ವಿಡಿಯೋ | ನೇಪಾಳ ಪ್ರವಾಹ : ಸಾವಿನಲ್ಲೂ ಬಿಡದ ದುರಾಸೆ ; ನದಿಯಿಂದ ಶವ ಎಳೆದು ಕಿವಿಯೋಲೆ ಕದ್ದ ದುಷ್ಕರ್ಮಿಗಳು !

ಕಠ್ಮಂಡು: ಚೀನಾ–ನೇಪಾಳ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ಬಳಿಕ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವ ನಡುವೆಯೇ, ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಮಹಿಳೆಯೊಬ್ಬರ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನು ಕಳವು ಮಾಡಿದ ಆರೋಪದಡಿ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯ ದೇಹದಿಂದ ಇಬ್ಬರು ವ್ಯಕ್ತಿಗಳು ಚಿನ್ನದ ಕಿವಿಯೋಲೆಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ … Continued

ಆಸ್ಪತ್ರೆಯಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಸಿಸಿಟಿವಿಯಲ್ಲಿ ಬಯಲಾಯ್ತು ‘ನಾಲ್ಕು ಕಾಲಿನ ಕಳ್ಳ’ನ ಕರಾಮತ್ತು !

ಮಂದಸೌರ್ : ಸರ್ಕಾರಿ ಆಸ್ಪತ್ರೆಯಿಂದ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ತಾವು ಹುಡುಕುತ್ತಿದ್ದ “ಕಳ್ಳ” ಮನುಷ್ಯನಲ್ಲ, ಬದಲಿಗೆ ಅಲೆಮಾರಿ ನಾಯಿಯೆಂಬುದು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಕ್ಷಣಕಾಲ ಪೊಲೀಸರೇ ದಂಗಾಗಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ … Continued

ಛತ್ತೀಸಗಢ: ರಾತ್ರೋರಾತ್ರಿ 60 ಅಡಿ ಉದ್ದ, 30 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಕಳ್ಳರು…!

ರಾಯ್ಪುರ: ಚೋರರ ತಂಡವೊಂದು ಬರೋಬ್ಬರಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಕದ್ದೊಯ್ದಿರುವ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೊರ್ಬಾ ಜಿಲ್ಲಾ ಕೇಂದ್ರದ ದೋಧಿಪಾರಾ ಪ್ರದೇಶದಲ್ಲಿ ಹಸ್ದಿಯೋ ಕಾಲುವೆಯ ಮೇಲೆ ಈ ಬೃಹತ್ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಸ್ಕ್ರ್ಯಾಪ್ ಮಾಫಿಯಾ … Continued

ಜಾರ್ಖಂಡದಲ್ಲಿ 40 ಲಕ್ಷ ರೂ.ಗೆ ಖರೀದಿಸಿದ್ದ ಆನೆ ಕಳುವು ಮಾಡಿ ಬಿಹಾರದಲ್ಲಿ 27 ಲಕ್ಷ ರೂ.ಗೆ ಮಾರಾಟ…!

ಮೇದಿನಿನಗರ (ಜಾರ್ಖಂಡ್): ಜಾರ್ಖಂಡದ ಪಲಮು ಜಿಲ್ಲೆಯಿಂದ ಕದ್ದು 27 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು ಎನ್ನಲಾದ ಹೆಣ್ಣು ಆನೆಯನ್ನು ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರಕುಮಾರ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ಪಲಮು ಜಿಲ್ಲೆಯ ಚುಕುರ್ ಪ್ರದೇಶದಿಂದ ‘ಜಯಮತಿ’ ಎಂಬ … Continued