ಡಿಸೆಂಬರ್ 2ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌

ಕಾರವಾರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766 ಕುಮಟಾ-ಶಿರಸಿ ರಸ್ತೆ ಅಗಲೀಕರಣ ಕಾಮಗಾರಿಯ ಕಾರಣದಿಂದ ಡಿಸೆಂಬರ್ 2 ರಿಂದ ಫೆಬ್ರವರಿ 25ರ ವರೆಗೆ ವಾಹನ ಸಂಚಾರ ಬಂದ್ ಆಗಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣ ಮಾಡಬೇಕಾಗಿರುವುದರಿಂದ ಅಗಲೀಕರಣ ನಡೆದಿರುವ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಿ ಬದಲಿ ಮಾರ್ಗದಲ್ಲಿ ಸಂಚರಿಸಲು … Continued

ಅಡಕೆಗೆ ಕಳಂಕ ಬರಲು ಮಧ್ಯವರ್ತಿಗಳೇ ಕಾರಣ ; ಎಚ್.ಎಸ್.ಮಂಜಪ್ಪ- ಕಾರ್ಯಾಗಾರದಲ್ಲಿ 16 ನಿರ್ಣಯಗಳು..

ಶಿರಸಿ: ಇಂದು ಅಡಕೆಗೆ ಕಳಂಕ ಬರಲು ಅಡಕೆ ಉತ್ಪಾದಕರು ಮತ್ತು ಬಳಕೆದಾರರ ನಡುವೆ ಮಧ್ಯವರ್ತಿಗಳೇ ಕಾರಣ. ಯಾಕೆಂದರೆ ಅವರ ಮೇಲೆ ಯಾರ ನಿಯಂತ್ರಣವೂ ಇಲ್ಲ ಎಂದು ಶಿವಮೊಗ್ಗ ಮ್ಯಾಮ್ಕೊಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹೇಳಿದರು. ಉತ್ತರ ಕನ್ನಡ ಜಿಲ್ಲಾ ಅಡಿಕೆ ಮತ್ತು ಸಂಬಾರ ಬೆಳೆಗಾರರ ಸಂಘ, ಶಿರಸಿ ತಾಲ್ಲೂಕು ಅಡಿಕೆ ಬೇಸಾಯಗಾರರ ಸಂಘ ಹಾಗೂ ಶಿರಸಿ ತೋಟಗಾರಿಕಾ … Continued

ಶಿರಸಿ | ಅಡಕೆಗೆ ಬಂದ ಕಳಂಕ ದೂರ ಮಾಡುವ ಪ್ರಯತ್ನ : ನವೆಂಬರ್‌ 23ರಂದು ʼಗುಣಮಟ್ಟದ ಅಡಕೆʼ ಕಾರ್ಯಾಗಾರ

ಶಿರಸಿ: ಅಡಕೆ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಅಡಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಳಂಕದಿಂದ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಗುಣಮಟ್ಟದ ಅಡಕೆ ಕಾರ್ಯಾಗಾರವನ್ನು ನಗರದ ಶ್ರೀಪಾದ ಹೆಗಡೆ ಕಡವೆ ಕಲ್ಯಾಣಮಂಟಪದಲ್ಲಿ ನವೆಂಬರ್‌ 23ರ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಅಡಕೆ ಮತ್ತು ಸಂಬಾರ ಬೆಳೆಗಾರರ ಸಂಘದ ಪ್ರಮುಖರಾದ ಗಣೇಶ ಭಟ್ಟ ಉಪ್ಪೋಣಿ ಹೇಳಿದರು. … Continued

ವೀಡಿಯೊಗಳು..| ಶಿರಸಿ ; ಸುಗಾವಿ ಬಳಿ ಚಿರತೆಗಳ ಓಡಾಟ ; ದೃಶ್ಯ ಕ್ಯಾಮರಾದಲ್ಲಿ ಸೆರೆ…

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿಯ ಸುತ್ತಮುತ್ತ ಚಿರತೆಗಳು ಓಡಾಡುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಮೊದಲೆಲ್ಲ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಪದೇಪದೇ ಕಾಣಿಸಿಕೊಳ್ಳುತ್ತಿವೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ಸುಗಾವಿ ಸಮೀಪದ ಓಣೀಕೇರಿ ಹೈಸ್ಕೂಲ್‌ ಬಳಿ ಹಾಗೂ ಸಮೀಪದ ಬಿದ್ರಳ್ಳಿ ಸೇತುವೆ ಹಾಗೂ ದೇವಸ್ಥಾನದ ಬಳಿ ಒಂದೇ ದಿನ … Continued

ಶಿರಸಿ ನಗರಸಭೆಯ ನೂತನ ಅಧ್ಯಕ್ಷರಾಗಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ ಭಟ್ಟ ಆಯ್ಕೆ

ಶಿರಸಿ: ಇಲ್ಲಿನ ನಗರಸಭೆಗೆ ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡು ಸ್ಥಾನಗಳು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ ಭಟ್ಟ ಜಯಗಳಿಸಿದ್ದಾರೆ. ಶಿರಸಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಗುರುವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಅಧಿಕಾರಿಯೂ ಆಗಿರುವ ಸಹಾಯಕ ಆಯುಕ್ತೆ … Continued

ಭಾರೀ ಮಳೆಗೆ ಶಿರಸಿ- ಕುಮಟಾ ಹೆದ್ದಾರಿ ಬಂದ್‌

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ- ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಚಂಡಿಕಾ ಹೊಳೆಯಲ್ಲಿ ಪ್ರವಾಹ ಬಂದಿದ್ದು,  ಕುಮಟಾ ತಾಲೂಕಿನ ಕತಗಾಲ ಸಮೀಪ ಅಳಕೋಡ ಬಳಿ  ರಸ್ತೆ ಮೇಲೆ ನಾಲ್ಕೈದು ಅಡಿಗಳಷ್ಟು ನೀರು ಹರಿಯುತ್ತಿರುವುದರಿಂದ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ರಸ್ತೆ … Continued

ಶಿರಸಿ: ಪರಿಸರ ಹೋರಾಟಗಾರ ಅನಂತ ಅಶೀಸರಗೆ ನಾಗರಿಕ ಸನ್ಮಾನ, ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ಲೋಕಾರ್ಪಣೆ

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ವೃಕ್ಷಲಕ್ಷ ಆಂದೊಲನ ಸಂಘಟಿಸಿದ್ದ ಪರಿಸರ ಸಂರಕ್ಷಣೆ-ಸುಸ್ಥಿರ ಅಭಿವೃದ್ಧಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪರಿಸರ ಹೋರಾಟಗಾರ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಹೆಗಡೆ ಅಶೀಸರ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಲ್ಲದೆ, ಅನಂತ ಹೆಗಡೆ ಅಶೀಸರ ಅವರ ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ವನ್ನು ಲೋಕಾರ್ಪಣೆ ಮಾಡಲಾಯಿತು. ಇದೇವೇಳೆ … Continued

ಶಿರಸಿ : ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ; ಓರ್ವನನ್ನು ವಶಕ್ಕೆ ಪಡೆದ ಎನ್‌ಐಎ

ಶಿರಸಿ: ಆನ್‌ಲೈನ್‌ನಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಶಿರಸಿ ತಾಲೂಕಿನ ದಾಸನಕೊಪ್ಪ ಮೂಲದ ವ್ಯಕ್ತಿಯನ್ನು ಎನ್‌ಐಎ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದೆ ಎಂದು ವರದಿಯಾಗಿದೆ. ಬಕ್ರೀದ್‌ ಹಬ್ಬಕ್ಕಾಗಿ ದುಬೈನಿಂದ ಆಗಮಿಸಿದ್ದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು … Continued

ಶಿರಸಿ ಟಿ ಎಸ್ ಎಸ್ : ಹೈಕೋರ್ಟ್‌ ತಡೆಯಾಜ್ಞೆ

ಶಿರಸಿ: ಇಲ್ಲಿಯ ಪ್ರಸಿದ್ಧ ಸಹಕಾರಿ ಸಂಸ್ಥೆ ಟಿಎಸ್ಎಸ್ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಬೆಳಗಾವಿ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟಿನ ಧಾರವಾಡ ಪೀಠ ತಡೆಯಾಜ್ಞೆ ನೀಡಿದೆ. ಗುರುವಾರ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಾಗ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಮೊದಲು, ಟಿಎಸ್ಎಸ್ ಆಡಳಿತ ಮಂಡಳಿ ಚುನಾವಣೆ ನಿಯಮ … Continued

ಜಿಲ್ಲಾ ನಿಬಂಧಕರ ನ್ಯಾಯಾಲಯದ ಆದೇಶಕ್ಕೆ ಸಂಯುಕ್ತ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ : ಟಿಎಸ್‌ಎಸ್‌ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಪುನಃ ಅಧಿಕಾರ ಸ್ವೀಕಾರ

ಶಿರಸಿ: ಟಿಎಸ್‌ಎಸ್ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ರದ್ದತಿ ಹಾಗೂ ಆಡಳಿತ ಅಧಿಕಾರಿ ನೇಮಕದ ಕುರಿತು ಸಹಕಾರ ಸಂಘಗಳ ಜಿಲ್ಲಾ ನಿಬಂಧಕರ ನ್ಯಾಯಾಲಯ ನೀಡಿದ ಆದೇಶಕ್ಕೆ ಇಲಾಖೆಯ ಬೆಳಗಾವಿಯ ಸಂಯುಕ್ತ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಗೋಪಾಲಕೃಷ್ಣ ವೈದ್ಯ ಅವರು ಹೇಳಿದ್ದು, ಈ ಹಿನ್ನೆಲೆಯಲ್ಲಿ ಅವರು ಪುನಃ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. … Continued