ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆ ಸಂಸ್ಥಾಪಕ, ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್ ಪಾಕಿಸ್ತಾನದಲ್ಲಿ ಹತ್ಯೆ: ವರದಿ

ಇಸ್ಲಾಮಾಬಾದ್‌ :  ಭಾರತ ವಿರೋಧಿ ಭಯೋತ್ಪಾದನಾ ಕಾರ್ಯಾಚರಣೆಗೆ ಮತ್ತೊಂದು ದೊಡ್ಡ ಹೊಡೆತವಾಗಿ, ಲಷ್ಕರ್-ಎ-ಜಬ್ಬಾರ್ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮತ್ತು ಭಾರತದ ʼಮೋಸ್ಟ್‌ ವಾಂಟೆಡ್ʼ ಭಯೋತ್ಪಾದಕ ಮಸೂದ್ ಅಜರ್‌ನ ಆಪ್ತ ಸಹಾಯಕ ದಾವೂದ್ ಮಲಿಕ್ ಎಂಬಾತ ಪಾಕಿಸ್ತಾನದ ಉತ್ತರ ವಜೀರಿಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಗೀಡಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಡಾನ್ ವರದಿಯ ಪ್ರಕಾರ, ಶುಕ್ರವಾರ ಉತ್ತರ ವಜಿರಿಸ್ತಾನ್ ಜಿಲ್ಲೆಯ ಮಿರಾಲಿ ಪ್ರದೇಶದಲ್ಲಿ ಉದ್ದೇಶಿತ ದಾಳಿಯಲ್ಲಿ ಮಲಿಕ್ ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ದಾಳಿಕೋರರು ಪರಾರಿಯಾಗಿದ್ದಾರೆ. ಅಪರಿಚಿತ ವ್ಯಕ್ತಿಯ ಚಿತ್ರಹಿಂಸೆಗೊಳಗಾದ ದೇಹವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆಲವು ವರದಿಗಳ ಪ್ರಕಾರ ಮಲಿಕ್ ಅವರು ಖಾಸಗಿ ಕ್ಲಿನಿಕ್‌ನಲ್ಲಿದ್ದಾಗ ದಾಳಿಕೋರರು ಹೊಂಚು ಹಾಕಿ ದಾಳಿ ಮಾಡಿ ಕೊಂದಿದ್ದಾರೆ. ಲಷ್ಕರ್-ಎ-ಜಬ್ಬಾರ್ ಭಯೋತ್ಪಾದನಾ ಸಂಘಟನೆಯ ಬೆಳವಣಿಗೆಯಲ್ಲಿ ಈತನ ಪಾತ್ರವಿದೆ.

ಮಸೂದ್ ಅಜರ್ ಜೊತೆ ಮಲಿಕ್ ಸ್ನೇಹ
ಜೈಶ್-ಎ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಸ್ಥಾಪಿಸಿದ ಮಸೂದ್‌ ಅಜರ್ ಮಸೂದ್‌ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ ಮತ್ತು 2019 ರಲ್ಲಿ ಪುಲ್ವಾಮಾ ದಾಳಿ ಸೇರಿದಂತೆ ಭಾರತದ ಮೇಲೆ ನಡೆದ ಹಲವಾರು ಭಯೋತ್ಪಾದಕ ದಾಳಿಗಳಿಗೆ ಜವಾಬ್ದಾರನಾಗಿದ್ದಾನೆ. 2019 ರಲ್ಲಿ ಮಸೂದ್ ಅಜರ್ ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಲಾಗಿದೆ.
ಈಗ ಹತ್ಯೆಯಾಗಿರುವ ಮಲಿಕ್‌ನನ್ನು ಅಜರ್‌ನ ಬಲಗೈ ಬಂಟ ಎಂದು ಪರಿಗಣಿಸಲಾಗಿತ್ತು ಮತ್ತು ಜೆಎಂ ಮತ್ತು ಲಷ್ಕರ್-ಎ-ಜಾಂಗ್ವಿಯಂತಹ ಹಲವಾರು ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಯಲ್ಲಿ ಈತ ಭಾಗಿಯಾಗಿದ್ದ.
ಮಲಿಕ್ ಸಾವು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಭಯೋತ್ಪಾದಕರ ಹತ್ಯೆಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ತಿಂಗಳ ಆರಂಭದಲ್ಲಿ, ಮತ್ತೋರ್ವ ವಾಂಟೆಡ್ ಭಯೋತ್ಪಾದಕ ಹಫೀಜ್ ಸಯೀದ್‌ನ ಆಪ್ತ ಸಹಾಯಕ ಜೆಎಂ ಭಯೋತ್ಪಾದಕ ಖೈಸರ್ ಫಾರೂಕ್, ಕರಾಚಿಯಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಹತ್ಯೆಗೀಡಾದ ಭಯೋತ್ಪಾದಕರ ಪಟ್ಟಿ
ಭಾರತದ ವಿರುದ್ಧ ದಾಳಿಗೆ ಪ್ರಚೋದನೆ ನೀಡಿದ ಹಲವಾರು ಭಯೋತ್ಪಾದಕರನ್ನು ವಿದೇಶಿ ನೆಲದಲ್ಲಿ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ, ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಾದ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಸುಖ್ದೂಲ್ ಸಿಂಗ್ ಅಕಾ ಸುಖ ದುನೆಕೆ ಹತ್ಯೆಗಳು ನವದೆಹಲಿ ಮತ್ತು ಒಟ್ಟಾವಾ ನಡುವಿನ ಸಂಬಂಧವನ್ನು ಹದಗೆಡಿಸಲು ಕಾರಣವಾಗಿದೆ.
1999 ರಲ್ಲಿ ಕಠ್ಮಂಡುವಿನಿಂದ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814 ರ ಅಪಹರಣಕಾರರಲ್ಲಿ ಒಬ್ಬರಾದ ಜಹೂರ್ ಮಿಸ್ತ್ರಿಯಿಂದ ಹತ್ಯೆಯಿಂದ ಭಾರತ ವಿರೋಧಿ ಭಯೋತ್ಪಾದಕರ ಸರಪಳಿ ಪ್ರಾರಂಭವಾಯಿತು, ಆತ ಕಳೆದ ವರ್ಷ ಕರಾಚಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ.
ಅದರ ನಂತರ 300 ಕ್ಕೂ ಹೆಚ್ಚು ಜನರನ್ನು ಕೊಂದ ಏರ್ ಇಂಡಿಯಾ ಫ್ಲೈಟ್ 182 ರ ಬಾಂಬ್ ಸ್ಫೋಟದಲ್ಲಿ ಆರೋಪಿ ಮತ್ತು ಖುಲಾಸೆಗೊಂಡ ಕೆನಡಾ ಮೂಲದ ಭಯೋತ್ಪಾದಕ ರಿಪುದಮನ್ ಸಿಂಗ್ ಮಲಿಕ್ ನನ್ನು ಜುಲೈ 2022 ರಲ್ಲಿ ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಈ ಕೆಲವು ಭಯೋತ್ಪಾದಕರ ವಿವರಿಸಲಾಗದ ಹತ್ಯೆಗಳು ಪಾಕಿಸ್ತಾನದ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳನ್ನು ದಂಗುಬಡಿಸಿದೆ. ವಿದೇಶಿ ನೆಲದಲ್ಲಿ ನಿಗೂಢವಾಗಿ ಹತ್ಯೆಯಾದ ಭಾರತ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ 17ನೇ ಭಯೋತ್ಪಾದಕ ಮಲಿಕ್ ಆಗಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement