ಮೀನುಗಾರನ ತಲೆಕೆಳಗಾಗಿ ನೇತು ಹಾಕಿ ಹಲ್ಲೆ : 6 ಜನರ ಬಂಧನ

posted in: ರಾಜ್ಯ | 0

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ … Continued

ಪ್ರಿಯಕರನ ಜೊತೆ ಸೇರಿ ಸೋದರನ ಕೊಲೆ ಪ್ರಕರಣ: ಕೋರ್ಟಿಗೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

posted in: ರಾಜ್ಯ | 0

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ರುಂಡ ಮುಂಡ ಬೇರ್ಡಿಸಿ ಬೇರೆಬೇರೆ ಜಾಗದಲ್ಲಿ ಎಸೆದ ಪ್ರಕರಣದಲ್ಲಿ ನಟಿ ಶನಯಾ ಕಾಟವೇ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೊಲೆಯಾದ … Continued

ಸಿಡಿ ಯುವತಿ ವಿಡಿಯೋ ರೆಕಾರ್ಡ್‌ ಮಾಡಿ ಹರಿಬಿಟ್ಟ ಪೊಲೀಸರ ಮೇಲೆ ಕ್ರಮಕ್ಕೆ ವಕೀಲ ಜಗದೀಶ ಒತ್ತಾಯ

posted in: ರಾಜ್ಯ | 0

ಬೆಂಗಳೂರು: ಸಿಡಿ ಪ್ರಕರಣದಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ ಯುವತಿ ವಾಪಸ್‌ ತೆರಳುವ ಸಂದರ್ಭದಲ್ಲಿ ಹಿಂಬದಿಯಿಂದ ಚಿತ್ರೀಕರಣ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲರಾದ ಜಗದೀಶ್ ಒತ್ತಾಯಿಸಿದ್ದಾರೆ. ಬುಧವಾರ ಬೆಳಿಗ್ಗೆ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿರುವ ಅವರು, ಹೇಳಿಕೆ ದಾಖಲಿಸಿಕೊಳ್ಳುವಾಗ ನ್ಯಾಯಾಧೀರು ಹಾಗೂ ಸಂತ್ರಸ್ತೆ ಮಾತ್ರ ಇದ್ದರು. ಹೊರಗಡೆ ಪೊಲೀಸರು ಹಾಗೂ … Continued

ಹೆಲ್ಮೆಟ್ ಧರಿಸದ ಕಾರಣಕ್ಕೆ 9 ತಿಂಗಳ ಗರ್ಭಿಣಿ 3 ಕಿಮೀ ನಡೆಯುವಂತೆ ಮಾಡಿದ ಪೊಲೀಸರು…!

ಬರಿಪಾಡಾ: ಒಡಿಶಾದಲ್ಲಿ ಪೊಲೀಸ್ ಸಂವೇದನಾಶೀಲತೆಯ ಆಘಾತಕಾರಿ ಘಟನೆಯಲ್ಲಿ, ಒಂಭತ್ತು ತಿಂಗಳ ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ. ಹೆಲ್ಮೆಟ್ ಇಲ್ಲದೆ ಪಿಲಿಯನ್ ಸವಾರಿ ಮಾಡುತ್ತಿದ್ದಾಳೆ ಎಂದು ದಂಡ ಪಾವತಿಸಲು ಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಕಾರಣ ಗರ್ಭಿಣಿಯೂ ಮೂರು ಕಿಮೀ ನಡೆಯಬೇಕಾಯಿತು. ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ … Continued

ಆಂಟಿಲಿಯಾ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಹಿರೆನ್‌ ಮರಣೋತ್ತರ ಪರೀಕ್ಷೆ ಬಹಿರಂಗ ಮಾಡಿದ ನಂತರವೇ ಶವ ಪಡೆಯುವುದಾಗಿ ಹೇಳಿದ ಕುಟುಂಬ

ಮುಖೇಶ್ ಅಂಬಾನಿ ಮನೆಯ ಹೊರಗೆ ಸ್ಫೋಟಕಗಳಿಂದ ತುಂಬಿ ನಿಂತಿದ್ದ ಎಸ್‌ಯುವಿ ಕಾರ್ ಸ್ಕಾರ್ಪಿಯೋ ಮಾಲೀಕರಾದ ಮನ್ಸುಖ್ ಹಿರೆನ್ ಅವರ ಕುಟುಂಬ ಸದಸ್ಯರು ಅವರ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಓಪ್‌ ಇಂಡಿಯಾ ವರದಿ ಮಾಡಿದೆ. ಅದರ ಪ್ರಕಾರ, ಪೊಲೀಸರು ಮತ್ತು ಆಡಳಿತವು ಅವರ ಮರಣೋತ್ತರ ವರದಿಯನ್ನು ಸಾರ್ವಜನಿಕಗೊಳಿಸಿದ ನಂತರವೇ ತಾವು ಅವರ ಶವವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ. … Continued

ಛತ್ತೀಸ್‌ಗಡ:೧೩ ಮಂಗಳಮುಖಿಯರು ಪೊಲೀಸ್‌ ಕಾನ್‌ಸ್ಲ್ಟೇಬಲ್‌‌ಗಳಾಗಿ ನೇಮಕ

ಸಮುದಾಯದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರ ಬಗ್ಗೆ ಸಮಾಜದ ಗ್ರಹಿಕೆ ಬದಲಿಸುವ ಪ್ರಯತ್ನದಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ಪೊಲೀಸ್‌ ಇಲಾಖೆ 13  ಮಂಗಳಮುಖಿಯರು  (ತೃತೀಯಲಿಂಗಿಗಳು) ಕಾನ್‌ಸ್ಟೆಬಲ್‌ಗಳಾಗಿ ನೇಮಿಸಿಕೊಂಡಿದೆ. ಮಂಗಳಮುಖಿಯರನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವುದು ಇದೇ ಮೊದಲು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹದಿಮೂರು ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಕಾನ್‌ಸ್ಟೆಬಲ್‌ಗಳಾಗಿ ನೇಮಕ ಮಾಡಲಾಗಿದೆ. … Continued

ಗಟಾರ ಸ್ವಚ್ಛಗೊಳಿಸುವುದು ನಿನ್ನ ಕೆಲಸ, ಪ್ರತಿಭಟಿಸುವ ಹಕ್ಕು ಯಾರು ಕೊಟ್ಟರು ನಿನಗೆ?

ನವ ದೆಹಲಿ: ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ಪೊಲೀಸ್ ವಶದಲ್ಲಿದ್ದಾಗ ತಮಗೆ ನೀಡಲಾದ ಚಿತ್ರ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ. ಹತ್ಯೆಯ ಆರೋಪ, ಕೈಗಾರಿಕಾ ಯುನಿಟ್ ನಲ್ಲಿ ಘೆರಾವ್ ಹಾಕುವುದು ಹಾಗೂ ಕಂಪನಿಗಳಿಂದ ಹಣಕ್ಕಾಗಿ ಬೇಡಿಕೆ ಇಡುವುದೂ ಸೇರಿದಂತೆ ಹಲವು ಆರೋಪಗಳನ್ನೆದುರಿಸಿ ಪೊಲೀಸ್ ವಶದಲ್ಲಿದ್ದ 24 ವರ್ಷದ ನೊದೀಪ್ ಕೌರ್ಗೆ ಕೆಲವೇ ದಿನಗಳ ಹಿಂದೆ ಪಂಜಾಬ್, … Continued

ಟೂಲ್‌ಕಿಟ್‌ ಆರೋಪಿಗಳಿಗೆ ಭಾರತದ ಘನತೆ ಹಾಳು ಮಾಡುವ ಉದ್ದೇಶವಿತ್ತು: ದೆಹಲಿ ಪೊಲೀಸ್‌

ದೆಹಲಿ: ಟೂಲ್‌ಕಿಟ್‌ ರಚನೆ ಮಾಡಿದ ದಿಶಾ ರವಿ, ನಿಕಿತಾ ಜೇಕಬ್‌ ಹಾಗೂ ಶಾಂತನು ಅವರಿಗೆ ಭಾರತದ ಘನತೆಗೆ ಚ್ಯುತಿ ತರುವ ಉದ್ದೇಶವಿತ್ತು ಎಂದು ದೆಹಲಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ, ನಿಕಿತಾ ಹಾಗೂ ಶಾಂತನು ಪಾಲ್ಗೊಳ್ಳುವಿಕೆ ದೃಢಪಟ್ಟಿದೆ. ಭಾರತದ ಚಿತ್ರಣವನ್ನು ಕಳಂಕಿತಗೊಳಿಸುವುದು ಅವರ ಉದ್ದೇಶವಾಗಿತ್ತು. ಟೂಲ್‌ಕಿಟ್‌ ಹರಡಲು ದಿಶಾ ಅವರು ರಚಿಸಿದ ವ್ಯಾಟ್ಸಪ್‌ … Continued

ಮಾರ್ಗ ಬದಲಾಯಿಸಿದ ಬಿಜೆಪಿ ಪರಿವರ್ತನ ಯಾತ್ರೆ

ಕೋಲ್ಕತ್ತ: ಪೊಲೀಸರ ಆದೇಶದನ್ವಯ ಮುರ್ಶಿದಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನ ಯಾತ್ರೆಯ ಮಾರ್ಗವನ್ನು ಬದಲಾಯಿಸಲಾಯಿತು. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಯಾತ್ರೆ ತೆರಳಲು ಪೊಲೀಸರು ಅನುಮತಿ ನೀಡದಿದ್ದರಿಂದ ಪರ್ಯಾಯ ಮಾರ್ಗದಲ್ಲಿ ಯಾತ್ರೆ ನಡೆಯಿತು. ಯಾತ್ರೆ ತೆರಳುವ ಮಾರ್ಗವನ್ನು ಮುಂಚಿತವಾಗಿ ತಿಳಿಸಿದ್ದರು. ಆದರೆ ಆಗ ಆಗ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ಆದರೆ ಪೊಲೀಸರು ಮಾರ್ಗ ಬದಲಾಯಿಸುವಂತೆ ಸೂಚಿಸಿದರು. ಪೊಲೀಸರ ವರ್ತನೆ … Continued