ಅಯೋಧ್ಯೆ ರಾಮಮಂದಿರದ ವಿನ್ಯಾಸ ಮಾಡಿದ ಶಿಲ್ಪಶಾಸ್ತ್ರಜ್ಞನಿಗೆ ಪದ್ಮಶ್ರೀ ಪುರಸ್ಕಾರ ; ಯಾರು ಈ ಚಂದ್ರಕಾಂತ ಸೋಂಪುರ..?

ನವದೆಹಲಿ: ಭಾರತದ 76 ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಶನಿವಾರ ಕೇಂದ್ರ ಸರ್ಕಾರವು ಶನಿವಾರ ವಿವಿಧ ಕ್ಷೇತ್ರಗಳ 139 ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಏಳು ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ. ಕಳೆದ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯಲ್ಲಿ ರಾಮಮಂದಿರದ ವಿನ್ಯಾಸ ಮಾಡಿದ ಚಂದ್ರಕಾಂತ ಸೋಂಪುರ ಅವರು (81) … Continued

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ ; ತಾಜ್ ಮಹಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ ಅಯೋಧ್ಯೆ ರಾಮಮಂದಿರ

ನವದೆಹಲಿ: ಈಗ ಅಯೋಧ್ಯೆಯು ಆಗ್ರಾದ ತಾಜ್ ಮಹಲ್‌ ಅನ್ನು ಹಿಂದಿಕ್ಕಿ ಈಗ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024 ರ ಜನವರಿ-ಸೆಪ್ಟೆಂಬರ್ ನಡುವೆ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿಯರು ಭೇಟಿ ನೀಡಿದ್ದಾರೆ. ಇದು ಹೊಸ ದಾಖಲೆಯಾಗಿದೆ. ನಿರೀಕ್ಷಿತ … Continued

ಅಕ್ಟೋಬರ್ 28 ರಿಂದ ಅಯೋಧ್ಯೆಯಲ್ಲಿ 4 ದಿನಗಳ ದೀಪೋತ್ಸವ ; ಬೆಳಗಲಿವೆ 25 ಲಕ್ಷ ದೀಪಗಳು…!

ಲಕ್ನೋ : ಈ ವರ್ಷದ ಜನವರಿಯಲ್ಲಿ ಭಗವಾನ್ ರಾಮನ ಐತಿಹಾಸಿಕ ‘ಪ್ರಾಣ ಪ್ರತಿಷ್ಠೆ’ಗೆ ಸಾಕ್ಷಿಯಾದ ಅಯೋಧ್ಯೆಯಲ್ಲಿ ಅಕ್ಟೋಬರ್ 28 ರಿಂದ ನಾಲ್ಕು ದಿನಗಳ ದೀಪೋತ್ಸವ ಆಚರಣೆ ನಡೆಯಲಿದೆ. ಇದು ಭಗವಾನ್ ರಾಮನ ದೇವಾಲಯ ಉದ್ಘಾಟನೆಯಾದ ನಂತರ ಮೊದಲ ಕಾರ್ಯಕ್ರಮವಾಗಿದೆ. ದೀಪೋತ್ಸವ ಆಚರಣೆಗಳು ಅಕ್ಟೋಬರ್ 28 ರಿಂದ ಅಕ್ಟೋಬರ್ 31ರ ವರೆಗೆ ನಡೆಯಲಿದೆ ಎಂದು ಉತ್ತರ ಪ್ರದೇಶ … Continued

ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 2100 ಕೋಟಿ ರೂ. ಚೆಕ್‌ ಕೊಟ್ಟ ದಾನಿ ; ಆದ್ರೆ ಇಲ್ಲೊಂದು ಟ್ವಿಸ್ಟ್‌ ; ಅದೇನಂದ್ರೆ…

ಲಕ್ನೋ : ಅಯೋಧ್ಯೆಯ ರಾಮಮಂದಿರದ ಟ್ರಸ್ಟ್‌ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂ.. ಮೊತ್ತದ ಚೆಕ್‌ ಕಳಹಿಸಿದ್ದಾರೆ. ಈ ಚೆಕ್‌ ಮೇಲೆ ದಾನಿ ಹೆಸರು, ವಿಳಾಸ, ಫೋನ್‌ ನಂಬರ್‌ ಇದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಟ್ವಿಸ್ಟ್ ಏನೆಂದರೆ ಚೆಕ್ ಕಳುಹಿಸಿದ ದಾನಿ ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿ ಹೆಸರಿಗೆ ಟ್ರಸ್ಟ್‌ಗೆ ಪೋಸ್ಟ್‌ ಮಾಡಿದ್ದು, … Continued

ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧ

ಅಯೋಧ್ಯೆ : ಜನವರಿ 22ರಂದು ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಇನ್ಮುಂದೆ ಮೊಬೈಲ್ ಬಳಕೆ ಮಾಡುವಂತಿಲ್ಲ. ದೇಗುಲದ ಆವರಣದ ಮತ್ತು ಮಂದಿರದ ಒಳಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ. ರಾಮಮಂದಿರ ಟ್ರಸ್ಟ್ ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್ ಜೊತೆಗಿನ ಸಭೆ ನಡೆಸಲಾಗಿದ್ದು, ಭದ್ರತಾ ದೃಷ್ಟಿಯಿಂದ  … Continued

ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಭಾರತ ಬಣ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರವನ್ನು ಶುದ್ಧೀಕರಿಸಲಾಗುತ್ತದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಶುಕ್ರವಾರ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಈ ಕುರಿತು ಮಾತನಾಡಿದ ನಾನಾ ಪಟೋಲೆ, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಅಧಿಕಾರಕ್ಕೇರಿದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಶುದ್ಧೀಕರಿಸಲಾಗುತ್ತದೆ. ಅಲ್ಲಿರುವುದು … Continued

ರಾಮನವಮಿಗೂ ಮುನ್ನ ಅಯೋಧ್ಯೆ ರಾಮಮಂದಿರಕ್ಕೆ 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ ಸಮರ್ಪಿಸಿದ ನಿವೃತ್ತ ಐಎಎಸ್‌ ಅಧಿಕಾರಿ..

ರಾಮನವಮಿಗೆ ಕೆಲ ದಿನಗಳ ಮುಂಚೆ ಅಯೋಧ್ಯೆಯ ರಾಮಮಂದಿರಕ್ಕೆ ಚಿನ್ನದ ರಾಮಚರಿತಮಾನಸವನ್ನು ಸಮರ್ಪಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ನಂತರ ಇದು ಮೊದಲ ರಾಮನವಮಿ ಆಚರಣೆಯಾಗಿದೆ. ಈ ಶುಭ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಬಾಲ ರಾಮನಿಗೆ ಸುವರ್ಣ ರಾಮಾಯಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿನ್ನದಲ್ಲಿ ಸ್ಕ್ರಿಪ್ಟ್ ಮಾಡಲಾದ ರಾಮಚರಿತಮಾನಸವನ್ನು ಮಾಜಿ ಐಎಎಸ್ ಅಧಿಕಾರಿ … Continued

ಅಯೋಧ್ಯೆಗೆ ಬರುವ ಯಾತ್ರಿಕರಿಗೆ ಉಚಿತ ಚಿಕಿತ್ಸೆ ನೀಡಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಅಪೋಲೋ ಹಾಸ್ಪಿಟಲ್ಸ್ ಘೋಷಣೆ

ಅಯೋಧ್ಯೆ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಯಾತ್ರಾಸ್ಥಳದಲ್ಲಿ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ ಪ್ರಾರಂಭಿಸುವುದಾಗಿ ಘೋಷಿಸಿದೆ. ಕೇಂದ್ರದ ಸುಧಾರಿತ ಸೇವೆಗಳ ಕುರಿತು ಮಾತನಾಡಿದ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಈ ಮಲ್ಟಿ-ಸ್ಪೆಷಾಲಿಟಿ ತುರ್ತು ವೈದ್ಯಕೀಯ ಕೇಂದ್ರ(multi-specialty emergency medical centre)ದಲ್ಲಿ ಉತ್ತಮವಾದ ವಿಸ್ತೃತ ವೈದ್ಯಕೀಯ ಸೇವೆಗಳು … Continued

ನಿಪ್ಪಾಣಿ : 101 ವರ್ಷಗಳ ಹಳೆಯ ನಿಪ್ಪಾಣಿ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ

 ಬೆಳಗಾವಿ : ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಮ ಮಂದಿರವನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಪತ್ರ ಬರೆಯಲಾಗಿದೆ. ನಿಪ್ಪಾಣಿ ಹಳೆ ಪಿಬಿ ರಸ್ತೆಯ ರಾಮಮಂದಿರ ಇದಾಗಿದ್ದು, ಕಳೆದ ತಿಂಗಳು ಫೆಬ್ರವರಿ 7 ಹಾಗೂ 28 ರಂದು ಎರಡು ಪತ್ರಗಳು ಬಂದಿದೆ. ಮುಂದಿನ 20, 21 ತಾರೀಖಿನ ಒಳಗಡೆ ರಾಮ ಮಂದಿರವನ್ನು ದೊಡ್ಡ ಪ್ರಮಾಣದಿಂದ ಸ್ಪೋಟಿಸುತ್ತೇವೆ ಎಂದು ಅನಾಮಧೇಯ … Continued

ಚಿನ್ನಾಭರಣ ನಗದು ಸೇರಿ ಒಂದೇ ತಿಂಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಬಂದ ದೇಣಿಗೆ ಹಣವೆಷ್ಟು ಗೊತ್ತಾ..?

ಅಯೋಧ್ಯೆ : ನೂತನವಾಗಿ ನಿರ್ಮಿಸಲಾದ ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಸಮಾರಂಭ ನಡೆದಾಗಿನಿಂದ ಒಂದು ತಿಂಗಳಲ್ಲಿ ಸಾಕಷ್ಟು ದೇಣಿಗೆ ಹರಿದು ಬಂದಿದೆ. ಇದರಲ್ಲಿ ಸುಮಾರು 25 ಕೋಟಿ ಮೌಲ್ಯದ 25 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿವೆ. ಈ ಮಾಹಿತಿಯನ್ನು ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ರಾಮಮಂದಿರ ಟ್ರಸ್ಟ್‌ನ ಉಸ್ತುವಾರಿ … Continued