ಶಿರಸಿಯಲ್ಲಿ 5 ಕೋಟಿ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ವಶ : ಇಬ್ಬರ ಬಂಧನ

posted in: ರಾಜ್ಯ | 0

ಶಿರಸಿ: ಸುಮಾರು ಐದು ಕೋಟಿ ರೂ. ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬೆಳಗಾವಿ ಮೂಲದ ಸಂತೋಷ್ ಕಾಮತ್, ಶಿರಸಿಯ ಮರಾಠಿಕೊಪ್ಪದ  ರಾಜೇಶ  ಬಂಧಿತ ಆರೋಪಿಗಳಾಗಿದ್ದು, ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ … Continued

ಯಕ್ಷರಂಗದ ಗೋಡೆ, ನಾರಾಯಣ ಹೆಗಡೆಗೆ ಅನಂತ ಶ್ರೀ ಪ್ರಶಸ್ತಿ ಪ್ರಕಟ

posted in: ರಾಜ್ಯ | 0

ಶಿರಸಿ: ಬಡಗುತಿಟ್ಟು ಯಕ್ಷಗಾನದ ಮೇರು‌ ಕಲಾವಿದ ಯಕ್ಷರಂಗದ ಗೋಡೆ ಎಂದೇ ಖ್ಯಾತರಾದ ಗೋಡೆ ನಾರಾಯಣ ಹೆಗಡೆ ಅವರಿಗೆ‌ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನದ ಖ್ಯಾತ ಭಾಗ್ವತ ಕೇಶವ ಹೆಗಡೆ ಕೊಳಗಿ, ಖ್ಯಾತ ತಾಳಮದ್ದಳೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ … Continued

ಶಿರಸಿ: ಕಾಡಿನಲ್ಲಿ ದನ ಕಡಿಯುವಾಗಲೇ ಪೊಲೀಸರ ದಾಳಿ; ಓರ್ವನ ಬಂಧನ, ಮೂವರು ಪರಾರಿ

posted in: ರಾಜ್ಯ | 0

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಉರ್ದು ಶಾಲೆಯ ಹಿಂಭಾಗದ ಕಾಡಿನ ಜಾಗದಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ದನವನ್ನು ಕಡಿಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗೋವನ್ನು ಕಡಿಯುವಾಗಲೇ ಒಬ್ಬನನ್ನು ಬಂಧಿಸಿದ್ದು, ಉಳಿದ ಮೂವರು ಪರಾರಿಯಾಗಿದ್ದಾರೆ. ಕಾಡಿನಲ್ಲಿ ಹಸುವನ್ನು ಮಾಂಸಕ್ಕಾಗಿ ಕಡಿಯಲಾಗುತ್ತಿದೆ ಎಂಬ ಮಾಹಿತಿ ತಿಳಿದ ಪೊಲೀಸರು … Continued

ಶಿರಸಿ-ಕುಮಟಾದಲ್ಲಿ ಇಎಸ್‌ಐ ಡಿಸ್ಪೆನ್ಸರಿ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ

posted in: ರಾಜ್ಯ | 0

ಶಿರಸಿ: ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಹಾಗೂ ಕುಮಟಾದಲ್ಲಿ ಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕುರಿತು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಪತ್ರ ಬರೆದಿದ್ದು, ಶಿರಸಿ ಹಾಗೂ ಕುಮಟಾದಲ್ಲಿಇಎಸ್‌ಐ ಚಿಕಿತ್ಸಾಲಯ (ESI Dispensary)ಗಳ ಸ್ಥಾಪನೆಗೆ … Continued

ಕಾಡಿನ ಜಿಂಕೆ ಅಕ್ರಮವಾಗಿ ಮನೆಯಲ್ಲಿರಿಸಿಕೊಂಡಿದ್ದ ವ್ಯಕ್ತಿ ಬಂಧನ

posted in: ರಾಜ್ಯ | 0

ಶಿರಸಿ: ಕಾಡಿನ ಜಿಂಕೆ ಹಿಡಿದು ಆರು ತಿಂಗಳ ಕಾಲ ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀರ್ನಳ್ಳಿ ಕಲಗಾರು ಬಳಿ ಘಟನೆ ಬೆಳಕಿಗೆ ಬಂದಿದ್ದು, ಸಂಚಾರಿ ಅರಣ್ಯ ಘಟಕ ದಳದವರು ಅಕ್ರಮವಾಗಿ ಇದನ್ನು ಇಟ್ಟುಕೊಂಡ ಆರೋಪದ ಮೇರೆಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಬೀಬ್ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿ. ಕಾಡಿನಲ್ಲಿದ್ದ … Continued

ಶಿರಸಿ ತಾಲೂಕಿನಲ್ಲಿ ದಾಖಲೆಯ 24 ಸೆಂಮೀ ಮಳೆ, ಉಕ್ಕಿದ ನದಿಗಳು, ತೋಟ-ಗದ್ದೆಗಳು ಜಲಾವೃತ

ಶಿರಸಿ: ಕಳೆದ ಇಪ್ಪತ್ನಾಲ್ಕು ತಾಸುಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 24 ಸೆಂಮೀ. ಮಳೆ ಸುರಿದಿದೆ. ನದಿ, ಕೊಳ್ಳಗಳು ಭರ್ತಿಯಾಗಿದ್ದು ಹಲವೆಡೆ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಾರಿಗದ್ದೆ, ಸರಕುಳಿ, ಮಾದ್ನಕಳ ಸೇತುವೆಗಳ ಮೇಲೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಪಟ್ಟಣಹೊಳೆ, ಕೆಂಗ್ರೆ ಹೊಳೆಯೂ ಉಕ್ಕಿ ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ. … Continued

ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಕೈಬಿಡಲು ಒತ್ತಾಯಿಸಿ ಕಾಗೇರಿ, ಹೆಬ್ಬಾರ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ:ನಿರ್ಣಯ

ಶಿರಸಿ:ನಗರದ ಟಿಆರ್‌ ಸಿ ಸಭಾಂಗಣದಲ್ಲಿ ಬುಧವಾರ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬೇಡ್ತಿ, ಅಘನಾಶಿನಿ, ವರದಾ ನದಿ ಜೋಡಣೆ ಯೋಜನೆಗಳ ಸಾಧಕ- ಬಾಧಕ ಕುರಿತ ಸಮಾಲೋಚನಾ ಕಾರ್ಯಾಗಾರದಲ್ಲಿ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿ ನಿರ್ಣಯ ಸ್ವೀಕರಿಸಲಾಯಿತು. ಅಲ್ಲದೆ, … Continued