ವಿಡಿಯೋ | ನೇಪಾಳ ಪ್ರವಾಹ : ಬೆಕ್ಕು ಎಂದುಕೊಂಡು ಮಣ್ಣು ತೆಗೆದಾಗ ಅವಶೇಷಗಳಡಿ ಜೀವಂತವಾಗಿ ಸಿಕ್ಕಳು 5 ವರ್ಷದ ಬಾಲಕಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ … Continued

ವಿಡಿಯೋ | ಚಪ್ಪಲಿಗಳ ರಾಶಿ ಮಧ್ಯೆ ಕಳೆದುಹೋದ ಚಪ್ಪಲಿ ; ಆದ್ರೆ ವ್ಯಕ್ತಿಗೆ ಅದನ್ನು ಹುಡುಕಿಕೊಟ್ಟಿತು ಚಾಟ್‌ಜಿಪಿಟಿ….!

ನವದೆಹಲಿ: ಸಾಮಾನ್ಯವಾಗಿ ದೇವಸ್ಥಾನದ ಹೊರಗೆ ಚಪ್ಪಲಿ ಕಳೆದುಹೋದರೆ, ಜನರು ಸಾಲುಸಾಲಾಗಿ ಇಟ್ಟಿರುವ ನೂರಾರು ಚಪ್ಪಲಿಗಳ ನಡುವೆ ತಮ್ಮ ಚಪ್ಪಲಿ ಹುಡುಕುತ್ತಾ ಪರದಾಡುತ್ತಾರೆ. ಆದರೆ ಗೋವಾ ಮೂಲದ ವ್ಯಕ್ತಿಯೊಬ್ಬರು ಇದಕ್ಕೆ ವಿಭಿನ್ನ ಹಾಗೂ ತಂತ್ರಜ್ಞಾನಮಯ ಪರಿಹಾರ ಕಂಡುಕೊಂಡಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಸ್ಥಾನದ ಹೊರಗೆ ತಮ್ಮ ಚಪ್ಪಲಿಗಳನ್ನು ಕಳೆದುಕೊಂಡ ಅವರು, ಅವುಗಳನ್ನು ಹುಡುಕಲು ನೇರವಾಗಿ ಚಾಟ್‌ಜಿಪಿಟಿ (ChatGPT) … Continued

ಪತಿ ನಾಪತ್ತೆ…ಮೈದುನನನ್ನೇ ಮದುವೆಯಾಗಿದ್ದ ಪತ್ನಿ…25 ವರ್ಷಗಳ ನಂತರ ಮರಳಿ ಬಂದ ಪತಿ…ಪತ್ನಿಗೆ ಈಗ ಧರ್ಮಸಂಕಟ

ಬಿಜ್ನೋರ್​ : ಇದು ಸಿನಿಮೀಯ ತಿರುವುಗಳನ್ನೂ ಮೀರಿಸುವಂತಹ ಒಂದು ಹೃದಯವಿದ್ರಾವಕ ಮತ್ತು ಅಷ್ಟೇ ಸಂಕೀರ್ಣವಾದ ಘಟನೆ. 25 ವರ್ಷಗಳ ಹಿಂದೆ ನಾಪತ್ತೆಯಾಗಿ, ಮನೆಯವರು ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಹಠಾತ್ ಪ್ರತ್ಯಕ್ಷನಾಗಿದ್ದಾನೆ. ಈತನ ಪುನರಾಗಮನವು ಕುಟುಂಬದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ಕಾನೂನಾತ್ಮಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಶಿವದಯಾಳ ವಾಲಾ ಗ್ರಾಮದ … Continued

“ಸಚಿವನಾದ ನಂತ್ರ ನನ್ನ ಆದಾಯ ನಿಂತುಹೋಗಿದೆ” : ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ನಟ ಸುರೇಶ ಗೋಪಿ…!

ಕಣ್ಣೂರು : ಕೇಂದ್ರ ಸಚಿವ ಸುರೇಶ ಗೋಪಿ ಮತ್ತೆ ನಟನಾ ವೃತ್ತಿಗೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರಿಸಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರು ಲೋಕಸಭಾ ಸಂಸದ ಹಾಗೂ ನಟರೂ ಆಗಿರುವ ಕೇಂದ್ರ ಸಚಿವ ಸುರೇಶ ಗೋಪಿ, ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರದಿಂದ ತಮ್ಮ ಆದಾಯ ಗಣನೀಯವಾಗಿ … Continued

ವೀಡಿಯೊಗಳು…| 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಬೃಹತ್‌ ಗೂಳಿ ; ಇದನ್ನು ಕೆಳಗಿಳಿಸಿದ್ದು ಹೇಗೆ ಗೊತ್ತಾ..?

ಅಜ್ಮೀರ್ (ರಾಜಸ್ಥಾನ) : 60 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದ ಗೂಳಿಯನ್ನು ದೀರ್ಘ ಕಾರ್ಯಾಚರಣೆಯ ನಂತರ ಕ್ರೇನ್ ಬಳಸಿ ಕೆಳಗೆ ಇಳಿಸಿದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಎತ್ತು ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ನೀರಿನ ಟ್ಯಾಂಕ್‌ನ ಮೆಟ್ಟಿಲುಗಳ ಮೇಲೆ ಕಪ್ಪು ಬಣ್ಣದ ಎತ್ತು … Continued

ವೀಡಿಯೊ..|’ಮನುಷ್ಯನಂತೆ’ ಕೆಲಹೊತ್ತು ಎರಡು ಕಾಲುಗಳ ಮೇಲೆ ನೇರವಾಗಿ ನಿಂತ ಚಿರತೆ ; ಬೆರಗಾದ ಇಂಟರ್ನೆಟ್‌

ಚಿರತೆಯೊಂದು ಮನುಷ್ಯರಂತೆ ತನ್ನ ಹಿಂಗಾಲುಗಳ ಮೇಲೆ ನಿಂತಿರುವ ಅಪರೂಪದ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಲಾದ ಈ ಕಿರು ವೀಡಿಯೊ ಅಂತರ್ಜಾಲವನ್ನು ಬೆರಗುಗೊಳಿಸಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡ ಈ ವೀಡಿಯೊದಲ್ಲಿ, ಚಿರತೆ ಮನುಷ್ಯರಂತೆ ತನ್ನ ಎರಡು ಹಿಂಗಾಲುಗಳ ಕಾಲುಗಳ ಮೇಲೆ ನೇರವಾಗಿ … Continued

ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ನವದೆಹಲಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಭಾರತದ ವಿವಿಧ ಭಾಗಗಳಲ್ಲಿ ಭೂ ಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ನಾಯಿಯೊಂದು ಅನೇಕರ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು, ಹಳ್ಳಿಯ ನಾಯಿಯೊಂದು … Continued

ʼದೇವರುʼ ಇದ್ದಾನೆ ಎಂದು ಸಾಬೀತುಪಡಿಸುವ ಗಣಿತದ ಸೂತ್ರ ಪ್ರಸ್ತುತಪಡಿಸಿದ ಹಾರ್ವರ್ಡ್ ವಿಜ್ಞಾನಿ….

ಹಾರ್ವರ್ಡ್ ಮತ್ತು ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನಲ್ಲಿ ದೀರ್ಘಕಾಲ ಕೆಲಸ ಮಾಡಿರುವ ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಮತ್ತು ಏರೋಸ್ಪೇಸ್ ಇಂಜಿನಿಯರ್ ಆಗಿರುವ ಡಾ.ವಿಲ್ಲೀ ಸೂನ್ ಅವರು ಗಣಿತದ ಸೂತ್ರವು ದೇವರ ಇರುವಿಕೆ ಅಥವಾ ಅಸ್ತಿತ್ವದ ಅಂತಿಮ ಪುರಾವೆಯಾಗಿರಬಹುದು ಎಂದು ಪ್ರತಿಪಾದಿಸಿದ್ದಾರೆ. ಟಕರ್ ಕಾರ್ಲ್ಸನ್ ನೆಟ್‌ವರ್ಕ್‌ನಲ್ಲಿ ಅವರು ತಮ್ಮ ಸೂತ್ರವನ್ನು ಪ್ರಸ್ತುತಪಡಿಸಿದ್ದಾರೆ. ಇದು ದೇವರ ಅಸ್ತಿತ್ವದ ಬಗ್ಗೆ … Continued

ವೀಡಿಯೊ…| ಲಡಾಖ್‌ ನಿಂದ ಭೂಮಿ ತಿರುಗುವಿಕೆಯ ಅತ್ಯದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದ ಭಾರತೀಯ ಖಗೋಳಶಾಸ್ತ್ರಜ್ಞ

ಭಾರತೀಯ ಖಗೋಳಶಾಸ್ತ್ರಜ್ಞ ಡೋರ್ಜೆ ಆಂಗ್ಚುಕ್ ಅವರು ಲಡಾಖಿನ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯನ್ನು ತೋರಿಸುವ ಅದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಹಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಇದನ್ನು ಚಿತ್ರೀಕರಿಸಲಾಗಿದೆ. ವೀಡಿಯೊ ತುಣುಕು ಭೂಮಿಯ ಚಲನೆಯ ವಿಶಿಷ್ಟ ದೃಶ್ಯವನ್ನು ತೋರಿಸುತ್ತದೆ. ಕ್ಷೀರಪಥ(Milky Way)ವು ರಾತ್ರಿಯ ಆಕಾಶದಲ್ಲಿ ಸ್ಥಿರವಾಗಿ ಗೋಚರಿಸುತ್ತದೆ. ವೀಕ್ಷಣಾಲಯದಲ್ಲಿ ಇಂಜಿನಿಯರ್-ಇನ್-ಚಾರ್ಜ್ ಆಗಿರುವ ಆಂಗ್ಚುಕ್ ತನ್ನ ಯೋಜನೆಯನ್ನು … Continued

ಚೋಲಿ ಕೆ ಪೀಚೆ.. ಸಿನೆಮಾ ಹಾಡಿಗೆ ಡ್ಯಾನ್ಸ್‌ ಮಾಡಿದ ಮದುಮಗ ; ಮದುವೆಯನ್ನೇ ರದ್ದುಗೊಳಿಸಿದ ಮದುಮಗಳ ಅಪ್ಪ…!

ನವದೆಹಲಿ: ದೆಹಲಿಯ ಮದುಮಗ ತನ್ನ ಮದುವೆಯಲ್ಲಿ ಬಾಲಿವುಡ್ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ ನಂತರ ಮದುವೆಯೇ ರದ್ದುಗೊಂಡ ವಿದ್ಯಮಾನ ನಡೆದಿದೆ. ಮದುಮಗ ಚೋಲಿ ಕೆ ಪೀಚೆ ಕ್ಯಾ ಹೈ ಎಂಮ ಹಾಡಿಗೆ ವರ ನೃತ್ಯ ಮಾಡಿದ್ದು ವಧುವಿನ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಅವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ…! ಮದುಮಗ ಮೆರವಣಿಗೆಯಲ್ಲಿ ಮದುವೆ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ … Continued