ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ಒಂಬತ್ತು ದಿನಗಳ ಬಳಿಕ, ಅವಶೇಷಗಳಡಿ ಹೂತುಹೋಗಿದ್ದ ಜಲವಿದ್ಯುತ್ ಯೋಜನೆಯ ಸುರಂಗದಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆದಿದ್ದು, ಇನ್ನೂ ಹಲವರು ಸುರಂಗಗಳಲ್ಲಿ ಸಿಲುಕಿರುವ ಸಾಧ್ಯತೆಯ ನಡುವೆ ಹೊಸ ಆಶಾಕಿರಣ ಮೂಡಿಸಿದೆ.
ತ್ರಿಶೂಲಿ-3ಎ ಸುರಂಗದೊಳಗಿಂದ ಇನ್ನೂ ಕೆಲವರ ಧ್ವನಿಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತ್ರಿಶೂಲಿ ಪ್ರದೇಶದಲ್ಲಿರುವ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಿಂದ ಕಬೀರ ಮಹಾರ್ಜನ್ ಮತ್ತು ಸಂಜಯ ಶಾ ಎಂಬವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ನೇಪಾಳದ ಗೃಹ ಸಚಿವ ಸುದನ್ ಗುರುಂಗ್ ತಿಳಿಸಿದ್ದಾರೆ. ಸ್ಥಳೀಯ ಟಿವಿ ವಾಹಿನಿಗಳು ಮಣ್ಣಿನಿಂದ ಸಂಪೂರ್ಣ ಆವೃತವಾಗಿದ್ದ ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಭುಜದ ಮೇಲೆ ಹೊತ್ತು ಹೊರತರುತ್ತಿರುವ ದೃಶ್ಯಗಳು ಹಾಗೂ ಛಾಯಾಚಿತ್ರಗಳನ್ನು ಪ್ರಸಾರ ಮಾಡಿವೆ.
30 ವರ್ಷದ ಸಂಜಯ ಶಾ ಅವರು ʼನೇಪಾಳ ವಿದ್ಯುತ್ ಪ್ರಾಧಿಕಾರ (ಎನ್ಇಎ)ʼದಲ್ಲಿ ಮೆಕ್ಯಾನಿಕಲ್ ಫೋರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, 45 ವರ್ಷದ ಕಬೀರ ಮಹಾರ್ಜನ್ ಅವರು ತ್ರಿಶೂಲಿ-3ಎ ಯೋಜನೆಯಲ್ಲಿ ಮೇಲ್ವಿಚಾರಕರಾಗಿದ್ದಾರೆ. ಪ್ರವಾಹದ ನಂತರ ಸುರಂಗದ ಪ್ರವೇಶದ್ವಾರ ಸಂಪೂರ್ಣವಾಗಿ ಮುಚ್ಚಿಹೋಗಿದ್ದ ಕಾರಣ, ಇಬ್ಬರೂ ಸುರಂಗದೊಳಗೆ ತೆವಳುತ್ತಾ ಸಾಗುವ ವೇಳೆ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಸಿ ವರದಿ ಪ್ರಕಾರ, ರಕ್ಷಿಸಲ್ಪಟ್ಟ ವೇಳೆ ಸಂಜಯ ಶಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವರನ್ನು ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿನ ವಾಯುವ್ಯದಲ್ಲಿರುವ ಬಟ್ಟಾರ್ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಮತ್ತೊಂದೆಡೆ, ಕಬೀರ್ ಮಹಾರ್ಜನ್ ಅವರು ಪ್ರಜ್ಞೆಯಲ್ಲಿದ್ದು, ಕಠ್ಮಂಡುವಿನಲ್ಲಿರುವ ಸೇನಾ ಆಸ್ಪತ್ರೆಯಾದ ಛೌನಿ ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯಲು ಸಿದ್ಧತೆ ನಡೆದಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ.
ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಬಳಿಕ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಹಿಮನದಿಯ ಕುಸಿತದಿಂದ ಈ ಪ್ರವಾಹ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ಈ ದುರಂತವು ನೇಪಾಳದ ಹಲವು ಪಟ್ಟಣಗಳು ಮತ್ತು ಕಣಿವೆಗಳನ್ನು ನಾಶಗೊಳಿಸಿತ್ತು.
ತ್ರಿಶೂಲಿ-3ಎ ಸುರಂಗದೊಳಗಿಂದ ಇನ್ನೂ ಕೆಲವರ ಧ್ವನಿಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜಲವಿದ್ಯುತ್ ಯೋಜನೆಯ ಭೂಗತ ವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಈ ಸುರಂಗವು ಸುಮಾರು ನಾಲ್ಕು ಕಿಲೋಮೀಟರ್ (2.5 ಮೈಲು) ಉದ್ದವಿದೆ.
ರಕ್ಷಣಾ ದೃಶ್ಯಗಳು ವೈರಲ್
ನೇಪಾಳದ ಸಂಸದರೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ, ಮಣ್ಣಿನಿಂದ ತುಂಬಿದ್ದ ಕೆಸರಿನ ರಂಧ್ರದಿಂದ ಹೊರಗೆಳೆದು ವ್ಯಕ್ತಿಯನ್ನು ಹೊರತೆಗೆದಾಗ ರಕ್ಷಣಾ ಸಿಬ್ಬಂದಿ ಹರ್ಷೋದ್ಗಾರ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಹೊರಬಂದ ವ್ಯಕ್ತಿಗೆ ನಿಂತುಕೊಳ್ಳಲು ಸಹ ಸಹಾಯ ಮಾಡುತ್ತಿರುವುದು ಕಂಡುಬಂದಿದೆ.
ಮತ್ತೊಂದು ಛಾಯಾಚಿತ್ರದಲ್ಲಿ, ಸಂಪೂರ್ಣ ಮಣ್ಣಿನಿಂದ ಆವೃತನಾಗಿದ್ದ ಮತ್ತೊಬ್ಬ ವ್ಯಕ್ತಿ ಕೈಗಳನ್ನು ಜೋಡಿಸಿ ಪ್ರಾರ್ಥನೆಯ ಭಂಗಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಸ್ಟ್ರೆಚರ್ನಲ್ಲಿ ಒಯ್ಯುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನೂ ಅನೇಕ ಮಂದಿ ಸುರಂಗಗಳಲ್ಲಿ ಸಿಲುಕಿರುವ ಶಂಕೆ
ಪ್ರಸ್ತುತ ನೇಪಾಳದ ವಿವಿಧ ಭಾಗಗಳಲ್ಲಿರುವ ಆರುಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿ 150ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ಇದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ನೇಪಾಳದ 12 ಜಲವಿದ್ಯುತ್ ಯೋಜನೆಗಳಲ್ಲಿ ಸುಮಾರು 900 ಕಾರ್ಮಿಕರು ನಾಪತ್ತೆಯಾಗಿದ್ದು, ಅವರಲ್ಲಿ ಸುಮಾರು 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಇಂಜಿನಿಯರ್ಗಳು ಸುರಂಗಗಳೊಳಗೆ ನಿರಂತರವಾಗಿ ಗಾಳಿಯನ್ನು ಪಂಪ್ ಮಾಡುತ್ತಿದ್ದಾರೆ.
ಶುಕ್ರವಾರ (ಸೆಪ್ಟೆಂಬರ್ 4) ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ಸಂಸದ ಶ್ರೀ ರಾಮ್ ನ್ಯೂಪಾನೆ, ಸುರಂಗದ ಒಳಗಿನಿಂದ ಇನ್ನಷ್ಟು ಜನರ ಧ್ವನಿಗಳು ಕೇಳಿಬಂದಿವೆ ಎಂದು ತಿಳಿಸಿದ್ದು, ಒಳಗೆ ಸಿಲುಕಿರುವ ಇನ್ನೂ ಹಲವರು ಜೀವಂತವಾಗಿದ್ದು ರಕ್ಷಣೆಗೆ ಕಾಯುತ್ತಿರುವ ಸಾಧ್ಯತೆಯ ಬಗ್ಗೆ ಹೊಸ ಭರವಸೆ ಮೂಡಿದೆ ಎಂದು ಹೇಳಿದ್ದಾರೆ.
“ಒಳಗಿನಿಂದ ಜನರ ಧ್ವನಿಗಳು ಕೇಳಿಬಂದಿವೆ ಎಂಬ ಮಾಹಿತಿ ರಕ್ಷಣಾ ತಂಡದಿಂದ ಲಭಿಸಿದೆ. ‘ಗಾಬರಿಯಾಗಬೇಡಿ, ನಾವು ನಿಮ್ಮನ್ನು ರಕ್ಷಿಸಲು ಬಂದಿದ್ದೇವೆ’ ಎಂದು ರಕ್ಷಣಾ ಸಿಬ್ಬಂದಿ ಹೇಳಿದಾಗ, ಸುರಂಗದ ಒಳಗಿನಿಂದ ಪ್ರತಿಕ್ರಿಯೆಯೂ ಬಂದಿದೆ,” ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ನೇಪಾಳ ಸೇನೆ ಹಾಗೂ ಸಶಸ್ತ್ರ ಪೊಲೀಸ್ ಪಡೆಯ ತಂಡಗಳು ಇನ್ನಷ್ಟು ಬದುಕುಳಿದವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯದಲ್ಲಿ ನಿರತರಾಗಿವೆ ಎಂದು ಸಂಸದ ನ್ಯೂಪಾನೆ ತಿಳಿಸಿದ್ದಾರೆ.
“ಸುರಂಗದ ಒಳಗಿನಿಂದ ಜನರು ಮಾತನಾಡುತ್ತಿರುವ ಮಾಹಿತಿ ಲಭಿಸಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಇದು ಇನ್ನೂ ಹೆಚ್ಚಿನ ಜನರನ್ನು ಜೀವಂತವಾಗಿ ರಕ್ಷಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ,” ಎಂದು ಅವರು ಹೇಳಿದ್ದಾರೆ.
ಸಾವಿನ ಸಂಖ್ಯೆ 1,259ಕ್ಕೆ ಏರಿಕೆ
ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮಾಹಿತಿಯಂತೆ, ಈ ಭೀಕರ ಪ್ರವಾಹ ದುರಂತದಲ್ಲಿ ಇದುವರೆಗೆ 1,259 ಮಂದಿ ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಚೀನಾ ಗಡಿಭಾಗದ ಟಿಬೆಟ್ ಪ್ರದೇಶದಲ್ಲಿಯೂ ದುರಂತದ ಪರಿಣಾಮ ತೀವ್ರವಾಗಿದ್ದು, ಬುಧವಾರದ ವೇಳೆಗೆ ಅಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಹಾಗೂ 541 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಸಂವಹನ ಸಚಿವ ಬಿಕ್ರಮ ತಿಮಿಲ್ಸಿನಾ ಅವರು ಇನ್ನಷ್ಟು ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ