ಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆ

ಕಾರವಾರ: ಅನ್ನ ಹಾಗೂ ಅಕ್ಷರ ತೋರಿಸಿದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಆರ್.ಎಸ್.ಹಬ್ಬು ಅವರ ʼಹಬ್ಬು ಸಮುದಾಯʼ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ … Continued

ಮಲೆನಾಡಿನ ಪಾರಂಪರಿಕ ಆಹಾರ ಪದ್ಧತಿ ಉಳಿಸಲು ‘ಎಥ್ನಿಕ್‌ ಫುಡ್‌ ಪ್ರವಾಸೋದ್ಯಮ’ ಇಂದಿನ ಅಗತ್ಯ

ಶಿರಸಿ : ಮಲೆನಾಡಿನ ಪಾರಂಪರಿಕ ಆಹಾರ ಪದ್ಧತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ಎಥ್ನಿಕ್‌ ಫುಡ್‌ ಪ್ರವಾಸೋದ್ಯಮ (ethnic Tourism) ಪ್ರಚುರಪಡಿಸುವ ಮೂಲಕ ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಕದಂಬ ಮಾರ್ಕೆಟಿಂಗ್ ಸಹಕಾರಿ ಸಂಘದ ಸಲಹೆಗಾರ ವಿಶ್ವೇಶ್ವರ ಭಟ್ ಕೋಟೆಮನೆ ಹೇಳಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ತೋಟಗಾರಿಕಾ ಇಲಾಖೆ ಸಭಾಭವನದಲ್ಲಿ ಸೋಮವಾರ … Continued

ಸಿದ್ದಾಪುರ | ಮದ್ದಳೆ ವಾದಕ ಶಂಕರ ಭಾಗವತರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ; ʼಕೊಳಗಿ ಅನಂತಣ್ಣʼ ಕೃತಿ ಬಿಡುಗಡೆ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆ ವಿವಿಧ ಕಲೆಗಳಿಗೆ ಹೆಸರುವಾಸಿಯಾಗಿದೆ. ಈಗ ಭಾಗದ ಎಲ್ಲೆಡೆಗಳಲ್ಲಿ ಹಿಂದೂಸ್ತಾನೀ ಸಂಗೀತಗಾರರು ಸಿಗುತ್ತಾರೆ. ಆದರೆ ಯಕ್ಷಗಾನ ಕಲಾವಿದರ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿನ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಕ್ಷಗಾನ ಕಲೆಗೆ ಸಲ್ಲಿಸಬೇಕಾದ ಸೇವೆ, ಗೌರವವನ್ನು ಸಲ್ಲಿಸುವಲ್ಲಿ ವಿಫಲರಾದಂತಿದೆ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ ಹೇಳಿದರು. ಉತ್ತರ … Continued

ಸಿದ್ದಾಪುರ | ಆಗಸ್ಟ್‌ 15ರಂದು ಅನಂತೋತ್ಸವ-2025 ; ʼಕೊಳಗಿ ಅನಂತಣ್ಣʼ ಕೃತಿ ಲೋಕಾರ್ಪಣೆ, ಅನಂತ ಶ್ರೀ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಅನಂತೋತ್ಸವ-2025 ಪಟ್ಟಣದ ಟಿಎಂಎಸ್‌ ಸಭಾಂಗಣದಲ್ಲಿ ಆಗಸ್ಟ್‌ 15ರಂದು ಸಂಜೆ 4:30ರಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಲೇಖಕ ಗಂಗಾಧರ ಕೊಳಗಿ ಬರೆದ ʼಕೊಳಗಿ ಅನಂತಣ್ಣʼ ಕೃತಿ ಲೋಕಾರ್ಪಣೆ, ಖ್ಯಾತ ಮದ್ದಲೆ ವಾದಕರಾದ ಶಂಕರ ಭಾಗವತ ಯಲ್ಲಾಪುರ ಅವರಿಗೆ ಅನಂತ ಶ್ರೀ ಪ್ರಶಸ್ತಿ … Continued

ಕೃತಿಕಾರ ಕೃತಿಯ ಒಳಹೊಕ್ಕು ತಲ್ಲೀನವಾದರೆ ಅತ್ಯುತ್ತಮ ಕೃತಿಗಳು ಹೊರಬರಲು ಸಾಧ್ಯ ; ‘ಕರ್ಮಫಲ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಸುಚೇಂದ್ರಪ್ರಸಾದ

ಶಿರಸಿ : ಕೃತಿಯಲ್ಲಿ ಕೃತಿಕಾರ ತಲ್ಲೀನವಾದರೆ ಮಾತ್ರ ಅತ್ಯುತ್ತಮ, ಜೀವಂತಿಕೆ ಇರುವ ಕೃತಿಗಳು ಹೊರಬರಲು ಸಾಧ್ಯ. ಬರಹಗಾರನ ತಲ್ಲಣ, ತುಡಿತದ ಸಂವಹನದಿಂದ ಕೃತಿ ರಚನೆ ಸಾಧ್ಯವಾಗುತ್ತದೆ. ಆದರೆ ಅಂಥ ಕೃತಿಗಳು ಅಧ್ಯಯನಶೀಲವೂ ಆಗುವ ಅಗತ್ಯವಿದೆ ಎಂದು ವಾಗ್ಮಿ, ಖ್ಯಾತ ನಟ, ನಿರ್ದೇಶಕ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಂಗಧಾಮದಲ್ಲಿ ಭಾನುವಾರ ನಡೆದ … Continued

ಶಿರಸಿ | ಜನವರಿ 21ರಂದು ‘ದಶರೂಪಕಗಳ ದಶಾವತಾರ’ ಯಕ್ಷಗಾನ ಸಂಶೋಧನಾ ಗ್ರಂಥ ಬಿಡುಗಡೆ

ಶಿರಸಿ : ಭರತನ ನಾಟ್ಯಶಾಸ್ತ್ರದ ಬೆಳಕಿನಲ್ಲಿ ಯಕ್ಷಗಾನದ ಪುನರ್ವ್ಯಾಖ್ಯಾನದ ಅವಶ್ಯಕತೆಯ ಹಿನ್ನೆಲೆಯಲ್ಲಿ ಹನ್ನೆರಡು ವರ್ಷಗಳಿಂದ ಅಧ್ಯಯನ ನಡೆಸಿದ ನಿವೃತ್ತ ಸಂಪಾದಕರು ಹಾಗೂ ಸಾಹಿತಿ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಎಂಬ ಸಂಶೋಧನಾ ಗ್ರಂಥದ ಲೋಕಾರ್ಪಣೆ ಸಮಾರಂಭ ಜನವರಿ 21ರ ಮಂಗಳವಾರ ಸಂಜೆ 4 ಗಂಟೆಗೆ ನಗರದ ರಂಗಧಾಮ(ನೆಮ್ಮದಿ ಆವರಣ)ದಲ್ಲಿ ನಡೆಯಲಿದೆ. ಹೆಸರಾಂತ ವಿಮರ್ಶಕರು, ಮೀಮಾಂಸಕಾರರಾಗಿರುವ … Continued

ಬಹುಮುಖ ಪ್ರತಿಭೆಯ ಬರಹಗಾರ ಡಾ.ಜಿನದತ್ತ ಹಡಗಲಿಗೆ ಇಂದು(ಜುಲೈ 7) ಸಾಹಿತ್ಯಾವಲೋಕನದ ಮೂಲಕ ಅಭಿನಂದನೆ, ಸ್ನೇಹಸಿಂಧು ಗ್ರಂಥ ಬಿಡುಗಡೆ

(೦೭-೦೭-೨೦೨೪ರಂದು ಬೆಳಿಗ್ಗೆ ೯: ೩೦ ರಿಂದ ಡಾ. ಜಿನದತ್ತ ಹಡಗಲಿ ಅವರ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಸ್ನೇಹಸಿಂಧು ಗ್ರಂಥ ಬಿಡುಗಡೆ ಕಾರ್ಯಕ್ರಮ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದು, ಆ ನಿಮಿತ್ತ ಲೇಖನ) ಅತ್ಯುತ್ತಮ ಪ್ರಾಧ್ಯಾಪಕ, ಸೃಜನಶೀಲ ಬರಹಗಾರ, ದಿನನಿತ್ಯದ ಬದುಕು ಮತ್ತು ಗ್ರಾಮೀಣ ಚಿತ್ರಣ ಹಾಗೂ ಜ್ವಲಂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಬರಹಗಾರ, … Continued

ಇಂದು ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ

ಹುಬ್ಬಳ್ಳಿ: ಲೋಕಹಿತ ಟ್ರಸ್ಟ್‌ ವತಿಯಿಂದ ಮಂತ್ರದ್ರಷ್ಟ ಅರವಿಂದ ಘೋಷ್‌ ಪುಸ್ತಕ ಬಿಡುಗಡೆ ಸಮಾರಂಭ ಹುಬ್ಬಳ್ಳಿಯ ಕೇಶವ ಕುಂಜದಲ್ಲಿ ಫೆಬ್ರವರಿ 12ರ ಭಾನುವಾರ ಸಂಜೆ 6:30 ಗಂಟೆಗೆ ನಡೆಯಲಿದೆ. ವಕ್ತಾರರಾಗಿ ಖ್ಯಾತ ಲೇಖಕ ಹಾಗೂ ವಿಮರ್ಶಕ ಡಾ.ಜಿ.ಬಿ.ಹರೀಶ ಆಗಮಿಸಲಿದ್ದಾರೆ. ಹುಬ್ಬಳ್ಳಿ ಲೋಕ ಹಿತ ಟ್ರಸ್ಟ್‌ ಅಧ್ಯಕ್ಷ ಅರವಿಂದರಾವ್‌ ದೇಶಪಾಂಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕರು ಹಾಗೂ … Continued

ಹೊನ್ನಾವರ: ಶಿಷ್ಯರು-ಅಭಿಮಾನಿಗಳಿಂದ ಇಂದು ಹಿಂದೂಸ್ಥಾನೀ ಗಾಯಕ ಡಾ.ಅಶೋಕ ಹುಗ್ಗಣ್ಣವರಿಗೆ ಅಭಿನಂದನೆ, ಪುಸ್ತಕ ಲೋಕಾರ್ಪಣೆ, ನಾದಾರಾಧನೆ

ಹೊನ್ನಾವರ: ಶಿಷ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಖ್ಯಾತ ಹಿಂದುಸ್ಥಾನೀ ಗಾಯಕ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರ ಅವರಿಗೆ ಬೃಹತ್‌ ಅಭಿನಂದನೆ, ಚಂದ್ರಪ್ರಭಾ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗೂ ನಾದಾಭಿನಂದನೆ ಕಾರ್ಯಕ್ರಮ ಹೊನ್ನಾವರದ ಕರ್ಕಿ ಸಮೀಪದ ಹವ್ಯಕ ಸಭಾಭವನದಲ್ಲಿ ಮೇ 1 ರಂದು ಅಪರಾಹ್ನ … Continued

ಪ್ರೀತಿ-ಸಾಮಾಜಿಕ ಕಳಕಳಿ-ಭಾವೈಕ್ಯದ ಕವಿ ಎಂ.ಡಿ.ಗೊಗೇರಿ ಸರ್‌ಗೆ ನಾಳೆ ನುಡಿ ನಮನ

(ರವಿವಾರ ದಿನಾಂಕ ೦೧.೦೮.೨೦೨೧ ರಂದು ಮುಂಜಾನೆ ೧೦.೦೦ ಗಂಟೆಗೆ ಶ್ರೀ ಜಗದ್ಗುರು ಮೂರುಸಾವಿರ ಮಠದ ಸಭಾ ಭವನದಲ್ಲಿ ಸಾಹಿತಿಗಳಾದ ಎಂ. ಡಿ. ಗೋಗೇರಿ ಅವರ ನುಡಿನಮನ ಕಾರ್‍ಯಕ್ರಮವಿದ್ದು, ಆ ನಿಮಿತ್ತ ಲೇಖನ. ಎಂ. ಡಿ. ಗೋಗೇರಿ ಅವರ ಜೀವನ , ಸಾಹಿತ್ಯ, ಸಂಸ್ಕೃತಿ, ಹಾಸ್ಯಪ್ರಜ್ಞೆ, ಭಾವೈಕ್ಯತೆ, ಮಕ್ಕಳ ಸಾಹಿತ್ಯ, ಜಾನಪದ ಕ್ಷೇತ್ರ ಮುಂತಾದ ಸಾಧನೆಗಳ ಕುರಿತು … Continued