ವಿಜಯಪುರ : ಬಾವಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆ, ತಂದೆಯೂ ನಾಪತ್ತೆ

ವಿಜಯಪುರ: ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರ (Vijayapura Tragedy) ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಇದೇ ವೇಳೆ ತಂದೆಯೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಬಾಲಕಿಯರನ್ನು ಸಾಕ್ಷಿ (15) ಮತ್ತು ರಕ್ಷಿತಾ (10) ಎಂದು ಗುರುತಿಸಲಾಗಿದೆ. ಇವರ … Continued

ವಿಡಿಯೋ | ಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!

ಮೊರ್ಬಿ (ಗುಜರಾತ್): ಗುಜರಾತಿನ ಮೊರ್ಬಿ ತಾಲ್ಲೂಕಿನ ವಿರ್ಪರ್ದಾ ಗ್ರಾಮದ ನಿಗೂಢ ಬಾವಿಯೊಂದು ಸಾರ್ವಜನಿಕರ ಗಮನ ಸೆಳೆದಿದೆ. ಇಲ್ಲಿನ ಕೃಷಿ ಜಮೀನೊಂದರಲ್ಲಿರುವ 18 ಅಡಿ ಆಳದ ತೆರೆದ ಬಾವಿಯಲ್ಲಿ ನೀರು ಸಮುದ್ರದ ಅಲೆಗಳಂತೆ ನೀರು ನಿರಂತರವಾಗಿ ಏರಿಳಿಯುತ್ತಿದೆ. ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ ಸುಮಾರು 3.00 ಗಂಟೆ ವೇಳೆಗೆ ಬಾವಿಯ ನೀರಿನಲ್ಲಿ ಮತ್ತೆ ಈ … Continued

ವೀಡಿಯೊ | ಶಿರಸಿ : ಬಾವಿಗೆ ಬಿದ್ದ 2 ವರ್ಷದ ಮಗು; ಪಂಪ್‌ಸೆಟ್‌ ಪೈಪು ಹಿಡಿಕೊಂಡಿದ್ದ ಬಾಲೆ; ಕಾಪಾಡಿದ ಆಪದ್ಬಾಂಧವ

ಶಿರಸಿ: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಕಂದಮ್ಮ ಪವಾಡಸದೃಶರೀತಿಯಲ್ಲಿ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬರು ತೋರಿದ ಸಮಯ ಪ್ರಜ್ಞೆಯಿಂದ ಮಗು ಅಪಾಯದಿಂದ ಪಾರಾಗಿದೆ. ಪ್ರಾಣದ ಹಂಗು ತೊರೆದು ಬಾವಿಗಿಳಿದ ಪಯ್ಯು ಚವಟಿ ಎಂಬವರು ಮಗುವನ್ನು ಮೇಲಕ್ಕೆತ್ತುವ ಮೂಲಕ ಮಗುವಿಗೆ ಮರುಜನ್ಮ … Continued

ವೀಡಿಯೊ..| ಶಿರಸಿ ; ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೆರೆಕೊಪ್ಪದಲ್ಲಿ ತಡರಾತ್ರಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ದೀರ್ಘ ಕಾರ್ಯಾಚರಣೆಯ ನಂತರ ರಕ್ಷಿಸಿದ್ದಾರೆ. ಸ್ಥಳೀಯ ಸುರೇಶ ಹೆಗಡೆ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆ ಕಂಡ ಮನೆಯವರು ಒಂದು ಕ್ಷಣ ಗಾಬರಿಗೊಂಡಿದ್ದರು. ನಂತರ ಈ ವಿಷಯವನ್ನು ಅರಣ್ಯ ಇಲಾಖೆಯವರ ಗಮನಕ್ಕೆ … Continued