ವೀಡಿಯೊ..| 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಈಗ ಸನ್ಯಾಸಿಯಾಗಿ ತಾಯಿ ಬಳಿಗೆ ಬಂದ: ಬಂದವ ಹೊರಟು ಹೋದ : ಯಾಕೆ ? ಅದೇ ಸ್ವಾರಸ್ಯ…

ನವದೆಹಲಿ : ನಾಪತ್ತೆಯಾಗಿದ್ದ ಮಗ, ಎರಡು ದಶಕಗಳ ನಂತರ ವಾಪಸ್ಸಾಗಿದ್ದು ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಗ್ರಾಮವೊಂದರಲ್ಲಿ ತಲ್ಲಣಕ್ಕೆ ಕಾರಣವಾಗಿದೆ. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ ಗ್ರಾಮಕ್ಕೆ ಮರಳಿದ್ದು, ಎಲ್ಲರಿಗೂ ದಿಗ್ಭ್ರಮೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊವು ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ತೋರಿಸುತ್ತದೆ. ಸನ್ಯಾಸಿಯ ಉಡುಪಿನಲ್ಲಿರುವ ಓರ್ವ ವ್ಯಕ್ತಿಯು ಮೂರು ತಂತಿಗಳ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಸಾರಂಗಿಯನ್ನು ನುಡಿಸುತ್ತಿರುವುದು ಕಂಡುಬರುತ್ತದೆ. ಮತ್ತು ತನ್ನ ತಾಯಿಯಿಂದ ಭಿಕ್ಷೆಯನ್ನು ಕೇಳುವಾಗ ವಿಷಣ್ಣತೆಯ ರಾಗಗಳನ್ನು ಆ ಸನ್ಯಾಸಿ ಹಾಡುತ್ತಾರೆ.
ತಪಸ್ವಿಯು ಜನಪ್ರಿಯ ಜಾನಪದದ ಪ್ರಮುಖ ಪಾತ್ರವಾದ ರಾಜ ಭರ್ತಹರಿಯ ಬಗ್ಗೆ ಆತ ಸನ್ಯಾಸಿಯಾಗುವ ಕಥೆಯುಳ್ಳ ಜಾನಪದ ಹಾಡುಗಳನ್ನು ಹಾಡುತ್ತಾರೆ. ರಾಜ ಭರ್ತಹರಿಯನ್ನು ಒಳಗೊಂಡಿರುವ ಒಂದು ಕಥೆಯು ಆತ ಸನ್ಯಾಸಿಯಾಗಲು ತನ್ನ ಸಮೃದ್ಧ ರಾಜ್ಯವನ್ನು ಹೇಗೆ ತೊರೆದ ಎಂಬುದರ ಬಗ್ಗೆ ಇದೆ. ಅದೇ ಹಾಡನ್ನು ಈ ಸನ್ಯಾಸಿ ಹಾಡಿದ್ದಾರೆ. ಕಳೆದುಹೋಗಿ 22 ವರ್ಷಗಳ ನಂತರ ಸಿಕ್ಕಿದ ಮಗ ಹಾಡುತ್ತಿದ್ದರೆ, ತಾಯಿ ಪಕ್ಕದಲ್ಲಿ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಈ ಪ್ರಕರಣದಲ್ಲಿ, ರತಿಪಾಲ್ ಸಿಂಗ್ ಅವರ ಮಗ ಪಿಂಕು 2002 ರಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಗೋಲಿ ಆಡುವ ವಿಷಯದ ಬಗ್ಗೆ ತನ್ನ ತಂದೆಯೊಂದಿಗೆ ಜಗಳವಾಡಿ ಸಿಟ್ಟು ಮಾಡಿಕೊಂಡು ದೆಹಲಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಆತನ ತಾಯಿ ಭಾನುಮತಿ ಅವನನ್ನು ಗದರಿಸಿದ್ದಳು, ಅದು ಪಿಂಕು ತನ್ನ ಕುಟುಂಬದಿಂದ ಎರಡು ದಶಕಗಳ ಕಾ ದೂರ ಹೋಗಲು ಕಾರಣವಾಗುತ್ತದೆ ಎಂದು ಖಂಡಿತ ಆಕೆಗೆ ಗೊತ್ತಿರಲಿಲ್ಲ.
ಕಳೆದ ವಾರ, ಅಮೇಥಿಯ ಖರೌಲಿ ಗ್ರಾಮವು ದಿಗ್ಭ್ರಮೆಗೊಂಡಿತು, ಯಾಕೆಂದರೆ ದೀರ್ಘಕಾಲದಿಂದ ನಾಪತ್ತೆಯಾಗಿದ್ದ ಪಿಂಕು ಒಮ್ಮಿಂದೊಮ್ಮೆಗೆ ಸನ್ಯಾಸಿಯಾಗಿ 22 ವರ್ಷಗಳ ನಂತರ ತನ್ನ ಬೇರುಗಳನ್ನು ಹುಡುಕಿಕೊಂಡು ಬಂದಿದ್ದನ್ನು ಗ್ರಾಮಸ್ಥರು ನೋಡಿದರು. ಗ್ರಾಮಸ್ಥರು ತಕ್ಷಣವೇ ದೆಹಲಿಯಲ್ಲಿ ನೆಲೆಸಿರುವ ಆತನ ತಂದೆ-ತಾಯಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಪೋಷಕರು ಬಂದಾಗ, ಅವರು ಪಿಂಕು (ಸನ್ಯಾಸಿ) ಅವರ ದೇಹದ ಮೇಲಿನ ಗಾಯದ ಕಲೆಯನ್ನು ನೋಡಿ ಗುರುತಿಸಿದ್ದಾರೆ. ಆದಾಗ್ಯೂ, ಪುನರ್ಮಿಲನವು ಅಲ್ಪಕಾಲಿಕವಾಗಿತ್ತು. ಯಾಕೆಂದರೆ ಈಗ ಸನ್ಯಾಸಿಯಾಗಿರುವ ಪಿಂಕು ತನ್ನ ತಾಯಿಯಿಂದ ಭಿಕ್ಷೆ ತೆಗೆದುಕೊಂಡು ಗ್ರಾಮವನ್ನು ತೊರೆದಿದ್ದರು. ತನ್ನ ಕುಟುಂಬ ಮತ್ತು ಗ್ರಾಮಸ್ಥರು ಬಿಟ್ಟು ಹೋಗಬೇಡ ಎಂದು ಮಾಡಿಕೊಂಡ ವಿನಂತಿಯನ್ನು ಲೆಕ್ಕಿಸದೆ ಪಿಂಕು (ಸನ್ಯಾಸಿ) ಮತ್ತೊಮ್ಮೆ ತಾಯಿಯನ್ನು ತೊರೆದು ಹೋಗಿದ್ದಾರೆ.

ತನ್ನ ಮಗ ಸೇರಿರುವ ಧಾರ್ಮಿಕ ಪಂಗಡ ಆತನನ್ನು ಬಿಡುಗಡೆ ಮಾಡಲು ₹ 11 ಲಕ್ಷ ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ನನ್ನ ಜೇಬಿನಲ್ಲಿ 11 ರೂ. ಇಲ್ಲ, ₹ 11 ಲಕ್ಷ ಹೇಗೆ ಕೊಡಲಿ ಎಂದು ಪಿಂಕುವಿನ ತಂದೆ ಹೇಳಿದ್ದಾರೆ. ಆದರೆ ತನ್ನ ಭೇಟಿಯು ಕುಟುಂಬದ ಸಂಬಂಧಗಳ ಕಾರಣಕ್ಕೆ ಆಗಿಲ್ಲ, ಬದಲಿಗೆ ಧಾರ್ಮಿಕ ಆಚರಣೆಯ ಕಾರಣಕ್ಕೆ ಆಗಿದೆ ಎಂದು ಸನ್ಯಾಸಿ ಪಿಂಕು ಸ್ಪಷ್ಟಪಡಿಸಿದ್ದಾರೆ. ತಮ್ಮ ಧಾರ್ಮಿಕ ಸಂಪ್ರದಾಯದ ಪ್ರಕಾರ, ಸನ್ಯಾಸ ದೀಕ್ಷೆ ಪೂರ್ಣವಾಗಬೇಕಾದರೆ ತಮ್ಮ ತಾಯಿಯಿಂದ ಭಿಕ್ಷೆ ಸ್ವೀಕರಿಸುವ ಆಚರಣೆ ಪೂರ್ಣಗೊಳಿಸಬೇಕು ಎಂದು ಅವರು ವಿವರಿಸಿದ್ದಾರೆ. ಈ ಸಾಂಕೇತಿಕ ಪ್ರಕ್ರಿಯೆಯು ಸನ್ಯಾಸಿಗಳ ಜೀವನಕ್ಕೆ ಅವರ ಅಧಿಕೃತ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಪಿಂಕು ಹೇಳಿದ್ದಾರೆ. ಈ ಮಧ್ಯೆ ತಾಯಿ ತನ್ನ ಮಗನ ನೆನಪಿನಲ್ಲಿ ಬಿಕ್ಕುತ್ತಲೇ ಇದ್ದಾಳೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement