ವಿಡಿಯೊಗಳು…: ಭೀಕರ ಬಿಸಿಗಾಳಿಗೆ ಕರಗಿದ ರಸ್ತೆಗಳು, ಬಾಗಿದ ರೈಲು ಹಳಿಗಳು ; ನೂರಾರು ಸಾವು : ತತ್ತರಿಸಿದ ಯುರೋಪ್

ಲಂಡನ್: ಯುರೋಪ್ ಖಂಡವು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಭೀಕರವಾದ ಬಿಸಿಗಾಳಿಗೆ (Heatwave ತತ್ತರಿಸಿದೆ. ಸೂರ್ಯನ ಪ್ರಖರ ಶಾಖಕ್ಕೆ ರಸ್ತೆಗಳು ಕರಗುತ್ತಿದ್ದು, ಟ್ರ್ಯಾಮ್ ರೈಲುಗಳ ಹಳಿಗಳು ಬಾಗುತ್ತಿವೆ. ವಿಪರೀತ ಶಾಖದ ಹಿನ್ನೆಲೆಯಲ್ಲಿ ಸಾವಿರಾರು ಜನ ಆಸ್ಪತ್ರೆ ಸೇರುತ್ತಿದ್ದಾರೆ. ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿಯುತ್ತಿರುವ ತಾಪಮಾನವು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ 40°C ಗಡಿಯನ್ನು ದಾಟಿದೆ. … Continued

ರಾತ್ರಿ ಪಾಳಿಯಿಂದ ಬೇಸತ್ತು 10 ರೋಗಿಗಳನ್ನು ಹತ್ಯೆ ಮಾಡಿದ ನರ್ಸ್…!

ಆಖೆನ್ (ಜರ್ಮನಿ): ರೋಗಿಗಳನ್ನು ನೋಡಿಕೊಳ್ಳುವ ಕೆಲಸವನ್ನು ಮಾಡಲು ಇಷ್ಟವಿಲ್ಲದ ಕಾರಣಕ್ಕೆ ವೃದ್ಧ ರೋಗಿಗಳನ್ನು ಹತ್ಯೆ ಮಾಡಿದ ಜರ್ಮನ್ ನರ್ಸ್ ಒಬ್ಬರಿಗೆ ಪಶ್ಚಿಮ ಜರ್ಮನಿಯ ಆಖೆನ್ ನಗರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 44 ವರ್ಷ ವಯಸ್ಸಿನ ಈ ಆರೋಪಿಯು ತಾನು ನೋಡಿಕೊಳ್ಳಬೇಕಿದ್ದ ರೋಗಿಗಳಿಗೆ ಮಾರಕ ಇಂಜೆಕ್ಷನ್‌ಗಳನ್ನು ನೀಡುವ ಮೂಲಕ 10 ಮಂದಿಯನ್ನು ಕೊಲೆಗೈದಿದ್ದಾನೆ ಹಾಗೂ ಇನ್ನುಳಿದ … Continued

ಆಲ್ಬೇನಿಯಾ ಎಐ (AI)ಯ ಮಾನವರೂಪಿ ಸಚಿವೆ ‘ಡಯೆಲ್ಲಾ’ 83 ‘ಮಕ್ಕಳ ಗರ್ಭಿಣಿ…! ಪ್ರಧಾನಿಯ ಅಚ್ಚರಿ ಘೋಷಣೆ

ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, … Continued

ಐವಿಎಫ್‌ (IVF) ಇಲ್ಲದೆ 66ನೇ ವರ್ಷದಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಹಿಳೆ…! ಅವಳ ಹಿರಿಯ ಮಗನ ವಯಸ್ಸು 46 ವರ್ಷ…!!

66 ವರ್ಷದ ಜರ್ಮನ್ ಮಹಿಳೆ ತನ್ನ ಹತ್ತನೇ ಮಗುವಿಗೆ ಜನ್ಮ ನೀಡಿದ್ದಾಳೆ..! ಈಗಾಗಲೇ ಒಂಬತ್ತು ಮಕ್ಕಳ ತಾಯಿಯಾಗಿರುವ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಕಳೆದ ವಾರ, ಸಿಸೇರಿಯನ್ ಮೂಲಕ ಮಗ ಫಿಲಿಪ್‌ಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಮಗು 7 ಪೌಂಡ್, 13 ಔನ್ಸ್ ತೂಕ ಹೊಂದಿದೆ. ತನ್ನ ವಯಸ್ಸಿನ ಕಾರಣದಿಂದ ಸ್ವಾಭಾವಿಕ … Continued

ವೀಡಿಯೊ ಬಿಡುಗಡೆ ಮಾಡಿದ ಬೆನ್ನಲ್ಲೇ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ…!

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮೇ 31ರಂದು ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನದ ಟಿಕೆಟ್‌ ಬುಕ್‌ ಆಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ವಿಚಾರಣೆಗೆ ಮೇ 31ರಂದು ಹಾಜರಾಗುವುದಾಗಿ ತಿಳಿಸಲು ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್‌ ರೇವಣ್ಣ, … Continued

ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

ನವದೆಹಲಿ: ಅಶ್ಲೀಲ ವಿಡಿಯೋಗಳು ಬಹಿರಂಗವಾದ ಬೆನ್ನಲ್ಲೇ ವಿದೇಶಕ್ಕೆ ಹಾರಿರುವ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಗೆ ಪ್ರಯಾಣಿಸಲು ಯಾವುದೇ ರಾಜಕೀಯ ಅನುಮತಿ ಕೋರಿಲ್ಲ ಅಥವಾ ಅವರಿಗೆ ಅನುಮತಿ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಗುರುವಾರ ಸ್ಪಷ್ಟಪಡಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗುವಂತೆ ಹೇಳಿದ್ಯಾರು? ವೀಸಾ ಇಲ್ಲದೇ … Continued