‘ಭಿಕ್ಷುಕನ ಜೊತೆ ಓಡಿಹೋದ ಮಹಿಳೆ’ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ; ಆಕೆ ಭಿಕ್ಷುಕನೊಂದಿಗೆ ಓಡಿಹೋಗಿಲ್ಲ : ಮಹಿಳೆ ಮನೆ ಬಿಟ್ಟ ಕಾರಣ….

ಹರ್ದೋಯಿ : ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂಬ ವ್ಯಾಪಕವಾಗಿ ಪ್ರಸಾರವಾದ ಸುದ್ದಿಗೆ ಈಗ ಟ್ವಿಸ್ಟ್ ಹೊರಹೊಮ್ಮಿದೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿರುವ ಮಹಿಳೆ, ತನ್ನ ಪತಿ ಪದೇ ಪದೇ ನಿಂದಿಸುತ್ತಿದ್ದುದರಿಂದ ಮತ್ತು ಥಳಿಸುತ್ತಿದ್ದುದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು … Continued

ತಂದೆ ನಮ್ಮ ತಾಯಿಗೆ ಹೊಡೆಯುತ್ತಾರೆ…ನಮಗೆ ಸಹಾಯ ಮಾಡಿ..: ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ 3 ಮತ್ತು 5 ವರ್ಷದ ಪುಟಾಣಿಗಳು…!

ನವದೆಹಲಿ: ಮೂರು ವರ್ಷದ ಬಾಲಕ ಮತ್ತು ಆತನ 5 ವರ್ಷದ ಸಹೋದರ ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಿದ್ದು, ದುಃಖದ ನಡುವೆ ತಮ್ಮ ತಾಯಿಯನ್ನು ಥಳಿಸುತ್ತಾರೆ ಎಂದು ತಂದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಪಿಲೋಖಾರಿ ಔಟ್‌ಪೋಸ್ಟ್ ಇನ್‌ಚಾರ್ಜ್ ರಾಹುಲ್ ಯಾದವ್ ಮಾತನಾಡಿ, ಪೊಲೀಸರು ಮಕ್ಕಳಿಗೆ ಟಾಫಿ … Continued

ಒಬ್ಬನೇ ಹುಡುಗನಿಗಾಗಿ ನಡುರಸ್ತೆಯಲ್ಲೇ ಬಡಿದಾಡಿಕೊಂಡ ಇಬ್ಬರು ಹುಡುಗಿಯರು…!

ಲಕ್ನೋ: ತಮ್ಮ ಶಾಲೆಯಲ್ಲಿ ಓದುತ್ತಿರುವ ಒಂದೇ ಹುಡುಗನನ್ನು ತಾವಿಬ್ಬರೂ ಇಷ್ಟಪಡುತ್ತಿದ್ದೇವೆ ಎಂದು ತಿಳಿದ ನಂತರ ಇಬ್ಬರು ಹದಿಹರೆಯದ ಹುಡುಗಿಯರು ಜನನಿಬಿಡ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಂಗಳವಾರ ಸಿಂಘ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಗರ್ ಸರಾಯ್ ಟೌನ್‌ನಲ್ಲಿ ನಡೆದ ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಈ … Continued

ವೀಡಿಯೊ…| ಆಘಾತಕಾರಿ ; ಬೊಬ್ಬೆ ಹೊಡೆದ್ರೂ ಕೇಳಿಸಿಕೊಳ್ಳದೆ ಟ್ರಕ್‌ ಕೆಳಗೆ ಸಿಲುಕಿಕೊಂಡಿದ್ದ ಇಬ್ಬರನ್ನು ದೂರದ ವರೆಗೆ ಎಳೆದೊಯ್ದ ಚಾಲಕ…!

ಆಗ್ರಾದಲ್ಲಿ ಟ್ರಕ್ ಚಾಲಕನೊಬ್ಬ ತನ್ನ ವಾಹನದ ಕೆಳಗೆ ಸಿಲುಕಿದ್ದ ಇಬ್ಬರನ್ನು ಸುಮಾರು 300 ಮೀಟರ್ ವರೆಗೆ ಎಳೆದೊಯ್ದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕೆಲ ಸ್ಥಳೀಯರು ಟ್ರಕ್‌ ಅನ್ನು ಅಡ್ಡಹಾಕಿ ಚಾಲಕ ಬಲವಂತವಾಗಿ ಟ್ರಕ್ ನಿಲ್ಲಿಸುವಂತೆ ಮಾಡಿದ ನಂತರ ವಾಹನದ ಕೆಳಗಿದ್ದವರನ್ನು ಹೊರತೆಗೆಯಲಾಗಿದೆ. ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಆಗ್ರಾದ ನುನ್ಹೈ ನಿವಾಸಿಗಳಾಗಿರುವ ಇಬ್ಬರು … Continued

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ ; ತಾಜ್ ಮಹಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ ಅಯೋಧ್ಯೆ ರಾಮಮಂದಿರ

ನವದೆಹಲಿ: ಈಗ ಅಯೋಧ್ಯೆಯು ಆಗ್ರಾದ ತಾಜ್ ಮಹಲ್‌ ಅನ್ನು ಹಿಂದಿಕ್ಕಿ ಈಗ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024 ರ ಜನವರಿ-ಸೆಪ್ಟೆಂಬರ್ ನಡುವೆ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿಯರು ಭೇಟಿ ನೀಡಿದ್ದಾರೆ. ಇದು ಹೊಸ ದಾಖಲೆಯಾಗಿದೆ. ನಿರೀಕ್ಷಿತ … Continued

ಬಾಲಿವುಡ್‌ ನಟನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅಪಹರಣ, ನಂತರ ಹಣಕ್ಕಾಗಿ 12 ಗಂಟೆಗಳ ಕಾಲ ಚಿತ್ರಹಿಂಸೆ…!

ನವದೆಹಲಿ : ಹಮ್‌ ಹೇ ರಾಹಿ ಪ್ಯಾರ್‌ ಕೆ ಮತ್ತು ವೆಲ್‌ಕಮ್‌ ಚಿತ್ರಗಳ ನಟನೆಗೆ ಹೆಸರಾದ ಚಲನಚಿತ್ರ ನಟ ಮುಷ್ತಾಕ್‌ ಖಾನ್‌ ಅವರನ್ನು ಅಪಹರಿಸಿ, ಗಂಟೆಗಟ್ಟಲೆ ಚಿತ್ರಹಿಂಸೆ ನೀಡಿ ₹ 2 ಲಕ್ಷ ನೀಡುವಂತೆ ಒತ್ತಾಯಿಸಿ ನಂತರ ದುಷ್ಕರ್ಮಿಗಳು ಪರಾರಿಯಾದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ನವೆಂಬರ್ 20 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ … Continued

ಸಂಭಾಲ್ ಹಿಂಸಾಚಾರ | 4 ಸಾವು, ಶಾಲೆಗಳು ಬಂದ್‌, ಇಂಟರ್ನೆಟ್‌ ಸ್ಥಗಿತ ; ಎಫ್‌ಐಆರ್ ನಲ್ಲಿ ಸಮಾಜವಾದಿ ಪಕ್ಷದ ಸಂಸದನ ಹೆಸರು

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಹಾಗೂ 29 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಕನಿಷ್ಠ 25 ಜನರನ್ನು ಬಂಧಿಸಲಾಗಿದದ್ದು, 400 ಜನರ ವಿರುದ್ಧ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಇಕ್ಬಾಲ್ … Continued

ಶಾಕಿಂಗ್‌…| ತಪ್ಪು ಮಾರ್ಗ ತೋರಿಸಿದ ಜಿಪಿಎಸ್‌ ; ಮುರಿದುಬಿದ್ದ ಸೇತುವೆಯಿಂದ ಕಾರು ನದಿಗೆ ಬಿದ್ದು ಮೂವರು ಸಾವು…!

ಜಿಪಿಎಸ್ ದೋಷದಿಂದಾಗಿ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಖಲ್ಪುರ-ದತಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ನ್ಯಾವಿಗೇಷನ್‌ಗಾಗಿ ಜಿಪಿಎಸ್ ಬಳಸಿ ಅದು … Continued

ವೀಡಿಯೊ…| ಅಪಾಯಕಾರಿ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಏರಿದ ವ್ಯಕ್ತಿ ; ಅದರ ಮೇಲೆಯೇ ನೃತ್ಯ…!

ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಹೈವೋಲ್ಟೇಜ್ ಎಲೆಕ್ಟ್ರಿಕ್ ಟವರ್ ಅನ್ನು ಏರಿ ಹಲವರ ಆತಂಕಕ್ಕೆ ಕಾಣವಾದ ಘಟನೆ ಭಾನುವಾರ ನಡೆದಿದೆ. ದೆಹಲಿ ಸಮೀಪದ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 113 ರಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಹೈಟೆನ್ಷನ್ ಟವರ್‌ ಅನ್ನು ಹತ್ತಿ ಅದರ ಮೇಲೆ ಡ್ಯಾನ್ಸ್‌ … Continued

ವೀಡಿಯೊ..| ದಿಢೀರನೆ ಕುಸಿದು ರಸ್ತೆ ಮೇಲೆ ಬಿದ್ದ ಕಟ್ಟಡ ; ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಪುಟ್ಟ ಮಕ್ಕಳು

ಉತ್ತರ ಪ್ರದೇಶದ ಮೀರತ್‌ನ ಸದರ್ ಬಜಾರ್ ಪ್ರದೇಶದಲ್ಲಿ ಶುಕ್ರವಾರ ಕಟ್ಟಡ ಕುಸಿತದಿಂದ ಅವಶೇಷಗಳ ಅಡಿಗೆ ಸಿಲುಕುವುದರಿಂದ ಇಬ್ಬರು ಪುಟ್ಟ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಿದಾದ ರಸ್ತೆ ಮೂಲಕ ಸ್ಕೂಟರ್ ಹಾದುಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಬೈಸಿಕಲ್ ಮೇಲೆ ಮಗು ಹೋಗುತ್ತದೆ. ನಂತರ ಮಹಿಳೆ ನಡೆದುಕೊಂಡು … Continued