ಹಿಮಾಚಲಪ್ರದೇಶ ಮಹಾನಗರ ಪಾಲಿಕೆ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಖಭಂಗ, ಬಿಜೆಪಿಗೆ ಭರ್ಜರಿ ಜಯ

ಶಿಮ್ಲಾ; ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಭಾನುವಾರ ಪ್ರಕಟಗೊಂಡ ನಾಲ್ಕು ಮಹಾನಗರ ಪಾಲಿಕೆ (MC) ಚುನಾವಣೆಗಳ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮೂರು ಪಾಲಿಕೆಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್‌ ಒಂದರಲ್ಲಿ ಗೆಲುವು ಸಾಧಿಸಿದೆ. 2027ರಲ್ಲಿ ರಾಜ್ಯದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ “ಸೆಮಿಫೈನಲ್” ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ ಮಂಡಿ, … Continued

ಮೈ ಜುಂ ಎನಿಸುವ ವಿಡಿಯೋ | ದೇವಸ್ಥಾನದಿಂದ ಬರುವಾಗ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರು, ಇಬ್ಬರು ಸಜೀವ ದಹನ

ಉನಾ : ದೇವಿಯ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಚಲಿಸುತ್ತಿದ್ದ ಕಾರಿನಲ್ಲೇ ಬೆಂಕಿ ಕಾಣಿಸಿಕೊಂಡು, ನಿಯಂತ್ರಣ ತಪ್ಪಿದ ವಾಹನ ಕಾರು 200 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಇಬ್ಬರು ಭಕ್ತರು ಭೀಕರವಾಗಿ ಸಾವಿಗೀಡಾದ ಘಟನೆ ಪಂಜಾಬ್-ಹಿಮಾಚಲ ಗಡಿಯ ಭರ್ವೈನ್-ಹೋಷಿಯಾರ್‌ಪುರ ರಸ್ತೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪವಿತ್ರ ಚಿಂತಪೂರ್ಣಿ ದೇವಸ್ಥಾನದಿಂದ … Continued

ಒಬ್ಬಳೇ ಪತ್ನಿ, ಇಬ್ಬರು ಪತಿಯಂದಿರು; ಈಗ ಮಗುವಿನ ಆಗಮನ : ಮತ್ತೆ ಸುದ್ದಿಯಲ್ಲಿ ಈ ವಿಶಿಷ್ಟ ವಿವಾಹ…

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ವಿಶಿಷ್ಟ ವಿವಾಹ ಪದ್ಧತಿಯ ದಂಪತಿಗಳಿಗೆ ಈಗ ಮಗು ಜನಿಸಿದ್ದು, ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುಟುಂಬವು ಅಲ್ಲಿನ ಸಾಂಪ್ರದಾಯಿಕ “ಜೋಡಿದಾರ್” ಪದ್ಧತಿಯನ್ನು ಅನುಸರಿಸುತ್ತಿದ್ದು, ಈ ಪದ್ಧತಿಯಂತೆ ಒಬ್ಬ ಮಹಿಳೆ ಇಬ್ಬರು ಸಹೋದರರನ್ನು ವಿವಾಹವಾಗುತ್ತಾರೆ. ಸುನಿತಾ ಚೌಹಾಣ ಎಂಬ ಮಹಿಳೆ ಪ್ರದೀಪ ನೇಗಿ ಮತ್ತು … Continued

ಹಾಸಿಗೆ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ; ವೀಡಿಯೊ ವೈರಲ್‌

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (IGMC) ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಮನ್ ಅಮನ್ ಸಿಂಗ್ ಛೀನಾ ಎಂಬುವವರು ‘X’ (ಟ್ವಿಟರ್) ವೇದಿಕೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್‌ನಲ್ಲಿ … Continued

ವೀಡಿಯೊ…| ಡಾಲ್ಹೌಸಿ ಬಳಿ ಹಿಮ್ಮುಖವಾಗಿ ಚಲಿಸಿ ಇಳಿಜಾರಿಗೆ ಉರುಳಿದ ವ್ಯಾನ್, ಆತಂಕದಿಂದ ಹೊರಕ್ಕೆ ಜಿಗಿದ ಪ್ರಯಾಣಿಕರು…!

ಶಿಮ್ಲಾ: ಪ್ರಸಿದ್ಧ ಪ್ರವಾಸಿ ತಾಣವಾದ ಡಾಲ್‌ಹೌಸಿಯ ಪಂಚ್‌ಪುಲ ಎಂಬಲ್ಲಿ ಪ್ರವಾಸಿಗರಿದ್ದ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ಕೆಳಕ್ಕೆ ಉರುಳಿದ ಪರಿಣಾಮ ಭಾರೀ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ವಾಹನವು ಪ್ರಪಾತಕ್ಕೆ ಬೀಳುವ ಮೊದಲೇ ಮರವೊಂದಕ್ಕೆ ಸಿಲುಕಿಕೊಂಡಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಪ್ರವಾಸಿಗರನ್ನು ಹತ್ತಿಸಿಕೊಳ್ಳುತ್ತಿದ್ದ ವ್ಯಾನ್ ಪಾರ್ಕಿಂಗ್ ಮಾಡಿದ್ದ ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ … Continued

ವೀಡಿಯೊ : ತೇಜಸ್ ಯುದ್ಧ ವಿಮಾನ ಅಪಘಾತ : ಪತಿ ನಮಾಂಶ್ ಸ್ಯಾಲಗೆ ಕಣ್ಣೀರಿನ ವಿದಾಯ ಹೇಳಿದ ಪತ್ನಿ ವಿಂಗ್ ಕಮಾಂಡರ್ ಅಫ್ಶಾನ್ ಅಖ್ತರ್

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಟಿಯಾಲ್ಕರ್‌ ಗ್ರಾಮದಲ್ಲಿ ಮೌನ ಮತ್ತು ದುಃಖದ ವಾತಾವರಣ ನೆಲೆಸಿದೆ. ಶುಕ್ರವಾರ ದುಬೈ ಏರ್ ಶೋನಲ್ಲಿ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿ ಹುತಾತ್ಮರಾದ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರ ಪತ್ನಿ, ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಆಗಿರುವ ಅಫ್ಶಾನ್ ಅಖ್ತರ್ ಅವರು ಕಣ್ಣೀರಿನ ಮೂಲಕ ತಮ್ಮ ಪತಿಗೆ ಅಂತಿಮ … Continued

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ; ಮಣ್ಣಿನಡಿ ಮುಚ್ಚಿ ಹೋದ ಬಸ್‌ : 15 ಮಂದಿ ಸಾವು

ಶಿಮ್ಲಾ : ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಖಾಸಗಿ ಬಸ್ ದೊಡ್ಡ ಪ್ರಮಾಣದ ಮಣ್ಣು ಮತ್ತು ಬಂಡೆಗಳ ಅಡಿಯಲ್ಲಿ ಹೂತುಹೋಗಿದೆ. ಹಲವಾರು ಪ್ರಯಾಣಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಬಲ್ಲು ಸೇತುವೆಯ ಬಳಿ ಈ ಘಟನೆ ನಡೆದಿದ್ದು, ಬೆಟ್ಟದ ಇಳಿಜಾರು … Continued

ಚೆಕ್ ಮೇಲೆ ‘ಸೇವನ್‌ ಥರ್ಸಡೇ ಸಿಕ್ಸ್‌ ಹರೇಂದ್ರ ’ ಎಂದು ಬರೆದ ಪ್ರಾಂಶುಪಾಲರು; ತಪ್ಪು ತಪ್ಪಾಗಿ ಬರೆದಿದ್ದಕ್ಕೆ ಚೆಕ್‌ ರಿಜೆಕ್ಟ್‌ ; ನೋಡಿದ್ರೆ ನಗ್ತೀರಾ

ಇತ್ತೀಚಿನ ದಿನಗಳಲ್ಲಿ ಶಾಲೆಗಳು ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ ಮತ್ತು ಪೋಷಕರು ಹೆಚ್ಚುತ್ತಿರುವ ಶಿಕ್ಷಣ ವೆಚ್ಚವನ್ನು ನಿಭಾಯಿಸಲು ಹೆಣಗಾಡುತ್ತಾರೆ. ಅದೇ ಸಮಯದಲ್ಲಿ, ಈ ಶಾಲೆಗಳನ್ನು ನಡೆಸುತ್ತಿರುವ ಜನರಿಂದ ಉತ್ತಮ ಗುಣಮಟ್ಟವನ್ನು ಅನೇಕರು ನಿರೀಕ್ಷಿಸುವುದು ಸಹಜ. ಆದರೆ ಇಲ್ಲೊಬ್ಬ ಶಾಲಾ ಪ್ರಾಂಶುಪಾಲರು ಬರೆದ ಚೆಕ್‌ನ ಫೋಟೋ ಎಲ್ಲಾ ತಪ್ಪು ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ಈ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್‌ನಲ್ಲಿ … Continued

ನೂರಾರು ಜನರ ಸಮ್ಮುಖದಲ್ಲಿ ಒಂದೇ ಯುವತಿಯನ್ನು ಮದುವೆಯಾದ ಇಬ್ಬರು ಸಹೋದರರು…!

ಶಿಮ್ಲಾ: ಇತ್ತೀಚೆಗೆ ಹಿಮಾಚಲ ಪ್ರದೇಶದ ಹಟ್ಟಿ ಬುಡಕಟ್ಟು ಸಂಪ್ರದಾಯದ ಮದುವೆಯೊಂದು ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ಇಬ್ಬರು ಸಹೋದರರು ಒಬ್ಬರೇ ಮಹಿಳೆಯನ್ನು ವಿವಾಹವಾಗಿದ್ದಾರೆ…! ಈ ವಿವಾಹಕ್ಕೆ ನೂರಾರು ಜನರು ಸಾಕ್ಷಿಯಾಗಿದ್ದಾರೆ. ವಧು ಸುನೀತಾ ಚೌಹಾಣ ಮತ್ತು ವರರಾದ ಪ್ರದೀಪ ಮತ್ತು ಕಪಿಲ್ ನೇಗಿ ಯಾವುದೇ ಒತ್ತಡವಿಲ್ಲದೆ ಈ ನಿರ್ಧಾರವನ್ನು ತೆಗೆದುಕೊಂಡುರುವುದಾಗಿ ಹೇಳಿದ್ದಾರೆ. … Continued

ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ನವದೆಹಲಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಭಾರತದ ವಿವಿಧ ಭಾಗಗಳಲ್ಲಿ ಭೂ ಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ನಾಯಿಯೊಂದು ಅನೇಕರ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು, ಹಳ್ಳಿಯ ನಾಯಿಯೊಂದು … Continued