ಬೆಂಗಳೂರು: ಸಾಲದ ಕಂತಿನ ಹಣ ಕೊಡದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ; ಮೂವರ ಬಂಧನ

ಬೆಂಗಳೂರು: ಸಾಲದ ಬಡ್ಡಿ ಹಣ ನೀಡಲು ಸಾಧ್ಯವಾಗದ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೇಷ್ಮಾ ಬಾನು, ನಜರತ್ ಹಾಗೂ ರೇಷ್ಮಾ ಪತಿ ಸುಹೇಲ್ ಎಂದು ಗುರುತಿಸಲಾಗಿದೆ. ಸಾಲದ ಬಡ್ಡಿ ಹಣ ಕೊಡದಿದ್ದರೆ ಮಹಿಳೆಯನ್ನು … Continued

ವಿಡಿಯೋ | ಅತಿ ಉದ್ದದ ಕೂದಲು : ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಭಾರತದ ಮಹಿಳೆ : ಕೂದಲಿನ ಉದ್ದ ಎಷ್ಟು ಗೊತ್ತೆ..?

ಹಲ್ದ್ವಾನಿ: ಉತ್ತರಾಖಂಡದ ಮಹಿಳೆ ರೇಣು ಧರಿಯಾಲ್ ಅವರು ಜೀವಂತವಾಗಿರುವ ಮಹಿಳೆಯರ ಪೈಕಿ ವಿಶ್ವದಲ್ಲೇ ಅತಿ ಉದ್ದದ ಕೂದಲು ಹೊಂದಿರುವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ‘ಎಕ್ಸ್‌’ ಖಾತೆಯಲ್ಲಿ ರೇಣು ಧರಿಯಾಲ್ ಅವರ ಸಾಧನೆಯನ್ನು ಪ್ರಕಟಿಸಿದ್ದು, ಅವರನ್ನು ಜೀವಂತ ಮಹಿಳೆಯರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ದಾಖಲೆದಾರರು ಎಂದು ಪರಿಚಯಿಸಿದೆ. ಹಾಗೂ ಅವರ ಕೂದಲಿನ … Continued

ವಿಡಿಯೋ | ಬಸ್‌ನಲ್ಲೇ ಮಹಿಳೆಗೆ ಹೃದಯಾಘಾತ ; ನೇರ ಆಸ್ಪತ್ರೆಗೆ ಬಸ್‌ ಚಲಾಯಿಸಿಕೊಂಡು ಬಂದು ಸಮಯಪ್ರಜ್ಞೆ ಮೆರೆದ ಚಾಲಕ

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಸಮಯಪ್ರಜ್ಞೆ, ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯನ್ನು ಪ್ರದರ್ಶಿಸಿ, ಹೃದಯಾಘಾತ ಶಂಕೆಯಿಂದ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ದೊರಕುವಂತೆ ಮಾಡುವ ಮೂಲಕ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಘಟನೆ ನಡೆದಿದೆ. ತುಮಕೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣದ ವೇಳೆ ಒಬ್ಬ ಪ್ರಯಾಣಿಕರಿಗೆ ಏಕಾಏಕಿ … Continued

ಬಾಗೇಪಲ್ಲಿ : ಪಾಕಿಸ್ತಾನ ಪೌರತ್ವದ ಮಾಹಿತಿ ಮುಚ್ಚಿಟ್ಟು ರೇಷನ್ ಕಾರ್ಡ್‌, ವೋಟರ್‌ ಐಡಿ ಪಡೆದಿದ್ದ ಪಾಕ್ ಮಹಿಳೆ, ಪುತ್ರನ ಬಂಧನ

ಚಿಕ್ಕಬಳ್ಳಾಪುರ : ತನ್ನ ಪಾಕಿಸ್ತಾನಿ ಪೌರತ್ವದ ಮಾಹಿತಿಯನ್ನು ಮುಚ್ಚಿಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಚೀಟಿ (ರೇಷನ್ ಕಾರ್ಡ್) ಹಾಗೂ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಪಡೆದ ಆರೋಪದಡಿ ಪಾಕಿಸ್ತಾನ ಮೂಲದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಫರಾ ನಾಜ್ ಹಾಗೂ ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ … Continued

ಯುವತಿಯ ಹೆಣಕ್ಕೆ ತಾಳಿ ಕಟ್ಟಿ ಮದುವೆಯಾದ ಯುವಕ…!

ಗಿರೀದಿಹ್ (ಜಾರ್ಖಂಡ್) : ಗಿರೀದಿಹ್ (ಜಾರ್ಖಂಡ್): ಜಾರ್ಖಂಡ್‌ನ ಗಿರೀದಿಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳ ನಿಗೂಢ ಸಾವಿನ ಪ್ರಕರಣವೊಂದು ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ತಿರುವು ಪಡೆದುಕೊಂಡಿದೆ. ಯುವತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಯುವಕನೇ, ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಬಂದು, ಆಕೆಯ ಮೃತದೇಹಕ್ಕೆ ಶಾಸ್ತ್ರೋಕ್ತವಾಗಿ ಸಿಂಧೂರವಿಟ್ಟು, ಮದುವೆ ವಿಧಿವಿಧಾನಗಳನ್ನು ಪೂರೈಸಿ ತಾಳಿಕಟ್ಟಿ ಮದುವೆಯಾಗಿದ್ದಾನೆ. ನಂತರ ಚಿತೆಗೆ … Continued

ಜೊಯಿಡಾ ; ವೃದ್ಧೆ ಮೇಲೆ ಚಿರತೆ ದಾಳಿ

ಕಾರವಾರ : ಮುಂಜಾನೆ ಶೌಚಕ್ಕೆಂದು ಹೊರಬಂದ ವೃದ್ಧೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪಣಸೋಲಿ ವಲಯದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. 70 ವರ್ಷದ ವೃದ್ಧೆ ಸುಶೀಲಾ ದೇಸಾಯಿ ಪ್ರತಿರೋಧ ತೋರಿ ಪಾರಾಗಿ ಬಂದಿದ್ದಾರೆ ಎಂದು ಹೇಳಲಾಗಿದೆ. ಪಣಸೋಲಿ ವಲಯದ ಅವುರ್ಲಿ ದಾಬೆ ಗ್ರಾಮದ ನಿವಾಸಿ ಸುಶೀಲಾ … Continued

ಬೆಂಗಳೂರು : ಪ್ರೇಮ ಪ್ರಸ್ತಾವನೆ ನಿರಾಕರಿಸಿದ ಯುವತಿ ಮೇಲೆ ನಡು ರಸ್ತೆಯಲ್ಲೇ ಹಲ್ಲೆ-ದೌರ್ಜನ್ಯ

ಬೆಂಗಳೂರು: ತನ್ನನ್ನು ಪ್ರೀತಿಸು ಎಂದು ಒತ್ತಡ ಹೇರಿದರೂ ಅದನ್ನು ನಿರಾಕರಿಸಿದ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ನಡುರಸ್ತೆಯಲ್ಲೇ ಹಲ್ಲೆ ನಡೆಸಿ, ಕಿರುಕುಳ ನೀಡಿದ ಆಘಾತಕಾರಿ ಘಟನೆ ರಾಜಧಾನಿಯ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಡಿಸೆಂಬರ್ 22ರಂದು ಮಧ್ಯಾಹ್ನ ಸುಮಾರು 3:20ರ ಸುಮಾರಿಗೆ ಉಲ್ಲಾಳ ಮುಖ್ಯರಸ್ತೆಯ ಜ್ಞಾನಜ್ಯೋತಿ ನಗರದ ಬಳಿಯ ಖಾಸಗಿ ಪಿಜಿ (PG) … Continued

ಸ್ನೇಹಿತರ ಜೊತೆ ಪಾರ್ಟಿ: ಪೊಲೀಸರು ಬಂದಿದ್ದಕ್ಕೆ ಹೆದರಿ ತಪ್ಪಿಸಿಕೊಳ್ಳುವಾಗ ಬಾಲ್ಕನಿಯಿಂದ ಬಿದ್ದು ಯುವತಿಗೆ ಗಾಯ

ಬೆಂಗಳೂರು: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಹೋಟೆಲ್‌ವೊಂದರ ಬಾಲ್ಕನಿಯಿಂದ ಕೆಳಗೆ ಇಳಿಯಲು ಡ್ರೈನ್‌ಪೈಪ್ (ಕೊಳಾಯಿ) ಬಳಸಲು ಯತ್ನಿಸಿದ 21 ವರ್ಷದ ಯುವತಿಯೊಬ್ಬಳು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ. ಪಾರ್ಟಿಯ ಗದ್ದಲದ ಕುರಿತು ದೂರು ಬಂದ ನಂತರ ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿದ್ದರಿಂದ ಆತಂಕಗೊಂಡ ಯುವತಿ ತಪ್ಪಿಸಿಕೊಳ್ಳಲು ಈ ಪ್ರಯತ್ನ ಮಾಡಿದ್ದಳು ಎನ್ನಲಾಗಿದೆ. … Continued

ಗೋಕರ್ಣ : ಕುಡ್ಲೇ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ (Kudle Beach) ಸೋಮವಾರ ಸಮುದ್ರದಲ್ಲಿ ಮುಳುಗಿತ್ತಿದ್ದ ವಿದೇಶಿ ಮಹಿಳೆಯನ್ನು (Woman) ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಲಾದ ಮಹಿಳೆಯನ್ನು ಕಜಕಿಸ್ತಾನ ಮೂಲದ (Kazakhstan) ಐದಾಲಿ (25) ಎಂದು ಗುರುತಿಸಲಾಗಿದೆ. ಕಜಕಿಸ್ತಾನ ಮೂಲದ ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಮಹಿಳೆ ಸಮುದ್ರದ ಅಲೆಗೆ … Continued

ವೀಡಿಯೊಗಳು…| ಬೆಂಗಳೂರು : ಬನ್ನೇರುಘಟ್ಟದಲ್ಲಿ ಸಫಾರಿ ಬಸ್ಸಿನ ಕಿಟಕಿ ಮೇಲೆ ಹಾರಿ ಪರಚಿದ ಚಿರತೆ ; ಮಹಿಳೆಗೆ ಗಾಯ

ಬೆಂಗಳೂರು : ಬೆಂಗಳೂರು ನಗರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (Bannerghatta National Park) ಚಿರತೆ ಸಫಾರಿ ವೇಳೆ ಚಿರತೆಯೊಂದು ಸಫಾರಿ ಬಸ್ಸಿನ ಕಿಟಕಿಯ ಜಾಲರಿಯ ಮೂಲಕ ದಾಳಿ ಮಾಡಲು ಪ್ರಯತ್ನಿಸಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 50 ವರ್ಷದ ಮಹಿಳೆ ವಹೀದಾ ಬಾನು ಎಂಬವರಿಗೆ ಗಾಯಗಳಾಗಿದ್ದು, ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ … Continued