ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮಂಡ್ಯ: ಒಂದೇ ಕುಟುಂಬದ ಮೂವರು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಮಾಸ್ತಪ್ಪ, ಪತ್ನಿ ರತ್ನಮ್ಮ ಹಾಗೂ ಮಗಳು ಲಕ್ಷ್ಮೀ ಎಂದು ಗುರುತಿಸಲಾಗಿದ್ದು, ದಂಪತಿಯ ಮೃತದೇಹ ಪತ್ತೆ ಆಗಿದೆ. ಮಗಳ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಮೃತರು ಶ್ರೀರಂಗಪಟ್ಟಣದ ಗಂಜಾಂ … Continued

ಮಂಡ್ಯ…| ಆಟದ ಗನ್ ಎಂದು ಭಾವಿಸಿ ಮಕ್ಕಳು ಆಟವಾಡುತ್ತಿದ್ದಾಗ ಅಸಲಿ ಗನ್‌ ನಿಂದ ಹಾರಿದ ಗುಂಡು; 3 ವರ್ಷದ ಬಾಲಕ ಸಾವು

ಮಂಡ್ಯ: ಅಣ್ಣ ತಮ್ಮ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು (Firing) 3 ವರ್ಷದ ಮಗು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಂದೆಮಾದಿಹಳ್ಳಿಯ ಕೋಳಿ ಫಾರಂ ಒಂದರಲ್ಲಿ ಭಾನುವಾರ (ಫೆ. 16) ನಡೆದಿದೆ ಎಂದು ವರದಿಯಾಗಿದೆ. ಮಕ್ಕಳು ಅದು ನಿಜವಾದ ಬಂದೂಕು ಎಂದು ತಿಳಿಯದೆ ಆಟವಾಡುವ ಬಂದೂಕು ಎಂದು ತಿಳದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು … Continued

8 ತಿಂಗಳ ಬಂಡೂರು ಟಗರು ಬರೋಬ್ಬರಿ ₹1.48 ಲಕ್ಷಕ್ಕೆ ಮಾರಾಟ ; ಏನಿದರ ವಿಶೇಷತೆ..?

ಮಂಡ್ಯ : ಮಂಡ್ಯ ಜಿಲ್ಲೆಯ ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. 20 ಸಾವಿರ ರೂ.ಗಳಿಗೆ ಖರೀದಿ ಮಾಡಿದ್ದ ಬಂಡೂರು ಟಗರನ್ನು ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 1.48 ಲಕ್ಷ ರೂ.ಗಳನ್ನು ಕೊಟ್ಟು ಖರೀದಿ ಮಾಡಿದ್ದಾರೆ. ಬಂಡೂರು ತಳಿಯ ಟಗರು ಮಾಂಸಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇದರ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ. ಈ ಟಗರಿನ ವಯಸ್ಸು … Continued

ಪಾರ್ಸೆಲ್‌ ಬಂದಿದೆ ಎಂದು ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ವೃದ್ಧನ ಬರ್ಬರ ಹತ್ಯೆ

ಮಂಡ್ಯ: ಮರ ಕತ್ತರಿಸುವ ಯಂತ್ರದಿಂದ ವೃದ್ಧನನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಮಂಡ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಗೆ ಒಂಟಿ ಮನೆಗೆ ಮರ ಕತ್ತರಿಸೋ ಯಂತ್ರದ ಜೊತೆ ನುಗ್ಗಿದ ದರೋಡೆಕೋರ ಈ ಘೋರ ಕೃತ್ಯ ಎಸಗಿದ್ದಾನೆ. ಸಾವಿಗೀಡಾದ ವೃದ್ಧನನ್ನು ರಮೇಶ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಯಶೋಧಮ್ಮ … Continued

ವೀಡಿಯೊ..| ಮಂಡ್ಯ ; ಅಪರೂಪದ ವಿದ್ಯಮಾನ : ಮೂರು ಕರುಗಳಿಗೆ ಜನ್ಮ ನೀಡಿದ ಹಸು…!

ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಸಲಕ್ಕೆ ಒಂದೇ ಕರುವಿಗೆ ಜನ್ಮವನ್ನು ನೀಡುತ್ತವೆ. ಆದರೆ ಅಪರೂಪದ ವಿದ್ಯಮಾನದಲ್ಲಿ ಕೆಲವು ಕಡೆಗಳಲ್ಲಿ ಅವಳಿ ಕರುಗಳಿಗೆ ಜನ್ಮ ನೀಡಿದ ಉದಾಹರಣೆಗಳೂ ಇವೆ. ಆದರೆ ಹಸು ಮೂರು ಕರುಗಳಿಗೆ ಜನ್ಮ ನೀಡಿದ ವಿದ್ಯಮಾನ ಅಪರದಲ್ಲಿ ಅಪರೂಪದ ವಿದ್ಯಮಾನ ಎಂದೇ ಹೇಳಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ನಿವಾಸಿ ಕಂಠಿ … Continued

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಆಯ್ಕೆ

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಡಿಸೆಂಬರ್‌ 20ರಿಂದ 22ರ ವರೆಗೆ ಮೂರು ದಿನ ಕಾಲ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ … Continued

ಮಂಡ್ಯ | ಸರ್ಕಾರಿ ಶಾಲೆಯ ಭೂಮಿಯ ಪಹಣಿಯಲ್ಲೂ ವಕ್ಫ್​ ಹೆಸರು…!

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದ ಕಾಣಿಸಿಕೊಂಡಿದೆ. ರೈತರ ಜಮೀನು, ಹಿಂದೂ ದೇಗುಲದ ಬಳಿಕ ಸರ್ಕಾರಿ ಶಾಲೆ ಜಾಗದ ಮೇಲೂ ವಕ್ಫ್‌ ಹೆಸರು ನಮೂದಾಗಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗಿದೆ. ಸರ್ವೆ ನಂ.215ರ 30 ಗುಂಟೆ ಜಾಗದಲ್ಲಿ ಸರ್ಕಾರಿ … Continued

ಬೈಕ್ ಮೆಕಾನಿಕ್ ಬೆಳಗಾಗೋದ್ರೊಳಗೆ ಕೋಟ್ಯಧಿಪತಿ : ಕೇರಳ ಲಾಟರಿಯಲ್ಲಿ 25 ಕೋಟಿ ರೂ. ಬಹುಮಾನ ಗೆದ್ದ ʻಮಂಡ್ಯ ವ್ಯಕ್ತಿʼ…!

ಮಂಡ್ಯ : ಕರ್ನಾಟಕದ ಬೈಕ್ ಮೆಕಾನಿಕ್​ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಯಾಗಿದ್ದಾರೆ. ಅವರು ಲಾಟರಿಯಲ್ಲಿ‌ 25 ಕೋಟಿ ರೂ.‌ಜಾಕ್ಪಾಟ್‌ ಗೆದಿದ್ದಾರೆ…! ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಅಲ್ತಾಫ್ ಪಾಷಾ ಅವರು ಕೇರಳದ ಲಾಟರಿಯಲ್ಲಿ 25 ಕೋಟಿ ರೂ.ಬಹುಮಾನ ಗೆದ್ದಿದ್ದಾರೆ. ಕೇರಳ ಲಾಟರಿಯ ತಿರುವೋಣಂ ಬಂಪರ್ ಬಹುಮಾನ ವಿಜೇತ ವಯನಾಡಿನಿಂದ ಟಿಕೆಟ್‌ ಖರೀದಿಸಿದ್ದಾರೆ. ಅವರು ವಯನಾಡಿನಲ್ಲಿರುವ ಸಂಬಂಧಿಕರ … Continued

ನಾಗಮಂಗಲ ಗಲಭೆಯ 55 ಆರೋಪಿಗಳಿಗೆ ಜಾಮೀನು

ಮಂಡ್ಯ:  ಜಿಲ್ಲೆಯ ನಾಗಮಂಗಲದಲ್ಲಿ (Mandya violence) ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣದಲ್ಲಿ ಬಂಧಿತರಾದ ಎಲ್ಲ 55 ಆರೋಪಿಗಳಿಗೆ ನ್ಯಾಯಾಲಯ ಜಾಮೀನು (Bail) ನೀಡಿದೆ. ಮಂಡ್ಯದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲಭೆಯಲ್ಲಿ ಬಂಧನವಾಗಿದ್ದ ಎಲ್ಲ ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಗಳಿಗೆ ತಲಾ … Continued

ನಾಗಮಂಗಲ‌ ಗಲಭೆ : ಆರ್ ಅಶೋಕ, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ ಐ ಆರ್‌

ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್​​ಐಆರ್​​ ದಾಖಲಾಗಿದೆ. ನಾಗಮಂಗಲ‌ ಕೋಮುಗಲಭೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ನಾಗಮಂಗಲ ಟೌನ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ನಾಗಮಂಗಲ ಘಟನೆಗೆ ಸಂಬಂಧಿಸದೇ ಇದ್ದ ವೀಡಿಯೊ ಹಾಗೂ … Continued