ಬಿಜೆಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಎನ್.ಎಸ್. ಹೆಗಡೆ ಕರ್ಕಿ ಆಯ್ಕೆ

ಶಿರಸಿ : ಬಿಜೆಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಎನ್.ಎಸ್. ಹೆಗಡೆ ಕರ್ಕಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಉತ್ತರ ಕನ್ನಡ ಜಿಲ್ಲೆ ಚುನಾವಣಾಧಿಕಾರಿ ಆರ್.ಕೆ. ಸಿದ್ದರಾಮಣ್ಣ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ದೀನದಯಾಳ ಭವನದಲ್ಲಿ ಮಾತನಾಡಿದ ಅವರು, ಎಲ್ಲರ ಅಭಿಪ್ರಾಯವನ್ನು ಪಡೆದ ನಂತರ ಸಹಮತದಿಂದಲೇ ಎನ್ ಎಸ್ ಹೆಗಡೆ ಕರ್ಕಿ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ … Continued

ಕೊನೆಗೌಡರಿಗೆ ಉಚಿತ ವಿಮೆ : 1 ವರ್ಷದ ಕಂತು ತುಂಬಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ನಿರ್ಧಾರ

ಶಿರಸಿ : ಅಡಕೆ ಕೊನೆ ಕೊಯ್ಯುವ ಕೊನೆಗೌಡರಿಗೆ ಇನ್ಸುರೆನ್ಸ್ ಗ್ರೂಪ್ ಅಕ್ಸಿಡೆಂಟ್ ಗಾರ್ಡ್‌ ಪಾಲಿಸಿಯ ಒಂದು ವರ್ಷದ ಕಂತನ್ನು ತುಂಬಲು ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ನಿರ್ಧಾರಿಸಿದ್ದು, ಈ ಹಿನ್ನೆಲೆಯಲ್ಲಿ ಅದು ಶಿರಸಿಯ ಎಪಿಎಂಸಿ ಆವರಣದಲ್ಲಿರುವ ಟಿಆರ್‌ಸಿ ಸಭಾಂಗಣದಲ್ಲಿ ಜನವರಿ 29ರಂದು ಕಾರ್ಯಕ್ರಮ ಆಯೋಜಿಸಿದೆ. ಅನಂತಮೂರ್ತಿ ಹೆಗಡೆ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಜನವರಿ ೨೯ರ ಬುಧವಾರ … Continued

ಯಕ್ಷಗಾನ ಶಾಸ್ತ್ರೀಯ ಕಲೆ ಎಂದು ಪರಿಗಣಿತವಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಬೇಕಿದೆ ; ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

ಶಿರಸಿ : ನೂರಾರು ವರ್ಷಗಳಿಂದ ಜನರೇ ಬೆಳೆಸಿಕೊಂಡು ಬರುತ್ತಿರುವ ಕಲೆ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಯಕ್ಷಗಾನ ಕಲೆ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ ಹಾಸ್ಯಗಾರ ಅವರು ಬರೆದ ಯಕ್ಷಗಾನ ಸಂಶೋಧನಾ ಗ್ರಂಥ ದಶರೂಪಕಗಳ ದಶಾವತಾರ ಕೃತಿಯನ್ನು ಬಿಡುಗಡೆಗೊಳಿಸಿ … Continued

ಯಕ್ಷಗಾನದ ಪುನರ್‌ ವ್ಯಾಖ್ಯಾನ ಆಗಬೇಕು ; ಯಕ್ಷಗಾನ ಶಾಸ್ತ್ರೀಯ ಕಲೆ ಹೇಗೆ-ಯಾಕೆ ಎಂಬುದು ನನ್ನ ʼದಶರೂಪಕಗಳ ದಶಾವತಾರʼ ಪುಸ್ತಕದಲ್ಲಿದೆ : ಸಂದರ್ಶನದಲ್ಲಿ ಅಶೋಕ ಹಾಸ್ಯಗಾರ

ರಘುಪತಿ ಯಾಜಿ ಯಕ್ಷಗಾನದ ಪುನರ್‌ವ್ಯಾಖ್ಯಾನವಾಗಬೇಕು. ಯಕ್ಷಗಾನ ಜನಪದ ಕಲೆ ಅಲ್ಲ, ಅದು ಶಾಸ್ತ್ರೀಯ ಕಲೆ ಎಂದು ಈಗ ಅನೇಕ ವಿದ್ವಾಂಸರು ಹೇಳುತ್ತಿದ್ದಾರೆ. ಯಕ್ಷಗಾನ  ಜನಪದ ಅಲ್ಲ ಎಂದರೆ ಅದು ಹೇಗೆ ಮತ್ತು ಯಾಕೆ..? ಅದು ಶಾಸ್ತ್ರೀಯ ಎಂದಾದರೆ ಅದು ಹೇಗೆ ಮತ್ತು ಯಾಕೆ ಎಂಬುದರ ಕುರಿತು ಯಕ್ಷಗಾನ ಬಯಲಾಟದ ಪುನರ್‌ವ್ಯಾಖ್ಯಾನ ಆಗಬೇಕು. ಯಕ್ಷಗಾನ ಬಯಲಾಟವು ಶಾಸ್ತ್ರೀಯ … Continued

ಶಿರಸಿ | ಜನವರಿ 21ರಂದು ‘ದಶರೂಪಕಗಳ ದಶಾವತಾರ’ ಯಕ್ಷಗಾನ ಸಂಶೋಧನಾ ಗ್ರಂಥ ಬಿಡುಗಡೆ

ಶಿರಸಿ : ಭರತನ ನಾಟ್ಯಶಾಸ್ತ್ರದ ಬೆಳಕಿನಲ್ಲಿ ಯಕ್ಷಗಾನದ ಪುನರ್ವ್ಯಾಖ್ಯಾನದ ಅವಶ್ಯಕತೆಯ ಹಿನ್ನೆಲೆಯಲ್ಲಿ ಹನ್ನೆರಡು ವರ್ಷಗಳಿಂದ ಅಧ್ಯಯನ ನಡೆಸಿದ ನಿವೃತ್ತ ಸಂಪಾದಕರು ಹಾಗೂ ಸಾಹಿತಿ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಎಂಬ ಸಂಶೋಧನಾ ಗ್ರಂಥದ ಲೋಕಾರ್ಪಣೆ ಸಮಾರಂಭ ಜನವರಿ 21ರ ಮಂಗಳವಾರ ಸಂಜೆ 4 ಗಂಟೆಗೆ ನಗರದ ರಂಗಧಾಮ(ನೆಮ್ಮದಿ ಆವರಣ)ದಲ್ಲಿ ನಡೆಯಲಿದೆ. ಹೆಸರಾಂತ ವಿಮರ್ಶಕರು, ಮೀಮಾಂಸಕಾರರಾಗಿರುವ … Continued

ಶಿರಸಿ | ತಬಲಾ ಮಾಂತ್ರಿಕ ಝಾಕೀರ್ ಹುಸೇನಗೆ ಶ್ರದ್ಧಾಂಜಲಿ ; ಜ.19ರಂದು ʼಲಯ ವಂದನಾʼ ಕಾರ್ಯಕ್ರಮ

ಶಿರಸಿ : ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರಿಗೆ ಶಿಷ್ಯರಿಂದ, ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ʼಲಯ ವಂದನಾʼ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಭವನದಲ್ಲಿ ಜ.19ರ ಸಂಜೆ 5ಕ್ಕೆ ಆಯೋಜಿಸಲಾಗಿದೆ ಎಂದು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರು ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪಂಡಿತ … Continued

ವೀಡಿಯೊ…| ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯ ಅಂಗಳಕ್ಕೆ ನುಗ್ಗಿದ ಚಿರತೆ….!

ಶಿರಸಿ : ಉತ್ತರ ಕನ್ನಡದ ಬಿಜೆಪಿ ಸಂಸದ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಂಸದರ ಮನೆ ಅಂಗಳಕ್ಕೆ ಚಿರತೆ ನುಗ್ಗಿದ್ದು, ನಿವಾಸಕ್ಕೆ ಸೋಮವಾರ (ಜ 13) ತಡರಾತ್ರಿ ಚಿರತೆ ನುಗ್ಗಿದೆ. ಸಂಸದ ಹೆಗಡೆ ನಿವಾಸದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸಿಸಿಟಿವಿ ದೃಶ್ಯದಲ್ಲಿಚಿರತೆ ಬಂದಿದ್ದು ಸೆರೆಯಾಗಿದೆ. ಸೋಮವಾರ ರಾತ್ರಿ … Continued

ಶಿರಸಿ ಹೈಟೆಕ್‌ ಆಸ್ಪತ್ರೆ | ಅನಂತಮೂರ್ತಿ ಹೆಗಡೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ; ಸತ್ಯಾಗ್ರಹ ಸ್ಥಳದಲ್ಲಿ ಸಂಸದ ಕಾಗೇರಿ ಘೋಷಣೆ

ಶಿರಸಿ : ನಗರದ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಹೋರಾಟಗಾರ ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಎಲ್ಲ ಹೋರಾಟಕ್ಕೆ, ಉಪವಾಸ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಅವರು ಸಮಾಜಕ್ಕೆ ಒಳ್ಳೆಯದಾಗುವ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ನಾನು ಬೆಂಬಲಿಸುತ್ತೇನೆ. ಜಿಲ್ಲಾ ಬಿಜೆಪಿ ಸಹ ಈ ನಿಟ್ಟಿನಲ್ಲಿ ಸದಾ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ … Continued

ಶಿರಸಿ | ಮನೆಯ ಅಂಗಳಕ್ಕೇ ಬಂದ ಚಿರತೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತಾಲೂಕಿನ ನೀರ್ನಳ್ಳಿಯ ಮನೆಯೊಂದರ ಅಂಗಳಕ್ಕೇ ರಾತ್ರಿ ಸಮಯದಲ್ಲಿ ಚಿರತೆ ಬಂದಿದೆ ಎಂದು ವರದಿಯಾಗಿದೆ. ಚಿರತೆಯ ಮನೆ ಅಂಗಳಿಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸುಮಾರು 12:30ರ ಸುಮಾರಿಗೆ ನೀರ್ನಳ್ಳಿಯ ರಾಮಚಂದ್ರ ಹೆಗಡೆ ಎಂಬವರ ಮನೆಯ ಅಂಗಳಕ್ಕೆ ಚಿರತೆ ಬಂದಿದೆ ಎಂದು ವರದಿಯಾಗಿದೆ.  ಆಕಡೆ ಈಕಡೆ ನೋಡುತ್ತ … Continued

ಶಿರಸಿ ಹೈಟೆಕ್ ಆಸ್ಪತ್ರೆ ವಿಚಾರದಲ್ಲಿ ಸತ್ಯಕ್ಕಾಗಿ ಆಗ್ರಹಿಸಿ ಜನವರಿ 13 ರಂದು ಉಪವಾಸ ಸತ್ಯಾಗ್ರಹ : ಅನಂತಮೂರ್ತಿ ಹೆಗಡೆ

ಶಿರಸಿ: ಶಿರಸಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಸತ್ಯಕ್ಕಾಗಿ ಆಗ್ರಹಿಸಿ ಜನವರಿ 13 ರಂದು ಬೆಳಿಗ್ಗೆ 9 ಗಂಟೆಗೆ ಬಿಡ್ಕಿ ಬಯಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಶಿರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರರ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಬುಧವಾರ ಶಿರಸಿಯಲ್ಲಿ … Continued