ಕಾರವಾರ: ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವತಿ

posted in: ರಾಜ್ಯ | 0

ಕಾರವಾರ: ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮೇಘ (20) ಎಂದು ಗುರುತಿಸಲಾಗಿದೆ. ಈ ಯುವತಿ ಮೂಲತಃ ಸಿದ್ದಾಪುರದವಳಾಗಿದ್ದು, ಕಾರವಾರದ ಹಬ್ಬುವಾಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು ಎಂದು ಹೇಳಲಾಗಿದೆ. ಪ್ಯಾರಾಮೇಡಿಕಲ್ ಕೋರ್ಸ್ … Continued

ಮಂಡ್ಯ: ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಮುಖ್ಯ ಶಿಕ್ಷಕಿ…!

posted in: ರಾಜ್ಯ | 0

ಮಂಡ್ಯ: ಶಾಲೆಗೆ ಮೊಬೈಲ್ ತಂದಿದ್ದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿ ಅಸಭ್ಯವಾಗಿ ನಡೆದುಕೊಂಡಿದ್ದು, ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾರದ ಹಿಂದೆಯೇ ಈ … Continued

ಮೀನುಗಾರನ ತಲೆಕೆಳಗಾಗಿ ನೇತು ಹಾಕಿ ಹಲ್ಲೆ : 6 ಜನರ ಬಂಧನ

posted in: ರಾಜ್ಯ | 0

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ … Continued

ಕೊನೆಗೂ ಕೊಡಗು ಬಾಲಕಿ ಕೈಸೇರಿದ ಕಳೆದುಹೋಗಿದ್ದ ಅಮ್ಮನ ನೆನಪಿನ ಮೊಬೈಲ್..!

posted in: ರಾಜ್ಯ | 0

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರದ ಪುಟ್ಟ ಬಾಲಕಿ ಹೃತಿಕ್ಷಾ ಪ್ರಾರ್ಥನೆ ಕೊನೆಗೂ ಫಲಿಸಿದೆ. ಕೋವಿಡ್‌ನಿಂದ ಮೃತಪಟ್ಟ ತಾಯಿಯ ನೆನಪು ಇರುವ ಮೊಬೈಲ್ ಮೂರು ತಿಂಗಳ ನಂತರ ಆಕೆಯ ಕೈ ಸೇರಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಹೃತಿಕ್ಷಾ ತಾಯಿ ಮೇ 16ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ತಾಯಿಯ ಜೊತೆಗಿದ್ದ ಮೊಬೈಲ್ ಕಳೆದುಹೋಗಿತ್ತು. ತಾಯಿಯ ನೆನಪು … Continued

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್, ಗಾಂಜಾ, ಆಯುಧಗಳ ವಶ..!

posted in: ರಾಜ್ಯ | 0

ಬೆಂಗಳೂರು: ಶನಿವಾರ ಬೆಳ್ಳಂಬೆಳಿಗ್ಗೆಯೇ ನೂರಕ್ಕೂ ಅಧಿಕ ಸಂಖ್ಯೆಯ ಪೊಲೀಸರು, ಶ್ವಾನದಳ ಜೊತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅಲ್ಲಿನ ಖೈದಿಗಳಿಂದ ಗಾಂಜಾ, ಮೊಬೈಲ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಜೈಲಿನಲ್ಲಿ  … Continued

“ಆಂಟಿಲಿಯಾ ಬಳಿ ಸ್ಫೋಟಕ ತುಂಬಿದ್ದ ಎಸ್‌ಯುವಿ ಪತ್ತೆ : ಬೆದರಿಕೆ ಹೊಣೆ ಹೊತ್ತ ಸಂದೇಶದ ಟೆಲಿಗ್ರಾಮ್ ಚಾನೆಲ್ ನಿರ್ವಹಣೆಗೆ ಬಳಸಿದ ಶಂಕಿತ ಮೊಬೈಲ್ ವಶ

ಮುಖೇಶ್ ಅಂಬಾನಿ ಬಾಂಬ್ ಬೆದರಿಕೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ವಿಭಾಗವು ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ   ಬೆದರಿಕೆಯ ಜವಾಬ್ದಾರಿ ಹೊತ್ತ ಟೆಲಿಗ್ರಾಮ್ ಚಾನೆಲ್ ನಿರ್ವಹಿಸಲು ಬಳಸಲಾಗಿದೆಯೆಂದು ಶಂಕಿಸಲಾಗಿರುವ ಮೊಬೈಲ್ ಫೋನ್ ಅನ್ನು ತಿಹಾರ್ ಜೈಲಿನಿಂದ ವಶಪಡಿಸಿಕೊಂಡಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಟೆಲಿಗ್ರಾಮ್ ಚಾನೆಲ್ ಮೂಲಕ ಜೈಶ್-ಉಲ್-ಹಿಂದ್ ಎಂಬ ಸಂಘಟನೆಯು ಕಳೆದ ತಿಂಗಳು … Continued