ವಿಡಿಯೊ | ಕಾರ್ಗಿಲ್ ಯುದ್ಧದಲ್ಲಿ ತಮ್ಮ ಸೈನಿಕರ ಶವಗಳನ್ನೂ ಸ್ವೀಕರಿಸದ ಪಾಕ್ ಸೇನೆ, ಭಾರತ ಸಮಾಧಿ ಮಾಡಿತ್ತು ; ತಮ್ಮ ಸೇನೆಗೇ ಪಾಕ್‌ ನಾಯಕನಿಂದ ಮಂಗಳಾರತಿ

 ಕಾರ್ಗಿಲ್ ಯುದ್ಧದ ವರ್ಷಾಚರಣೆ ಕೆಲವೇ ದಿನಗಳು ಬಾಕಿ ಇರುವಾಗ, ಪಾಕಿಸ್ತಾನದ ರಾಜಕಾರಣಿ ಹಾಗೂ ರಾಷ್ಟ್ರೀಯ ಅಸೆಂಬ್ಲಿ (ಎಂಎನ್‌ಎ) ಸದಸ್ಯ, ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆ.ಯು.ಐ.) ಅಧ್ಯಕ್ಷ ಮೌಲಾನಾ ಫಜ್ಲುರ್ ರೆಹಮಾನ್ ಅವರು ಪಾಕಿಸ್ತಾನ ಸೇನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವುದು ಈಗ ಭಾರಿ ಚರ್ಚಿತ ವಿಷಯವಗಿ ಪರಿಣಮಿಸಿದೆ.   1999ರ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ … Continued

ವಿಡಿಯೋ | ಪಿಒಕೆ ಪಾಕಿಸ್ತಾನದ ಭಾಗವಲ್ಲ ; ಪಿಒಕೆಯಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಆಕ್ರೋಶ ; ಭಾರತದತ್ತ ಮುಖ ಮಾಡ್ತೀವಿ ಎಂದು ಎಚ್ಚರಿಕೆ !

ರಾವಲಕೋಟ್ (ಪಿಒಕೆ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ದಬ್ಬಾಳಿಕೆ ಮತ್ತು ನಿಯಂತ್ರಣದ ವಿರುದ್ಧ ನಾಗರಿಕರ ಆಕ್ರೋಶ ತಾರಕಕ್ಕೇರಿದೆ. ರಾವಲಕೋಟದಲ್ಲಿ ಪಾಕ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹವು ಮಂಗಳವಾರದ ವೇಳೆಗೆ 22ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾವಲಕೋಟ್‌ನ ಪ್ರಸಿದ್ಧ ಈದ್ಗಾ … Continued

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ಅಪಾಯಕಾರಿಯೇ? ಅಮೆರಿಕದ ವರದಿ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ, ವಿಶೇಷವಾಗಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಜೊತೆ ಅಮೆರಿಕದ ಸ್ನೇಹ ವೃದ್ಧಿಸಿದೆ. ಫೆಬ್ರವರಿ 28 ರಿಂದ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಿದ್ದಕ್ಕಾಗಿ ಟ್ರಂಪ್ ಅವರು ಮುನೀರ್ ಅವರನ್ನು ‘ಫೆಂಟಾಸ್ಟಿಕ್ … Continued

ವೀಡಿಯೊ..| ‘ನಿಲ್ಲಿ, ನಿಮ್ಮ ಗುರುತಿನ ಚೀಟಿ ಎಲ್ಲಿ..? ‘: ಮ್ಯೂನಿಚ್ ಸಮ್ಮೇಳನದಲ್ಲಿ ಪಾಕ್ ಸೇನಾ ಮುಖ್ಯಸ್ಥಗೆ ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿ..!

ಮ್ಯೂನಿಚ್: ಪಾಕಿಸ್ತಾನದಲ್ಲಿ ಅಪಾರ ಅಧಿಕಾರ ಹೊಂದಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೀವ್ರ ಮುಖಭಂಗವಾಗಿದೆ. ಜರ್ಮನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಮ್ಯೂನಿಚ್ ಭದ್ರತಾ ಸಮ್ಮೇಳನ’ಕ್ಕೆ (MSC) ಆಹ್ವಾನಿತರಾಗಿ ತೆರಳಿದ್ದ ಅವರಿಗೆ ಭದ್ರತಾ ತಪಾಸಣೆಯ ವೇಳೆ ಶಿಷ್ಟಾಚಾರದ (Protocol) ಗೌರವ ಸಿಗದೇ ಇರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮ್ಮೇಳನದ … Continued

ಬಲೂಚಿಸ್ತಾನ್‌ : ಬಿಎಲ್‌ ಎ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕಿಸ್ತಾನ ಸೈನಿಕರು ಸಾವು

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭೀಕರ ಹಿಂಸಾಚಾರ ನಡೆದಿದ್ದು, ಪ್ರತ್ಯೇಕತಾವಾದಿ ಗುಂಪು ‘ಬಲೂಚ್ ಲಿಬರೇಶನ್ ಆರ್ಮಿ’ (BLA) ನಡೆಸಿದ ‘ಆಪರೇಷನ್ ಹೆರೋಫ್ – ಫೇಸ್ 2’ (Operation Herof Phase II) ದಾಳಿಯಲ್ಲಿ ಪಾಕಿಸ್ತಾನದ ಸುಮಾರು 80ಕ್ಕೂ ಹೆಚ್ಚು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ದಳದ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಜನವರಿ 31 ರಂದು … Continued

ವೀಡಿಯೊ..| ‘ದೈವಿಕ ಮಧ್ಯಪ್ರವೇಶ ನಮಗೆ ಸಹಾಯ ಮಾಡ್ತು…’: ಭಾರತ-ಪಾಕ್ ಸಂಘರ್ಷದ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್: ಈ ವರ್ಷದ ಮೇ ತಿಂಗಳಲ್ಲಿ ಭಾರತದೊಂದಿಗೆ ನಡೆದ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ “ದೈವಿಕ ಮಧ್ಯಪ್ರವೇಶ” (Divine Intervention) ನಮಗೆ ಸಹಾಯ ಮಾಡಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರ ಭಾಷಣದ ವೀಡಿಯೊ ಈಗ ಸಾಮಾಜಿಕ … Continued

ಗಾಜಾಕ್ಕೆ ಪಾಕ್ ಸೈನ್ಯ ; ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್/ವಾಷಿಂಗ್ಟನ್ : ಪಾಕಿಸ್ತಾನದ ಅತ್ಯಂತ ಪ್ರಭಾವಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ಯಾಲೆಸ್ತೈನ್‌ನ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನಿ ಸೈನ್ಯವನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿರುವುದು ಮುನೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ಸೇನೆಯ ಬಲ ಉಪಯೋಗಿಸದೇ ಪಾಕಿಸ್ತಾನದಲ್ಲಿ ಅಸಿಮ್ ಮುನೀರ್ ʼಸೇನಾ ದಂಗೆʼ ; ಇದರಿಂದ ಭಾರತದ ಮೇಲೆ ಪರಿಣಾಮ ಏನು..?

ಪಾಕಿಸ್ತಾನದಲ್ಲಿ ನಾಲ್ಕನೇ ಸೇನಾ ‘ದಂಗೆ’ (Coup) ತೆರೆಮರೆಯಲ್ಲಿ ನಡೆಯುತ್ತಿದೆ. ಇದು ಹಿಂದಿನ ದಂಗೆಗಳಂತೆ ಮಧ್ಯರಾತ್ರಿ ಅಥವಾ ಬಂದೂಕುಗಳ ಬಲದಿಂದ ನಡೆಯುವ ಬದಲಾಗಿ, ಇದು ಕೈಗೊಂಬೆ ಸರ್ಕಾರದ ಮೂಲಕ ನಡೆಯುತ್ತಿರುವ ‘ಸಂವಿಧಾನ’ದ ಅಡಿಯಲ್ಲಿ ಸರ್ಕಾರದ ಸಾಂವಿಧಾನಾತ್ಮಕ ಅಧಿಕಾರ ಕಿತ್ತುಕೊಳ್ಳುವ ದಂಗೆ ಎನ್ನಲಾಗಿದೆ. ಈ ‘ಶಸ್ತ್ರ ರಹಿತ ದಂಗೆ’ಯು ಪಾಕಿಸ್ತಾನವನ್ನು ಆಂತರಿಕವಾಗಿ ಮತ್ತಷ್ಟು ದುರ್ಬಲಗೊಳಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಸೋಮವಾರ … Continued

ಓವಲ್ ಕಚೇರಿಗೆ ಬಂದು ಟ್ರಂಪ್‌ ಭೇಟಿ ಮಾಡಲು ಕಾದು ಕಾದು ಸುಸ್ತಾದ ಪಾಕಿಸ್ತಾನ ಪ್ರಧಾನಿ-ಸೇನಾ ಮುಖ್ಯಸ್ಥ…!

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಓವಲ್ ಕಚೇರಿಗೆ ಆಗಮಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಟ್ರಂಪ್‌ ಅವರ ಭೇಟಿಗಾಗಿ ಕೆಲಕಾಲ ಕಾಯುವಂತೆ ಮಾಡಲಾಯಿತು. ಭೇಟಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್‌, ಇಬ್ಬರು ಪಾಕಿಸ್ತಾನಿ ನಾಯಕರು … Continued

ವೀಡಿಯೊ..| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರಿಗೆ ಗೌರವ ಸೂಚಿಸಲು ಆದೇಶಿಸಿದ್ದ ಪಾಕ್‌ ಸೇನಾ ಮುಖ್ಯಸ್ಥ ; ಜೆಇಎಂ ಪ್ರಮುಖನ ಹೇಳಿಕೆಯಿಂದ ಪಾಕಿಸ್ತಾನದ ಸುಳ್ಳಾಟ ಬಯಲು…!

ಭಾರತದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರದ ತನ್ನ ಶಿಬಿರದಲ್ಲಿ ಸಂಭವಿಸಿದ ಹಾನಿಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಒಪ್ಪಿಕೊಂಡ ಕೆಲವು ದಿನಗಳ ನಂತರ, ಅದೇ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ನ ಮತ್ತೊಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭಾರತದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ … Continued