ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ : ವ್ಯಕ್ತಿ ಬಂಧನ

ಅರರಿಯಾ : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕನಂತೆ ಪೋಸು ನೀಡಿ, ಜನವರಿ 22 ರಂದು (ಸೋಮವಾರ) ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ 21 ವರ್ಷದ ವ್ಯಕ್ತಿಯನ್ನು ಬಿಹಾರದ ಅರರಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. . ಆರೋಪಿ ಇಂತೇಖಾಬ್ ಆಲಂ ಎಂಬಾತನನ್ನು ಶನಿವಾರ ತಡರಾತ್ರಿ ಬಲುವಾ ಕಲಿಯಗಂಜ್‌ನಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಂತೆ … Continued

ಐಸಿಸ್ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದೊಂದಿಗೆ ನಂಟು ಹೊಂದಿರುವ 4 ಮಂದಿ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ಆರು ಶಂಕಿತ ಐಸಿಸ್ ಕಾರ್ಯಕರ್ತರನ್ನು ಬಂಧಿಸಿದೆ. ಆರು ಮಂದಿಯಲ್ಲಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ. ಎಲ್ಲಾ ಬಂಧಿತ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ(SAMU)ಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅಲಿಗಢ … Continued

ಕೆಇಎ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ ಬಂಧನ

ಕಲಬರುಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷಾ ಹಗರಣ (KEA exam scam)ದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ (Rudra gowda Patil) ನನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡದವರು ಕಾರ್ಯಾಚರಣೆ ನಡೆಸಿ, ಅಫಜಲಪುರ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಆರ್.ಡಿ. ಪಾಟೀಲನನ್ನು ಬಂಧಿಸಿದ್ದಾರೆ. ಆತನನ್ನು ಕಲಬುರ್ಗಿಗೆ ಕರೆ ತಂದಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಕಳೆದ … Continued

ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ನವದೆಹಲಿ: ಶಂಕಿತ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಮತ್ತು ಇತರ ಇಬ್ಬರು ಭಯೋತ್ಪಾದಕ ಶಂಕಿತರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ. ಐಸಿಸ್ ಭಯೋತ್ಪಾದಕ ಮೊಹಮ್ಮದ್ ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದು, ಆತನ ತಲೆಗೆ 3 ಲಕ್ಷ ರೂ.ಘೋಷಿಸಲಾಗಿತ್ತು. ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್‌ನ ಸುಳಿವು … Continued

ವಂಚನೆ ಪ್ರಕರಣ : ಮತ್ತೋರ್ವ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ

ಬೆಂಗಳೂರು : ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಇಂದು ಒಡಿಶಾದ ಕಟಕ್​ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು … Continued

ಉತ್ತರ ಪ್ರದೇಶದ ಯುವತಿಯನ್ನು ಮದುವೆಯಾಗಲು ಏಳು ಸಮುದ್ರ ದಾಟಿ ಫಿಜಿಯಿಂದ ಬಂದ 3 ಮಕ್ಕಳ ತಂದೆ ಈಗ ಪೊಲೀಸರ ಅತಿಥಿ…

ಮೀರತ್‌ : 3 ಹೆಣ್ಣು ಮಕ್ಕಳ ತಂದೆ ತನ್ನ ಗೆಳತಿಯನ್ನು ಮದುವೆಯಾಗಲು ಏಳು ಸಮುದ್ರಗಳನ್ನು ದಾಟಿ ಮೀರತ್ ತಲುಪಿದ ನಂತರ ಹುಡುಗಿಯ ಸಂಬಂಧಿಕರು ಆತನ ಮೇಲೆ ಪೊಲೀಸ್ ದೂರು ನೀಡಿದ ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಗುಪ್ತಚರ ದಳ ಆತನ ವಿಚಾರಣೆ ನಡೆಸುತ್ತಿದೆ. ಫಿಜಿಯ ಕಂಪ್ಯೂಟರ್ ಎಂಜಿನಿಯರ್ ಸೈಯದ್ ಫಜಲ್ ಆನ್‌ಲೈನ್‌ ನಲ್ಲಿ ಸಂಪರ್ಕಕ್ಕೆ … Continued

ಪತ್ನಿ ಎದುರಲ್ಲೇ ಪತಿ ಹತ್ಯೆ ಪ್ರಕರಣ​ : ಭೀಮನ ಅಮಾವಾಸ್ಯೆ ದಿನ ದೇಗುಲದಲ್ಲಿ ಪ್ರೇಮಿಯಿಂದ ಗಂಡನ ಹತ್ಯೆ ಮಾಡಿಸಿದ ಪತ್ನಿ…!

 ಬೆಳಗಾವಿ : ವಡೇರಹಟ್ಟಿ ಗ್ರಾಮದಲ್ಲಿ ಹೆಂಡತಿ ಎದುರೇ ನಡೆದಿದ್ದ ಗಂಡನ ಭೀಕರ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಜಿಲ್ಲೆಯ ಮೂಡಲಗಿ ತಾಲೂಕು ವಡೇರಟ್ಟಿ ಗ್ರಾಮದಲ್ಲಿ ಸೋಮವಾರ ವ್ಯಕ್ತಿಯೊಬ್ಬನ ಹತ್ಯೆಯಿಂದಾಗಿ ಇಡೀ ಗ್ರಾಮವನ್ನೇ ತಲ್ಲಣಗೊಂಡಿದೆ. ಭೀಮನ ಅಮಾವಾಸ್ಯೆಯಾದ ಸೋಮವಾರ ಗಂಡನ ಪೂಜೆ ಮಾಡಿದರೆ ಆತನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದೇ … Continued

ಆಶ್ರಮದಲ್ಲಿ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಆಂಧ್ರಪ್ರದೇಶದ ಸ್ವಾಮೀಜಿ ಬಂಧನ

ವಿಶಾಖಪಟ್ಟಣಂ : ತಾನು ನಡೆಸುತ್ತಿದ್ದ ಆಶ್ರಮದಲ್ಲಿ ಹಲವು ತಿಂಗಳುಗಳಿಂದ 15 ವರ್ಷದ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಧ್ರಪ್ರದೇಶದ ಸ್ವಾಮೀಜಿಯೊಬ್ಬರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ವಿಜಯವಾಡದಲ್ಲಿ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ವಿಶಾಖಪಟ್ಟಣಂನ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ಪೂರ್ಣಾನಂದ ಸರಸ್ವತಿ … Continued

ರಾಜ್ಯಪಾಲ ರವಿ, ನಟಿ-ಬಿಜೆಪಿ ನಾಯಕಿ ಖುಷ್ಬು ಸುಂದರ್ ಕುರಿತು ಅಸಭ್ಯ ಹೇಳಿಕೆ : ಪಕ್ಷದ ಸದಸ್ಯನ ಉಚ್ಚಾಟಿಸಿದ ಡಿಎಂಕೆ, ನಂತರ ಬಂಧನ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಖ್ಯಾತ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ ಮತ್ತು ರಾಜ್ಯಪಾಲ ಆರ್‌.ಎನ್. ರವಿ ಅವರ ವಿರುದ್ಧ ದೃಢೀಕರಿಸದ ವೀಡಿಯೊದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ ನಂತರ ಪಕ್ಷದ ಸದಸ್ಯರೊಬ್ಬರನ್ನು ಡಿಎಂಕೆ ಇಂದು ಉಚ್ಚಾಟಿಸಿದೆ. ಇದೇ ಉಚ್ಚಾಟಿತ ವ್ಯಕ್ತಿ ಶಿವಾಜಿ ಕೃಷ್ಣಮೂರ್ತಿ ಜನವರಿಯಲ್ಲಿ ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದರು. ಆ ವೇಳೆ ಪಕ್ಷ … Continued

ಪಿಸ್ತೂಲ್, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಶಾಲೆಗೆ ಪ್ರವೇಶಿಸಿದ ವ್ಯಕ್ತಿ : ವಿದ್ಯಾರ್ಥಿಗಳ ಒತ್ತೆಯಾಳು ಪ್ರಯತ್ನ ವಿಫಲ | ವೀಕ್ಷಿಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದ ಶಾಲೆಯೊಂದಕ್ಕೆ ಪ್ರವೇಶಿಸಿದ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ನಂತರ ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಾಲ್ಡಾದ ಮುಚಿಯಾ ಚಂದ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಗನ್ ಹಿಡಿದು ತರಗತಿಗೆ ಪ್ರವೇಶಿಸಿ, ಕುಳಿತು … Continued