ಉಸಿರಾಟದ ತೊಂದರೆಗೆ 1 ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಶ್ವಾಸಕೋಶದಲ್ಲಿ ಎಲ್‌ಇಡಿ ಬಲ್ಬ್‌ ಕಂಡು ವೈದ್ಯರೇ ಶಾಕ್‌ !

ವಡೋದರಾ: ಹಸುಗೂಸುಗಳ ಬಗ್ಗೆ ಪೋಷಕರು ಎಷ್ಟು ಜಾಗರೂಕರಾಗಿರಬೇಕು ಎಂಬ ಎಚ್ಚರಿಕೆ ನೀಡುವ ಘಟನೆಯೊಂದು ವಡೋದರಾದಲ್ಲಿ ವರದಿಯಾಗಿದೆ. ನ್ಯುಮೋನಿಯಾ ಚಿಕಿತ್ಸೆಗೆಂದು ಒಂದು ವರ್ಷದ ಮಗುವನ್ನು ಆಸ್ಪತ್ರೆಗೆ ಒಯ್ದರೆ ಅದರ ಶ್ವಾಸಕೋಶದ ಎಕ್ಸರೇ ನೋಡಿ ವೈದ್ಯರೇ ದಿಗ್ಭ್ರಮೆಗೊಂಡಿದ್ದಾರೆ. ಆನಂದ ಜಿಲ್ಲೆಯ ಮಲ್ಸರ್ ಗ್ರಾಮದ ಒಂದು ವರ್ಷದ ಮಗು ಎಲ್‌ಇಡಿ (LED) ಬಲ್ಬ್ ಅನ್ನು ನುಂಗಿದ್ದು, ಇದರಿಂದಾಗಿ ಸುದೀರ್ಘ ಕಾಲ … Continued

ವೀಡಿಯೊ..| “20 ರೂ.ಗೆ ಕೇವಲ 4 ಗೋಲ್ಗಪ್ಪ ಕೊಟ್ಟಿದ್ದಕ್ಕೆ ಮಧ್ಯ ರಸ್ತೆಯಲ್ಲಿ ಕುಳಿತು ಅಳುತ್ತ ಪ್ರತಿಭಟನೆ ನಡೆಸಿದ ಮಹಿಳೆ…!

20 ರೂ.ಗಳಿಗೆ ಆರು ಗೋಲ್ಗಪ್ಪಗಳನ್ನು ನೀಡುವ ಬದಲು ಕೇವಲ ನಾಲ್ಕು ಗೋಲ್ಗಪ್ಪಗಳನ್ನು ನೀಡಿದ್ದಕ್ಕೆ ಅಸಮಾಧಾನಗೊಂಡ ಮಹಿಳೆಯೊಬ್ಬರು, ಜನನಿಬಿಡ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ವಿಚಿತ್ರ ಪ್ರತಿಭಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಡೋದರಾದ ಸುರಸಾಗರ ಪ್ರದೇಶದ ಬಳಿ ಮಹಿಳೆಯೊಬ್ಬರು ರಸ್ತೆಯಲ್ಲಿ ಕುಳಿತು ಸಂಚಾರವನ್ನು ಸ್ಥಗಿತಗೊಳಿಸಿದರು ಹಾಗೂ ತನಗೆ ಗೋಲ್ಗಪ್ಪ ಮಾರಾಟಗಾರರಿಂದ ಅನ್ಯಾಯವಾಗಿದೆ ಎಂದು … Continued

ವೀಡಿಯೊ…| ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ : ನದಿಗೆ ಬಿದ್ದ ಹಲವು ವಾಹನಗಳು, 9 ಜನರು ಸಾವು

ವಡೋದರಾ : ಗುಜರಾತಿನ ವಡೋದರಾದ ಪದ್ರಾ ತಾಲೂಕಿನ ಗಂಭೀರಾ-ಮುಜಪುರ ಸೇತುವೆಯ ಒಂದು ಭಾಗ ಬುಧವಾರ ಕುಸಿದುಬಿದ್ದು ಹಲವಾರು ವಾಹನಗಳು ಮಹಿಸಾಗರ (ಮಹಿ) ನದಿಗೆ ಬಿದ್ದಿವೆ ಹಾಗೂ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆನಂದ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಬೆಳಗಿನ ಸಂಚಾರದ ಸಮಯದಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಆರಂಭಿಕ … Continued

ವೀಡಿಯೊ…| ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಮಹಿಳೆ ಸಾವು ; ಕಿಂಚಿತ್ತೂ ಪಶ್ಚಾತ್ತಾಪ ಪಡದೆ ʼಇನ್ನೊಂದು ರೌಂಡ್‌ʼ ಎಂದು ಅರಚಾಡಿದ ವಿದ್ಯಾರ್ಥಿ…!

ವಡೋದರಾ: ಗುಜರಾತಿನ ವಡೋದರಾದ ಕರೇಲಿಬಾಗ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಕಾರು ಗುದ್ದಿಸಿ ಮಹಿಳೆ ಜೀವ ತೆಗೆದಿದ್ದರೂ ಕೂಡ ಪಶ್ಚಾತಾಪವಿಲ್ಲದೆ ದರ್ಪದಿಂದ ವರ್ತಿಸಿರುವ ವೀಡಿಯೊ ವೈರಲ್ ಆಗಿದೆ. ಪಾನಮತ್ತ ಚಾಲಕ ತನ್ನ ಕಾರನ್ನು ಬಹು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. … Continued

ವಡೋದರ ಹರಣಿ ಸರೋವರದಲ್ಲಿ ದೋಣಿ ಮುಳುಗಿ 14 ಮಕ್ಕಳು, ಇಬ್ಬರು ಶಿಕ್ಷಕರು ಸಾವು

ವಡೋದರ : ಗುಜರಾತಿನ ವಡೋದರದ ಹರಣಿ ಸರೋವರದಲ್ಲಿ ಗುರುವಾರ ದೋಣಿ ಮುಳುಗಿ 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಘಟನೆ ನಡೆದಾಗ ದೋಣಿಯಲ್ಲಿ 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರಕ್ಷಣಾ ತಂಡವು ಕೆರೆಯಿಂದ ಐದು ಮಕ್ಕಳನ್ನು … Continued