“ನಿರಂತರ ಭಯೋತ್ಪಾದನೆಯಲ್ಲಿ ತೊಡಗಿರುವ ದೇಶ”: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ ತೀವ್ರ ವಾಗ್ದಾಳಿ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಶನಿವಾರದ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಸರಣಿ ಅಭ್ಯಾಸಿ’ (serial practitioner of terrorism) ಎಂದು ಬಣ್ಣಿಸಿದ ಅವರು, ಹಿಂದಿನ ದಿನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆ ವೇದಿಕೆಯಲ್ಲಿ ವಾಸ್ತವಾಂಶಗಳನ್ನು ತಪ್ಪಾಗಿ … Continued

ವಿಡಿಯೋ |“ಭಯೋತ್ಪಾದಕ ದೇಶ ನನಗೆ ಈ ಪ್ರಶ್ನೆ ಕೇಳುತ್ತಿದೆ”: ಕೆಣಕಿದ ಪಾಕ್‌ ಪತ್ರಕರ್ತನಿಗೆ ಮುಖಕ್ಕೆ ಹೊಡೆದಂತೆ ಉತ್ತರಕೊಟ್ಟ ಜೈಶಂಕರ

ನ್ಯೂಯಾರ್ಕ್: ವಿಶ್ವಸಂಸ್ಥೆಯ 81ನೇ ಮಹಾಸಭೆ (UNGA) ಸಭೆಯ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತನೊಬ್ಬ ಕೆಣಕಲು ಕೇಳಿದ ಪ್ರಶ್ನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ ಅವರು ಮುಖಕ್ಕೆ ಹೊಡೆದಂತೆ ಖಡಕ್‌ ತಿರುಗೇಟು ನೀಡಿದ್ದಾರೆ. ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೈಸೊಲೋ ನ್ಯಾಂಟಿ ಅವರ ಜೊತೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಾಕಿಸ್ತಾನದ ಪತ್ರಕರ್ತನೊಬ್ಬ, … Continued

ಭಯೋತ್ಪಾದನೆ ಸಹಿಸಲು ಸಾಧ್ಯವೇ ಇಲ್ಲ ; ಬ್ರಿಕ್ಸ್‌ ನವದೆಹಲಿ ಘೋಷಣೆಯಲ್ಲಿ ಪಹಲ್ಗಾಮ್‌ ದಾಳಿ ಖಂಡಿಸಿದ ನಾಯಕರು

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭೀಕರ ಉಗ್ರ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿರುವುದನ್ನು ಬ್ರಿಕ್ಸ್ ರಾಷ್ಟ್ರಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿರುವ ನಾಯಕರು, ಭಯೋತ್ಪಾದನೆಗೆ ಯಾವುದೇ ರೀತಿಯ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. … Continued

ವಿಡಿಯೋ | ಆಗ ಉಗ್ರರ ಕೋಟೆ, ಈಗ ಕ್ರಿಕೆಟ್ ಆಟದ ಕೇಂದ್ರ, ನೋಡಲು ಜನಸ್ತೋಮ : ಹೊಸ ಬದುಕಿನತ್ತ ಪುಲ್ವಾಮಾ

ಪುಲ್ವಾಮಾ: ಒಂದು ಕಾಲದಲ್ಲಿ ಭಯೋತ್ಪಾದನೆ, ಕಲ್ಲು ತೂರಾಟ ಮತ್ತು ಅಶಾಂತಿಯ ಕಾರಣದಿಂದ ಸುದ್ದಿಯಾಗುತ್ತಿದ್ದ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆ ಈಗ ಕ್ರೀಡೆಯ ಮೂಲಕ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದೆ. ಶನಿವಾರ ರಾತ್ರಿ ಪುಲ್ವಾಮಾ ನಿದ್ರಿಸಲೇ ಇಲ್ಲ. ರಾಯಲ್ ಪ್ರೀಮಿಯರ್ ಲೀಗ್ (ಆರ್‌ಪಿಎಲ್) ಫೈನಲ್ ಪಂದ್ಯ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದತ್ತ ಹರಿದುಬಂದಿದ್ದು, ಪ್ರತಿಯೊಂದು ಚೆಂಡು, ವಿಕೆಟ್ ಹಾಗೂ ಬೌಂಡರಿಯನ್ನು … Continued

ವಿಡಿಯೋ | ಹಫೀಜ್ ಸಯೀದ್ ಕಾಶ್ಮೀರಕ್ಕೆ 10 ಸಾವಿರ ಉಗ್ರರನ್ನು ಕಳುಹಿಸಿದ್ದಾನೆ : ಪಾಕಿಸ್ತಾನದ ನಸೀರ್ ಮದನಿ ಬಹಿರಂಗ ಹೇಳಿಕೆ

ಬಹವಾಲನಗರ: ಈ ತಿಂಗಳ ಆರಂಭದಲ್ಲಿ ಶುಕ್ರವಾರದ ಧಾರ್ಮಿಕ ಪ್ರವಚನ ನೀಡುತ್ತಿದ್ದ ವೇಳೆ ಗಂಭೀರ ಹೃದಯ ಸಂಬಂಧಿತ ತೊಂದರೆಗೆ ಒಳಗಾಗಿದ್ದಾಗಿ ವರದಿಯಾಗಿದ್ದ ಪಾಕಿಸ್ತಾನದ ನಸೀರ್ ಮದನಿ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆಗಸ್ಟ್ 14ರಂದು ಬಹವಾಲನಗರದಲ್ಲಿ ನಡೆದ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಮದನಿ, ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್ ಕುರಿತು ಗಂಭೀರ … Continued

ಉಗ್ರರಿಗೆ ಬೆಂಬಲ ನೀಡೋದು ನಿಲ್ಲುವವರೆಗೂ ಸಿಂಧು ಜಲ ಒಪ್ಪಂದ ಅಮಾನತಿನಲ್ಲೇ ಇರಲಿದೆ : ಪಾಕ್‌ಗೆ ಭಾರತದ ಖಡಕ್ ಸಂದೇಶ

ನವದೆಹಲಿ: ಪಾಕಿಸ್ತಾನದ ತೀವ್ರ ಆಕ್ಷೇಪಗಳ ನಡುವೆಯೂ ಸಿಂಧು ಜಲ ಒಪ್ಪಂದ (Indus Waters Treaty – IWT) ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಗಡಿ ದಾಟಿ ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನ ನೀಡುತ್ತಿರುವ ನಿರಂತರ ಬೆಂಬಲವೇ ಈ ನಿರ್ಧಾರಕ್ಕೆ ಕಾರಣವಾಗಿದ್ದು, ಆ ಬೆಂಬಲವನ್ನು ವಿಶ್ವಾಸಾರ್ಹವಾಗಿ ಮತ್ತು ಶಾಶ್ವತವಾಗಿ … Continued

ಪಾಕ್‌ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಣ್ಣನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿ ; ವಿಡಿಯೋ ವೈರಲ್‌

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಮತ್ತು ಅದರ ರಾಜಕೀಯ ಮುಖವಾಣಿ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ನಾಯಕರು ಅಲ್ಲಿ ಕಾಣಿಸಿಕೊಂಡಿರುವುದು ಪಾಕಿಸ್ತಾನದಲ್ಲಿ ಉಗ್ರರಿಗೆ ಸುರಕ್ಷಿತ ಆಶ್ರಯ ದೊರೆಯುತ್ತಿದೆ ಎಂಬ ಆತಂಕವನ್ನು ಮತ್ತೊಮ್ಮೆ ಹೆಚ್ಚಿಸಿದೆ. … Continued

ಪಾಕಿಸ್ತಾನದಲ್ಲಿ ಈಗಲೂ ಭಾರತ ವಿರೋಧಿ ಭಯೋತ್ಪಾದನಾ ಸಂಘಟನೆಗಳು ಸಕ್ರಿಯ : ಅಮೆರಿಕ ವರದಿ

ವಾಷಿಂಗ್ಟನ್: ಭಾರತ ಮತ್ತು ಕಾಶ್ಮೀರದಲ್ಲಿ ಸಾಂತಿ ಉಂಟು ಮಾಡುವ ಭಯೋತ್ಪಾದನಾ ಸಂಘಟನೆಗಳು ಸೇರಿದಂತೆ ಹಲವಾರು ಭಯೋತ್ಪಾದನಾ ಗುಂಪುಗಳಿಗೆ ಪಾಕಿಸ್ತಾನವು ಇಂದಿಗೂ ಆಶ್ರಯ ನೀಡುತ್ತಲೇ ಇದೆ ಎಂದು ಅಮೆರಿಕದ ಕಾಂಗ್ರೆಸ್ ಸಂಶೋಧನಾ ಸಂಸ್ಥೆಯ (CRS) ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನ ಸರ್ಕಾರವು ಹಲವು ವರ್ಷಗಳಿಂದ ಸೇನಾ ಕಾರ್ಯಾಚರಣೆ ಮತ್ತು ನೀತಿಗಳನ್ನು ಜಾರಿಗೊಳಿಸಿದ್ದರೂ, ಉಗ್ರಗಾಮಿ ಗುಂಪುಗಳು ಅಲ್ಲಿನ ಮಣ್ಣಿನಲ್ಲಿ ಸಕ್ರಿಯವಾಗಿ … Continued

ಜಮ್ಮು ಜೈಲಿಂದ ತಪ್ಪಿಸಿಕೊಳ್ಳಲು ನಡೆಸಿದ ವಿಫಲ ಯತ್ನ, ನಂತರ ಹೊಡೆತ ತಿಂದಿದ್ದನ್ನು ನೆನಪಿಸಿಕೊಂಡ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್, 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಾನು ಅದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದ ಆಡಿಯೋ ಕ್ಲಿಪ್‌ನಲ್ಲಿ ಆತ ಜೈಲಿನಲ್ಲಿ ಸುರಂಗ ತೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದರ ಬಗ್ಗೆ … Continued

ವೀಡಿಯೊ..| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರಿಗೆ ಗೌರವ ಸೂಚಿಸಲು ಆದೇಶಿಸಿದ್ದ ಪಾಕ್‌ ಸೇನಾ ಮುಖ್ಯಸ್ಥ ; ಜೆಇಎಂ ಪ್ರಮುಖನ ಹೇಳಿಕೆಯಿಂದ ಪಾಕಿಸ್ತಾನದ ಸುಳ್ಳಾಟ ಬಯಲು…!

ಭಾರತದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರದ ತನ್ನ ಶಿಬಿರದಲ್ಲಿ ಸಂಭವಿಸಿದ ಹಾನಿಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಒಪ್ಪಿಕೊಂಡ ಕೆಲವು ದಿನಗಳ ನಂತರ, ಅದೇ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ನ ಮತ್ತೊಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭಾರತದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ … Continued