ಉಸಿರಾಟದ ತೊಂದರೆಗೆ 1 ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್‌ ಕಂಡು ವೈದ್ಯರೇ ಶಾಕ್‌ !

ವಡೋದರಾ: ಹಸುಗೂಸುಗಳ ಬಗ್ಗೆ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ನೀಡುವ ಘಟನೆಯೊಂದು ವಡೋದರಾದಲ್ಲಿ ವರದಿಯಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆಂದು ಒಂದು ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಅದರ ಶ್ವಾಸಕೋಶದ ಎಕ್ಸರೇ ನೋಡಿ ವೈದ್ಯರೇ ದಿಗ್ಭ್ರಮೆಗೊಂಡಿದ್ದಾರೆ. ಆನಂದ ಜಿಲ್ಲೆಯ ಮಲ್ಸರ್ ಗ್ರಾಮದ ಒಂದು ವರ್ಷದ ಮಗು ಎಲ್‌ಇಡಿ (LED) ಬಲ್ಬ್ ಅನ್ನು ನುಂಗಿದ್ದು, ಇದರಿಂದಾಗಿ ಸುದೀರ್ಘ ಕಾಲ … Continued

ಯೂಟ್ಯೂಬ್ ನೋಡಿಕೊಂಡು ಗರ್ಭಿಣಿಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮಹಿಳೆ ಸಾವು

ಭಾಗಲ್ಪುರ (ಬಿಹಾರ): ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದನ್ನು ಅರೆಬರೆ ಕಲಿತವರು ಬಳಸಿದರೆ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಬಿಹಾರದ ಈ ಘಟನೆ ಸಾಕ್ಷಿಯಾಗಿದೆ. ಜಿಲ್ಲೆಯ ಕಹಲ್‌ಗಾಂವ್ ಪ್ರದೇಶದಲ್ಲಿ ನಕಲಿ ವೈದ್ಯನೊಬ್ಬ ಯೂಟ್ಯೂಬ್ (YouTube) ವಿಡಿಯೋಗಳನ್ನು ನೋಡಿ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ನ್ಯೂಸ್‌ ೧೮ ವರದಿ ಮಾಡಿದೆ. … Continued

10 ವರ್ಷಗಳಿಗೂ ಹೆಚ್ಚು ಕಾಲ ವೈದ್ಯರಿಗೇ ತಿಳಿಯದ ನಿಗೂಢ ಕಾಯಿಲೆಯ ಮೂಲ ಕಾರಣ ಪತ್ತೆಹಚ್ಚಿದ ಚಾಟ್‌ ಜಿಪಿಟಿ…!

ದಶಕಗಳ ಕಾಲದ ನಿಗೂಢವಾಗಿದ್ದ ಅನಾರೋಗ್ಯದ ಮೂಲ ಕಾರಣವನ್ನು ಕಂಡುಹಿಡಿಯಲು ಚಾಟ್‌ ಜಿಪಿಟಿ (ChatGPT) ಹೇಗೆ ಸಹಾಯ ಮಾಡಿತು ಎಂದು ಬಳಕೆದಾರರೊಬ್ಬರು ಹೇಳಿಕೊಂಡ ನಂತರ ರೆಡ್ಡಿಟ್ ಪೋಸ್ಟ್ ಗಮನ ಸೆಳೆಯುತ್ತಿದೆ. ಈ ನಿಗೂಢ ಆರೋಗ್ಯ ಸಮಸ್ಯೆಗೆ ಕಾರಣ ಏನೆಂದು ಒಂದು ದಶಕಕ್ಕೂ ಹೆಚ್ಚು ಕಾಲ ಪತ್ತೆ ಮಾಡಲು ಸಾಧ್ಯವಾಗದೆ ಹಲವಾರು ವೈದ್ಯರು, ತಜ್ಞರು ಮತ್ತು ನರವಿಜ್ಞಾನಿಗಳನ್ನು ಸಹ … Continued

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಸ್ಥಳೀಯ ಮೀಸಲಾತಿ ನೀಡುವುದು ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೋಟಾದಡಿ ಸ್ಥಳೀಯ ಮೀಸಲಾತಿ ನೀಡುವುದು ಸಂವಿಧಾನದ 14ನೇ ವಿಧಿಯಡಿ ಒದಗಿಸಲಾದ ಸಮಾನತೆ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಅರ್ಹತೆಯ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪ್ರವೇಶಾತಿ ಕಲ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್‌ ವಿ ಎನ್ … Continued

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ : 70ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರಿಂದ ಪ್ರಧಾನಿ ಮೋದಿಗೆ ಪತ್ರ

ನವದೆಹಲಿ: ಕೋಲ್ಕತ್ತಾದ ಅತ್ಯಾಚಾರ-ಕೊಲೆ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ 70 ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು, ಆರೋಗ್ಯ ಸಿಬ್ಬಂದಿ ವಿರುದ್ಧದ ಹಿಂಸಾಚಾರ ತಡೆಗೆ ವಿಶೇಷ ಕಾನೂನನ್ನು ತ್ವರಿತವಾಗಿ ಜಾರಿಗೊಳಿಸಬೇಕು ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಸುಧಾರಿತ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಶೋಕ್ ವೈದ್, … Continued

ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತನ ರಕ್ತದ ಮಾದರಿ ಬದಲಾಯಿಸಲು ಪಡೆದಿದ್ದ 3 ಲಕ್ಷ ರೂ. ವಶಕ್ಕೆ ಪಡೆದ ಪೊಲೀಸರು ; ಇಬ್ಬರು ವೈದ್ಯರ ಬಂಧನ

ಮೇ 19 ರಂದು ನಗರದ ಕಲ್ಯಾಣಿ ನಗರದಲ್ಲಿ ಕಾರು ಅಪಘಾತಕ್ಕೀಡಾಗಿ ಮೋಟಾರುಬೈಕಿನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವಿಗೀಡಾದ ಪ್ರಕರಣದಲ್ಲಿ ಕಾರು ಚಾಲನೆ ಮಾಡಿದ್ದ ಅಪ್ರಾಪ್ತನ ರಕ್ತದ ಮಾದರಿಯನ್ನೇ ಬದಲಾಯಿಸಲು ವೈದ್ಯರಿಗೆ ಲಂಚ ನೀಡಿದ್ದ 3 ಲಕ್ಷ ರೂ.ಗಳನ್ನು ಪುಣೆ ಪೊಲೀಸರ ಅಪರಾಧ ವಿಭಾಗವು ಸೋಮವಾರ ವಶಪಡಿಸಿಕೊಂಡಿದೆ. ಭಾನುವಾರ, 17 ವರ್ಷದ ಬಾಲಕನ ರಕ್ತದ ವರದಿಯನ್ನು ಬದಲಾಯಿಸಿದ … Continued

ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಬಿಜೆಪಿ ಮಾಜಿ ಸಂಸದರ ಪುತ್ರ ಸಾವು…!

ಲಕ್ನೋ : ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ಹಾಸಿಗೆಗಳ ಕೊರತೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ತನ್ನ ಮಗ ಮೃತಪಟ್ಟಿದ್ದಾನೆ ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಆರೋಪಿಸಿದ್ದಾರೆ ಹಾಗೂ ಸರ್ಕಾರ ವೈದ್ಯರನ್ನು ಅಮಾನತುಗೊಳಿಸುವ ವರೆಗೆ ಮತ್ತು ಮುಂದಿನ ಕ್ರಮದ ಭರವಸೆ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಮಗನ ಮೃತದೇಹದೊಂದಿಗೆ ವಾರ್ಡ್‌ ಮುಂದೆ ಪ್ರತಿಭಟನೆ … Continued

ಅಲೋಪಥಿ ಪದ್ಧತಿ-ವೈದ್ಯರ ಬಗ್ಗೆ ಅವಹೇಳನ : ಬಾಬಾರಾಮ್‌ ದೇವ್‌ಗೆ ಸುಪ್ರೀಂಕೋರ್ಟ್‌ ತರಾಟೆ

ನವದೆಹಲಿ: ಅಲೋಪತಿ ಮತ್ತು ಅಲೋಪತಿ ವೈದ್ಯರನ್ನು ಟೀಕಿಸಿದ್ದಕ್ಕಾಗಿ ಯೋಗ ಗುರು ರಾಮ್‌ದೇವ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ, ವೈದ್ಯರು ಮತ್ತು ಇತರ ಚಿಕಿತ್ಸಾ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಬೇಕು ಎಂದು ಹೇಳಿದೆ. ಲಸಿಕಾ ಅಭಿಯಾನ ಮತ್ತು ಆಧುನಿಕ ಔಷಧಿಗಳ ವಿರುದ್ಧ ಸ್ಮೀಯರ್ ಅಭಿಯಾನವನ್ನು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮನವಿಯ ಮೇಲೆ … Continued

ಡೋಲೋ-650 ಮಾತ್ರೆಗಳನ್ನು ಶಿಫಾರಸು ಮಾಡಲು ಉಚಿತ ಕೊಡುಗೆಗೆ ವೈದ್ಯರಿಗೆ 1,000 ಕೋಟಿ ರೂ.ವೆಚ್ಚ: ಇದು ಗಂಭೀರ ವಿಷಯ ಎಂದ ಸುಪ್ರೀಂಕೋರ್ಟ್‌

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಔಷಧವಾಗಿ ಜನಪ್ರಿಯವಾಗಿದ್ದ ಪ್ಯಾರೆಸಿಟಮಾಲ್ ಡ್ರಗ್ ‘ಡೋಲೋ’ ತಯಾರಕರು ವೈದ್ಯರಿಗೆ ಉಚಿತವಾಗಿ 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ವೈದ್ಯಕೀಯ ಪ್ರತಿನಿಧಿಗಳ ಮಂಡಳಿಯು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ … Continued