ಶಿಕ್ಷಕಿ ಕೆನ್ನೆಗೆ ಹೊಡೆದ ಬಳಿಕ 6 ವರ್ಷದ ಬಾಲಕ ಕುಸಿದುಬಿದ್ದು ಸಾವು

ವಿಶಾಖಪಟ್ಟಣಂ: ಹೋಂವರ್ಕ್ ಪೂರ್ಣಗೊಳಿಸದ ಕಾರಣ ಶಿಕ್ಷಕಿಯೊಬ್ಬರು ಹೊಡೆದರೆನ್ನಲಾದ ಘಟನೆಯ ಬಳಿಕ ಆರು ವರ್ಷದ ಬಾಲಕ ಕುಸಿದುಬಿದ್ದು ಮೃತಪಟ್ಟ ಘಟನೆ ವಿಶಾಖಪಟ್ಟಣಂನ ಒನ್‌ಟೌನ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಣಯ ತೇಜ ಎಂದು ಗುರುತಿಸಲಾಗಿದೆ.ಕುಟುಂಬದ ಆರೋಪದ ಪ್ರಕಾರ, ಹೋಂವರ್ಕ್ ಮಾಡಿರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ ಬಾಲಕನ ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಭಯ ಮತ್ತು ಆಘಾತದಿಂದ … Continued

ಅಳ್ನಾವರ : ಶಾಲಾ ವಾಹನ ಗುದ್ದಿ 2 ವರ್ಷದ ಮಗು ಸಾವು

ಧಾರವಾಡ : ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ವಾಹನ ಡಿಕ್ಕಿ ಹೊಡೆದು ಸುಮಾರು ಎರಡು ವರ್ಷದ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ ಎಂದುವರದಿಯಾಗಿದೆ. ಮೃತ ಮಗುವನ್ನು ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ಶಾಲಾ ವಾಹನ ಹುಲಿಕೇರಿ … Continued

ಬೆಂಗಳೂರಿನಲ್ಲಿ ಮನಕಲಕುವ ಘಟನೆ : ನೀರಿನ ಬಕೆಟ್‌ನಲ್ಲಿ ಬಿದ್ದು11 ತಿಂಗಳ ಮಗು ಸಾವು ; ಮನನೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಹೃದಯವಿದ್ರಕ ಘಟನೆಯೊಂದು ನಡೆದಿದೆ. 11 ತಿಂಗಳ ಹಸುಗೂಸು ಆಕಸ್ಮಿಕವಾಗಿ ನೀರಿನ ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ, ಮಗುವಿನ ಸಾವಿಗೆ ತಾನೇ ಕಾರಣ ಎಂದು ನೊಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ಮೃತ ತಾಯಿ ಪ್ರತಿಭಾ (29) ಎಂದು ಹೇಳಲಾಗಿದೆ. … Continued

ಹುಣಸೂರು : ದಾಸವಾಳ ಹೂವು ನುಂಗಿ ಆರೂವರೆ ತಿಂಗಳ ಮಗು ಸಾವು

ಮೈಸೂರು : ಆಟವಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಒಣಗಿದ ದಾಸವಾಳದ ಹೂವನ್ನು ನುಂಗಿದ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ದೊಡ್ಡಹೆಜ್ಜೂರಿನ ಸುದರ್ಶನ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಮಗು … Continued

ವೀಡಿಯೊ | ಶಿರಸಿ : ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿಕೊಂಡಿದ್ದ ಬಾಲೆ; ಕಾಪಾಡಿದ ಆಪದ್ಬಾಂಧವ

ಶಿರಸಿ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮ ಪವಾಡಸದೃಶರೀತಿಯಲ್ಲಿ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬರು ತೋರಿದ ಸಮಯ ಪ್ರಜ್ಞೆಯಿಂದ ಮಗು ಅಪಾಯದಿಂದ ಪಾರಾಗಿದೆ. ಪ್ರಾಣದ ಹಂಗು ತೊರೆದು ಬಾವಿಗಿಳಿದ ಪಯ್ಯು ಚವಟಿ ಎಂಬವರು ಮಗುವನ್ನು ಮೇಲಕ್ಕೆತ್ತುವ ಮೂಲಕ ಮಗುವಿಗೆ ಮರುಜನ್ಮ … Continued

ಉಸಿರಾಟದ ತೊಂದರೆಗೆ 1 ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್‌ ಕಂಡು ವೈದ್ಯರೇ ಶಾಕ್‌ !

ವಡೋದರಾ: ಹಸುಗೂಸುಗಳ ಬಗ್ಗೆ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ನೀಡುವ ಘಟನೆಯೊಂದು ವಡೋದರಾದಲ್ಲಿ ವರದಿಯಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆಂದು ಒಂದು ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಅದರ ಶ್ವಾಸಕೋಶದ ಎಕ್ಸರೇ ನೋಡಿ ವೈದ್ಯರೇ ದಿಗ್ಭ್ರಮೆಗೊಂಡಿದ್ದಾರೆ. ಆನಂದ ಜಿಲ್ಲೆಯ ಮಲ್ಸರ್ ಗ್ರಾಮದ ಒಂದು ವರ್ಷದ ಮಗು ಎಲ್‌ಇಡಿ (LED) ಬಲ್ಬ್ ಅನ್ನು ನುಂಗಿದ್ದು, ಇದರಿಂದಾಗಿ ಸುದೀರ್ಘ ಕಾಲ … Continued

ಬೆಂಗಳೂರು : ಮಗುವಿಗಾಗಿ ಪತ್ನಿಯನ್ನೇ ಕಿಡ್ನಾಪ್ ಮಾಡಿದ ಪತಿ…!

 ಬೆಂಗಳೂರು: ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಪಡೆಯುವ ಹಠಕ್ಕೆ ಬಿದ್ದ ಚಿತ್ರ ನಿರ್ಮಾಪಕನೊಬ್ಬ, ಪತ್ನಿಯನ್ನೇ (ಕನ್ನಡದ ಕಿರುತೆರೆ ಮತ್ತು ಚಲನಚಿತ್ರ ನಟಿ) ಅಪಹರಿಸಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ‘ವರ್ಧನ್ ಎಂಟರ್‌ಪ್ರೈಸಸ್’ ಮಾಲೀಕ ಹರ್ಷವರ್ಧನ್ ಈ ಪ್ರಕರಣದ ಮುಖ್ಯ ಆರೋಪಿ ಎಂದು ಹೇಳಲಾಗಿದೆ. ಹಾಸನ ಜಿಲ್ಲೆಯ ನಿವಾಸಿಯಾದ ಹರ್ಷವರ್ಧನ್ ಮತ್ತು ನಟಿ ಚೈತ್ರಾ … Continued

ಆಧುನಿಕ ಗಾಂಧಾರಿ…: 55ನೇ ವರ್ಷದಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ರಾಜಸ್ಥಾನದ ಮಹಿಳೆ…!

ಜೈಪುರ: ಅಪರೂಪದ ಹಾಗೂ ಅಸಮಾಮಾನ್ಯ ಘಟನೆಯೊಂದರಲ್ಲಿ, ಕವರರಾಮ ಕಲ್ಬೇಲಿಯಾ ಅವರ ಪತ್ನಿ 55 ವರ್ಷದ ರೇಖಾ ಕಲ್ಬೇಲಿಯಾ ಅವರು ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ…! ರಾಜಸ್ಥಾನದ ಉದಯಪುರ ಜಿಲ್ಲೆಯ ಜಾಡೋಲ್ ಬ್ಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಮ್ಮ 17 ನೇ ಮಗುವಿಗೆ ಜನ್ಮ ನೀಡಿರುವ ಅವರು, ಈಗ ದೇಶಾದ್ಯಂತ … Continued

‘ಹ್ಯಾಂಡ್‌ ರೈಟಿಂಗ್‌’ ಚೆನ್ನಾಗಿಲ್ಲವೆಂದು 8 ವರ್ಷದ ಬಾಲಕನ ಕೈ ಸುಟ್ಟ ಶಿಕ್ಷಕಿ…!

ಮುಂಬೈ: ಮಕ್ಕಳ ಮೇಲಿನ ದೌರ್ಜನ್ಯದ ಭಯಾನಕ ಪ್ರಕರಣವೊಂದರಲ್ಲಿ, ಮುಂಬೈನ ಮಲಾಡ್ ಪ್ರದೇಶದ ಖಾಸಗಿ ಟ್ಯೂಷನ್ ಶಿಕ್ಷಕಿಯೊಬ್ಬಳು ಕೈಬರಹ (handwriting) ಚೆನ್ನಾಗಿಲ್ಲವೆಂದು ಎಂಟು ವರ್ಷದ ಬಾಲಕನ ಕೈಯನ್ನು ಸುಟ್ಟ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾಳೆ. ರಾಜಶ್ರೀ ರಾಥೋಡ ಎಂದು ಗುರುತಿಸಲ್ಪಟ್ಟ ಆರೋಪಿ ಶಿಕ್ಷಕಿ ಶಿಕ್ಷೆಯ ಭಾಗವಾಗಿ ಉರಿಯುತ್ತಿರುವ ಮೇಣದಬತ್ತಿಯನ್ನು ಅಂಗೈ ಮೇಲೆ ಇಟ್ಟಿದ್ದರಿಂದ ಮಗುವಿನ ಕೈ ತೀವ್ರವಾಗಿ ಸುಟ್ಟುಹೋಗಿದೆ … Continued

ಬಾಲಕಿಗೆ ಝಡ್‌+ ಭದ್ರತೆ : ಪುಟ್ಟ ಹುಡುಗಿ ಶಾಲಾ ಬಸ್ಸಿನಿಂದ ಇಳಿದ ಕೂಡಲೇ ಮನೆಗೆ ಕರೆದೊಯ್ಯುವ ನಾಯಿಗಳ ಹಿಂಡು | ವೀಕ್ಷಿಸಿ

ಸ್ನೇಹದ ಹೃದಯಸ್ಪರ್ಶಿ ಪ್ರದರ್ಶನದಲ್ಲಿ, ಪುಟ್ಟ ಹುಡುಗಿ ಮತ್ತು ಬೀದಿ ನಾಯಿಗಳ ಗುಂಪಿನ ನಡುವಿನ ಬಾಂಧವ್ಯವನ್ನು ಪ್ರದರ್ಶಿಸುವ ವೀಡಿಯೊ ಇಂಟರ್ನೆಟ್‌ನ ಗಮನ ಸೆಳೆದಿದೆ. ಈ ಪುಟ್ಟ ಹುಡುಗಿ ಶಾಲಾ ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ಈ ಬೀದಿ ನಾಯಿಗಳು ಅವಳನ್ನು Z+ ಭದ್ರತೆಯಲ್ಲಿ ಮನೆಗೆ ಕರೆದೊಯ್ಯುತ್ತವೆ..! @_KajalKushwaha ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡ ಈ ದೃಶ್ಯವು ವೈರಲ್ ಆಗಿದೆ. ವೀಡಿಯೊ … Continued