಿಮಾನವು ಹಿಂದಿನ ಸೂಪರ್‌ಸಾನಿಕ್ ವಿಮಾನಗಳ ಅಪ್‌ಗ್ರೇಡ್ ಆಗಿದೆ. X-59 ಶಬ್ದಕ್ಕಿಂತ 1.4 ಪಟ್ಟು ವೇಗದಲ್ಲಿ ಅಥವಾ ಸುಮಾರು … Continued

ಗೂಗಲ್‌ ಮೀಟ್‌ ಮೂಲಕ ಕೇವಲ 2 ನಿಮಿಷದಲ್ಲಿ ಎಲ್ಲ ನೌಕರರನ್ನೂ ಕೆಲಸದಿಂದ ತೆಗೆದುಹಾಕಿದ ಕಂಪನಿ…!

ನೂತನ ವರ್ಷದ ಮೊದಲ ವಾರದಲ್ಲಿಯೇ ಕಂಪನಿಯೊಂದು ಎರಡು ನಿಮಿಷದಲ್ಲಿಯೇ  ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾವನ್ನು ಪ್ರಾರಂಭಿಸಿದೆ. ಅಮೆರಿಕದ ಟೆಕ್ ಸ್ಟಾರ್ಟ್‌ಅಪ್ ಕಂಪನಿ ಫ್ರಂಟ್‌ಡೆಸ್ಕ್ ಮಂಗಳವಾರ ತನ್ನ 200 ನೌಕರರನ್ನು ಎರಡು ನಿಮಿಷಗಳ ಗೂಗಲ್‌ ಮೀಟ್‌ ಕರೆಯ ಮೂಲಕ ವಜಾ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ 2024 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ಸ್ಟಾರ್ಟ್ಅಪ್ … Continued