ಜಮ್ಮು ಜೈಲಿಂದ ತಪ್ಪಿಸಿಕೊಳ್ಳಲು ನಡೆಸಿದ ವಿಫಲ ಯತ್ನ, ನಂತರ ಹೊಡೆತ ತಿಂದಿದ್ದನ್ನು ನೆನಪಿಸಿಕೊಂಡ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್, 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಾನು ಅದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದ ಆಡಿಯೋ ಕ್ಲಿಪ್‌ನಲ್ಲಿ ಆತ ಜೈಲಿನಲ್ಲಿ ಸುರಂಗ ತೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದರ ಬಗ್ಗೆ … Continued

ಶಾಕಿಂಗ್ : ಜೆಇಎಂ ಭಯೋತ್ಪಾದಕ ಸಂಘಟನೆ ಮಹಿಳಾ ವಿಭಾಗಕ್ಕೆ 5000ಕ್ಕೂ ಹೆಚ್ಚು ಮಹಿಳೆಯರ ನೇಮಕ..! ಆನ್‌ಲೈನ್ ತರಬೇತಿ…

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ. ಈ ಸಂಘಟನೆಯ ಮಹಿಳಾ ವಿಭಾಗಕ್ಕೆ 5,000ಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಮಹಿಳಾ ಸದಸ್ಯರಿಗೆ ಆತ್ಮಹತ್ಯಾ ದಾಳಿಗಳಿಗಾಗಿ ತರಬೇತಿ ನೀಡಲಾಗುತ್ತಿದ್ದು, ಉಗ್ರವಾದದ ಸಿದ್ಧಾಂತಕ್ಕೆ ಅವರನ್ನು ಒಳಪಡಿಸಲಾಗುತ್ತಿದೆ ಎಂದು … Continued

ಆಪರೇಶನ್‌ ಸಿಂಧೂರದಲ್ಲಿ ತೀವ್ರ ಹಾನಿಗೊಳಗಾದ ನಂತ್ರ ಮೊದಲ ಮಹಿಳಾ ಘಟಕ ತೆರೆದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ

ಪಹ್ಲಗಾಮ್‌ ದಾಳಿಯ ನಂತರ ಭಾರತವು ನಡೆಸಿದ ಸೇನಾ ಕಾರ್ಯಾಚರಣೆ ಆಪರೇಷನ್ ಸಿಂಧೂರ ಸಮಯದಲ್ಲಿ ತೀವ್ರ ಹಾನಿ ಅನುಭವಿಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ), ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಮತ್ತೆ ಚುರುಕುಗೊಳಿಸಿದೆ. ಹಾಗೂ ತನ್ನ ಮೊದಲ ಮಹಿಳಾ ಘಟಕದ ರಚನೆ ಮಾಡಿರುವುದಾಗಿ ಘೋಷಿಸಿದೆ. ಸಾಂಪ್ರದಾಯಿಕವಾಗಿ ಮಹಿಳೆಯರು ಸಶಸ್ತ್ರ ಅಥವಾ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದನ್ನು … Continued

ವೀಡಿಯೊ | ಭಾರತದ ದಾಳಿಯಲ್ಲಿ ಪಾಕಿಸ್ತಾನದಲ್ಲಿ ಉಗ್ರ ಅಜರ್ ಕುಟುಂಬ ನಾಶವಾಗಿದ್ದನ್ನು ಒಪ್ಪಿಕೊಂಡ ಜೆಇಎಂ ಸಂಘಟನೆ ಕಮಾಂಡರ್‌

ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಿಂದಾದ ಹಾನಿಯನ್ನು ದೃಢಪಡಿಸಿದ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೇ 7 ರಂದು ಬಹಾವಲ್ಪುರದಲ್ಲಿ ಭಾರತ ನಡೆಸಿದ ನಿಖರ ದಾಳಿಯು ಜೆಎಎಂ ಮುಖ್ಯಸ್ಥ ಮಸೂದ್ ಅಜರ್ ಕುಟುಂಬವನ್ನು ಛಿದ್ರಗೊಳಿಸಿದೆ ಎಂದು ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದಾನೆ. ತಮ್ಮ ಅಡಗುಣತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೇಗೆ ಪ್ರವೇಶಿಸಿ ದಾಳಿ ಮಾಡಿದವು … Continued

‘ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರಗೆ ಪಾಕಿಸ್ತಾನದಿಂದ 14 ಕೋಟಿ ರೂ…’: ಪಾಕ್ ಭಯೋತ್ಪಾದನಾ ಯೋಜನೆಗಳ ಬಗ್ಗೆ ರಾಜನಾಥ ಸಿಂಗ್

ನವದೆಹಲಿ:ಪಾಕಿಸ್ತಾನ ಸರ್ಕಾರವು “ತನ್ನ ನಾಗರಿಕರಿಂದ ಸಂಗ್ರಹಿಸಿದ ತೆರಿಗೆಯನ್ನು ಖರ್ಚು ಮಾಡಿ ಘೋಷಿತ ಭಯೋತ್ಪಾದಕ ಮಸೂದ್ ಅಜರ್‌ಗೆ 14 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ ಹಾಗೂ” ಯೋಜನೆಗಳ ಬಗ್ಗೆ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿದ ಹಾಗೂ 2019 ರ ಪುಲ್ವಾಮಾ ಮತ್ತು … Continued

ಭಾರತದ ದಾಳಿಯಲ್ಲಿ ಉಗ್ರ ಸಂಘಟನೆ ಜೈಷ್ ಮುಖ್ಯಸ್ಥ-ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್ ಅಜರ್ 10 ಸಂಬಂಧಿಗಳ ಸಾವು

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ವಾಯುದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಸಾವಿಗೀಡಾಗಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರರ ಮೈಂಡ್‌ ಮೌಲಾನಾ ಮಸೂದ್ ಅಜರ್ ಹೇಳಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ … Continued

ವೀಡಿಯೊಗಳು..| ಭಾರತದ ವಾಯು ದಾಳಿಯಲ್ಲಿ ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್‌ ಅಜರ್‌ ಮದರಸಾ ಧ್ವಂಸ ; ಉಗ್ರ ಅಜ್ಮಲ್‌ ಕಸಬ್‌ ತರಬೇತಿ ಪಡೆದಿದ್ದ ಉಗ್ರರ ನೆಲೆ ಉಡೀಸ್‌

ನವದೆಹಲಿ: 26 ಜನರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ರಾತ್ರಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 24 ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿಸುಮಾರು 80ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ದಾಳಿಯಲ್ಲಿ ಜೈಶ್‌ … Continued

ಕರಾಚಿ : ಮಸೂದ್‌ ಅಜರ್‌ನ ಸ್ನೇಹಿತ -ಜೈಶ್-ಎ-ಮೊಹಮ್ಮದ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರಿಖ್‌ ಹತ್ಯೆ

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಮತ್ತು ಮೌಲಾನಾ ಮಸೂದ್ ಅಜರ್‌ನ ಆಪ್ತ ಸ್ನೇಹಿತ ಮೌಲಾನಾ ರಹೀಂ ಉಲ್ಲಾ ತಾರಿಕ್ ಎಂಬಾತನನ್ನು ಕರಾಚಿಯ ಒರಂಗಿ ಪಟ್ಟಣ ಪ್ರದೇಶದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಗುಂಡಿಕ್ಕಿ ಕೊಂದಿದ್ದಾರೆ. ವರದಿಗಳ ಪ್ರಕಾರ, ತಾರಿಕ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಅಪರಿಚಿತರು ಆತನ ಮೇಲೆ ಗುಂಡು ಹಾರಿಸಿದರು. ಸ್ಥಳೀಯ ಮಾಧ್ಯಮಗಳು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಘಟನೆಯು ಟಾರ್ಗೆಟೆಡ್‌ … Continued

ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆ ಸಂಸ್ಥಾಪಕ, ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್ ಪಾಕಿಸ್ತಾನದಲ್ಲಿ ಹತ್ಯೆ: ವರದಿ

ಇಸ್ಲಾಮಾಬಾದ್‌ :  ಭಾರತ ವಿರೋಧಿ ಭಯೋತ್ಪಾದನಾ ಕಾರ್ಯಾಚರಣೆಗೆ ಮತ್ತೊಂದು ದೊಡ್ಡ ಹೊಡೆತವಾಗಿ, ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮತ್ತು ಭಾರತದ ʼಮೋಸ್ಟ್‌ ವಾಂಟೆಡ್ʼ ಭಯೋತ್ಪಾದಕ ಮಸೂದ್ ಅಜರ್‌ನ ಆಪ್ತ ಸಹಾಯಕ ದಾವೂದ್ ಮಲಿಕ್ ಎಂಬಾತ ಪಾಕಿಸ್ತಾನದ ಉತ್ತರ ವಜೀರಿಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಡಾನ್ ವರದಿಯ ಪ್ರಕಾರ, ಶುಕ್ರವಾರ ಉತ್ತರ ವಜಿರಿಸ್ತಾನ್ … Continued