ವಿಡಿಯೊಗಳು : ಮ್ಯಾನ್ಮಾರ್‌ನಲ್ಲಿ ಭೀಕರ ಸ್ಫೋಟಕ್ಕೆ ಧ್ವಂಸಗೊಂಡ ಕಟ್ಟಡ; ಆರು ಮಕ್ಕಳು ಸೇರಿ 45ಕ್ಕೂ ಹೆಚ್ಚು ಜನರು ಸಾವು

ಬ್ಯಾಂಕಾಕ್: ಈಶಾನ್ಯ ಮ್ಯಾನ್ಮಾರ್‌ನಲ್ಲಿ ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿದ್ದ ಕಟ್ಟಡವೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 45ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ಮತ್ತು ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಗಡಿಯಿಂದ ದಕ್ಷಿಣಕ್ಕೆ ಸುಮಾರು 3 ಕಿಲೋಮೀಟರ್ (2 ಮೈಲಿ) ದೂರದಲ್ಲಿರುವ ನಾಮ್‌ಕಾಮ್ ಉಪನಗರದ ‘ಕೌಂಗ್‌ಟುಪ್’ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯ … Continued

ಮೈ ಜುಂ ಎನ್ನುವ ವಿಡಿಯೋ : ತಲೆಗೆ ಕತ್ತಿ ಹೊಕ್ಕಿದ್ದರೂ ನಡೆದುಕೊಂಡೇ ಆಸ್ಪತ್ರೆಗೆ ಬಂದ ವ್ಯಕ್ತಿ

ಮುಂಬೈ: ಮುುಂಬೈನಲ್ಲಿ ನಡೆದ ಭೀಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ವ್ಯಕ್ತಿಯೊಬ್ಬನ ತಲೆಗೆ ಕತ್ತಿಯಿಂದ (Sickle) ಹಲ್ಲೆ ಮಾಡಲಾಗಿದ್ದು, ಆ ಕತ್ತಿ ತಲೆಯ ಒಳಭಾಗಕ್ಕೆ ಹೊಕ್ಕಿದ್ದರೂ ಸಹ ಆತ ಯಾವುದೇ ಆತಂಕವಿಲ್ಲದೆ ನಡೆದುಕೊಂಡೇ ಆಸ್ಪತ್ರೆಗೆ ಬಂದಿರುವ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೇ 4ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ … Continued

ವೀಡಿಯೊ…| ಆಸ್ಪತ್ರೆಯಿಂದ ಕತ್ತರಿಸಿದ ಮಾನವನ ಕಾಲು ಕಚ್ಚಿಕೊಂಡು ಓಡಿದ ಬೀದಿ ನಾಯಿ…!

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಬೀದಿ ನಾಯಿಯೊಂದು ಕತ್ತರಿಸಿದ ಮಾನವನ ಕಾಲನ್ನು ಕಚ್ಚಿಕೊಂಡು ಓಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ಘಟನೆಯು ಶಿಮ್ಲಾದ ಅಟಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೂಪರ್ ಸ್ಪೆಷಾಲಿಟಿಸ್‌ ಆಸ್ಪತ್ರೆಯ ಹೊರಗಡೆ ನಡೆದಿದೆ. ನಾಯಿಯೊಂದು ಮನುಷ್ಯನ ಕತ್ತರಿಸಿದ ಕಾಲನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿರುವ … Continued

ಸ್ಟೇಜ್ ಕಾರ್ಯಕ್ರಮದ ವೇಳೆ ನರ್ತಕಿಗೆ ಬಲವಂತವಾಗಿ ನಾಣ್ಯ ನುಂಗಿಸಿದ ಕಿರಾತಕರು ; ಕಲಾವಿದೆಯ ಸ್ಥಿತಿ ಗಂಭೀರ

ಅರಾ (ಬಿಹಾರ): ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಲಾವಿದೆಯೊಬ್ಬರಿಗೆ ಪ್ರೇಕ್ಷಕರು ಬಲವಂತವಾಗಿ ನಾಣ್ಯಗಳನ್ನು ನುಂಗಿಸಿದ ಅಮಾನವೀಯ ಘಟನೆ ಬಿಹಾರದ ಭೋಜಪುರ ಜಿಲ್ಲೆಯ ಚಾಂದ್ವಾ ತೋಲಾ ಪ್ರದೇಶದಲ್ಲಿ ನಡೆದಿದೆ. ನಾಣ್ಯ ನುಂಗಿದ್ದರಿಂದ ನರ್ತಕಿಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಚಾಂದ್ವಾ ತೋಲಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ … Continued

ಭೋಪಾಲ್ ಆಸ್ಪತ್ರೆ ಲಿಫ್ಟ್‌ನಲ್ಲೇ ಮಹಿಳಾ ಸಿಬ್ಬಂದಿ ದರೋಡೆ ಮಾಡಿದ ಯುವಕ : ವೀಡಿಯೊ ವೈರಲ್‌

ಭೋಪಾಲ್: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಭೋಪಾಲದ ಏಮ್ಸ್ (AIIMS) ಆಸ್ಪತ್ರೆಯ ಲಿಫ್ಟ್‌ನೊಳಗೆ ನಡೆದ ಭೀಕರ ದರೋಡೆ ಪ್ರಕರಣವು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ. ಭಾನುವಾರ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು  ಹೊರಬಿದ್ದಿದೆ. ಗೈನೆಕಾಲಜಿ ವಿಭಾಗದಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ವರ್ಷಾ ಸೋನಿ ಎಂಬವರು ದರೋಡೆಗೆ ಒಳಗಾದವರು. ಅವರು ರಕ್ತನಿಧಿಯ ಹಿಂಭಾಗದಲ್ಲಿರುವ … Continued

ಹಾಸಿಗೆ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ; ವೀಡಿಯೊ ವೈರಲ್‌

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (IGMC) ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಮನ್ ಅಮನ್ ಸಿಂಗ್ ಛೀನಾ ಎಂಬುವವರು ‘X’ (ಟ್ವಿಟರ್) ವೇದಿಕೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ … Continued

ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ವೈ ಮೇಟಿ ನಿಧನ

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ (Congres MLA) ಎಚ್.ವೈ ಮೇಟಿ (HY Meti) ಅವರು ಮಂಗಳವಾರ ನಿಧನರಾಗಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಶಾಸಕರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎಚ್.ವೈ ಮೇಟಿ ಅವರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಬಾಗಲೋಕಟೆ ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ … Continued

ಆಸ್ಪತ್ರೆಯಲ್ಲಿ ಶಿಶುವಿನ ತಲೆ ಹೊತ್ತೊಯ್ದ ನಾಯಿ…! ತನಿಖೆಗೆ ಆದೇಶ

ನಾಯಿಯೊಂದು ಶಿಶುವಿನ ತಲೆಯನ್ನು ಹೊತ್ತೊಯ್ದ ಆಘಾತಕಾರಿ ಘಟನೆಗೆ ಪಂಜಾಬ್‌ನ ಪಟಿಯಾಲದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಡೆದಿದೆ. ಈ ಸಂಬಂಧ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ, ಆದರೆ ವೈದ್ಯಕೀಯ ಅಧೀಕ್ಷಕರು ಶಿಶುವಿನ ಶವವನ್ನು ಹೊರಗಿನಿಂದ ಆವರಣದಲ್ಲಿ ಎಸೆಯಲಾಗಿದೆ ಎಂದು ಹೇಳಿದ್ದಾರೆ. ಪಟಿಯಾಲದ ರಾಜೀಂದ್ರ ಆಸ್ಪತ್ರೆಯ ವಾರ್ಡ್ ಸಂಖ್ಯೆ 4 ರ ಬಳಿ ಮಂಗಳವಾರ ಸಂಜೆ 5:30 ರ ಸುಮಾರಿಗೆ … Continued

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು

ಶಿಮ್ಲಾ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡದ (high blood) ಹೆಚ್ಚಾದ ನಂತರ ಶನಿವಾರ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಶಿಮ್ಲಾಕ್ಕೆ ವೈಯಕ್ತಿಕ ಪ್ರವಾಸದಲ್ಲಿದ್ದ ಸೋನಿಯಾ ಗಾಂಧಿ (78) ಅವರನ್ನು ಆಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳಿಗೆ … Continued

ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ…!

ನವದೆಹಲಿ : ಏಪ್ರಿಲ್ 6 ರಂದು ಹರ್ಯಾಣದ ಗುರುಗ್ರಾಮದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್‌ನಲ್ಲಿದ್ದ ಗಗನಸಖಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಏಪ್ರಿಲ್ 13 ರಂದು ಡಿಸ್ಚಾರ್ಜ್ ಆದ ನಂತರ ತನ್ನ ಪತಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ ಮತ್ತು … Continued