ವೀಡಿಯೊ..| “20 ರೂ.ಗೆ ಕೇವಲ 4 ಗೋಲ್ಗಪ್ಪ ಕೊಟ್ಟಿದ್ದಕ್ಕೆ ಮಧ್ಯ ರಸ್ತೆಯಲ್ಲಿ ಕುಳಿತು ಅಳುತ್ತ ಪ್ರತಿಭಟನೆ ನಡೆಸಿದ ಮಹಿಳೆ…!

20 ರೂ.ಗಳಿಗೆ ಆರು ಗೋಲ್ಗಪ್ಪಗಳನ್ನು ನೀಡುವ ಬದಲು ಕೇವಲ ನಾಲ್ಕು ಗೋಲ್ಗಪ್ಪಗಳನ್ನು ನೀಡಿದ್ದಕ್ಕೆ ಅಸಮಾಧಾನಗೊಂಡ ಮಹಿಳೆಯೊಬ್ಬರು, ಜನನಿಬಿಡ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ವಿಚಿತ್ರ ಪ್ರತಿಭಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವಡೋದರಾದ ಸುರಸಾಗರ ಪ್ರದೇಶದ ಬಳಿ ಮಹಿಳೆಯೊಬ್ಬರು ರಸ್ತೆಯಲ್ಲಿ ಕುಳಿತು ಸಂಚಾರವನ್ನು ಸ್ಥಗಿತಗೊಳಿಸಿದರು ಹಾಗೂ ತನಗೆ ಗೋಲ್ಗಪ್ಪ ಮಾರಾಟಗಾರರಿಂದ ಅನ್ಯಾಯವಾಗಿದೆ ಎಂದು ಹೇಳಿಕೊಂಡು ತನಗೆ “ನ್ಯಾಯ” ಕೊಡಿ ಕೋರಿದ್ದಾರೆ. ಹೈ-ವೋಲ್ಟೇಜ್‌ ಹೈಡ್ರಾಮಾವು ದಾರಿಹೋಕರ ಗಮನ ಸೆಳೆಯಿತು. ಅಲ್ಲದೆ, ಆ ಪ್ರದೇಶದಲ್ಲಿ ಸಂಚಾರ ದಟ್ಟಣೆಯನ್ನು ಸೃಷ್ಟಿಸಿತು.

ವೀಡಿಯೊದಲ್ಲಿ, ಮಹಿಳೆ ಅಳುತ್ತಾ 20 ರೂ.ಗಳಿಗೆ ಕೇವಲ ನಾಲ್ಕು ಗೋಲ್ಗಪ್ಪಗಳನ್ನು ನೀಡಿದ್ದಾರೆ ಎಂದು ಹೇಳುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿದರು. ಮಹಿಳೆಯ ಬಳಿ ಒಬ್ಬ ಪೊಲೀಸ್ ಅಧಿಕಾರಿ ಕಾಣಿಸಿಕೊಂಡಿದ್ದು, ಅವರು ಪ್ರತಿಭಟನೆಯನ್ನು ಕೈಬಿಡುವಂತೆ ಮನವೊಲಿಸಿದರು ಎಂದು ವರದಿಯಾಗಿದೆ.

ಪೊಲೀಸರು ಸಂಚಾರ ದಟ್ಟಣೆ ತೆರವುಗೊಳಿಸಲು ಬಂದಾಗ, ಪ್ರತಿಭಟನೆಯು ಹೆಚ್ಚು ನಾಟಕೀಯ ತಿರುವು ಪಡೆದುಕೊಂಡಿತು. ಮಹಿಳೆ ಕಣ್ಣೀರು ಸುರಿಸುತ್ತಾ, ಅಧಿಕಾರಿಗಳು 20 ರೂ.ಗಳಿಗೆ ಆರು ಗೋಲ್ಗಪ್ಪಗಳನ್ನು ನೀಡುವ ನ್ಯಾಯಯುತ ವ್ಯಾಪಾರ ಪದ್ಧತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಹಲವಾರು ಗಂಟೆಗಳ ಕಾಲ ಮನವರಿಕೆಯ ಪ್ರಯತ್ನದ ನಂತರ ಅಧಿಕಾರಿಗಳು ಮಹಿಳೆಯನ್ನು ಕರೆದುಕೊಂಡು ಹೋಗಿ, ಸಂಚಾರ ದಟ್ಟಣೆಯನ್ನು ತಿಳಿಗೊಳಿಸಿದರು. ಮಹಿಳೆ ಹೆಚ್ಚುವರಿ ಗೋಲ್ಗಪ್ಪಗಳನ್ನು ಪಡೆದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿಚಿತ್ರ ಪ್ರತಿಭಟನೆಯ ವೀಡಿಯೊವನ್ನು ಹಂಚಿಕೊಂಡ X ನಲ್ಲಿ ಬಳಕೆದಾರರು “2 ಪಾನಿ ಪುರಿ ಕೆ ಲಿಯೇ ಸತ್ಯಾಗ್ರಹ” ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement