ಯೂಟ್ಯೂಬ್ ನೋಡಿಕೊಂಡು ಗರ್ಭಿಣಿಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ; ಮಹಿಳೆ ಸಾವು
ಭಾಗಲ್ಪುರ (ಬಿಹಾರ): ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದನ್ನು ಅರೆಬರೆ ಕಲಿತವರು ಬಳಸಿದರೆ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಬಿಹಾರದ ಈ ಘಟನೆ ಸಾಕ್ಷಿಯಾಗಿದೆ. ಜಿಲ್ಲೆಯ ಕಹಲ್‌ಗಾಂವ್ ಪ್ರದೇಶದಲ್ಲಿ ನಕಲಿ ವೈದ್ಯನೊಬ್ಬ ಯೂಟ್ಯೂಬ್ (YouTube) ವಿಡಿಯೋಗಳನ್ನು ನೋಡಿ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ನ್ಯೂಸ್ ೧೮ ವರದಿ ಮಾಡಿದೆ. … Continued