ನೇಪಾಳ ಪ್ರವಾಹ ದುರಂತ : 11 ದಿನಗಳ ಬಳಿಕ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ ಇಬ್ಬರ ರಕ್ಷಣೆ

ಕಠ್ಮಂಡು: ಆಗಸ್ಟ್ 26ರಂದು ನೇಪಾಳವನ್ನು ತತ್ತರಗೊಳಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ 11ನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಎರಡು ಇಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಪ್ರವಾಹದ ಅವಶೇಷಗಳಡಿ 11 ದಿನಗಳ ಕಾಲ ಸಿಲುಕಿದ್ದ 64 ವರ್ಷದ ಮಹಿಳೆಯೊಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಮತ್ತೊಂದೆಡೆ ಪ್ರವಾಹದಿಂದ ಹಾನಿಗೊಳಗಾದ ಮೇಲ್ಟ್ರಿಶೂಲಿ-1 (216 ಮೆಗಾವಾಟ್) ಜಲವಿದ್ಯುತ್ ಯೋಜನೆಯ ಎಡಿಟ್-4 ಸುರಂಗದಲ್ಲಿ ಸಿಲುಕಿದ್ದ ಚೀನಾ … Continued

ವಿಡಿಯೊ | ನೇಪಾಳ ದುರಂತ : 9 ದಿನಗಳ ಬಳಿಕ ಸುರಂಗದಿಂದ ಇಬ್ಬರ ಜೀವಂತ ರಕ್ಷಣೆ; ಒಳಗಿನಿಂದ ಕೇಳಿಬಂದ ಧ್ವನಿಗಳು

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ಒಂಬತ್ತು ದಿನಗಳ ಬಳಿಕ, ಅವಶೇಷಗಳಡಿ ಹೂತುಹೋಗಿದ್ದ ಜಲವಿದ್ಯುತ್ ಯೋಜನೆಯ ಸುರಂಗದಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆದಿದ್ದು, ಇನ್ನೂ ಹಲವರು ಸುರಂಗಗಳಲ್ಲಿ ಸಿಲುಕಿರುವ ಸಾಧ್ಯತೆಯ ನಡುವೆ ಹೊಸ ಆಶಾಕಿರಣ ಮೂಡಿಸಿದೆ. ತ್ರಿಶೂಲಿ-3ಎ ಸುರಂಗದೊಳಗಿಂದ ಇನ್ನೂ ಕೆಲವರ ಧ್ವನಿಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತ್ರಿಶೂಲಿ ಪ್ರದೇಶದಲ್ಲಿರುವ … Continued

ಜೀವಂತವಾಗಿ ಮಣ್ಣಿನಡಿ ಹೂತುಹಾಕಿದ್ದ ನವಜಾತ ಶಿಶುವನ್ನು ದೇವದೂತರಂತೆ ಬಂದು ಕಾಪಾಡಿದ ಮಕ್ಕಳು…!

ಜನ್ಮ ನೀಡಿದವರೇ ಮಗುವನ್ನು ಜೀವಂತವಾಗಿ ಹೂತು ಹಾಕಿ ಜೀವ ತೆಗೆಯಲು ಮುಂದಾದರೆ, ದೇವದೂತರಂತೆ ಬಂದ ಶಾಲಾ ಮಕ್ಕಳು ಆ ಹಸುಗೂಸಿಗೆ ಮರುಜನ್ಮ ನೀಡಿದ್ದಾರೆ. ಮೇಘಾಲಯದ ರಿ-ಭೋಯ್ ಜಿಲ್ಲೆಯ ಮಾವ್ಹಾಟಿ ಎಂಬಲ್ಲಿ ನಡೆದ ಈ ಘಟನೆ ಮನುಷ್ಯತ್ವದ ಎರಡು ಮುಖಗಳನ್ನೂ ಅನಾವರಣಗೊಳಿಸಿದೆ. ಅಂದು ಎಂದಿನಂತೆ ಶಾಲಾ ಮಕ್ಕಳು ಆ ಹಾದಿಯಲ್ಲಿ ನಡೆದು ಹೋಗುತ್ತಿದ್ದರು. ಆದರೆ, ಆ ದಿನ … Continued

ಮೈ ಜುಂ ಎನ್ನುವ ವೀಡಿಯೊ | ಪೊಲೀಸರ ಸಮಯ ಪ್ರಜ್ಞೆ : ಸೇತುವೆಯಿಂದ ಕೆಳಕ್ಕೆ ಜಿಗಿಯುತ್ತಿದ್ದ 14 ವರ್ಷದ ಬಾಲಕಿ ರಕ್ಷಿಸಿದ ವ್ಯಕ್ತಿ

ದಿಯೋರಿಯಾ: ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಪೊಲೀಸರ ಸಮಯಪ್ರಜ್ಞೆ ಮತ್ತು ಜಾಗರೂಕತೆಯಿಂದ 14 ವರ್ಷದ ಬಾಲಕಿಯೊಬ್ಬಳು ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಸೇತುವೆಯಿಂದ ನದಿಗೆ ಹಾರಲು ಯತ್ನಿಸುತ್ತಿದ್ದ ಬಾಲಕಿಯನ್ನು ಗಸ್ತು ತಿರುಗುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಿಸಿ ರಕ್ಷಿಸಿದ್ದಾರೆ. ಈ ಘಟನೆ ರಾಂಪುರ ಕಾರ್ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳವಾರ ಸಂಜೆ ಸುಮಾರು 4:30ರ ಸುಮಾರಿಗೆ, ಸಿಒ … Continued

ವೀಡಿಯೊ…| ಗೋಕರ್ಣ ಕಡಲತೀರದಲ್ಲಿ ಡಾಲ್ಫಿನ್‌ ರಕ್ಷಣೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ನಡೆದ ಅಪರೂಪದ ವಿದ್ಯಮಾನದಲ್ಲಿ, ಇಬ್ಬರು ಯುವಕರು ದಡಕ್ಕೆ ಕೊಚ್ಚಿ ಬಂದಿದ್ದ ಡಾಲ್ಫಿನ್‌ನ ಜೀವವನ್ನು ಉಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಗೋಕರ್ಣದ ಕರಾವಳಿಯಲ್ಲಿರುವ ಸೂರ್ಯ ರೆಸಾರ್ಟ್ ಬಳಿ ಕಡಲತೀರಕ್ಕೆ , ಸುಮಾರು ಐದರಿಂದ ಆರು ಅಡಿ ಉದ್ದದ ಡಾಲ್ಫಿನ್ ಮೀನು ಬಂದಿತ್ತು, ಅದು ನೀರಿನ … Continued

ಜಾರ್ಖಂಡದಲ್ಲಿ 40 ಲಕ್ಷ ರೂ.ಗೆ ಖರೀದಿಸಿದ್ದ ಆನೆ ಕಳುವು ಮಾಡಿ ಬಿಹಾರದಲ್ಲಿ 27 ಲಕ್ಷ ರೂ.ಗೆ ಮಾರಾಟ…!

ಮೇದಿನಿನಗರ (ಜಾರ್ಖಂಡ್): ಜಾರ್ಖಂಡದ ಪಲಮು ಜಿಲ್ಲೆಯಿಂದ ಕದ್ದು 27 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು ಎನ್ನಲಾದ ಹೆಣ್ಣು ಆನೆಯನ್ನು ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರಕುಮಾರ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ಪಲಮು ಜಿಲ್ಲೆಯ ಚುಕುರ್ ಪ್ರದೇಶದಿಂದ ‘ಜಯಮತಿ’ ಎಂಬ … Continued

ವೀಡಿಯೊ..| ಶಿರಸಿ ; ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೆರೆಕೊಪ್ಪದಲ್ಲಿ ತಡರಾತ್ರಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ದೀರ್ಘ ಕಾರ್ಯಾಚರಣೆಯ ನಂತರ ರಕ್ಷಿಸಿದ್ದಾರೆ. ಸ್ಥಳೀಯ ಸುರೇಶ ಹೆಗಡೆ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆ ಕಂಡ ಮನೆಯವರು ಒಂದು ಕ್ಷಣ ಗಾಬರಿಗೊಂಡಿದ್ದರು. ನಂತರ ಈ ವಿಷಯವನ್ನು ಅರಣ್ಯ ಇಲಾಖೆಯವರ ಗಮನಕ್ಕೆ … Continued

ವೀಡಿಯೊ..| ಭಟ್ಕಳ : ಮುರುಡೇಶ್ವರ ನೇತ್ರಾಣಿ ಬಳಿ ಪರ್ಷಿಯನ್ ಬೋಟ್ ಮುಳುಗಡೆ ; 25 ಮೀನುಗಾರರ ರಕ್ಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿಪರ್ಷಿಯನ್ ಬೋಟ್‌ ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ 25 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಈ ಬೋಟ್‌ ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ಮುಳುಗುತ್ತಿದ್ದ ವೇಳೆ ತಕ್ಷಣವೇ ಕರಾವಳಿ ಕಾವಲುಪಡೆಯ ಕಂಟ್ರೋಲ್ ರೂಮ್‌ಗೆ ಕರೆ ಮಾಡಲಾಯಿತು.  … Continued

ವೀಡಿಯೊಗಳು…| ಕಟ್ಟಡ ಕುಸಿಯುವ ಕೆಲವೇ ಕ್ಷಣಗಳ ಮೊದಲು 22 ಸಿಆರ್‌ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿದ ಸೇನೆ ಹೆಲಿಕಾಪ್ಟರ್…!

ಚಂಡಿಗಢ : ಬುಧವಾರ ಬೆಳಿಗ್ಗೆ ನಡೆದ ಕ್ಷಿಪ್ರ ಮತ್ತು ದಿಟ್ಟ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯ ಹೆಲಿಕಾಪ್ಟರ್‌ಗಳು ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಗಡಿಯಲ್ಲಿರುವ ಪಂಜಾಬಿನ ಮಾಧೋಪುರ ಹೆಡ್‌ವರ್ಕ್ಸ್ ಬಳಿ ಸಿಲುಕಿಕೊಂಡಿದ್ದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ರಕ್ಷಣೆ ಮಾಡಿವೆ. ಇಂದು, ಬುಧವಾರ ಬೆಳಿಗ್ಗೆ 6 ಗಂಟೆಗೆ, ಕಠಿಣ ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ … Continued

ಮೈ ಜುಂ ಎನ್ನುವ ವೀಡಿಯೊ | ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯನ್ನು ರಕ್ಷಿಸಿದ ಹೊಟೇಲ್‌ ಸಿಬ್ಬಂದಿ

ಜುಲೈ 18 ರಂದು ಬಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಯಕ್ತಿಯೊಬ್ಬನನ್ನು ರಕ್ಷಿಸಿದ ವೀಡಿಯೊವೊಂದು ವೈರಲ್‌ ಆಗಿದೆ. ರಾಜಸ್ತಾನದ ಅಜ್ಮೀರ್‌ನಲ್ಲಿ ಭಾರಿ ಮಳೆಯಾದ ನಂತರ, ಖ್ವಾಜಾ ಗರೀಬ್ ನವಾಜ್ ಅವರ ಪವಿತ್ರ ದರ್ಗಾ ಸೇರಿದಂತೆ ನಗರದ ಹಲವಾರು ಭಾಗಗಳು ತೀವ್ರವಾಗಿ ಜಲಾವೃತಗೊಂಡವು. ಮಳೆಯಿಂದಾಗಿ ದೇವಾಲಯದ ಸುತ್ತಲಿನ ಕಿರಿದಾದ ಹಾದಿಗಳು ಜಲಾವೃತಗೊಂಡು, ಅವು ವೇಗವಾಗಿ ಹರಿಯುವ … Continued